ಮಳೆಗಾಲದಲ್ಲಿ ಆಯ್ಲಿ ಚರ್ಮದಿಂದ ಆಗುವ ಸಮಸ್ಯೆಗಳು ಒಂದೆರಡಲ್ಲ. ಇದರಿಂದ ಪಾರಾಗುವುದು ಹೇಗೆ…..?
ಮಳೆಗಾಲ ಬಂದ ನಂತರ ಉರಿ ಬೇಸಿಗೆಯಿಂದ ಮುಕ್ತಿ ದೊರಕುತ್ತದೆ, ಆದರೆ ಚರ್ಮದ ದೃಷ್ಟಿಯಿಂದ ಈ ಸೀಸನ್ ಹಲವು ತೊಂದರೆ ತಂದೊಡ್ಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಚರ್ಮದ ವಿಶೇಷ ಆರೈಕೆ ಅತ್ಯಗತ್ಯ. ಅದರಲ್ಲೂ ಆಯ್ಲಿ ಸ್ಕಿನ್ ಉಳ್ಳವರು ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಮಾನ್ ಸೂನ್ ವಾತಾವರಣದಲ್ಲಿ ಹ್ಯುಮಿಡಿಟಿ ಹೆಚ್ಚಿಸುತ್ತದೆ. ಈ ಕಾರಣದಿಂದ ಮುಖದಲ್ಲಿ ಆ್ಯಕ್ನೆ, ಮೊಡವೆ ಹೆಚ್ಚುತ್ತದೆ. ಜೊತೆಗೆ ಇಂಥವರಿಗೆ ಓಪನ್ ಪೋರ್ಸ್ ಹೆಚ್ಚಿ, ರೋಮರಂಧ್ರ ಕ್ಲೋಸ್ ಆಗುತ್ತದೆ. ಇದರಿಂದ ಎಕ್ಸ್ ಟ್ರಾ ಆಯಿಲ್ ಹೊರಗೆ ಹೋಗಲು ಅವಕಾಶವಿಲ್ಲವಾಗುತ್ತದೆ. ಹೀಗಾಗಿ ಅಂಥವರ ಚರ್ಮ ಡ್ರೈ ಆಗತೊಡಗಿ, ಅನೇಕ ಸಮಸ್ಯೆಗಳು ಹೆಚ್ಚುತ್ತವೆ.
ನಿಮ್ಮದು ಸಹ ಆಯ್ಲಿ ಸ್ಕಿನ್ ಆಗಿದ್ದರೆ, ಗಾಬರಿಗೊಳ್ಳದಿರಿ. ಇಲ್ಲಿನ ಸಲಹೆಗಳನ್ನು ಅನುಸರಿಸಿ, ನಿಮ್ಮ ಚರ್ಮಕ್ಕೆ ತಗುಲಬಹುದಾದ ಸಮಸ್ಯೆಗಳಿಂದ ಪಾರಾಗಿ.
ಸೂಕ್ತ ಟೋನರ್ ಬಳಕೆ
ಮಳೆಗಾಲದಲ್ಲಿ ಅತ್ಯಗತ್ಯ ಎಂದರೆ, ಒಂದು ಉತ್ತಮ ಸ್ಕಿನ್ ಕೇರ್ ರೊಟೀನ್ ಫಾಲೋ. ಇದರ ಹೆಸರು ಹೇಳುತ್ತಿದ್ದಂತೆಯೇ ಮೊದಲು ನೆನಪಾಗುವುದೇ ಟೋನರ್. ಚರ್ಮದಿಂದ ಜಿಡ್ಡಿನಂಶ ಕಡಿಮೆ ಮಾಡಲು ಸೂಕ್ತ ಸ್ಕಿನ್ ಟೋನರ್ ಬಳಸಬೇಕಾದುದು ಅತ್ಯಗತ್ಯ. ಇದರ ಬಳಕೆಯಿಂದ ಸ್ಕಿನ್ನಿನ Ph ಲೆವೆಲ್ ಎಷ್ಟೋ ಬ್ಯಾಲೆನ್ಸ್ ಆಗುತ್ತದೆ.
ಜೊತೆಗೆ ಇದು ಚರ್ಮವನ್ನು ಹೆಲ್ದಿ ಆಗಿಡಲು, ಬ್ಯಾಕ್ಟೀರಿಯಾ ಮುಕ್ತವಾಗಿಸಲು ಬಹಳ ನೆರವಾಗುತ್ತದೆ. ಪ್ಲಮ್ ಗ್ರೀನ್ ಆಲ್ಕೋಹಾಲ್ ಫ್ರೀ ಟೋನರ್, ಲ್ಯಾಕ್ಮೆ ಆ್ಯಬ್ ಸಲ್ಯೂಟ್ ಪೋರ್ ಫಿಕ್ಸ್ ಟೋನರ್, ಕಾಯಾ ಕ್ಲಿನಿಕ್ ಆ್ಯಕ್ನೆಫ್ರೀ ಪ್ಯೂರಿ ಫೈಯಿಂಗ್ ಟೋನರ್, ಪಿಕ್ಸಿ ಗ್ಲೋ ಟಾನಿಕ್, ರೀಈಕ್ವಲ್ ಪೋರ್ ರೀಫೈನಿಂಗ್ ಫೇಸ್ ಟೋನರ್, ಹಿಮಾಲಯ ರಿಫ್ರೆಶಿಂಗ್ ಕ್ಲಾರಿಫೈಯಿಂಗ್ ಟೋನರ್, ಬಯೋಟಿಕ್ ಬ್ರಾಂಡ್ ಬಯೋ ಕುಕುಂಬರ್ ಪೋರ್ ಟೈಟನಿಂಗ್ ಟೋನರ್, ಬಯೋ ಹನೀ ವಾಟರ್ ಕ್ಲಾರಿಫೈಯಿಂಗ್ ಟೋನರ್ ಹಾಗೂ ಬ್ರಾಂಡೆಡ್ ಟೋನರ್ ಇತ್ಯಾದಿಗಳು ಆಯ್ಲಿ ಸ್ಕಿನ್ ಗೆ ಬೆಸ್ಟ್ ಟೋನರ್ಸ್ ಆಗಿವೆ.
ಫೇಸ್ ವಾಶ್ ಟೋನರ್
ನಂತರ ಮುಖ್ಯವಾಗುವುದು ಫೇಸ್ ವಾಶ್. ಮುಖ ತೊಳೆಯಲು ಅತಿ ಸೂಕ್ತ ಎಂದರೆ ಸೋಪ್ ಗಿಂತ ಫೇಸ್ ವಾಶ್ ಬಳಕೆ ಅಂತಾರೆ ಎಕ್ಸ್ ಪರ್ಟ್ಸ್. ಆಯ್ಲಿ ಸ್ಕಿನ್ ವುಳ್ಳವರು ಆಯಿಲ್ ಫ್ರೀ ಫೇಸ್ ವಾಶ್ ಬಳಸಬೇಕು. ಮಾರ್ಕೆಟ್ ನಲ್ಲಿ ಇಂಥ ಹಲವು ಬಗೆಯ ಬ್ರಾಂಡ್ಸ್ ಲಭ್ಯ. ನ್ಯೂಟ್ರೋಗೇನಾ ಆಯಿಲ್ ಫ್ರೀ ಆ್ಯಕ್ನೆ ಫೇಸ್ ವಾಶ್, ಆ್ಯರೋಮಾ ಮ್ಯಾಜಿಕ್ ನೀಮ್ ಟೀಟ್ರೀ ಫೇಸ್ ವಾಶ್.
ಸೇಂಟ್ ಬೊಟ್ಯಾನಿಕ್ ವಿಟಮಿನ್ ಸಿಯ ಜೆಂಟಲ್ ಪೇಮಿಂಗ್ ಬ್ರೈಟ್ ನಿಂಗ್ ಫೇಸ್ ವಾಶ್, ಪ್ಲಮ್ ಗ್ರೀನ್ ಟೀ ಪೋರ್ ಕ್ಲೆಂಝಿಂಗ್ ಫೇಸ್ ವಾಶ್, ನೇಕೆಡ್ ರಾ ಕಾಫಿ ಫೇಸ್ ವಾಶ್, ಲೋಟಸ್ ಹರ್ಬಲ್ಸ್ ಟೀಟ್ರೀ ಫೇಸ್ ವಾಶ್, ಇತ್ಯಾದಿಗಳ ಸದುಪಯೋಗ ಪಡೆದು ಈ ಸಮಸ್ಯೆಯಿಂದ ಮುಕ್ತವಾಗಿ.
ಮಾಯಿಶ್ಚರೈಸರ್ ಆಯ್ಲಿ ಸ್ಕಿನ್ ಗಾಗಿ ಲೈಟ್ ವೆಯ್ಟ್ ಮಾಯಿಶ್ಚರೈಸರ್ ಆರಿಸುವುದೇ ಸರಿ. ಏಕೆಂದರೆ ಇದರಲ್ಲಿ ಹೆಚ್ಚಾದ ಜಿಡ್ಡಿನಂಶ ಇರುವುದಿಲ್ಲ. ಹೀಗಾಗಿ ಇದು ಚರ್ಮದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಅದರಿಂದಾಗಿ ಚರ್ಮ ಜಿಡ್ಡುಜಿಡ್ಡಾಗಿ ಇರುವುದಿಲ್ಲ. ಇದಕ್ಕಾಗಿ ನೀವು ಕ್ರೀಂ ಬೇಸ್ಡ್ ಮಾಯಿಶ್ಚರೈಸರ್ ಬದಲಿಗೆ, ಜೆಲ್ ಬೇಸ್ಡ್ ಯಾ ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಆರಿಸಿ. ಈ ತರಹದ ಮಾಯಿಶ್ಚರೈಸರ್ ಗಳು ವಿಶೇಷವಾಗಿ ಆಯ್ಲಿಯವರಿಗೆ ಹೆಚ್ಚು ಸಹಕಾರಿ. ಇಂಥ ಮಂದಿ ಆ್ಯಲೋವೇರಾ, ಗುಲಾಬಿಜಲ, ಟೀಟ್ರೀ ಆಯಿಲ್, ಆರೆಂಜ್ ಇತ್ಯಾದಿಗಳ ಆಧಾರಿತ ಮಾಯಿಶ್ಚರೈಸರ್ ರನ್ನೇ ಬಳಸಬೇಕು.
ಇದಕ್ಕಾಗಿ ನೂಟ್ರಿಡರ್ಮ್ ಮಾಯಿಶ್ಚರೈಸಿಂಗ್ ಲೋಶನ್ ವಿತ್ ವಿಟಮಿನ್, ಸಲ್ಫೇಟ್ ಫ್ರೀ ಆಯಿಲ್ ಕಂಟ್ರೋಲ್ ಮಾಯಿಶ್ಚರೈಸಿಂಗ್ ಲೋಶನ್, ಮಿನಿಮಲಿಸ್ಟ್ 10% ವಿಟಮಿನ್ ಜೆಲ್ ಫೇಸ್ ಮಾಯಿಶ್ಚರೈಸರ್ ಮುಂತಾದವು ಉತ್ತಮ ಆಯ್ಕೆಗಳಾಗಿವೆ. ನೀವು ಕಾಮೆಡೊಜೆನಿಕ್ ರಹಿತ ಹಾಗೂ ವಾಟರ್ ಬೇಸ್ಡ್ ಮಾಯಿಶ್ಚರೈಸರ್ ನ್ನು ಸಹ ಬಳಸಬಹುದು.
ಚರ್ಮಕ್ಕೆ ಅತ್ಯಗತ್ಯ ಎಕ್ಸ್ ಫಾಲಿಯೇಶನ್ ಮಳೆಗಾಲದಲ್ಲಿ ಇಂಥ ಎಣ್ಣೆ ಚರ್ಮದವರು, ಎಕ್ಸ್ ಟ್ರಾ ಕೇರ್ ತೆಗೆದುಕೊಳ್ಳುವುದಕ್ಕಾಗಿ ಆಗಾಗ ಎಕ್ಸ್ ಫಾಲಿಯೇಟ್ ಮಾಡಿಸುತ್ತಿರಬೇಕು. ಹೀಗಾಗಿ ಇಂಥವರು ತಮ್ಮ ಚರ್ಮವನ್ನು ವಾರದಲ್ಲಿ ಕನಿಷ್ಠ 2 ಸಲ ಎಕ್ಸ್ ಫಾಲಿಯೇಟ್ ಮಾಡಿಸಲೇಬೇಕು. ಎಕ್ಸ್ ಫಾಲಿಯೇಶನ್ ನಿಂದಾಗಿ ಸ್ಕಿನ್ ನಲ್ಲಿ ಎಕ್ಸ್ ಟ್ರಾ ಸೀಬಂ ಆಗುವುದಿಲ್ಲ. ಅದು ನಂತರ ಚರ್ಮದ ಪದರದ ಮೇಲೆ ಡೆಡ್ ಸ್ಕಿನ್ ಸೆಲ್ಸ್ ಗೆ ಕಾರಣವಾಗುತ್ತದೆ. ಹಾಗಾಗಿ ಆ್ಯಕ್ನೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಇತ್ಯಾದಿ ಸಮಸ್ಯೆಗಳು ಏಳಬಹುದು. ಆಯ್ಲಿ ಸ್ಕಿನ್ ಗಾಗಿ ಎಕ್ಸ್ ಫಾಲಿಯೇಶನ್ ಒಂದು ಉತ್ತಮ ಗೇಮ್ ಚೇಂಜರ್ ಆಗಿದೆ.

ಸೀರಮ್
ಯಾವ ತರಹ ಆಯ್ಲಿ ಸ್ಕಿನ್ ಗೆ ಫೇಸ್ ವಾಶ್, ಕ್ಲೆನ್ಸರ್, ಮಾಯಿಶ್ಚರೈಸರ್, ಟೋನರ್ ಅಗತ್ಯವೋ ಅದೇ ತರಹ ಸೀರಮ್ ಸಹ ಅತ್ಯಗತ್ಯ. ಇದಕ್ಕಾಗಿ ನೀವು ಡಾಟ್ ಎಂಡ್ ಪ್ರಾಡಕ್ಟ್ಸ್, ಡರ್ಮಾದ ನಿಯಾಸಿನಿಮೈಡ್, ಪ್ಲಿಕ್ಸ್ ನಿಯಾಸಿನಿಮೈಡ್, ಪಿಲ್ ಗ್ರಿಮ್ ಸ್ಯಾಲಿಸಿಲಿಕ್ ಆ್ಯಸಿಡ್, ಮಿನಿಮಲಿಸ್ಟ್ ನ ಫೇಸ್ ಸೀರಮ್ ಇತ್ಯಾದಿ ಬಳಸಿಕೊಳ್ಳಿ.
ರೋಸ್ ವಾಟರ್
ನೀವು ನಿಮ್ಮ ಹ್ಯಾಂಡ್ ಬ್ಯಾಗಿನಲ್ಲಿ ರೋಸ್ ವಾಟರ್ ನ ಒಂದು ಬಾಟಲಿಯನ್ನು ಸದಾ ಇರಿಸಿಕೊಳ್ಳಿ. ಯಾವಾಗ ಮುಖ ತುಸು ಡ್ರೈ ಎನಿಸಿತೋ, ತಕ್ಷಣ ಇದನ್ನು ಸ್ಪ್ರೇ ಮಾಡಿಕೊಳ್ಳಿ. ಇದು ಚರ್ಮವನ್ನು ಸದಾ ಹೈಡ್ರೇಟೆಡ್ ಆಗಿರಿಸುತ್ತದೆ. ಇದು ಚರ್ಮವನ್ನು ಆಮೂಲಾಗ್ರವಾಗಿ ಶುಚಿಗೊಳಿಸಿ, ಚರ್ಮವನ್ನು ಕಾಡುವ ತುರಿಕೆ, ಕಡಿತಗಳಿಂದಲೂ ರಕ್ಷಿಸುತ್ತದೆ.
ಈ ಮಳೆಗಾಲದಲ್ಲಿ ನೀವು ನಿಮ್ಮ ಆಯ್ಲಿ ಚರ್ಮವನ್ನು ಈ ಮೇಲಿನ ಎಲ್ಲಾ ಸಮಸ್ಯೆಗಳಿಂದ ದೂರವಿಡಲು ಬಯಸಿದರೆ, ಈ ಕೆಳಗಿನ ಸಲಹೆಗಳನ್ನು ಅಗತ್ಯ ಅನುಸರಿಸಿ :
ಆಯ್ಲಿ ಸ್ಕಿನ್ ಗಾಗಿ ನೀವು ಒಂದು ಉತ್ತಮ ಸನ್ ಸ್ಕ್ರೀನ್ ಲೋಶನ್ (SPF ಯುಕ್ತ) ಬಳಸಬೇಕು. ಇದಕ್ಕಾಗಿ ನೀವು ಮಿನರಲ್ಸ್ ಯುಕ್ತ ಸನ್ ಸ್ಕ್ರೀನ್ ಬಳಸಬೇಕು. ಅದರಲ್ಲಿ ಝಿಂಕ್, ಟೈಟ್ಯಾನಿಯಂ ಡೈ ಆಕ್ಸೈಡ್ ಇದ್ದು, ಅದು ಹೆಚ್ಚುವರಿ ಜಿಡ್ಡನ್ನು ಹೀರಿಕೊಳ್ಳುವಂತಿರಬೇಕು.
ನಿಮ್ಮ ಮುಖಕ್ಕೆ ವಾರದಲ್ಲಿ ಕನಿಷ್ಠ 1-2 ಸಲ ಶೀಟ್/ಪೀಲ್ ಮಾಸ್ಕ್ ಅಳವಡಿಸಿ, ಇದರಲ್ಲಿ ಚಾರ್ಕೋಲ್ ಮೊರಕ್ಕನ್ ಕ್ಲೇ ಅಂಶ ಹೆಚ್ಚಾಗಿರಬೇಕು ಎಂಬುದನ್ನು ನೆನಪಿಡಿ.
ನೀವು ಯಾವುದೇ ಬಗೆಯ ಮೇಕಪ್ ಮಾಡುವ ಮುನ್ನ, ಒಂದು ಉತ್ತಮ ಪ್ರೈಮರ್ ಹಚ್ಚಬೇಕು. ಇದು ಸೀಬಂ ಸ್ರಾವವನ್ನು ನಿಯಂತ್ರಿಸುತ್ತದೆ.
ಮಳೆಗಾಲದಲ್ಲಿ ಭಾರಿ ಮೇಕಪ್ ಖಂಡಿತಾ ಚೆನ್ನವಲ್ಲ. ಇದು ರೋಮರಂಧ್ರಗಳನ್ನು ಕ್ಲೋಸ್ ಮಾಡಿಸಿಬಿಡುತ್ತದೆ. ವಾಟರ್ ಪ್ರೂಫ್ ಆಗಿರುವಂಥ ಲೈಟ್ ಮೇಕಪ್ ಸಾಧನಗಳನ್ನಷ್ಟೇ ಬಳಸಿರಿ.
ರಾತ್ರಿ ಮಲಗುವ ಮುನ್ನ ಚರ್ಮವನ್ನು ಮೇಕಪ್ ರಹಿತ ಮಾಡಿ ಶುಚಿಯಾಗಿಡಬೇಕು. ಮಳೆ ನೀರಿನ ಹಾವಳಿ ಜೊತೆ, ಹೊರಗಿನ ಆರ್ದ್ರತೆ, ಬೆವರು ಇತ್ಯಾದಿ ಒಟ್ಟಾಗಿ ದಾಳಿ ನಡೆಸಿ, ನಿಮ್ಮ ಮುಖದ ರೋಮರಂಧ್ರಗಳನ್ನು ಸಂಪೂರ್ಣ ಕ್ಲೋಸ್ ಮಾಡಿಸಿಬಿಡುತ್ತದೆ. ಇದರಿಂದ ಮೊಡವೆ, ಆ್ಯಕ್ನೆಗಳಲ್ಲಿ ಉರಿ ಹೆಚ್ಚಿ ಹಿಂಸೆ ಕಾಡುತ್ತದೆ. ಹೀಗಾಗಿ ನಿಮ್ಮ ಸ್ಕಿನ್ ಕೇರ್ ರೊಟೀನ್ ನಲ್ಲಿ ಒಂದು ವಿಶ್ವಾಸಾರ್ಹ ಮೇಕಪ್ ರಿಮೂವರ್ ನ್ನು ಅಗತ್ಯ ಇರಿಸಿಕೊಳ್ಳಿ.
ಮಳೆಗಾಲ ಎಂದ ಮಾತ್ರಕ್ಕೆ ಸೂರ್ಯನ ಗೊಡವೆ ಏಕೆ ಎಂದು ನಿರ್ಲಕ್ಷಿಸದಿರಿ. ಅಂದ್ರೆ ಈ ಕಾಲದಲ್ಲೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯಬಾರದು. ಮೋಡಗಳ ನಡುವಿನಿಂದಲೂ UV ಕಿರಣಗಳು ತೂರಿಬಂದು ನಿಮ್ಮನ್ನು ಬಾಧಿಸುತ್ತವೆ. ಹೀಗಾಗಿ ಕನಿಷ್ಠ 40 SPFನ ನಾನ್ ಕಾಮೆಡೊಜೆನಿಕ್ ಆಯಿಲ್ ಫ್ರೀ ಸನ್ ಸ್ಕ್ರೀನ್ ಲೋಶನನ್ನೇ ಆರಿಸಿ.
– ವೈ. ಪ್ರಿಯಾಂಕಾ





