ಬೇಕಾಗುವ ಸಾಮಗ್ರಿ
ಕಡಲೆಹಿಟ್ಟು ೧ ಕಪ್, ಹುರಿಗಡಲೆ ಹಿಟ್ಟು ೨ ಚಮಚ, ಓಂ ಕಾಳು ಪುಡಿ ೧ ಚಮಚ, ಖಾರಕ್ಕೆ ತಕ್ಕಂತೆ ಅಚ್ಚ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಒಂದು ಅಗಲವಾದ ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಕೈಯಲ್ಲಿ ಮಿಶ್ರಣ ಮಾಡಿ, ಎರಡು ಚಮಚ ಬೆಚ್ಚಗೆ ಮಾಡಿದ ತುಪ್ಪ ಹಾಕಿ ಕಲಸಿಟ್ಟುಕೊಳ್ಳಿ. ಇದರಲ್ಲಿ ಸ್ವಲ್ಪ ಹಿಟ್ಟಿಗೆ ನೀರು ಹಾಕಿ ಗಟ್ಟಿಯಾಗಿ ಕಲಸಿ ಕೋಡುಬಳೆ ಎಳೆಯಂತೆ ಉದ್ದಕ್ಕೆ ನಾದಿ, ಸಣ್ಣ ಸಣ್ಣ ತುಂಡುಗಳನ್ನು ಕತ್ತರಿಸಿ ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಕರಿಯಿರಿ. ಇದೇ ರೀತಿ ಉಳಿದ ಹಿಟ್ಟಿನಲ್ಲೂ ಖಾರದ ಕಡ್ಡಿ ತಯಾರಿಸಿ ಕರಿಯಿರಿ.
ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





