ನಾನಿಂದು ದೇಶದ ಕಾಫೀ ಕಣಜ ಕೊಡಗಿಗೆ ಕಛೇರಿಯಿಂದ ವಿಹಾರ್ಥವಾಗಿ ಬಂದಿದ್ದೆ. ಎಲ್ಲರಂತೆ ಸುಮ್ಮನೇ ಜಾಗಗಳನ್ನು ನೋಡುತ್ತ ಹೋಗದೇ, ಅಲ್ಲಿಯ ಸಂಸ್ಕೃತಿ, ಇತಿಹಾಸ, ಭಾಷೆ ಜನರ ಬಗ್ಗೆ ತಿಳಿಯುವುದು ನನ್ನ ವಾಡಿಕೆ. ಒಂದು ಪಕ್ಷ ಅದು ಕುತೂಹಲವಾಗಿದ್ದಲ್ಲಿ ಅದನ್ನು ಎಲ್ಲರೊಡನೆ ಹಂಚಿಕೊಳ್ಳುವ ಸ್ವಭಾವ ನನ್ನದು ಇಂದು ಕೊಡಗಿನ ಕುರಿತು ವಿಚಾರಿಸುತ್ತಿದ್ದಾಗ, ಸ್ವಾತಂತ್ರ್ಯಪೂರ್ವ ಕೊಡಗೇ ಒಂದು ಸಣ್ಣ ರಾಜ್ಯವಾಗಿದ್ದು ಕೊಡಗನ್ನು ಆಳುತ್ತಿದ್ದ ಚಿಕವೀರ ರಾಜೇಂದ್ರನನ್ನು ಟಿಪ್ಪು ಸುಲ್ತಾನ್ ಮೋಸದಿಂದ ಸೋಲಿಸಿ ಸಾವಿರಾರು ಕೊಡವರನ್ನು ಹತ್ಯೆಗೈದು ಕೊಡಗನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡು ಕೊಡಗಿನ ರಾಜಧಾನಿಯನ್ನು ಝಫರಾಬಾದ್ ಎಂದು ನಾಮಕರಣ ಮಾಡಿದ್ದ ಎಂದು ಕೇಳುತ್ತಿದ್ದಹಾಗೆಯೇ, ಕೊಡಗಿನ ಕೊನೆಯ ರಾಜ ಚಿಕವೀರ ರಾಜೇಂದ್ರ ಕಾದಂಬರಿಯನ್ನು ಬರೆದ ಮಾಸ್ತಿಯವರ ನೆನಪಾಯಿತು. ಮಾಸ್ತಿ , ಕನ್ನಡಿಗರ ಆಸ್ತಿ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ನೂರಾರು ಕಥೆ, ಕವನಗಳನ್ನು ಬರೆದು ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರಾಗಿದ್ದ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ಕುರಿತು ತಿಳಿಯೋಣ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಬಲು ಸಂಪ್ರದಾಯಸ್ಥರಾದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ತಿರುಮಲ್ಲಮ್ಮ ದಂಪತಿಗಳಿಗೆ ಜೂನ್ 6, 1891 ಜನಿಸಿದರು. ಮಾಸ್ತಿಯವರ ಮನೆಯ ಆಡು ಭಾಷೆ ತಮಿಳಾದರೂ ಮಾಸ್ತಿಯವರು ಮಾತ್ರ ಪರಿಶುದ್ಧ ಕನ್ನಡಿಗರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುಟುಂಬವನ್ನು ಪೆರಿಯಾತ್ ಮನೆ

ಮಾಸ್ತಿಯವರು ಡಿಸಿಯಾಗಿ ಮಾಡಿದ್ದ ಜನಪರ ಕೆಲಸಕ್ಕೆ ಕುರಿತಾದ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು.
ಅದೊಮ್ಮೆ, ಧರ್ಮಸ್ಥಳದ ಲಕ್ಷ ದೀಪೋತ್ಸವದ ಸಮಯದಲ್ಲಿ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲು ಮಾಸ್ತಿಯವರನ್ನು ಕೇಳಿಕೊಳ್ಳಲಾಗಿತ್ತು. ಅವರ ಆಹ್ವಾನವನ್ನು ಮನ್ನಿಸಿ ಮತ್ತೊಬ್ಬ ದಿಗ್ಗಜ ಶ್ರೀಯುತ ಜಿ. ಪಿ. ರಾಜರತ್ನಂ ಅವರೊಂದಿಗೆ ಒಂದು ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಹಾಗೆ ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರಿಗೂ ಬಾಯಾರಿಕೆಯಾಗಿ ಹಾಂದಿ ಎನ್ನುವ ಊರಿನ ಬಳಿ ಬಾವಿಯಲ್ಲಿ ನೀರನ್ನು ಸೇದುತ್ತಿದ್ದವರೊಬ್ಬರನ್ನು ನೋಡಿ, ಚಾಲಕನಿಗೆ ಗಾಡಿ ನಿಲ್ಲಿಸಲು ತಿಳಿಸಿ ನೀರು ಕುಡಿಯಲು ಬಾವಿಯ ಬಳಿ ಮಾಸ್ತಿಯವರು ಹೋದರು. ಅಲ್ಲಿ ಒಂದು ಹರಿದಿರುವ ಪಂಚೆ, ಒಂದು ಹೊಲೆಸಿರುವ ಬನಿಯನ್ ದರಿಸಿಕೊಂಡು ಒಬ್ಬ ವಯಸ್ಸಾದವರು ನೀರು ಸೇದುತ್ತಿದ್ದರು, ಮಾಸ್ತಿಯವರು ಆವರ ಬಳಿ ಹೋಗಿ, ಅಯ್ಯಾ ಕುಡಿಯಲು ಸ್ವಲ್ಪ ನೀರು ಸಿಗಬಹುದೇ ಎಂದು ದೈನ್ಯದಿಂದ ಕೇಳಿದರು. ಮಾಸ್ತಿಯವರತ್ತ ನೋಡಿದ ಆ ಮನುಷ್ಯ, ಬಾವಿಯಿಂದ ಒಂದು ಕೊಡ ನೀರು ಸೇದಿ, ಅದನ್ನು ಮಾಸ್ತಿಯವರಿಗೆ ನೀಡದೆ, ಆ ನೀರನ್ನು ಅಲ್ಲಿಯೇ ಪಕ್ಕದಲ್ಲಿಟ್ಟಿದ ನೀರಿನ ತೊಟ್ಟಿ ಸುರಿದ, ಅದನ್ನು ಕಂಡ ಮಾಸ್ತಿಯವರು ಒಂದು ಕ್ಷಣ ವಿಚಲಿತರಾದರೂ ಅದನ್ನು ತೋರಿಸಿ ಕೊಳ್ಳದೇ ಮತ್ತೊಮ್ಮೆ ನೀರನ್ನು ಕೇಳಿದರು. ಆಷ್ಟರಲ್ಲಾಗಲೇ ಮತ್ತೊಂದು ಕೊಡ ನೀರನ್ನು ಸೇದಿದ ಆ ಮನುಷ್ಯ, ಸಾಮಿ ಬನ್ರೀ, ನೀರು ನೀರು ಅಂದ್ರಲ್ಲ, ಬನ್ನಿ ಎಷ್ಟು ಬೇಕೋ ಅಷ್ಟು ಕುಡ್ಕಳಿ ಎಂದ.
ನೀರಡಿಕೆಯಲ್ಲಿದ್ದ ಮಾಸ್ತಿಯವರು ಕೂಡಲೇ ಬೊಗಸೆ ಒಡ್ಡಿ ಗಟ ಗಟನೆ ನೀರು ಕುಡಿದರು. ನೀರು ಕುಡಿದ ಮೇಲೆ ಉಳಿದ ನೀರನ್ನು ಆ ಮನುಷ್ಯ ಮತ್ತೆ ಪಕ್ಕದ ನೀರಿನ ತೊಟ್ಟಿಗೆ ಹಾಕಿದ್ದನ್ನು ಗಮನಿಸಿದ ಮಾಸ್ತಿಯವರು ತಮ್ಮ ಬಾಯಾರಿಕೆಯನ್ನು ನಿವಾರಿಸಿದವರಿಗೆ ಹಣ ಕೊಡಲು ಹೋದಾಗ, ಆ ಮನುಷ್ಯ ಹಣ ಪಡೆಯಲು ನಿರಾಕರಿಸಿ, ಅಲ್ಲ ಸಾಮಿ ನಾವು ಕುಡಿಯೋ ನೀರ್ಗೆ ದುಡ್ಡಿಸ್ಕಂಡ್ರೆ ಆ ದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡ್ದಂಗೆ, ಶಿವ ಮೆಚ್ಚತಾನ ಬುದ್ದಿ ಎಂದ.
ಅದಕ್ಕೆ ಮಾಸ್ತಿ ಅವರು ಯಾರಪ್ಪ ಆ ಪುಣ್ಯಾತ್ಮ ಎಂದು ಕೇಳಿದರು, ಅದಕ್ಕೆ ಆ ರೈತ,
ನೋಡಿ ಸಾಮಿ, ನಮ್ಮೂರ್ನಾಗೆ ಹಿಂದೆ ಬರ್ಗಾಲ ಬಂದಿತ್ತು, ಆಗ ಕುಡಿಯಾಕೆ ನೀರಿರಲಿಲ್ಲ, ಆಗ ನಮ್ಮ ಚಿಕ್ಕ್ಮಗಳೂರ್ನಾಗೆ ಒಬ್ರು ಡಿಸಿ ಇದ್ದರು ಸಾಮಿ, 3 ನಾಮ ಹಾಕ್ಕಳರು, ವಯ್ಯಸ್ಸೂ ಆಗಿತ್ತು ಸಾಮಿ, ಆ ಪುಣ್ಯಾತ್ಮಂತಕೆ ಹೋಗಿ, ಹಿಂಗಿಂಗೆ, ಊರ್ಗೆ ಬರ್ಗಾಲ ಬಂದೈತೆ, ಒಂದು ಬಾವಿ ತೋಡ್ಸಿ ಕೊಡಿ ಸಾಮಿ ಅಂತ ಕೇಳ್ದ್ವು, ಅದಕ್ಕೆ ನೋಡ್ರೀ ನೀವು ಮನುಷ್ಯರು, ಬಾಯೈತೆ, ನೀವು ಮಾತಾಡ್ತೀರ, ಈಗ ಬಾವಿ ಬೇಕಂತ ಕೇಳ್ತೀರಾ, ಬಾವಿ ತಗೆಸಿ ಕೊಡ್ತೇನೆ, ಆದ್ರೆ ಪಕ್ಕದಲ್ಲಿ ತೊಟ್ಟಿಯೊಂದನ್ನು ನಿರ್ಮಿಸಿ, ನೀವು ಒಂದು ಬಿಂದಿಗೆ ನೀರು ಸೇದಿಕೊಂಡರೆ, ಖಡ್ಡಾಯವಾಗಿ ಮತ್ತೊಂದು ಕೊಡ ನೀರನ್ನು ಆ ತೊಟ್ಟಿಗೆ ನೀರನ್ನು ಸೇದಿ ಹಾಕಬೇಕು. ಯಾಕೆಂದ್ರೆ,ಮೂಕ ಪ್ರಾಣಿಗಳಾದ ದನ ಕರು, ಪ್ರಾಣಿ ಪಕ್ಷಿಗಳಿಗೂ ಬರ್ಗಾಲವೇ ಅಲ್ವಾ ? ಅವಕ್ಕೂ ನೀರು ಬೇಕಲ್ವಾ ? ಹಂಗಾಗಿ ನೀವು ಒಂದು ಕೊಡ ನೀರು ಸೇದಾಕ್ತೀವಿ ಅಂತಾ ಭಾಷೆ ಕೊಟ್ಟಾದ್ಮೇಲೇನೇ ಈ ಬಾವಿ ತಗೆಸಿ ಕೊಟ್ಟವ್ರೇ ಬುದ್ದಿ ಎಂದು ಹೇಳುತ್ತಲೇ ಹೋದ, ಮಾಸ್ತಿಯವರಿಗೆ ಹೃದಯ ತುಂಬಿ ಬಂದು ಬಾಯಿಯಿಂದ ಮಾತೇ ಹೊರಡಾದಾಗಿತ್ತು
ಏಕೆಂದರೆ ಅದೆಂದೋ ಚಿಕ್ಕಮಗಳೂರಿನ ಡಿಸಿ ಆಗಿದ್ದ ಸಮಯದಲ್ಲಿ ಸರ್ಕಾರದ ಖರ್ಚಿನಲ್ಲಿ ಜನರಿಂದ ಭಾಷೆ ತೆಗೆದುಕೊಂಡು ತೋಡಿಸಿದ್ದ ಭಾವಿ ಅದಾಗಿತ್ತು. ಎಷ್ಟೋ ವರ್ಷಗಳು ಕಳೆದರೂ ಅಲ್ಲಿಯ ಜನ ಅವರು ಕೊಟ್ಟಿದ ಭಾಷೆಯನ್ನು ಮರೆಯದೆ ಅದನ್ನು ಪಾಲಿಸುತ್ತಿದ್ದ ಆ ಜನರ ಪ್ರಾಮಾಣಿಕತೆ ಮತ್ತು ಮುಗ್ದತೆ ಅವರನ್ನು ಮೂಕವಿಸ್ಮಿತರಾಗಿಸಿತ್ತು. ಅಲ್ಲಿಂದ ಸುಮ್ಮನೇ ಬಂದು ಕಾರಿನಲ್ಲಿ ಕುಳಿತು ನಡೆದದ್ದೆಲ್ಲವನ್ನೂ ಜಿಪಿ ರಾಜರತ್ನಂ ಅವರಲ್ಲಿ ಹೇಳಿದರು, ಅದಕ್ಕೆ ರಾಜರತ್ನಂ ಅವರು ನೀವೇ ಆ ಡಿಸಿ ಎಂದು ಆ ವ್ಯಕ್ತಿಗೆ ಹೇಳಬೇಕಿತ್ತು, ಆತ ಬಹಳವಾಗಿ ಖುಷಿ ಪಡುತ್ತಿದ್ದ ಎಂದಾಗ, ನಾನೇನು ಧರ್ಮಾರ್ಥ ಮಾಡಲಿಲ್ಲ, ಸರ್ಕಾರದ ಹಣದಿಂದ ಮಾಡಿಸಿದೆ ಹೊರತು ನನ್ನ ಕಿಸೆಯ ಹಣದಿಂದಲ್ಲ, ನನ್ನ ಕೆಲಸಕ್ಕೆ ನಾನು ತಕ್ಕ ಸಂಬಳ ಪಡೆದಿದ್ದೇನೆ, ಆ ರೈತನ ಮುಗ್ದತೆ, ಪ್ರಾಮಾಣಿಕತೆಯ ಮುಂದೆ ನನ್ನ ಕೆಲಸ ಏನೇನೂ ಅಲ್ಲ, ಜೊತೆಗೆ ನಾನೇ ಆ ಡಿಸಿ ಎಂದು ಹೇಳಿದರೆ ಆ ರೈತನಿಗೆ ತಳಮಳವೂ ಶುರುವಾಗುವುದು ಎಂದು ಮಾಸ್ತಿಯವರು ಹೇಳಿದರು.
ಮಾಸ್ತಿಯವರು ಯಾವುದೇ ಊರಿನಲ್ಲಿ ಕೆಲಸ ಮಾಡಿದರೂ ಅಲ್ಲೊಂದು ತಮ್ಮ ಛಾಪನ್ನು ಮೂಡಿಸಿಯೇ ಬರುತ್ತಿದ್ದರು. 1926ರ ಆಸುಪಾಸಿನಲ್ಲಿ
ಮುದ್ದಗಿರಿಯಲ್ಲಿ (ಈಗಿನ ಮಧುಗಿರಿ) ಉಪ ವಿಭಾಗಾಧಿಕಾರಿಗಳಾಗಿದ್ದ ಮಾಸ್ತಿಯವರು ಜೇನುಗೂಡುಗಳಿಂದ ತುಂಬಿದ್ದ ಈ ಮದ್ದಗಿರಿಯ ಜೇನುಗೂಡಿಗೆ ಅನ್ವರ್ಥವಾಗುವಂತೆ ಮಧುಗಿರಿ ಆಗಬೇಕೆಂಬ ಅಭಿಲಾಷೆ ಹೊತ್ತು, ಸ್ಥಳೀಯರನ್ನು ಮಾತನಾಡಿಸಿ ಅವರ ಮನವೊಲಿಸಿ, ಊರಿನಲ್ಲಿದ್ದ ಗಿರಿಯ ನೆನಪೂ ಉಳಿಯಬೇಕು, ಹೆಸರು ಚೆನ್ನಾಗಿರಬೇಕು ಮತ್ತು ಬೆಟ್ಟದಲ್ಲಿ ದೊರೆಯುತ್ತಿದ್ದ ಜೇನಿನ ನೆನಪು ಸಾರ್ಥಕವಾಗುವಂತೆ (ಮಧು-ಜೇನು, ಗಿರಿ-ಬೆಟ್ಟ) ಎಂದು 1926ರಲ್ಲಿ ಮುದ್ದಗಿರಿಗೆ ಮಧುಗಿರಿ ಎಂದು ಮರುನಾಮಕರಣ ಮಾಡಿದರು. ಆದೇ ರೀತಿ ಈ ಪ್ರದೇಶವು ರುಚಿಯಾದ ಸೀತಾಫಲ ಮತ್ತು ದಾಳಿಂಬೆ ಬೆಳೆಗೂ ಖ್ಯಾತವಾಗಿದ್ದು ಅಲ್ಲಿನ ದಾಳಿಂಬೆಗಳು ಮಧುಗಿರಿಯ ಮಧು ಎಂದೇ ಪ್ರಖ್ಯಾತವಾಗಿರುವುದು ಗಮನಾರ್ಹವಾಗಿದೆ. ಮಧುಗಿರಿ ಏಕಶಿಲಾ ಬೆಟ್ಟದ ಸಂಪೂರ್ಣ ಮಾಹಿತಿಯನ್ನು ಈ ಲಿಂಕ್ ಮೂಲಕ ತಿಳಿಯಬಹುದಾಗಿದೆ

ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀತಮ್ಮ ಕೆಲಸಗಳ ಮಧ್ಯೆಯೇ ಮಾಸ್ತಿಯವರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದರು. ಎಂಥ ಕಷ್ಟ ಕಾಲದಲ್ಲೂ ಎದೆಗುಂದದೇ, ಜೀವನವನ್ನು ಎದುರಿಸಿದರು ಕೇವಲ ಸಾಹಿತ್ಯ ರಚನಕಾರರಲ್ಲದೇ, ಸಾಹಿತ್ಯ ಪೋಷಕರಕರೂ ಆಗಿದ್ದರು. ಜಿ ಪಿ ರಾಜರತ್ನಂ ಮತ್ತು ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ಬಹುತೇಕ ಸಾಹಿತಿಗಳಿಗೆ ಮಾಸ್ತಿಯವರು ಅಣ್ಣ ಮಾಸ್ತಿಯಾಗಿದ್ದರೆ, ವರಕವಿ ದ ರಾ ಬೇಂದ್ರೆಯವರು ಮಾಸ್ತಿಯವರನ್ನು ಹಿರಿಯಣ್ಣನೆಂದೇ ಸಂಬೋಧಿಸುತ್ತಿದ್
ಮಾಸ್ತಿಯವರಿಗೆ ಹಲವು ಬಗೆಯ ಪ್ರಶಸ್ತಿಗಳು ಹುಡುಕಿ ಕೊಂಡು ಬಂದಿದ್ದವು.
- ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್
- ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್
- 1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು.
- 1946ರಲ್ಲಿ ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ
- 1953ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
- 1968ರಲ್ಲಿ ಅವರ ಕಥೆಗಳ ಸಂಕಲನಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1983ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಕನ್ನಡಕ್ಕೆ ನಾಲ್ಕನೇಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಕೆಲಸ ಕಾರ್ಯಗಳಲ್ಲಿ ಹೇಗೆ ಶಿಸ್ತುಬದ್ಧರಾಗಿದ್ದರೋ ಅದೇ ರೀತಿಯಲ್ಲಿ ತಮ್ಮ ಊಟ ತಿಂಡಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲೂ ಅಷ್ಟೇ ಅಚ್ಚುಕಟ್ಟಾಗಿದ್ದರು ಮಾಸ್ತಿಯವರು. ಎಷ್ಟೇ ಸುಃಖ ಸಂಪತ್ತಿದ್ದರೂ ತಮ್ಮ ಜೀವಮಾನವಿಡೀ ಬೆಳಿಗ್ಗೆ 10 ಘಂಟೆಗೆ ಊಟಮಾಡಿದರೆ, ಇನ್ನು ಸಂಜೆ 7 ಕ್ಕೆ ಹದವಾದ ತೆಳುವಾದ ಉಪ್ಪಿಟ್ಟನ್ನು ಮಾತ್ರವೇ ಸೇವಿಸುತ್ತಿದ್ದದ್ದು ಅವರ ಆರೋಗ್ಯದ ಗುಟ್ಟಾಗಿತ್ತು.

ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಮಾಸ್ತಿ ಎಂದರೆ ಕನ್ನಡದ ಆಸ್ತಿ ಎಂಬ ಬಿರುದಾವಳಿಯೂ ಇತ್ತು, ಅಂತಹ ಮೇರು ಉತ್ತುಂಗದ ಲಯದಲ್ಲಿದ್ದ ಜೂನ್ 6-1983 ರಂದು ನಿಧನ ಹೊಂದಿದರು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ. ಅವರು ಹುಟ್ಟಿದ್ದು ಮತ್ತು ನಿಧನರಾದದ್ದು ಜೂನ್ 6ರಂದೇ. ಹೀಗೆ ಹುಟ್ಟು-ಸಾವಿನಲ್ಲೂ ಒಂದು ರೀತಿಯ ದಾಖಲೆಯನ್ನೇ ಸೃಷ್ಟಿಸಿ ಹೋದಂತಹವರು ನಮ್ಮ ಮಾಸ್ತಿ. ಎಷ್ಟೇ ಅಧಿಕಾರವಿದ್ದರೂ ತಮ್ಮ ಬಾಲ್ಯದ ಬಡತನವನ್ನು ಮರೆಯದೆ ಅಧಿಕಾರದ ಮದವನ್ನು ತಲೆಗೆ ಏರಿಸಿಕೊಳ್ಳದೆ, ಜನರಿಗಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟ ಧೀಮಂತ ವ್ಯಕ್ತಿ ನಮ್ಮ ಮಾಸ್ತಿ. ಹಾಗಾಗಿಯೇ ಅವರು ನಮ್ಮ ಕನ್ನಡದ ಆಸ್ತಿ. ಅದಕ್ಕಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳು.
ಏನಂತೀರೀ?
ಸೃಷ್ಟಿಕರ್ತ,
ಉಮಾಸುತ





