ಅಬ್ಬಬ್ಬಾ.... ಒಂದೇ ಮುಖದಲ್ಲಿ ಇಷ್ಟೊಂದು ರಂಧ್ರಗಳೇ?! : ಈ ಹುಚ್ಚು ಇದೀಗ ಅಮೆರಿಕಾದ ಯೂರೋಪ್ ನಲ್ಲಿ ಸ್ವಾತಂತ್ರ್ಯದ ಸಿಂಬಲ್ ಆಗಿದೆ. ಇದು ನ್ಯಾಚುರಲ್ ಬ್ಯೂಟಿಯನ್ನೂ ಹಾಳು ಮಾಡಿಬಿಡುತ್ತದೆ. ಅಲ್ಲಿನ ಯೂಥ್ ಕೇವಲ ರೆಬೆಲ್ ಎಂದು ತೋರಿಸಿಕೊಳ್ಳಲು, ಎಷ್ಟೊಂದು ಪಿಯರ್ಸಿಂಗ್ ಮಾಡಿಸಿಕೊಳ್ಳುತ್ತಾರೆಂದರೆ ಅವರುಗಳ ತಾಯಿತಂದೆ ಕೋಪಿಸಿಕೊಂಡು, ಕಾಡಿಬೇಡಿದರೂ ಈ ಚಟ ತಪ್ಪಲ್ಲ. ಈ ರೋಗ ಈಗ ವಿಶ್ವದೆಲ್ಲೆಡೆ ಹರಡುತ್ತಿದೆ. ಹೀಗಾಗಿ ಗಲ್ಲಿಗಲ್ಲಿಗಳಲ್ಲೂ ಮೆಹಂದಿ, ಟ್ಯಾಟೂ, ಪಿಯರ್ಸಿಂಗ್ ಆರ್ಟಿಸ್ಟ್ ಜೋರಾಗಿ ದಂಧೆ ನಡೆಸುತ್ತಿದ್ದಾರೆ, ಕೈತುಂಬಾ ಹಣ ಬಾಚಿಕೊಳ್ಳುತ್ತಿದ್ದಾರೆ. ಸಾಧು ಬಾಬಾಗಳು ಕುಂಭಮೇಳದಲ್ಲಿ ಇಂಥದ್ದೇ ರಂಧ್ರ ಪ್ರದರ್ಶಿಸುತ್ತಾರೆ, ಹಾಗಿರುವಾಗ ಈ ಹೈಕಳಿಗೆ ಏನು ಹೇಳುವುದು?

ಇಲ್ಲಂತೂ ಸಾವಿರಾರು ಅಡೆತಡೆಗಳಿವೆ! : ಇಟಲಿಯ ಒಪೇರಾ ಇಟಾಲಿಯಾನಾ ಎಂಬಾಕೆ, ವಾಷಿಂಗ್ಟನ್ ನ ನೀಡ್ ಎಂಬಲ್ಲಿ ಒಂದು ಕಾನ್ಸರ್ಟ್ ನಡೆಸಿಕೊಟ್ಟಳು. ಇದು ನಮ್ಮ ದೇಶದ ಇಂಡಿಯಾ ಗೇಟ್‌ಕರ್ತವ್ಯ ಪಥದಂಥ ಜಾಗಗಳು. ನಮ್ಮಲ್ಲಿ ಅಂತೂ ಇಂಥಕ್ಕೆಲ್ಲ ಸಾವಿರಾರು ಅಡೆತಡೆಗಳಿವೆ, ಇಂಡಿಯಾ ಗೇಟ್ ನಲ್ಲಿ ಇಂಥ ಕಾನ್ಸರ್ಟ್ ಬಡಪಟ್ಟಿಗೆ ಜರುಗೀತೇ? ಆದರೆ ಅಲ್ಲಿನ ಲಿಂಕನ್ ಮೆಮೋರಿಯಲ್ ಹಾಗೂ ವಾಷಿಂಗ್ಟನ್ ನೀಡ್ ಗಳ ನಡುವೆ ಆಗಾಗ ಇಂಥ ಇವೆಂಟ್ಸ್ ನಡೆಯುತ್ತಲೇ ಇರುತ್ತವೆ, ಇದನ್ನು ನೋಡಲು ಸಾವಿರಾರು ಮಂದಿ ಸೇರುತ್ತಾರೆ. ಆದರೆ ನಮ್ಮ ನೇತಾಗಳು ಇಲ್ಲಿ ಸದಾ ಗಾಬರಿಗೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ಇಂಡಿಯಾ ಗೇಟ್ ಬಳಿಯ ಬೋಟ್ ಕ್ಲಬ್ ಸಹ ಪ್ರತಿದಿನ ಸಾವಿರಾರು ಮಂದಿಯ ಜನದಟ್ಟಣೆ ಕಾಣುತ್ತಿತ್ತು, ವರ್ಷದಲ್ಲಿ ಒಮ್ಮೊಮ್ಮೆ ಲಕ್ಷಾಂತರ ಮಂದಿಯದು. ಈಗಂತೂ ಶಾಸಕರು ಬಹಳ ಭಯಪಡುತ್ತಾರೆ.

ಮದುವೆಗೂ ಧರ್ಮಕ್ಕೂ ಏನು ಸಂಬಂಧ : ಮದುವೆ ನಂತರ ಪ್ರೇಮಿಗೆ ಖಾಸಗಿ ವಿಮಾನದಲ್ಲಿ ಪ್ರವಾಸ ಹೊರಡಲು ಅವಕಾಶ ಸಿಕ್ಕಿತು. ಆದರೆ ಇಲ್ಲಿ ನಡೆದದ್ದು ಬೇರೆ. ಪ್ರೇಮಿಯಲ್ಲ, ಆತ ಈಗ ಪತಿ, ಅವನೇ ದುಶ್ಮನ್ ತರಹ ಬುಸುಗುಡುತ್ತಿದ್ದಾನೆ. ಈ ಪ್ರಕರಣ ಮನೆ ಮುರಿದು ಕಾನೂನಿನ ಕಟಕಟೆ ಪ್ರವೇಶಿಸಿತು. ಮಾಜಿ ಪತಿ ಖಾಸಗಿ ವಿಮಾನಗಳಲ್ಲಿ ಹಾರಾಡಿದರೆ ಮಾಜಿ ಪತ್ನಿ ಲೋಕಲ್ ಟ್ರೇನುಗಳಲ್ಲಿ ಸುತ್ತಾಡುವುದೇ? ಇದರ ತೀರ್ಪು ಮದುವೆಗೆ ಮುನ್ನವೇ ಪ್ರೀ ನ್ಯೂಪಿಟ್ ಅಗ್ರಿಮೆಂಟ್ ನಲ್ಲಿ ನಮೂದಿಸಲಾಗಿರುತ್ತದೆ. ಪ್ರೀತಿ ಪ್ರೇಮ ಸಪ್ತಸಾಗರದಾಚೆಗೆ ತೇಲಾಡುತ್ತಿದ್ದಾಗ, ನವಜೋಡಿ ಈ ಸಂಬಂಧ ಶಾಶ್ವತ ಎಂದೇ ಭಾವಿಸುತ್ತಾರೆ. ಆದರೆ ಈ ಆಧುನಿಕ ದಿನಗಳಲ್ಲಿ ಅರ್ಧ ಪಾಲು ಮದುವೆಗಳು ಡೈವೋರ್ಸ್ ಕಡೆ ತಿರುಗುತ್ತಿರುವಾಗ ವಕೀಲರು, ಪುರೋಹಿತರು ಏನೂ ಮಾಡಲಾಗದು, ಮಧ್ಯದಲ್ಲಿ ಫ್ಯೂಚರ್ ಗಾಗಿ ಬೇಕಾದ ಲೀಗಲ್ ಕಾಗದಪತ್ರ ಅತ್ಯಗತ್ಯವಾಗಿ ರೆಡಿ ಮಾಡಿಸಬೇಕು, ಮದುವೆಗೆ ಮೊದಲೇ ವಿಚ್ಛೇದನದ ಎಲ್ಲಾ ಕಾಗದಪತ್ರ ರೆಡಿ ಆಗಿ ಹೋಗುತ್ತದೆ! ಧರ್ಮವನ್ನು ನಡುವೆ ಎಳೆತಂದು ಮದುವೆ ಜೀವನ ಪರ್ಯಂತ ಇವರು ಬಾಂಧವ್ಯ ಎನ್ನುವ ಪುರೋಹಿತರು, ತಮ್ಮ ಕೆಲಸಕ್ಕೆ ಖೋತಾ ಆಗುತ್ತಿರುವುದು ಕಂಡು ದುಃಖಿಸುತ್ತಿದ್ದಾರೆ.





