Sj*

ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಹೊಸಬರು ವಿಭಿನ್ನ ಟೈಟಲ್ ಹಾಗೂ ಕಥೆ ಮೂಲಕ ಗಮನಸೆಳೆಯುತ್ತಿದ್ದಾರೆ.‌ ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಸುಮ್ನೆ ತಮಾಷೆಗೆ.

ಈ ಹಿಂದೆ ಕಡಲ ತೀರದ ಭಾರ್ಗವ ನಿರ್ದೇಶಿಸಿದ್ದ ಪನ್ನಗ ಹಾಗೂ ಅವರ ಸ್ನೇಹಿತರು, ಯಾವ ಮೋಹನ‌ ಮುರಳಿ ಕರೆಯಿತು ನಿರ್ದೇಶಕ ವಿಶ್ವಾಸ್ ಕೃಷ್ಣ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ.

tamasha 1

ಘಟಕಲ ಸುರೇಶ್ ಬಾಬು ಸುಮ್ನೆ ತಮಾಷೆಗೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆರವೇರಿದೆ.

ಕಡಲ ತೀರದ ಭಾರ್ಗವ, ಯಾವ ಮೋಹನ ಮುರಳಿ ಕರೆಯಿತು ಹಾಗೂ ಪೀಟರ್ ಸಿನಿಮಾಗಳಲ್ಲಿ ನಟಿಸಿರುವ ಪಟೇಲ್ ವರುಣ್ ರಾಜು ಸುಮ್ನೆ ತಮಾಷೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಹಾಗೂ ಮಾಧವ ತಾರಾಬಳಗದಲ್ಲಿದ್ದಾರೆ. ಸಾಮ್ರಾಟ್ ಮ್ಯೂಸಿಕ್, ಪುನೀತ್ ಓಂಕಾರ್ ಸ್ಟ‌ಂಟ್ ಕೊರಿಯೋಗ್ರಫಿ ಚಿತ್ರಕ್ಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ