– ರಾಘವೇಂದ್ರ ಅಡಿಗ ಎಚ್ಚೆನ್.

‘ಸ್ಕಂದ ಫಿಲಂ ಹೌಸ್’ ಹಾಗೂ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ‘ಶೋಧ’ ಚಿತ್ರದ ಮುಹೂರ್ತ ಬೆಂಗಳೂರಿನ ರಾಜಾಜಿನಗರದ ಶ್ರೀದಂಡಪಾಣಿ (ಮುರುಘ) ದೇವಸ್ಥಾನದಲ್ಲಿ ನೆರವೇರಿತು.

ಸುಮಾರು ಒಂದೂವರೆ ದಶಕಗಳಿಂದ ಕನ್ನಡ  ಚಿತ್ರರಂಗದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ತರಬೇತಿ ನೀಡಿ ಕಿರುತೆರೆ ಮತ್ತು ಹಿರಿತೆರೆಗೆ ಕಲಾವಿದರನ್ನಾಗಿ ಪರಿಚಯಿಸಿರುವ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ ಇದೀಗ ‘ಶೋಧ’ ಚಿತ್ರದ ಮೂಲಕ ನಿರ್ಮಾಣಕ್ಕೆ ಮುಂದಾಗಿದ್ದು, ‘ಫ್ಲೆಮಿಂಗೋ’ ಸಂಸ್ಥೆಯ ನಟನ ವಿದ್ಯಾರ್ಥಿಗಳನ್ನೇ ಪ್ರಮುಖ ಪಾತ್ರದಲ್ಲಿ ಇಟ್ಟುಕೊಂಡು ಈ ಚಿತ್ರ ತಯಾರಾಗುತ್ತಿದೆ.

ಶೋಧ ‘ಚಿತ್ರಕ್ಕೆ ಹಿರಿಯ ನಟ ಮತ್ತು ನಿರ್ದೇಶಕ ಎಂ. ಡಿ. ಕೌಶಿಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೆಮಿಂಗೋ’ ಸಂಸ್ಥೆಯ ರೂವಾರಿ ಧವನ್ ಸೋಹ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಫಿಲಂ ಅಕಾಡೆಮಿ’ಯ ಯುವ ಪ್ರತಿಭೆ ಚೇತನ್ ‘ಶೋಧ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

shodha 1

ಇನ್ನು ‘ಶೋಧ’ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಚಿತ್ರವಾಗಿದ್ದು, ಇಂದಿನ ಸಾಮಾಜಿಕ, ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯ ಸುತ್ತ ಚಿತ್ರದ ಕಥಾಹಂದರ ಸಾಗಲಿದೆ. ‘ನಮ್ಮ ನಡವೆಯೇ ಹುದುಗಿ ಹೋಗಿರುವ ಸತ್ಯದ ‘ಶೋಧ’ಕ್ಕೆ ಹೊರಟಾಗ ಏನೇನು ಎದುರಾಗುತ್ತದೆ ಎಂಬುದೇ ಚಿತ್ರದ ಕಥೆಯ ಒಂದು ಎಳೆ. ಅದನ್ನು ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ತರುತ್ತಿದ್ದೇವೆ’ ಎಂಬುದು ‘ಶೋಧ’ ಚಿತ್ರತಂಡದ ಮಾತು.

‘ಶೋಧ’ ಚಿತ್ರದ ಹಾಡುಗಳಿಗೆ ಭುವನೇಶ್ ರೆಡ್ಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಚಂದು ಸಿ. ಛಾಯಾಗ್ರಹಣ, ಸೂರ್ಯೋದಯ ಸಂಕಲನ ಕಾರ್ಯವಿದೆ. ಬೆಂಗಳೂರು, ಕನಕಪುರ ಸುತ್ತಮುತ್ತ ಸುಮಾರು 15 ದಿನಗಳ ಕಾಲ ‘ಶೋಧ’ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಇದೇ ಆಗಸ್ಟ್ ವೇಳೆಗೆ ‘ಶೋಧ’ ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ