ರವೆ ನಿಪ್ಪಟ್ಟು
ಬೇಕಾಗುವ ಸಾಮಗ್ರಿ
ಚಿರೋಟಿ ರವೆ ೧ ಕಪ್, ಅಕ್ಕಿಹಿಟ್ಟು ೧/೨ ಕಪ್, ಹುರಿಗಡಲೆ ೨ ಚಮಚ, ಹುರಿದ ಬಿಳಿ ಎಳ್ಳು, ಅಚ್ಚ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸ್ವಲ್ಪ ಬೆಚ್ಚಗಿನ ಎಣ್ಣೆ ಹಾಕಿ, ಮಿಶ್ರಣಮಾಡಿ. ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಗಟ್ಟಿಯಾಗಿ ಕಲೆಸಿಕೊಂಡು ೧೫ ನಿಮಿಷ ಬದಿಗಿಡಿ. ಬಟರ್ ಪೇಪರ್ ಮೇಲೆ ಎಣ್ಣೆ ಸವರಿ, ಅಗಲವಾಗಿ ತಟ್ಟಿ, ಎಣ್ಣೆಯಲ್ಲಿ ಕೆಂಪಗಾಗುವವರೆಗೆ ಕರಿಯಿರಿ.
– ಕಾವ್ಯಾ ಭಾರಧ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





