ಮರಗಳನ್ನು ನೆಡುವುದರಿಂದ ಬರುವ ಪುಣ್ಯದ ಬಗ್ಗೆ ನಮ್ಮ ಪುರಾಣಗಳಲ್ಲಿ ವಿಸ್ತೃತವಾಗಿ ಹೇಳಲಾಗಿದೆ

*ಮತ್ಸ್ಯ ಪುರಾಣ* ದಲ್ಲಿನ ಒಂದು  ಶ್ಲೋಕ ಇಂತಿದೆ

*“ದಶಕೂಪಸಮಾ ವಾಪೀ, ದಶವಾಪೀಸಮೋ ಹ್ರದಃ ದಶಹ್ರದಸಮಃ ಪುತ್ರೋ, ದಶಪುತ್ರಸಮೋ ದ್ರುಮಃ”*

*10 ಬಾವಿಗೆ ಸಮ ಒಂದು ಕೆರೆ, 10 ಕೆರೆಗೆ ಸಮ ಒಂದು ಸರೋವರ, 10 ಸರೋವರಕ್ಕೆ ಸಮ ಒಬ್ಬ ಮಗ, 10 ಮಕ್ಕಳಿಗೆ ಸಮ ಒಂದು ಮರ*

*ವರಾಹ ಪುರಾಣ* ದಲ್ಲಿನ ಶ್ಲೋಕ ಹೀಗಿದೆ –

*ಅಶ್ವತ್ಥಮೇಕಂ ಪಿಚುಮಂದಮೇಕಂ, ನ್ಯಗ್ರೋಧಮೇಕಂ ದಶ ಚಿಂಚಿಣೀಕಮ್*

1 ಅರಳಿ, 1 ಬೇವು, 1 ಆಲ, 10 ಹುಣಸೆ ನೆಟ್ಟವನಿಗೆ ನರಕದ ಬಾಗಿಲು ಮುಚ್ಚುತ್ತದೆ

*ಪದ್ಮ ಪುರಾಣ* ಹೀಗೆ ಹೇಳುತ್ತದೆ

*ವೃಕ್ಷಾರೋಪಣಕರ್ತಾರಃ, ತೇ ನರಾಃ ಸ್ವರ್ಗಗಾಮಿನಃ*

* ಮರ ನೆಡುವವರು ಸ್ವರ್ಗಕ್ಕೆ ಹೋಗುತ್ತಾರೆ

*ಪಂಚವಟಿ ಮರಗಳನ್ನು ನೆಟ್ಟರೆ ಏನು ಫಲ?*

  1. *ಅರಳಿ ಮರ – ಅಶ್ವತ್ಥ*: ಬ್ರಹ್ಮ-ವಿಷ್ಣು-ಶಿವರ ವಾಸ. 1 ಅರಳಿ = 1000 ಯಜ್ಞದ ಫಲ. ಶನಿ ದೋಷ ಪರಿಹಾರ.
  2. *ಬೇವು* –  ರೋಗ ನಾಶಕ. ಬೇವು ನೆಟ್ಟ ಮನೆಗೆ ಯಮನ ಭಯ ಇಲ್ಲ ಎಂಬ ನಂಬಿಕೆ.
  3. *ಆಲದ ಮರ – ವಟವೃಕ್ಷ*: ದೀರ್ಘಾಯುಷ್ಯ.  ಸಾವಿರ ವರ್ಷ ಆಯಸ್ಸು ಕೊಡುತ್ತದೆ.
  4. *ಬಿಲ್ವಪತ್ರೆ*: ಶಿವನಿಗೆ ಪ್ರಿಯ. 1 ಬಿಲ್ವ = 1000 ಕೋಟಿ ಲಿಂಗ ಪೂಜೆ ಫಲ.
  5. *ಅತ್ತಿ* – ಇದು ಸಾಕ್ಷಾತ್ ದತ್ತಾತ್ರೆಯ ಸ್ವಾಮಿಯ ವಾಸಸ್ಥಾನವೆಂದು ಸಸಾನವೆಂದ ನಂಬಲಾಗಿದೆ. 1 ದೇವಸ್ಥಾನ ಕಟ್ಟಿದಷ್ಟು ಪುಣ್ಯ + 1 ಆಸ್ಪತ್ರೆ ನಡೆಸಿದಷ್ಟು ಸೇವೆ + 10 ಮಕ್ಕಳಿಗೆ ಸಮ

ಮಾನ್ಯರೇ

ನಮಗಷ್ಟೇ ಅಲ್ಲ ಪರಿಸರಕ್ಕೂ ಇಷ್ಟೆಲ್ಲ ಉಪಯುಕ್ತವಾಗಿರುವ ಈ ಮರಗಳನ್ನ ನೆಟ್ಟು ಸಾರ್ಥಕತೆಯಿಂದ ಪಡೆಯುವ ಸಮಯ ಇದಾಗಿದೆ ಹಾಗಾಗಿ ಜೂನ್ ಜುಲೈ ಆಗಸ್ಟ್ ಈ ಮೂರು ತಿಂಗಳ ಒಳಗಾಗಿ ಈ ಮರಗಳನ್ನ ನೆಟ್ಟರೆ ಅವು ಸಮೃದ್ಧವಾಗಿ ಬೆಳೆಯುತ್ತವೆ

ಒಂದು ಮರ ನೆಡಿ –

ಭವಿಷ್ಯವನ್ನು ಉಳಿಸಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ