ಕಥೆ - ಸವಿತಾ ರಮೇಶ್

ಬಾಲ್ಯದ ಆಟಗಳು ಬಲು ಚಂದ! ಏನೂ ಅರಿಯದ ಮುಗ್ಧ ವಯಸ್ಸಿನಲ್ಲಿ ಮನಸ್ವಿನಿ-ಸುಧನ್ವ ಪತಿ ಪತ್ನಿಯರಾಗಿ ಎಲ್ಲ ಮಕ್ಕಳ ಜೊತೆ ಮದುವೆ ಆಟ ಆಡುತ್ತಿದ್ದರು. ಅದು ಅವರಿಬ್ಬರ ಮನದಲ್ಲಿ ಶಾಶ್ವತವಾಗಿ ಉಳಿದಾಗ, ಮುಂದೆ ಅವರು ಭೇಟಿಯಾಗಲು ಸಾಧ್ಯವಾಯಿತೇ....?

ನೀನಿತ್ತ ನವಿಲುಗರಿ ಪುಟ್ಟ ಪೆಟ್ಟಿಗೆಯ ತಳದಿ ಕುಳಿತ ನವಿಲುಗರಿ

ಬಣ್ಣಗೆಡದೆ ಮಿಂಚಿತ್ತು ಇನ್ನಷ್ಟು ಮಿರಿ ಮಿರಿ

ನಿನ್ನ ನೆನಪ ಹೃದಯದಲ್ಲಿಟ್ಟು ನೀನಿತ್ತ ಗರಿ

ಕಣ್ಣಗಲಿಸಿ ನೋಡುತಿರುವೆ ನೀ ಬರುವ ದಾರಿ

ಬಾಲ್ಯದ ತುಂಟಾಟ ಮನದಲಿ ನೆಲೆ ನಿಂತಿದೆ

ಆಟದಿ ಗಂಡನಾದ ನೀನು ಮನ ತುಂಬಿದೆ

ಹೃದಯದ ತುಂಬಾ ನೀನೇ ಪಡಿಸಿರುವಾಗ

ಬೇರೆಯರನ್ನು ನಾ ಹೇಗೆ ವರಿಸಲಿ ಹೇಳೀಗ

ನೀನೇಕೆ ದೂರ ಸರಿದೆ ವಿಳಾಸ ಇರದ ಹಾಗೆ

ಇನ್ನೆಷ್ಟು ದಿನ ನಿನ್ನ ದಾರಿಯ ಕಾಯಲಿ ಹೀಗೆ

ಆಟದಿ ನೀನಿತ್ತ ಮುತ್ತು ನೆನಪಿದೆಯೇ ನಿನಗೆ

ಕದಪಿನಲಿ ಸವಿ.... ಇನ್ನೂ ಉಳಿದಿದೆ ಹಾಗೆ

ನೀನು ನನ್ನ ಮರೆತು ದೂರ ಹೋದರೇನಂತೆ

ನನ್ನುಸಿರಲ್ಲಿ ಉಸಿರಾಗಿ ಬೆರೆತಿರುವೆ ಆವತ್ತೆ

ಗರಿಯೇ ನನ್ನ ಸಂಗಾತಿ ನೀ ಬರುವ ತನಕ

ಕಾಯುತಿರುವೆ ಕುಟುಕು ಜೀವ ಇರುವ ತನಕ

ದೀಪಾವಳಿ ವಿಶೇಷಾಂಕಕ್ಕೆ ನವಿಲುಗರಿಯ ಬಗ್ಗೆ ಪುಟ್ಟ ಕವನ ಕಳುಹಿಸಿ ಮೇಡಂ ಎಂದು ಪತ್ರಿಕೆಯ ಸಂಪಾದಕರು ಹೇಳಿದ್ದು ನೆನಪಾಗಿ ಮೇಲಿನ ಸಾಲುಗಳನ್ನು ಬರೆದಳು ಮನಸ್ವಿನಿ.

ಅದು ಅವಳ ಹೃದಯದಲ್ಲಿ ಬಚ್ಚಿಟ್ಟ ಭಾವನೆಯಾಗಿತ್ತು. ಇಂದು ಕವನದ ರೂಪದಲ್ಲಿ ಕಾಗದದ ಮೇಲೆ ಇಳಿಯಿತು. ಅದನ್ನು ಸಂಪಾದಕರಿಗೆ ಕಳುಹಿಸಿ ರೂಮಿಗೆ ಬಂದಳು.

ಕಪಾಟಿನ ಬಾಗಿಲು ತೆಗೆದು ಮೂಲೆಯಲ್ಲಿ ಜೋಪಾನವಾಗಿ ಇಟ್ಟಿದ್ದ ಪುಟ್ಟ ಪೆಟ್ಟಿಗೆಯನ್ನು ತೆಗೆದಳು. ಇನ್ನೊಂದು ಕೈ ಬೆರಳಿನಿಂದ ಆ ಪೆಟ್ಟಿಗೆಯನ್ನು ನೇವರಿಸುತ್ತಾ ಮುಚ್ಚಳ ತೆಗೆದಳು. ಅಲ್ಲಿದ್ದ ನವಿಲುಗರಿಯಲ್ಲಿ ಪುಟ್ಟ ಸುಧನ್ವನ ಮುಖ ಕಾಣಿಸಿತು. ಅದನ್ನು ಕೈಯಲ್ಲಿ ಹಿಡಿದು ಕೆನ್ನೆಗೆ ಒತ್ತಿಕೊಂಡಳು.

`ಎಲ್ಲಿದ್ದೀಯೋ ಮಾರಾಯ.... ನಿನಗೆ ನನ್ನ ನೆನಪೇ ಇಲ್ಲವೇ...' ಎನ್ನುತ್ತಾ ಹಳೆಯ ನೆನಪಿನೊಳಗೆ ಜಾರಿದಳು.

ಮನಸ್ವಿನಿಯ ತಂದೆ ಪೋಸ್ಟ್ ಆಫೀಸ್‌ ನಲ್ಲಿ  ಪೋಸ್ಟ್ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ 45 ವರ್ಷಗಳಿಗೊಮ್ಮೆ ಬೇರೆ ಬೇರೆ ಊರಿಗೆ ಟ್ರಾನ್ಸ್ ಫರ್‌ ಆಗುತ್ತಿತ್ತು. ಮನಸ್ವಿನಿ ಆರೇಳು ವರ್ಷದವಳಿದ್ದಾಗ ಅವರ ತಂದೆ ಮಲೆನಾಡಿನ ಪುಟ್ಟ ನಗರದಲ್ಲಿದ್ದರು. ಅಲ್ಲಿನ ಬ್ಯಾಂಕಿನಲ್ಲಿ ಸುಧನ್ವನ ತಂದೆ ಮ್ಯಾನೇಜರ್‌ ಆಗಿದ್ದರು.

ಇವರ ಮನೆಯ ಪಕ್ಕದಲ್ಲಿಯೇ ಸುಧನ್ವನ ಮನೆಯೂ ಇತ್ತು. ಮನಸ್ವಿನಿಯ ಅಕ್ಕ, ತಮ್ಮ, ತಂಗಿ ಜೊತೆಗೆ ಸುಧನ್ವನ ಅಕ್ಕ, ತಮ್ಮಂದಿರು ಎಲ್ಲರೂ ಒಟ್ಟಿಗೆ ಆಡುತ್ತಿದ್ದರು.

ಇವರ ಜೊತೆಗೆ ಅಕ್ಕಪಕ್ಕದ 3-4 ಮನೆಯ ಮಕ್ಕಳು ಸೇರುತ್ತಿದ್ದರು. ಶಾಲೆಗೆ ರಜೆ ಬಂದಾಗ ಎಲ್ಲರೂ ಸೇರಿ ದಿನಕ್ಕೊಂದು ಆಟ ಆಡುತ್ತಿದ್ದರು. ಈಗಿನಂತೆ ಆಗ ಸಮ್ಮರ್‌ ಕ್ಯಾಂಪ್‌ ಗಳಿರಲಿಲ್ಲ.

ಮಕ್ಕಳೆಲ್ಲಾ ಸೇರಿ ಬಗೆಬಗೆಯ ಆಟ ಆಡುವರು. ಆ ಎಲ್ಲಾ ಮಕ್ಕಳಲ್ಲಿ ಮನಸ್ವಿನಿಗೆ ಸುಧನ್ವನನ್ನು ಕಂಡರೆ ಜಾಸ್ತಿ ಇಷ್ಟ ಇತ್ತು. ಅವನಿಗೂ ಹಾಗೆಯೇ ಇತ್ತು. ಆಟ ಆಡುವಾಗ ಯಾವಾಗಲೂ ಮನಸ್ವಿನಿಯನ್ನು ತನ್ನ ಪಾರ್ಟಿಗೆ ಸೇರಿಸಿಕೊಳ್ಳುತ್ತಿದ್ದ. ಮನೆಯ ಆಟ ಆಡುವಾಗ ಇವರಿಬ್ಬರೇ ಗಂಡಹೆಂಡತಿಯರಾಗಿ ಆಟ ಆಡುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ