ಸುಂದರವಾಗಿ ಕಂಗೊಳಿಸಬೇಕೆಂಬ ಹಕ್ಕು ಹೆಣ್ಣಿಗಿರುವಂತೆಯೇ ಗಂಡಿಗೂ ಇರುತ್ತದೆ ಎಂಬುದನ್ನು ಅಲ್ಲಗಳೆಯಬಾರದು......!

`ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ!' ಎಂಬ ನಾಣ್ಣುಡಿ ಹೆಣ್ಣಿಗೆ ಸಿಂಗರಿಸಿಕೊಳ್ಳುವುದರಲ್ಲಿರುವ ಆಸಕ್ತಿಯನ್ನು ಅನಾದಿ ಕಾಲದಿಂದಲೂ ಎತ್ತಿಹಿಡಿದಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಂಡು ನಿಮ್ಮ ವ್ಯಕ್ತಿತ್ವ, ನಿಮ್ಮ ಹಿರಿಮೆ, ಆತ್ಮವಿಶ್ವಾಸಕ್ಕೆ ಕಲಶವಿಟ್ಟಂತೆ ಮಾಡಿಕೊಳ್ಳುವುದರಲ್ಲಿ ಯಾವ ಹಿಂಜರಿಕೆಯೂ ಬೇಡ. ಹೆಚ್ಚಿಗೇನೂ ಅಲ್ಲದಿದ್ದರೂ ಪಾರ್ಲರ್‌ ಗೆ ಹೋಗಿ ಐ ಬ್ರೋಸ್ ತಿದ್ದಿ ತೀಡಿಸಿ, ಹೇರ್‌ ಕಟ್‌ ಮಾಡಿಸಿ, ಹೇರ್‌ ಸ್ಟೈಲ್ ‌ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ಬೆಡಗು ಎಷ್ಟೋ ಹೆಚ್ಚುತ್ತದೆ. ಹೊರಗಿನ ಫಂಕ್ಷನ್ಸ್ ಗಾಗಿ ಗ್ರಾಂಡ್‌ ಸಿಂಗಾರದ ಬದಲು, ಡಾರ್ಕ್‌ ಕಲರ್‌ ಲಿಪ್‌ ಸ್ಟಿಕ್‌ ಹಾಗೂ ಕಾಡಿಗೆ ತೀಡಿಕೊಂಡು, ಕೂದಲನ್ನು ಹಾಗೇ ಓಪನ್‌ ಆಗಿ ಬಿಡಿ.

ಹೀಗೆ ಪಾರ್ಟಿಗೆ ಹೋದಾಗ, ನೀವು ಅಲ್ಲಿನ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಆಭರಣಗಳನ್ನು ಹೇರಿಕೊಂಡ ಹೆಂಗಸಿಗಿಂತ, ವೈಟ್‌ ಮೇಕಪ್‌ ನಿಂದ ಸಿಂಗಾರಗೊಂಡ ಹೆಣ್ಣು ಹೆಚ್ಚು ಬ್ಯೂಟಿ ಎನಿಸುತ್ತಾಳೆ.

ಸೌಂದರ್ಯದಿಂದ ಆತ್ಮವಿಶ್ವಾಸ

ಲೈಟ್‌ ಮೇಕಪ್‌ ಹಾಗೂ ತಿಂಗಳಿಗೊಮ್ಮೆ ಪಾರ್ಲರ್‌ ಗೆ ಹೋಗುವುದರಿಂದ, ಸಾಮಾನ್ಯವಾಗಿ ಕಂಡುಬರುವಂಥ ಹೆಣ್ಣು ಸಹ ಸೌಂದರ್ಯದಿಂದ ಕೂಡಿರುವಂತೆ ಕಂಗೊಳಿಸುತ್ತಾಳೆ, ಜೊತೆಗೆ ಆಕೆಯ ಆತ್ಮವಿಶ್ವಾಸ ಸಹಜವಾಗಿ ಹೆಚ್ಚುತ್ತದೆ. ನಿಮ್ಮ ದೇಹವನ್ನು ಸದಾ ಶುಭ್ರವಾಗಿ, ಆಕರ್ಷಣೆಯ ಕೇಂದ್ರಬಿಂದು ಆಗಿರಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಪಾರ್ಲರ್‌ ಗೆ ಹೋದರೆ ಮಾತ್ರ ಸೌಂದರ್ಯ ಅಂತೇನಲ್ಲ, ಮನೆಮದ್ದು ಬಳಸಿ ಸಹ ನಿಮ್ಮ ಸೌಂದರ್ಯದಲ್ಲಿ ಹೆಚ್ಚಿನ ಅಂದ ತರಬಹುದು.

ನಮ್ಮ ಅಡುಗೆಮನೆಯಲ್ಲಿನ ಅನೇಕ ಸಾಮಗ್ರಿ, ಸೌಂದರ್ಯ ಪ್ರಸಾಧನಗಳಿಗೆ ಬಲು ಪೂರಕ. ಅಂದ್ರೆ ಹಾಲು, ಮೊಸರು, ಅರಿಶಿನ, ಜೇನು, ಜಾಯಿಕಾಯಿ, ಕೇಸರಿ, ತುಳಸಿ, ಆಲೂ, ಟೊಮೇಟೊ, ಕೊಬ್ಬರಿ ಎಣ್ಣೆ ಇತ್ಯಾದಿ. ಕೆಲವು ಸಾಮಗ್ರಿ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಫೇಸ್‌ ಪ್ಯಾಕ್‌ಹಚ್ಚಿಕೊಳ್ಳಬಹುದು. ಇದರಿಂದ ಚರ್ಮದಲ್ಲಿ ತಾಜಾತನ, ಲಾವಣ್ಯ ಉಕ್ಕುತ್ತದೆ.

ಹೆಣ್ಣಿನ ಇಂಥ ಸೌಂದರ್ಯಪ್ರಿಯತೆ ಅವಳ ಸುಖೀ ದಾಂಪತ್ಯಕ್ಕೊಂದು ಕಾರಣ ಹೌದು. ಬೆಳಗ್ಗಿನಿಂದ ದುಡಿದು ದಣಿದು, ಸಂಜೆ ನಂತರ ಮನೆ ತಲುಪುವ ಪತಿ, ಪತ್ನಿಯ ಈ ಅಂದದ ಬೆಡಗು ಕಂಡು ತನ್ನೆಲ್ಲ ಕಷ್ಟ ಮರೆಯುತ್ತಾನೆ. ಸೊಂಟಕ್ಕೆ ಸಿಗಿಸಿದ ಸೆರಗು, ತಲೆಗೊಂದು ಸೆಖೆಗಂಟು, ಮಸಾಲೆ ತುಂಬಿಕೊಂಡ ನೈಟಿ, ಬೆವರಿನೊಂದಿಗೆ ಫೆನಾಯಿಲ್ ವಾಸನೆ ಬೀರುತ್ತಿದ್ದರೆ, ಅಂಥ ಪತ್ನಿಯನ್ನು ಕಂಡ ಯಾವ ಪತಿಯ ಮೂಡ್‌ ಸರಿಹೋಗಲು ಸಾಧ್ಯ?

ಈ ನೀಟ್‌ ನೆಸ್‌ ಕೆಲಸ ಕಷ್ಟದಾಯಕವೇನಲ್ಲ. 2 ನಿಮಿಷಗಳಲ್ಲಿ ಮುಖ ತೊಳೆದುಕೊಂಡು, ತಲೆ ಬಾಚಿ ನೇರ್ಪಡಿಸಿ, ಬಿಂದಿ ಇರಿಸಿಕೊಳ್ಳಿ. ಒಂದಿಷ್ಟು ಕಾಡಿಗೆ ತೀಡಿದರೂ ಆಯಿತು. ಇಷ್ಟು ಮಾಡಿದರೆ ಬೇಕಾದಷ್ಟಾಯಿತು. ಹೀಗೆ ಅಲಂಕರಿಸಿಕೊಂಡು, ಜೀವನವಿಡೀ ಪತಿಯ ಪ್ರೇಯಸಿಯಾಗಿ ಯಾಕಿರಬಾರದು? ಜೊತೆಗೆ, `ನೋಡು, ಈಕಿ ಎಷ್ಟು ಚೆಂದಾಗಿ ಅಲಂಕಾರದಲ್ಲಿ ಗಮನಹರಿಸುತ್ತಾಳೆ!' ಎಂದು ಇತರರು ಹೊಗಳಲು, ನಿಮ್ಮ ಪತಿಗೆ ಬಹಳ ಹೆಮ್ಮೆ ಎನಿಸುತ್ತದೆ. ಇಂಥ ಔಟ್‌ ಲುಕ್‌ ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಖಂಡಿತಾ ಜಾಗೃತಗೊಳಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ