ಈ ಸಲಹೆಗಳನ್ನು ಅಚ್ಚುಕಟ್ಟಾಗಿ ಅನುಸರಿಸಿ, ಮೇಕಪ್ ಮಾಡಿಕೊಂಡು, ನೀವು ಮಾಡೆಲ್ ತರಹ ಗ್ಲಾಮರಸ್ ಗೆಟಪ್ ಹೊಂದಿರಿ……!
“ಭಾರತೀಯ ಹೆಣ್ಣಿನ ಸೌಂದರ್ಯ ಬಲು ಸೌಮ್ಯ. ಆಕೆಯ ಚಹರೆ ಬಲು ಪುಳಕಿತ ಗೊಳಿಸುವಂಥದು,” ಎನ್ನುತ್ತಾರೆ ಸ್ವೀಡನ್ನಿನ ಮೇಕಪ್ ಆರ್ಟಿಸ್ಟ್ ಯೋಸನ್ ರೇಮ್.
ಈಕೆಯ ಪ್ರಕಾರ, ಅತ್ಯುತ್ತಮ ಆಧುನಿಕ ವಿಧಾನದಲ್ಲಿ ನವ ವಧುವಿನ ಶೃಂಗಾರ ಮಾಡಿದಾಗ, ಅದರ ಗ್ಲಿಟರ್‌ಮೆಟಾಲಿಕ್ ಟಚ್ ನಿಂದ, ಹಸಿರುಕಂದು ಬಣ್ಣ ಬೆರೆತರೆ, ಈ ಹವಾಮಾನಕ್ಕೆ ಬಲು ಪ್ರಭಾವಶಾಲಿ ಎನಿಸುತ್ತದೆ. ಇದರ ಜೊತೆ ಸಾಂಪ್ರದಾಯಿಕ ಕೆಂಪು, ಹೊಳೆಯುವ ಬಣ್ಣ ಕೂಡಿದರೆ ಕೇಳುವುದೇ ಬೇಡ! ಹುಬ್ಬುಗಳಿಗೆ ಸ್ಪೆಷಲ್ ಎಫೆಕ್ಟ್ ನೀಡಲು, ಕಂಗಳನ್ನು ಸಮ್ಮೋಹಕ ಗೊಳಿಸಲು ಹೇಳುತ್ತಾರೆ. ಇದಕ್ಕಾಗಿ ಕಂದು ಬಣ್ಣ, ಮಣ್ಣಿನ ಬಣ್ಣ ಬಳಸಬಹುದು ಎನ್ನುತ್ತಾರೆ.
ಮಾಡೆಲ್ ತರಹದ ಮೇಕಪ್ ಗಾಗಿ, ಫೌಂಡೇಶನ್ ನ್ನು ಸದಾ ಚೀಕ್ ಬೋನ್ಸ್ ನಿಂದ ತೀಡಲು ಶುರು ಮಾಡಿ. ನಂತರ ಬ್ಲಶರ್ ನ ಬ್ರಶ್ಶ್ ನ್ನು ಹಣೆಯಿಂದ ಆರಂಭಿಸಿ ಗಲ್ಲದವರೆಗೂ ತನ್ನಿ. ಅಂದ್ರೆ ಬ್ರಶ್ಶ್ ನ್ನು ಹಣೆಯಿಂದ ಗಲ್ಲದವರೆಗೆ ನಂ.3ರ ಆಕಾರದಲ್ಲಿ ತಂದು ಫಿನಿಶ್ ಮಾಡಿ. ಅದೇ ವಧುವಿನ ಮೇಕಪ್ ಗಾದರೆ, ಕಂಗಳ ಮೇಕಪ್ ಗೆ ಹೆಚ್ಚಿನ ಗಮನ ಕೊಡಬೇಕು. ಎಲ್ಲಕ್ಕೂ ಮೊದಲು ಲೈಟ್ ಐಶ್ಯಾಡೋ ಬಳಸಿ, ಕಂಗಳ ಎರಡೂ ತುದಿಗೆ ಹಚ್ಚಿರಿ. ಇದರಿಂದ ಕಂಗಳು ಸ್ಮೋಕಿ ಎನಿಸುತ್ತವೆ.
ಡ್ರೆಸ್ ಗೆ ತಕ್ಕಂತೆ ಐ ಶ್ಯಾಡೋ
ನಂತರ ಕಂಗಳ ಮೇಲಿನ ಅರ್ಧ ಭಾಗಕ್ಕೆ ಲೈಟ್, ಉಳಿದ ಭಾಗಕ್ಕೆ ಗೋಲ್ಡನ್ ಐಶ್ಯಾಡೋ ಹಚ್ಚಿರಿ. ದೀರ್ಘಬಾಳಿಕೆಯ ಮೇಕಪ್ ಗಾಗಿ ಅದು ಚೆನ್ನಾಗಿ ಹರಡಿಕೊಳ್ಳುವಂತೆ ಮಾಡಿ. ಗೋಲ್ಡನ್ ಐ ಶ್ಯಾಡೋವನ್ನು ಹುಬ್ಬುಗಳ ಕೆಳಭಾಗದಿಂದ ಶುರು ಮಾಡಿ, ಗೋಲ್ಡನ್ ನಲ್ಲಿ ಮರ್ಜ್ ಮಾಡಿಬಿಡಿ. ವಧುವಿನ ಧಾರೆ ಸೀರೆಗೆ ಮ್ಯಾಚ್ ಆಗುವಂಥ ಐ ಶ್ಯಾಡೋವನ್ನೇ ಬಳಸಬೇಕು. ಕಾಜಲ್ ಪೆನ್ಸಿಲ್ ನಿಂದ ಕಂಗಳ ಒಳಭಾಗ, ಮೇಲ್ಭಾಗಕ್ಕೆ ಕಾಡಿಗೆ ತೀಡಿರಿ. ಇದಾದ ಮೇಲೆ ಐ ಲೈನರ್ ಎಳೆಯಿರಿ. ಮಸ್ಕರಾ ಹಚ್ಚುವಾಗ, 3 ಆ್ಯಂಗಲ್ ನಿಂದ ಅದನ್ನು ಬಳಸಬೇಕು ಎಂಬುದರತ್ತ ಗಮನ ಕೊಡಿ. ಇದಾದ ಮೇಲೆ, ಮೇಲುಕೆಳಗಿನ ರೆಪ್ಪೆ ಕೂಡಿದಾಗ, ಮಸ್ಕರಾ ಹರಡಿಕೊಳ್ಳಬಾರದು ಎಂಬುದರತ್ತ ಗಮನ ಕೊಡಿ.
ಇದಕ್ಕಾಗಿ ನೀವು ರೆಪ್ಪೆಗಳನ್ನು 3 ಭಾಗವಾಗಿಸಿ, 3 ದಿಕ್ಕುಗಳಲ್ಲೂ ಮಸ್ಕರಾ ಪೆನ್ಸಿಲ್ ನ್ನು ತಿರುಗಿಸುತ್ತಾ ಹಚ್ಚಬೇಕು ಎಂದು ನೆನಪಿಡಿ. ಎಲ್ಲಕ್ಕೂ ಮೊದಲು ಮೇಲ್ಭಾಗದ ರೆಪ್ಪೆ, ಕಂಗಳ ತುದಿಯವರೆಗೆ, ರೆಪ್ಪೆಗಳ ಮೇಲೆ ಪೆನ್ಸಿಲ್ ಇರಿಸಿ ಅದನ್ನು ಮೂಗಿನ ಕಡೆ ತಿರುಗಿಸುತ್ತಾ ಹಚ್ಚಬೇಕು. ಇದಾದ ನಂತರ ನಡುಭಾಗದ ರೆಪ್ಪೆ, ಮೇಲುಭಾಗಕ್ಕೆ ಪೆನ್ಸಿಲ್ ತಿರುಗಿಸುತ್ತಾ, ಉಳಿದ ಇತರ ಭಾಗಗಳಿಗೂ ಪೆನ್ಸಿಲ್ ನ್ನು ಹೊರಭಾಗದತ್ತ ತಿರುಗಿಸುತ್ತಾ ಮಸ್ಕರಾ ಹಚ್ಚಬೇಕು.
ತುಟಿಗಳ ಮೇಕಪ್
ತುಟಿಗಳ ಮೇಕಪ್ ಗಾಗಿ ಲಿಪ್ ಸ್ಟಿಕ್ ನ್ನು ಮೊದಲು ಕೆಳ ತುಟಿಗೆ ತೀಡಬೇಕು. ಇದು ಹೆಚ್ಚು ಹೊತ್ತು ಬಾಳಿಕೆ ಬರಬೇಕೆಂದರೆ, ಲಿಪ್ ಸ್ಟಿಕ್ ತೀಡಿದ ನಂತರ, ಅದರ ಮೇಲೆ ಪೌಡರ್ ಶೈನ್ ಹಚ್ಚಬೇಕು. ಲಿಪ್ ಸ್ಟಿಕ್ ತೀಡುವ ಮುನ್ನ, ತುಟಿಗಳ ಮೇಲೆ ಲಿಪ್ ಬಾಮ್ ಹಚ್ಚಬೇಕು. ಇದರಿಂದ ಲಿಪ್ ಸ್ಟಿಕ್ ನೀಟಾಗಿ ಹರಡುತ್ತದೆ. ಕೊನೆಯಲ್ಲಿ ವಧುವಿಗೆ ಒಂದು ಬ್ಯೂಟಿಫುಲ್ ಬಿಂದಿ ಇಡಲು ಮರೆಯದಿರಿ.
– ಸುಶ್ಮಾ ಭಟ್





