ಇತ್ತೀಚೆಗೆ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಚಾಲೆಂಗ್ ಸ್ಟಾರ್ ದರ್ಶನ್ ಅವರು ನಟಿಸಿದ ಕಾಟೇರ ಎಂಬ ಸಿನಿಮಾ ತೆರೆ ಕಂಡು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಆ ಸಿನಿಮಾದಲ್ಲಿ 70ರ ದಶಕದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಂದ ಭೂಸುಧಾರಣೆ ಕಾಯ್ದೆಯ ಅನ್ವಯ ಉಳುವವನೇ ಭೂಮಿಯ ಒಡೆಯ ಕಾನೂನಿನ ಹಿನ್ನಲೆಯ ಆಧಾರಿತವಾದ ಚಿತ್ರವಾಗಿದೆ.  ಸಮಾಜದ ಒಂದು ಜಾತಿ ಅಥವಾ ಪಂಗಡದ ವಿರುದ್ಧ ಪೂರ್ವಾಗ್ರಹ ಪೀಡಿತರಾದ ಕಥೆಗಾರ ನಿರ್ದೇಶಕ ಮತ್ತು ಚಿತ್ರತಂಡವು 50 ವರ್ಷಗಳ ನಂತರ ಸಮಾಜಕ್ಕೆ ಯಾವ ರೀತಿಯ ಕೆಟ್ಟ ಅಭಿಪ್ರಾಯ ಮತ್ತು ಕೆಟ್ಟ ಸಂದೇಶವನ್ನು ನೀಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದು ಆ ಕುರಿತಂತೆ ಒಂದು ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ.

ನಮ್ಮ ದೇಶಕ್ಕೆ 1947ರಲ್ಲಿ ಸ್ವಾತ್ರಂತ್ರ್ಯ ಬಂದ ನಂತರ ಇಡೀ ದೇಶದಲ್ಲಿ ಜನರ ಮನಸ್ಸಿನಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತ್ರಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೇಸ್ ಎಂಬ ಹಸೀ ಸುಳ್ಳನ್ನು ಬಿತ್ತಿದ ಪರಿಣಾಮ, ಸ್ವಾತಂತ್ರ್ಯ ಬಂದ ಮೊದಲ 50 ವರ್ಷಗಳ ಕಾಲ ನಮ್ಮ ದೇಶದ ಆಡಳಿತ ನೆಹರು ಮತ್ತು ಅವರ ಕುಟುಂಬದರ ಪ್ರಾಭಲ್ಯವೇ ಮೆರೆಯಿತು. ಸ್ವಾತ್ರಂತ್ರ್ಯ ಬಂದ ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಒಂದಷ್ಟು ಪ್ರಗತಿ ಕಂಡರೂ ನಂತರ ಪ್ರಗತಿಯ ಹೆಸರಿನಲ್ಲಿ ಖರ್ಚಾದ ಅಷ್ಟೂ ಹಣವೂ ಅಧಿಕಾರದಲ್ಲಿ ಇದ್ದ ಕಾಂಗ್ರೇಸ್ ನಾಯಕರ ಮನೆ ಸೇರಿದ್ದದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.

bhoomi1

60ರ ದಶಕದಲ್ಲಿ ದೇಶದ ಮೂಲೆ ಮೊಲೆಯಲ್ಲಿ ಸಣ್ಣದಾಗಿ ಕಾಂಗ್ರೇಸ್ ವಿರುದ್ಧ ಹೋರಾಟದ ಮನೋಭಾವನೆಯ ನಾಯಕರುಗಳು ಹುಟ್ಟಿಕೊಂಡಾಗ, 1971 ರ ಚುನಾವಣೆಯಲ್ಲಿ ಗೆಲ್ಲುವುದು ತುಸು ಕಷ್ಟವಾಗಬಹುದು ಎಂದು ಅಂದಿನ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಅನಿಸಿದ್ದೇ ತಡಾ, ಇದ್ದಕ್ಕಿದ್ದಂತೆಯೇ, ಗರೀಬಿ ಹಟಾವೋ ದೇಶ್ ಬಚಾವೋ (ಬಡತನ ತೊಲಗಿಸಿ, ದೇಶವನ್ನು ಉಳಿಸಿ) ಎಂಬ ಘೋಷ ವಾಕ್ಯವನ್ನು ತೇಲಿ ಬಿಟ್ಟು ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಮತ್ತು ನಗರದಲ್ಲಿರುವ ಬಡವರ ಜೀವನಾವಶ್ಯಕವಾದ ರೋಟಿ ಮಕಾನ್ ಕಪಡ ಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಅಂತೆಯೇ ನಗರ ವಾಣಿಜ್ಯ ವರ್ಗ. ಮತ್ತು, ಅವರ ಪಾಲಿಗೆ, ಹಿಂದೆ ಧ್ವನಿಯಿಲ್ಲದ ಬಡವರು ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳು ಅಂತಿಮವಾಗಿ ರಾಜಕೀಯ ಮೌಲ್ಯ ಮತ್ತು ರಾಜಕೀಯ ತೂಕ ಎರಡನ್ನೂ ಪಡೆಯುತ್ತಾರೆ ಎಂಬ ಭರವಸೆಯನ್ನು ನೀಡಿದ್ದನ್ನು ನಂಬಿ ಮತ್ತೆ ಆವರನ್ನೇ ಅಧಿಕಾರಕ್ಕೆ ತಂದರು. ಅದೇ ರೀತಿ ಕರ್ನಾಟಕದಲ್ಲಿಯೂ ದೇವರಾಜ ಅರಸ್ ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರ ತಮ್ಮ ಸ್ವಾಮಿ ನಿಷ್ಟೆಯನ್ನು ತೋರಿಸಿಕೊಳ್ಳುವ ಸಲುವಾಗಿಯೇ ವಿನೋಭಾ ಭಾವೆಯವರ ನೇತೃತ್ವದಲ್ಲಿ ನಡೆದ ಭೂಧಾನ ಚಳುವಳಿಯಿಂದ ಸ್ವಲ್ಪ ಪ್ರೇರಿತವಾಗಿ ಇದ್ದಕ್ಕಿದ್ದಂತೆಯೇ,1974 ರಲ್ಲಿ ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆಯನ್ನು ಏಕಾ ಏಕಿ ಜಾರಿಗೆ ಗೊಳಿಸುವ ಮೂಲಕ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೆ ಮಾಡುವ ಮೂಲಕ ರಾಜ್ಯದ ಲಕ್ಷಾಂತರ ಜಮೀನ್ದಾರು, ಭೂ ಹಿಡುವಳಿದಾರರು ರಾತ್ರಿಯಿಂದ ಬೆಳಗಾಗುವಷ್ಟರರಲ್ಲಿ ಬೀದಿಗೆ ಬರುವಂತೆ ಮಾಡಿದ್ದದ್ದು ನಿಜಕ್ಕೂ ಅಕ್ಷ್ಮಮ್ಯ ಅಪರಾಧವೇ ಸರಿ.

ನಿಜ ಹೇಳಬೇಕೆಂದರೆ, ಈ ರೀತಿಯಾಗಿ ಅತಿ ಹೆಚ್ಚಿನ ಭೂಮಿಯನ್ನು ಕಳೆದುಕೊಂಡವರು ಊರ ಶಾನುಭೋಗರು ಅರ್ಥಾತ್ ಕುಲಕರ್ಣಿಗಳು. ಜನ್ಮತಃ ಬ್ರಾಹ್ಮಣರಾದ ಇವರುಗಳ ನೂರಾರು ಎಕರೆಯಷ್ಟು ಜಮೀನುಗಳು ತಮ್ಮ ಬುದ್ದಿ ಶಕ್ತಿ ಮತ್ತು ಚಾಕಚಕ್ಯತೆ, ಸ್ವಾಮಿ ನಿಷ್ಠೆಗಳಿಂದ ಅದೆಷ್ಟೋ ತಲೆಮಾರುಗಳ ಹಿಂದೆಯೇ ರಾಜಾಶ್ರಯವನ್ನು ಪಡೆದು ಅವರಿಂದ ಪಡೆದ ಉಂಬಳಿ ಪಡೆದಿದ್ದೇ ಹೊರತೂ, ಯಾರ ತಲೆಯನ್ನು ಹೊಡೆದು ಗಳಿಸಿದ ಆಸ್ತಿಯಾಗಿರಲಿಲ್ಲ. ಇನ್ನೂ ಕೆಲವು ಊರಿನ ಪುರೋಹಿತರು ಊರ ದೇವಾಲಯದ ಜಮೀನುಗಳನ್ನು ಹೊಂದಿದ್ದವರಾಗಿದ್ದರು. ಇವರೆಲ್ಲರೂ ತಮ್ಮ ಬೌಧ್ಧಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಕಾರಣ, ಆವರ ಜಮೀನುಗಳನ್ನು ಊರಿನ ಸಣ್ಣ ಸಣ್ಣ ರೈತರುಗಳಿಗೆ ಗೇಣಿ (ಗುತ್ತಿಗೆ) ರೀತಿಯಲ್ಲಿ ಕೊಟ್ಟು ಅದರಿಂದ ಬಂದ ಫಲದಲ್ಲಿ ಅರ್ಧ ಭಾಗವೋ ಇಲ್ಲವೇ ಹಲವಾರು ಬಾರಿ ರೈತರುಗಳು ಕೊಟ್ಟಷ್ಟೇ ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರೇ ಹೊರತು ಅವರೆಂದೂ ಯಾರಿಗೂ ಶೋಷಣೆ ಮಾಡಿದ ಉದಾಹರಣೆಗಳು ಕಾಣಸಿಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ