ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರು ಇಲ್ಲಿನ ಎಸ್ ಎಸ್ ಎಲ್ ಸಿ ಯಲ್ಲಿ ಕಳೆದ ಬಾರಿ ಕೇವಲ 35% ಪ್ರತಿಶತ ಫಲಿತಾಂಶ ಪಡೆದು ಕ್ಷೇತ್ರದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿತ್ತು. ಈ ವಿಚಾರವನ್ನು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಗಂಭೀರವಾಗಿ ಪರಿಗಣಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಅತ್ಯುತ್ತಮ ಫಲಿತಾಂಶ ಪಡೆಯಲೇಬೇಕೆಂದು ಮುಖ್ಯೋಪಾಧ್ಯಾಯರಿಗೆ ಮನವಿ ಮಾಡಿದ್ದರು.
ಶಾಸಕರ ಮಾತನ್ನ ಸವಲಾಗಿ ಸ್ವೀಕರಿಸಿದ್ದ ಶಾಲೆಯ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದ, ಈ ಬಾರಿ ಶಾಲೆ 94% ಪ್ರತಿಶತ ಫಲಿತಾಂಶ ಪಡೆಯುವ ಮೂಲಕ ಸಾಧನೆಗೈದು ಶಾಸಕರು, ಮಕ್ಕಳು, ಪೋಷಕರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ.
ಸುದ್ದಿ ತಿಳಿದು ಶಾಲೆಗೆ ದಾವಿಸಿ ಬಂದ ಶಾಸಕರು, ಅತ್ಯುತ್ತಮ ಸಾಧನೆಗೈಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದಕ್ಕೆ ಅಭಿನಂದನೆ ತಿಳಿಸಿ ಜಯಂತಿ ಟೀಚರ್ ರವರ ಪಾದಕ್ಕೆರಗಿ ನಮಸ್ಕಾರ ಮಾಡುತ್ತಾರೆ.
ಶಾಸಕರ ಈ ನಡೆ ಎಂತವರ ಕಣ್ಣಲ್ಲಾದರೂ ಒಮ್ಮೆ ನೀರು ತರಿಸುತ್ತದೆ. ತನ್ನ ಕ್ಷೇತ್ರದಲ್ಲಿ ತಪ್ಪಾದಾಗ ಕ್ಷೇತ್ರದ ಪ್ರತಿನಿಧಿಯಾಗಿ ತಪ್ಪನ್ನು ತಿದ್ದಿ ಹೇಳಿ ಸರಿಪಡಿಸಲು ಪ್ರಯತ್ನಿಸಿ. ಅದೇ ಪ್ರಯತ್ನ ಗೆದ್ದಾಗ ಅಧಿಕಾರದ ಅಹಂ ಇಲ್ಲದೆ ಈ ರೀತಿ ನಡೆದುಕೊಂಡಾಗ ಜನರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗುತ್ತೀರಿ. ಈ ಸಾಮಾನ್ಯತನವೇ ನಿಮ್ಮನ್ನು ಬಹುದೊಡ್ಡ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರೇ ನೇರ ಸಾಕ್ಷಿ.
ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಎಲ್ಲಾ ಶಿಕ್ಷಕವ್ರಂದದವರಿಗೂ ಧನ್ಯವಾದಗಳು





