ಮನರಂಜನೆಯ `ಫುಲ್ ಮೀಲ್ಸ್'ನಲ್ಲಿ ದಿಯಾ ಖ್ಯಾತಿಯ ಖುಷಿ ರವಿ, ತಮ್ಮ ಕುರಿತು ಏನೆಂದು ಹೇಳುತ್ತಾರೆ ಕೇಳೋಣವೇ....?

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ರವಿ. ಇವರನ್ನು 2020ರಲ್ಲಿ ತೆರೆಕಂಡ `ದಿಯಾ' ಸಿನಿಮಾ ಮೂಲಕ ಹೆಚ್ಚಾಗಿ ಗುರುತಿಸುತ್ತಾರೆ. ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಅಂತರ್ಮುಖಿ (ಇಂಟ್ರೋವರ್ಟ್‌) ಪಾತ್ರದಲ್ಲಿ ದಿಯಾ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ತಲುಪಿದರೆಂದರೆ, ಸಿನಿಪ್ರಿಯರು ಈಗಲೂ ಅವರನ್ನು ದಿಯಾ ಎಂದೇ ಗುರುತಿಸುತ್ತಾರೆ. ಇಲ್ಲಿಂದ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಇತ್ತೀಚೆಗೆ ಜೀ 5ನ ಮೊದಲ ಕನ್ನಡ ವೆಬ್‌ ಸೀರೀಸ್‌ `ಅಯ್ಯನ ಮನೆ'ಯಲ್ಲಿ ನಟಿಸಿದ್ದಾರೆ. ಅಲ್ಲದೆ ಲಿಖಿತ್‌ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ `ಫುಲ್ ಮೀಲ್ಸ್' ಚಿತ್ರದ ನಾಯಕಿಯಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

`ದಿ ಗ್ರೇಟ್‌ ಸ್ಟೋರಿ ಆಫ್‌ ಸೋಡಾಬುಡ್ಡಿ' (2016) ಸಿನಿಮಾದಲ್ಲಿಯೂ ಸಹ ಈ ನಟಿ ಅಭಿನಯಿಸಿದ್ದರು. ಅದಾದ ಬಳಿಕ ನಟಿಸಿದ `ದಿಯಾ' ಖುಷಿ ರವಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತು. `ಸ್ಪೂಕಿ ಕಾಲೇಜ್‌' ಸಿನಿಮಾದಲ್ಲಿ ನಟನೆಯಿಂದ ಗಮನ ಸೆಳೆದಿದ್ದ ಖುಷಿ ಬಳಿಕ ನಟಿಸಿದ `ಕೇಸ್‌ ಆಫ್‌ ಕೊಂಡಾಣ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ದೇವಿ ಪ್ರಸಾದ್‌ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ರಾಘವೇಂದ್ರರಿಗೆ ಖುಷಿ ಜೋಡಿಯಾದರು. ಇದರಲ್ಲಿ ಅವರದ್ದು ಡಾಕ್ಟರ್‌ ಪಾತ್ರ. ತೆಲುಗು ಸಿನಿಮಾ `ಪಿಂಡಂ, ನೀತಿ,' ಡೈನಾಮಿಕ್‌ ಸ್ಟಾರ್‌ ದೇವರಾಜ್‌ ರ ದ್ವಿತೀಯ ಪುತ್ರ ಪ್ರಣವ್‌ ದೇವರಾಜ್ ನಟಿಸಿರುವ `ಸನ್‌ ಆಫ್‌ ಮುತ್ತಣ್ಣ' ಅಂತಹ ಸಿನಿಮಾಗಳಿಂದ ಮೆಚ್ಚುಗೆ ಗಳಿಸಿದ್ದರು. ಖುಷಿ ರವಿ ಪಾತ್ರವನ್ನು ಸಿನಿಮಾ ಮಂದಿ ಹೊಗಳಿ ಕೊಂಡಾಡಿದ್ದರು.

kr5

ಇಂತಹ ಕನ್ನಡ ಪ್ರತಿಭೆ, ಖುಷಿ ರವಿ ಜೊತೆಗೊಂದು ಖುಷಿಯ ಮಾತುಕಥೆಯನ್ನು `ಗೃಹಶೋಭಾ' ಇಲ್ಲಿ ಹಂಚಿಕೊಂಡಿದ್ದಾಳೆ.

ಖುಷಿ ರವಿಯರ ಮೂಲ ಹೆಸರು ಸುಶ್ಮಿತಾ ರವಿ. ಸಿನಿಮಾಗಾಗಿ ಖುಷಿ ರವಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು. ಖುಷಿಯ ತಂದೆ ರವಿ, ತಾಯಿ ಶೋಭಾ. ಬೆಂಗಳೂರಿನ ಜೆಪಿ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಖುಷಿ, ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ.

ಹತ್ತು ವರ್ಷಗಳಿಂದಲೂ ರಂಗಭೂಮಿಯಲ್ಲಿ ಕಾರ್ಯಪ್ರವೃತ್ತರಾಗಿರುವ ನಟಿ ಹಲವು ನಾಟಕ ತಂಡಗಳ ಜೊತೆ ತೊಡಗಿಸಿಕೊಂಡಿದ್ದಾರೆ. ಇನ್ನು ಇವರು 2012ರ ರಿಪಬ್ಲಿಕ್‌ ಡೇ ಕ್ಯಾಂಪ್‌ ನಲ್ಲಿ ಭಾಗವಹಿಸಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ಖುಷಿ ಕೂಡ ಇದ್ದರು. ಅದಲ್ಲದೆ, ಇವರು ಭರತನಾಟ್ಯ ಸಹ ಕಲಿತಿದ್ದಾರೆ. ನಾಲ್ಕು ವರ್ಷ ಸಂಗೀತ ಅಭ್ಯಾಸವನ್ನೂ ಕೂಡ ಮಾಡಿದ್ದಾರೆ.

`ದಿಯಾ' ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಸೌತ್‌ ಇಂಡಿಯನ್‌ ಇಂಟರ್‌ ನ್ಯಾಷನಲ್ ಮೂವಿ ಅವಾರ್ಡ್‌ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಚಂದನವನ ಫಿಲ್ಮ್ ಕ್ರಿಕೆಟ್‌ ಅಕ್ಯಾಡೆಮಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ