ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಜೂನ್‌ 4ರಿಂದ 30ರವರೆಗೆ ಮಾವು ಹಾಗೂ ಹಲಸಿನ ಮೇಳ ನಡೆಯಲಿದೆ. ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಮೇಳ ಆಯೋಜಿಸಿದೆ.

ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಕೊಪ್ಪಳ, ರಾಮನಗರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾವು ಬೆಳಗಾರ ರೈತರು ಈ ಮೇಳದಲ್ಲಿ ಭಾಗಿಯಾಗಲಿದ್ದಾರೆ.

ಲಾಲ್‌ಬಾಗ್‌ನಲ್ಲಿ 200 ಮಳಿಗೆಗಳ ವ್ಯವಸ್ಥೆ ಮಾಡಿದ್ದು, ರೈತರಿಗೆ ಉಚಿತವಾಗಿ ನೀಡಲಿದೆ. 185 ಮಳಿಗೆ ಮಾವು ಮತ್ತು 15 ಹಲಸಿನ ಹಣ್ಣು ಮಾರಾಟಕ್ಕೆ ನಿಗದಿಪಡಿಸಲಾಗಿದೆ.

ಈ ಮೇಳದಲ್ಲಿ ಮಲ್ಲಿಕಾ ತಳಿಯ ಮಾವು ಪ್ರಮುಖ ಆಕರ್ಷಣೆಯಾಗಿದ್ದು, ಆಲ್ಫಾನ್ಸ್‌, ಇಮಾಮ್‌ ಪಸಂದ್, ಮಲಗೋವಾ, ತೋತಾಪುರಿ, ರಸಪುರಿ, ರೆಡ್‌ಐವರಿ, ಮಿಯಾಜಾಕಿ, ಕೊಪ್ಪಳ ಕೇಸರ್‌ ಸೇರಿದಂತೆ ವಿವಿಧ ತಳಿಯ ಮಾವಿನ ಮಾರಾಟ ಇರಲಿದೆ. ಮಾವು ನಿಗಮ ಅಥವಾ ತೋಟಗಾರಿಕೆ ಇಲಾಖೆ ಯಾವುದೆ ಮಾವಿಗೆ ಬೆಲೆ ನಿಗದಿಪಡಿಸಿಲ್ಲ. ಆದರೆ, ರೈತರು ರಿಯಾಯಿತಿ ನೀಡಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.

2.60 ಟನ್‌ ಮಾರಾಟದ ಗುರಿ: ದಿನಕ್ಕೆ 10 ಟನ್‌ ಮಾವು ಮಾರಾಟವಾಗುವ ನಿರೀಕ್ಷೆ ಇದೆ. ಮೇಳ ಮುಕ್ತಾಯದ ಅವಧಿಯೊಳಗೆ 2.60 ಲಕ್ಷ ಮೆಟ್ರಿಕ್‌ ಟನ್‌ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ 20 ಕೋಟಿ ರು.ಗಳಿಗೂ ಅಧಿಕ ವಹಿವಾಟು ಆಗಲಿದೆ ಎಂದಿದ್ದಾರೆ.

ಟಿಕೆಟ್‌ ದರ:  ಮಾವು- ಹಲಸು ಮೇಳಕ್ಕೆ ಆಗಮಿಸುವ ಗ್ರಾಹಕರು ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಲಾಲ್‌ಬಾಗ್‌ ಪ್ರವೇಶಕ್ಕೆ ವಯಸ್ಕರಿಗೆ 50 ರು.ಮಕ್ಕಳಿಗೆ 30 ರು. ಶುಲ್ಕ ಇರಲಿದೆ. ಗ್ರಾಹಕರು ಪ್ಲಾಸ್ಟಿಕ್‌ ಕವರ್‌ಗಳನ್ನು ತರದೇ ಬಟ್ಟೆ ಬ್ಯಾಗ್‌ಗಳನ್ನೇ ಮಾವು ಖರೀದಿಗೆ ತರುವಂತೆ ಲಾಲ್‌ಬಾಗ್‌ ಉದ್ಯಾನದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ