-  ರಾಘವೇಂದ್ರ ಅಡಿಗ ಎಚ್ಚೆನ್.

ಸಾಹಿತ್ಯಲೋಕ ಪ್ರಕಾಶನದಿಂದ ಪ್ರಕಟಗೊಂಡ 'ಸ್ವರ ಸಾಮ್ರಾಜ್ಞಿ',  ಗಾನಕೋಗಿಲೆ ಎಸ್ ಜಾನಕಿ ಅಮ್ಮನವರ ಕುರಿತಾದ ವ್ಯಕ್ತಿಚಿತ್ರ ಕೃತಿಯನ್ನು ದೇಶದ ಹೆಮ್ಮೆಯ ಹಿನ್ನೆಲೆ ಗಾಯಕರಾದ ಶ್ರೀ ವಿಜಯಪ್ರಕಾಶ್ ಅವರು ತಮ್ಮ ' ವಿ.ಪಿ ಕಲ್ಚರಲ್ ಕ್ಲಬ್' ಅಲ್ಲಿ ಗುರುವಾರ (ಜುಲೈ 23) ಲೋಕಾರ್ಪಣೆಗೊಳಿಸಿದರು.

1001660224

ನಂತರ 'ಆಕಾಶದೀಪವು ನೀನು' ಹಾಡನ್ನು ಹಾಡುವ ಮೂಲಕ ಜಾನಕಮ್ಮನಿಗೆ ತಮ್ಮದೇ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದರು. ಬಾಲ್ಯದಿಂದಲೂ ನಮ್ಮ ಜೀವನದ ನರನಾಡಿಗಳಲ್ಲಿ ಬೆರೆತುಹೋದ ಧ್ವನಿಯನ್ನು ಕಳೆದುಕೊಂಡ ಬೇಸರದಲ್ಲಿರುವಾಗ ಇಂತಹ   ಪುಸ್ತಕವೊಂದನ್ನು ಮೂರೇ ದಿನಗಳಲ್ಲಿ ಹೊರತಂದಿರುವುದು ಚಮತ್ಕಾರದಂತಿದೆ. ಮತ್ತು ಈ ಕೈಂಕರ್ಯ ಪೂರ್ತಿಯಾಗಲು ಜಾನಕಮ್ಮನ ಆಶೀರ್ವಾದವೇ ಜೊತೆಯಾಗಿದೆ ಎಂದು ಲೇಖಕರನ್ನು ಅಭಿನಂದಿಸಿದರು.

1001660223

ಜಾನಕಮ್ಮನವರ ಅಗಲಿಕೆಯ ನೋವಿನಲ್ಲಿ, ಅವರ ಕುರಿತು ಹೆಚ್ಚು ತಿಳಿಯುವ ನಿಟ್ಟಿನಲ್ಲಿ ಹುಟ್ಟಿದ ಹುಡುಕಾಟವೇ 'ಸ್ವರ ಸಾಮ್ರಾಜ್ಞಿ' ಗೆ ನಮನ ಸಲ್ಲಿಸಲು ಕೃತಿಯೊಂದನ್ನು ಅರ್ಪಿಸುವ ಆಲೋಚನೆ.  ಕನ್ನಡಭಾಷೆ, ಕನ್ನಡನಾಡು, ಕನ್ನಡಿಗರ ಮೇಲೆ ಅಪಾರ ಅಭಿಮಾನ ಹೊಂದಿದ್ದ ಜಾನಕಮ್ಮನವರು, ಕನ್ನಡದ ಮನೆಮಗಳೇ ಆಗಿಬಿಟ್ಟಿದ್ದರು. ಅವರ ಬಾಲ್ಯದಿಂದ ಹಿಡಿದು, ಮೈಸೂರಿನ ಮಣ್ಣಿನಲ್ಲಿ ಚಿರನಿದ್ರೆಗೆ ಜಾರುವವರೆಗಿನ ಸಂಕ್ಷಿಪ್ತ ಜೀವನ, ಗಾಯನ ಯಾನ, ಅವರ ಬದುಕಿನ ಅಪರೂಪದ ಕ್ಷಣಗಳು, ಸಾಧನೆಯ ತಪಸ್ಸು, ಅವರನ್ನು ಅರಸಿ ಬಂದ ಪ್ರಶಸ್ತಿಗಳು, ಬಿರುದುಗಳು, ಹೀಗೆ ಜಾನಕಿ ಅಮ್ಮನವರ ಸಾರ್ಥಕ ಜೀವನದ ಕುರಿತಾದ ಕೃತಿಯಿದು.

1001660222

ಕೃತಿಕಾರರ ಜೊತೆಗೆ ಖ್ಯಾತ ಲೇಖಕರಾದ ಬಿ.ಜಿ.ರಾಮನಾಥ್ ಲೇಖಕ ಶ್ರೀ ಸತೀಶ್ಚಂದ್ರ ಶೆಣೈ, ಲೇಖಕ ರಮೇಶ್ ಶೆಟ್ಟಿಗಾರ್ ಮಂಜೇಶ್ವರ , ಅಂದವಾಗಿ ಪುಸ್ತಕ ವಿನ್ಯಾಸಮಾಡಿದ ಮಾಲಾ  ಅವರೂ ಸಹ ಉಪಸ್ಥಿತರಿದ್ದರು.
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್
ಲೇಖಕರು : ಜ್ಯೋತಿ ಪ್ರಶಾಂತ್, ಅಮೂಲ್ಯ ಎಸ್ ಪ್ರಮೋದ್ ಮತ್ತು ಸಚಿನ್ ನಾಯಕ್
ಬೆಲೆ : ₹ 150

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ