ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ಸುದೀರ್ಘ ವಿರಾಮ ಪಡೆದಿದ್ದ ಸ್ಟಾರ್​ ನಟಿ ಕತ್ರಿನಾ ಕೈಫ್ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಆ ಮೂಲಕ ತಾವು ಚಿತ್ರರಂಗ ತೊರೆದಿಲ್ಲ ಎಂಬ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಮದುವೆಯ ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಅವರು ಚಿತ್ರರಂಗಕ್ಕೆ ಗುಡ್‌ಬೈ ಹೇಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ನಟಿ ಕತ್ರಿನಾ ಕೈಫ್​ ಬಿ-ಟೌನ್‌ನಿಂದ ದೂರವಾಗಿದ್ದಾರೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಕತ್ರಿನಾ ಕೈಫ್ ಭರ್ಜರಿ ಕಮ್‌ಬ್ಯಾಕ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಸುದೀರ್ಘ ವಿರಾಮದ ನಂತರ ಮತ್ತೆ ಬಣ್ಣ ಹಚ್ಚುವುದಕ್ಕೆ ಕತ್ರಿನಾ ರೆಡಿ ಆಗುತ್ತಿದ್ದಾರೆ. ಅಜಯ್ ಬಹ್ಲ್ ನಿರ್ದೇಶನದ ಚಾಂದಿನಿ ಬಾರ್ 2 (Chandni Bar 2 ) ಸಿನಿಮಾದ ಮೂಲಕ ಕತ್ರಿನಾ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. 2001ರಲ್ಲಿ ಚಾಂದಿನಿ ಬಾರ್ ಸಿನಿಮಾ ಭಾರೀ ಯಶಸ್ಸು ಪಡೆದಿತ್ತು. ಈ ಸಿನಿಮಾ ಇದೀಗ ಸಿಕ್ವೆಲ್ ಇದೀಗ ಬರುತ್ತಿದೆ. ಈ ಸಿನಿಮಾದಲ್ಲಿ ಕತ್ರಿನಾ ಮುಖ್ಯ ಪಾತ್ರ ಮಾಡಲಿದ್ದಾರಂತೆ.

ಕತ್ರಿನಾ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಅಧಿಕೃತವಾಗಿ ಸಿನಿಮಾ ತಂಡವಾಗಲಿ ಅಥವಾ ಕತ್ರಿನಾ ಆಗಲಿ ವಿಷಯವನ್ನು ಖಚಿತ ಪಡಿಸದಿದ್ದರೂ, ಬಿ ಟೌನ್ ನಲ್ಲಿ ಮಾತ್ರ ಈ ಸುದ್ದಿ ವೈರಲ್ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ