ಶರತ್ ಚಂದ್ರ 

ತೆಲುಗು ಚಿತ್ರರಂಗದ ನಿರ್ದೇಶಕರ ಸಂಘ ಪ್ರತೀ ವರ್ಷ ತೆಲುಗು ಚಿತ್ರರಂಗದ ದಿಗ್ಗಜ ನಿರ್ದೇಶಕ ದಿವಂಗತ ಡಾ. ದಾಸರಿ ನಾರಾಯಣ್ ರಾವ್ ಅವರ ಜನ್ಮ ದಿನಾಚರಣೆಯನ್ನು ತೆಲುಗು ನಿರ್ದೇಶಕರ ಸಂಘ ಪ್ರತೀ ವರ್ಷ ನಿರ್ದೇಶಕರ ದಿನಾಚರಣೆಯಾಗಿ ಆಚರಿಸಿಕೊಂಡು ಬಂದಿದೆ.

ಇತ್ತೀಚೆಗೆ ಹೈದ್ರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ನಿರ್ದೇಶಕರ ದಿನಾಚರಣೆಯ ಅದ್ದೂರಿ ಸಮಾರಂಭ ನೆರೆವೇರಿತು. ದಕ್ಷಿಣ ಭಾರತದ ಜನಪ್ರಿಯ ತಾರೆಗಳಾದ ಮೋಹನ್ ಬಾಬು, ಜಯಪ್ರದಾ, ಜಯಸುಧಾ,ಬಾಬು ಮೋಹನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1000951765

ತೆಲುಗು ಚಿತ್ರರಂಗದ ನಿರ್ದೇಶಕರ ಸಂಘದ ಅಧ್ಯಕ್ಷರಾದ ಶ್ರೀ ಆದಿತ್ಯ. ವಿ. ಎನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವೀಯಾಗಿ ನಡೆಯಿತು. ವಿಶೇಷವೆಂದರೆ ಕನ್ನಡ ಚಿತ್ರರಂಗದ ನಿರ್ದೇಶಕರ ಸಂಘದ (KANFIDA) ಅಧ್ಯಕ್ಷರಾದ ಶ್ರೀ ಎನ್. ಆರ್. ಕೆ. ವಿಶ್ವನಾಥ್ , ಕಾರ್ಯದರ್ಶಿ ಶಿವಶಂಕರ್ ಹಾಗೂ ಖಜಾಂಚಿ ಆದಿತ್ಯ ಚಿಕ್ಕಣ್ಣ ಅವರಿಗೆ ವಿಶೇಷ ಆಹ್ವಾನ ನೀಡಿದ್ದು,ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.

ನಿರ್ದೇಶಕರ ಸಂಘದ (KANFIDA) ಎನ್. ಆರ್. ಕೆ ವಿಶ್ವನಾಥ್ ಅವರು ನಿರ್ದೇಶಕರ ಸಂಘದ ಚುಕ್ಕಾಣಿ ಹಿಡಿದ ನಂತರ ಹಿರಿಯ ನಿರ್ದೇಶಕರಾದ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನಾಚರಣೆಯನ್ನು ನಿರ್ದೇಶಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

1000951749

ಕನ್ನಡ ಚಿತ್ರರಂಗದ ನಿರ್ದೇಶಕರೆಂದರೆ ದಕ್ಷಿಣ ಚಿತ್ರರಂಗದವರಿಗೆ ಮುಂಚಿನಿಂದಲೂ ಅಪಾರ ಗೌರವ. ಕನ್ನಡ ಚಿತ್ರರಂಗದ ಜೊತೆಗೆ ನಿರಂತರವಾಗಿ ಉತ್ತಮ ಬಾಂಧವ್ಯವನ್ನು ಹೊಂದಿರುವ ತೆಲುಗು ಚಿತ್ರರಂಗ, ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಗೌರವಿಸಿದ್ದು ನಿಜಕ್ಕೂ ಪ್ರಶಂಶನೀಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ