ಕರ್ನಾಟಕ ಲಲಿತಕಲಾ ಅಕಾಡೆಮಿಯ 2024-2025 ಹಾಗೂ 2025-26ನೇ ಸಾಲಿನ ಗೌರವ ಪ್ರಶಸ್ತಿಗೆ ಆರು ಕಲಾ ಸಾಧಕರು ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಹಾಗೂ ರಿಜಿಸ್ಟ್ರಾರ್‌ ಎನ್‌.ನಮ್ರತಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು.

2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಬಾಬು ಜತ್ತಕರ್‌, ಕಲಬುರಗಿಯ ಎಂ.ಜಿ.ದೊಡ್ಡಮನಿ, ತುಮಕೂರಿನ ಕೆ.ಸಿ.ಎಸ್‌.ಪ್ರಸನ್ನ, 2025-26ನೇ ಸಾಲಿನ ಹಾಸನದ ಬಿ.ಎಸ್‌.ದೇಸಾಯಿ, ವಿಜಯಪುರದ ಶಶಿಕಲಾ ಹೂಗಾರ್‌ ಹಾಗೂ ಮೈಸೂರಿನ ಸಿ.ಚಿಕ್ಕಣ್ಣ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಒಳಗೊಂಡಿದೆ.

ವರ್ಣಶ್ರೀ ಪ್ರಶಸ್ತಿ: 2023-24 ಹಾಗೂ 2024-25ನೇ ಸಾಲಿಗೆ ತಲಾ 10 ಕಲಾವಿದರನ್ನು ವರ್ಣಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗದಗದ ವಿಜಯ ಕಿರಸೂರ, ಶಿರಸಿಯ ರವಿ ಗುಣಗ, ಹಾವೇರಿಯ ಕುಮಾರ ಕಾಟೇನಹಳ್ಳಿ, ಧಾರವಾಡದ ದಯಾನಂದ ಕೆ. ಕಾಮಕರ್‌, ವಿಜಯಪುರದ ಸರೋಜ ಮುಂಡೇವಾಡಿ, ಕೊಡಗಿನ ಜಿ.ಎಸ್‌.ಭವಾನಿ, ಉಡುಪಿಯ ರಾಘವೇಂದ್ರ ನಾಯ್ಕ, ಮಂಡ್ಯದ ಶಿವಕುಮಾರ್ ಎಚ್‌, ಮಂಗಳೂರಿನ ಮೋಹನ್‌ ಕುಮಾರ್‌ ಬಿ.ಪಿ. ಹಾಗೂ ಚಾಮರಾಜನಗರದ ಮಹದೇವ ಎಚ್‌ ಅವರು 2023-24ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024-25ನೇ ಸಾಲಿಗೆ ಯಾದಗಿರಿಯ ಮೇಘನಾಥ ಅಬ್ರಹಂಬೆಳ್ಳಿ, ರಾಯಚೂರಿನ ಹೇಮರೆಡ್ಡಿ ಎನ್‌, ಬೀದರ್‌ನ ವೈಶಾಲಿಬಾಯಿ ಕಾಂಬಳೆ, ಕೊಪ್ಪಳದ ತಿರುಪತಿ ಶಿವನಗುತ್ತಿ, ಬಳ್ಳಾರಿಯ ಎ. ಮಹಮದ್‌ ರಫಿ, ದಾವಣಗೆರೆಯ ಉದಯ್‌ಕುಮಾರ್ ಡಿ. ಜೈನ್‌, ಚಿತ್ರದುರ್ಗದ ದಿನೇಶ್‌ ಬಿ, ಬೆಂಗಳೂರಿನ ಎಸ್‌.ಎಫ್. ಹುಸೇನಿ, ರಾಮನಗರದ ಗಂಗಾಧರಮೂರ್ತಿ ಹಾಗೂ ಬೆಂಗಳೂರಿನ ಪೂರ್ಣಿಮ ಯಲ್ಲಾಪುರಕರ್ ಅವರು ವರ್ಣಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 25 ಸಾವಿರ ನಗದು ಒಳಗೊಂಡಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಜೊತೆ ಚರ್ಚಿಸಿ, ಪ್ರಶಸ್ತಿ ಪ್ರದಾನ ದಿನಾಂಕ ಹಾಗೂ ಸ್ಥಳವನ್ನು ನಿಗದಿ ಮಾಡಲಾಗುವುದು ಎಂದು ಪ.ಸ.ಕುಮಾರ್‌ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ