– ರಾಘವೇಂದ್ರ ಅಡಿಗ ಎಚ್ಚೆನ್.
ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ’ಸನ್ ಉದಯ’ದಲ್ಲಿ ಹೊಸ ಧಾರವಾಹಿ *’ಮಹಾಲಕ್ಷ್ಮೀ ಮದುವೆ’* ಜೂನ್ 1ರಿಂದ ಸೋಮವಾರದಿಂದ ಶನಿವಾರದ ವರೆಗೆ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ವಿನೂತನ ಪ್ರಯತ್ನ ಎನ್ನುವಂತೆ ಪ್ರಸಾರದ ಮುನ್ನದಿನ ಭಾನುವಾರದಂದು ಡಾ.ರಾಜ್‌ಕುಮಾರ್ ಒಳಾಂಗಣ ಸ್ಟೇಡಿಯಂದಲ್ಲಿ ಎರಡು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು. ತುಂಬಿದ ಸಭಾಂಗಣದಲ್ಲಿ ಸೀರಿಯಲ್ ವೀಕ್ಷಿಸಿದ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು.
ನಾಯಕಿ ಅಮೂಲ್ಯಗೌಡ ಮಾತನಾಡಿ, ಧಾರವಾಹಿ ದೃಶ್ಯಗಳನ್ನು ನೋಡುವಾಗ ಪ್ರತಿಯೊಬ್ಬರ ಮನೆಯಲ್ಲಿ ನಡೆದಂತೆ ಭಾಸವಾಗುತ್ತದೆ. ಪ್ರತಿಯೊಂದು ಸನ್ನಿವೇಶಗಳು ಕುತೂಹಲ ಮೂಡಿಸುತ್ತದೆ. ನಿರ್ದೇಶಕರು ಎಲ್ಲರಿಂದಲೂ ಚೆನ್ನಾಗಿ ಕೆಲಸ ತೆಗೆದುಕೊಂಡಿದ್ದಾರೆ ಎಂದರು.

ಕಿರುಚಿತ್ರಗಳಲ್ಲಿ ನಟಿಸಿರುವ ನನಗೆ ಮೊದಲ ಬಾರಿ ಸನ್ ಉದಯದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಈ ಪಾತ್ರವು ನನಗೆ ಛಾಲೆಂಜಿಂಗ್ ಆಗಿದ್ದು, ಪಾತ್ರಕ್ಕೆ ತಕ್ಕಂತೆ ನಟಿಸುವ ಪ್ರಯತ್ನ ಮಾಡಿದ್ದೇನೆ ಎಂದು ನಾಯಕ ಭರತ್ ಶಿವಣ್ಣ ಹೇಳಿಕೊಂಡರು.
ಅಮೃತರಾಮಮೂರ್ತಿ ಮತ್ತು ಸೀತಾಕೋಟೆ ತಮ್ಮ ಪಾತ್ರಗಳ ಅಭಿಪ್ರಾಯವನ್ನು ವ್ಯಕ್ತಪಡಿಸಿಕೊಂಡರು. ತಾರಾಗಣದಲ್ಲಿ ಶಿವಾಜಿರಾವ್ ಜಾಧವ್, ಮೂಗು ಸುರೇಶ್, ಪದ್ಮಿನಿ, ಮಂಜುಪಾವಗಡ, ಮಾನಸ, ಮೇಘಶ್ರೀ, ಸ್ನೇಹಾಭಟ್, ಪ್ರತೀಕ್ಷಾ, ಧನುಷ್‌ಗೌಡ, ಹರಿಪ್ರಿಯಾ ಮುಂತಾದವರು ನಟಿಸಿದ್ದಾರೆ.

ಲೈಮ್‌ಲೈಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶಿವಧ್ವಜ್ ಶೆಟ್ಟಿ ಹಾಗೂ ಪ್ರಶಾಂತ್ ರೈ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಶಿವ ಪೂಜೇನ ಅಗ್ರಹಾರ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

ಮದುವೆ ಆದ್ಮೇಲೂ ತವರಿಗೆ ಹೆಗಲಾಗ್ತೀನಿ ಅನ್ನೋ ಧೋರಣೆವುಳ್ಳವಳು. ಮಧ್ಯಮ ವರ್ಗದ ಹುಡುಗ, ಹುಡುಗಿ ಮದುವೆ ಯಾವ ರೀತಿ ನಡೆಯುತ್ತದೆ. ಆಕೆ ಗಟ್ಟಿಗಿತ್ತಿ. ಆತ ಮೃದು ಸ್ವಭಾವದವನು. ಸಾವಿರ ಸುಳ್ಳು ಇಲ್ಲ. ಒಂದೇ ಒಂದು ಸುಳ್ಳಿನ ಮೂಲಕ ನಡೆಯೋ ಶ್ರೀಹರಿ ಮತ್ತು ಮಹಾಲಕ್ಷೀ ಮದುವೆ ಮುಂದೆನಾಗುತ್ತದೆ? ಎಲ್ಲವನ್ನು ಅವಳು ಹೇಗೆ ಎದುರಿಸುತ್ತಾಳೆ ಅನ್ನೋದೇ ಧಾರವಾಹಿಯ ಒನ್ ಲೈನ್ ಕಥೆಯಾಗಿದೆ.
ಇಂದಿನಿಂದ ಅಂದರೆ *ಜೂನ್ 1, ಸೋಮವಾರದಿಂದ ಶನಿವಾರದ ವರೆಗೆ ಸಂಜೆ 6.30ಕ್ಕೆ ’ಸನ್ ಉದಯ’ ವಾಹಿನಿಯಲ್ಲಿ ’ಮಹಾಲಕ್ಷ್ಮೀ ಮದುವೆ’* ಧಾರವಾಹಿ ಪ್ರಸಾರವಾಗಲಿದೆ.





