Sj*
ಕನ್ನಡ ಮಣ್ಣಿನ ಕಥೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಕನ್ನಡ ZEE5

ಒಟಿಟಿ ವೇದಿಕೆ ನೀಡಿದೆ. ಅಯ್ಯನ ಮನೆ ವೆಬ್ ಸರಣಿಯಿಂದ ಶುರುವಾದ ಈ ಪಯಣದಲ್ಲಿ ಈಗಾಗಲೇ ಸಾಕಷ್ಟು ವೆಬ್ ಸೀರೀಸ್ ಗಳು ಕನ್ನಡ ಪ್ರೇಕ್ಷಕರನ್ನು ರಂಜಿಸಿವೆ. ಒಳ್ಳೊಳ್ಳೆ ಕಥೆಗಳನ್ನು ನೀಡುತ್ತಿರುವ ಕನ್ನಡ zee5 ಚೊಚ್ಚಲ ವೆಬ್ ಸರಣಿ ಅಯ್ಯನ ಮನೆ ಕನ್ನಡದ ಅತ್ಯುತ್ತಮ ವೆಬ್ ಸರಣಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಭಾರತೀಯ ಒಟಿಟಿ (OTT) ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರಕ್ಕೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'ಗೆ ಅಯ್ಯನ ಮನೆ ವೆಬ್ ಸರಣಿ ಭಾಜನವಾಗಿದೆ. ನಿನ್ನೆ ಮುಂಬೈನಲ್ಲಿ ಏಳನೇ ಆವೃತ್ತಿಯ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ನಡೆಯಿತು. ಈ ಕಾರ್ಯಕ್ರಮದಲ್ಲಿ zee5 ಅಯ್ಯನ ಮನೆ ಅತ್ಯುತ್ತಮ ವೆಬ್ ಸಿರೀಸ್ ಅವಾರ್ಡ್‌ ಮುಡಿಗೇರಿಸಿಕೊಂಡಿತು.

ayya

ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಅಯ್ಯನ‌ ಮನೆ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಸರಣಿಗೆ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದರು. ದಿಯಾ ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಖುಷಿ ರವಿ ಜಾಜಿಯಾಗಿ ಅಭಿನಯಿಸಿದ್ದರು. ಮಾನಸಿ ಸುಧೀರ್ ನಾಗಲಂಬಿಕೆ ಪಾತ್ರಕ್ಕೆ ಜೀವ ತುಂಬಿದ್ದರು. ನಿರ್ದೇಶನದ ಜೊತೆಗೆ ರಮೇಶ್ ಇಂದಿರಾ ಕೂಡ ಪಾತ್ರವೊಂದನ್ನು ನಿಭಾಯಿಸಿದ್ದರು.

'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ಪಡೆದ ಸಂಭ್ರಮದಲ್ಲಿರುವ ಅಯ್ಯನ ಮನೆ ತಂಡ ಹಾಗೂ zee5 ಹೊಸ ಘೋಷಣೆಯೊಂದನ್ನು‌ ಮಾಡಿದೆ. ಅಯ್ಯನ ಮನೆ 2 ವೆಬ್ ಸರಣಿಯ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಕನ್ನಡ zee5ನಲ್ಲಿ ವೀಕ್ಷಣೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ