ಬೆಲ್ಲದ ಬಿಸ್ಕತ್ತು 

ಬೇಕಾಗುವ  ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಬೆಲ್ಲದ ಪುಡಿ ೧ ಕಪ್, ಶುಂಠಿಪುಡಿ ೧ ಚಮಚ, ಬೆಣ್ಣೆ ೧/೪ ಕಪ್, ಚಿಟುಕಿ ಉಪ್ಪು,

ತುಪ್ಪ ೧ ಚಮಚ.

ಮಾಡುವ ವಿಧಾನ

ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಬೆಣ್ಣೆ, ಬೆಲ್ಲದ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಗೋಧಿ ಹಿಟ್ಟು, ಶುಂಠಿ ಪುಡಿ, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಮೇಲೆ ತುಪ್ಪ ಸವರಿ ೫ ನಿಮಿಷ ಮುಚ್ಚಿಡಿ. ನಂತರ ಬಟರ್ ಪೇಪರ್ ಮೇಲಿಟ್ಟು  ಸ್ವಲ್ಪ ದಪ್ಪವಾಗಿ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ, ಎಣ್ಣೆಯಲ್ಲಿ ಕರಿಯಿರಿ.

Kavyaa Bharadwaj (11)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ