ನೀವು ಸದಾ ಚಿರಯೌವನ ಬಯಸುತ್ತೀರಾ? ಹಾಗಾದರೆ ಈ ಸಲಹೆಗಳನ್ನು ಅನುಸರಿಸಿ……!
ಸದಾ ಯಂಗ್, ಸ್ಮಾರ್ಟ್ ಫ್ರೆಶ್ ಆಗಿ ಕಂಡುಬರಲು ಎಲ್ಲಕ್ಕೂ ಮುಖ್ಯವಾದುದು ಎಂದರೆ, ನಿಮ್ಮ ಲೈಫ್ ಸ್ಟೈಲ್ ಹಾಗೂ ಊಟ ತಿಂಡಿಯ ಶೈಲಿ, ನಿದ್ದೆ ಮತ್ತು ಎಚ್ಚರಾಗಿರುವ ಸ್ಥಿತಿಯಲ್ಲೂ ಬದಲಾವಣೆ ತರಬೇಕು. ವ್ಯಾಯಾಮ ಬಲು ಮುಖ್ಯ. ಬ್ರಿಕ್ಸ್ ವಾಕಿಂಗ್, ಜಾಗಿಂಗ್, ಜಿಮ್, ಯೋಗ ಇತ್ಯಾದಿ ರೂಢಿಸಿಕೊಳ್ಳಿ.
ನೀವು ನಿಮ್ಮ ದಿನಚರ್ಯೆಯಲ್ಲಿ ಬದಲಾವಣೆ ತಂದುಕೊಂಡು ಈ ಎಲ್ಲಾ ಅಭ್ಯಾಸ ಮಾಡಿಕೊಂಡರೆ, ಖಂಡಿತಾ ನೀವು ಫಿಟ್ & ಫೈನ್ ಆಗಿರಬಲ್ಲಿರಿ!
ರೊಟೀನ್ ಲೈಫ್ ಅಗತ್ಯ : ಬದಲಾಗಿರುವ ಜೀವನಶೈಲಿ ಹಾಗೂ ಟೆಕ್ನಾಲಜಿ ಕಾರಣ, ನಿದ್ದೆ ಅಪೂರ್ಣ ಆಗುವುದು ಒಂದು ದೊಡ್ಡ ಸಮಸ್ಯೆ ಆಗುತ್ತಿದೆ. ನಮಗೆ ಬೆಳಗ್ಗಿನಿಂದ ರಾತ್ರಿಯವರೆಗೂ ದುಡಿಯಬೇಕಾದ ಅನಿವಾರ್ಯತೆ ಇದ್ದು, ರಾತ್ರಿ 9ರ ನಂತರವೇ ತುಸು ಫ್ರೀ ಆಗುತ್ತೇವೆ. ಆಗ ಮನರಂಜನೆಗಾಗಿ ಮೊಬೈಲ್ ಹಿಡಿದು ಕೂರುತ್ತೇವೆ. ಟಿವಿ ನೋಡುತ್ತಾ ಊಟ ತಿಂಡಿ ಪೂರೈಸುತ್ತೇವೆ. ಆಗ ಅನಗತ್ಯವಾಗಿ ಹೆಚ್ಚಿನ ಜಂಕ್ ಫುಡ್ ಸೇವಿಸುತ್ತೇವೆ. ಈ ಮಧ್ಯೆ ಟೈಂ ಪಾಸ್ ಆಗಿದ್ದೇ ಗೊತ್ತಾಗುವುದಿಲ್ಲ. ಹಾಗಾಗಿ ನಿದ್ದೆ ಬರುವುದು ತಡವಾಗುತ್ತದೆ. ಮಾರನೇ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಅದಕ್ಕೆ ನಾವು ಸಶಕ್ತರಾಗಿರುವುದಿಲ್ಲ. ಇದರ ಪ್ರಭಾವ ಖಂಡಿತಾ ನಮ್ಮ ಆರೋಗ್ಯದ ಮೇಲೆ ಆಗುತ್ತದೆ. ಹೀಗಾಗಿ ನಿಮ್ಮನ್ನು ನೀವು ಫ್ರೆಶ್‌ಯಂಗ್
ಆಗಿರಿಸಿಕೊಳ್ಳಲು, ಬೇಗ ಮಲಗಿ ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಅದಕ್ಕಾಗಿ ಈ ಸಲಹೆ ಅನುಸರಿಸಿ :
ಉತ್ತಮ ನಿದ್ದೆ ಇಮ್ಯೂನಿಟಿ ಬೂಸ್ಟ್ ಆಗಲು ಕಾರಣ. ಇದರಿಂದಾಗಿ ನಮ್ಮ ದೇಹ ರೋಗಗಳ ವಿರುದ್ಧ ಹೋರಾಡಲು ಸಶಕ್ತವಾಗುತ್ತದೆ.
ಉತ್ತಮ ನಿದ್ದೆ ದೇಹದ ರಿಪೇರಿ, ರೀಜನರೇಟ್‌ರಿಕವರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
7-8 ಗಂಟೆಗಳ ನಿದ್ದೆ ನಮ್ಮ ಮೆದುಳನ್ನು ತಾಜಾ ಆಗಿಡುವಲ್ಲಿ ನೆರವಾಗುತ್ತದೆ. ಇದರಿಂದ ನಮ್ಮ ನೆನಪಿನ ಶಕ್ತಿ ಚುರುಕಾಗಿ, ಯೋಚಿಸುವ ಶಕ್ತಿ ಹೆಚ್ಚುತ್ತದೆ.
ಇದರಿಂದ ನಮ್ಮ ಕೆಲಸ ಮಾಡುವ ಶಕ್ತಿಯೂ ಚುರುಕಾಗುತ್ತದೆ, ಕೆಲಸ ಬೇಗ ಬೇಗ ಆಗುತ್ತದೆ.
ಮಾನಸಿಕ ಆರೋಗ್ಯ ಉತ್ತಮ ಆಗುತ್ತದೆ.
ಕನಿಷ್ಠ 7-8 ಗಂಟೆಗಳ ಉತ್ತಮ ನಿದ್ದೆ, ನಮ್ಮನ್ನು ಹಲವಾರು ಗಂಭೀರ ರೋಗಗಳಿಂದ ದೂರ ಇಡುತ್ತದೆ.
ನಿಯಮಿತ ದೈಹಿಕ ವ್ಯಾಯಾಮ : ನಿಯಮಿತ ವ್ಯಾಯಾಮ ಹೆಚ್ಚುತ್ತಿರುವ ನಮ್ಮ ವಯಸ್ಸಿಗೆ ಒಂದು ವಿಧದಲ್ಲಿ ತಡೆ ಹಾಕಿ ಪ್ರೌಢತೆ, ವೃದ್ಧಾಪ್ಯ ಮುಂದೂಡುತ್ತದೆ. ಉತ್ತಮ ಆರೋಗ್ಯ ಸದಾ ಯಂಗ್ ಆಗಿರಲು, ನಾವು ಪ್ರತಿದಿನ ಬೆಳಗ್ಗೆ 1 ಗಂಟೆ ಕಾಲ ಅಗತ್ಯವಾಗಿ ಯೋಗ, ಬ್ರಿಸ್ಕ್ ವಾಕಿಂಗ್, ಜಾಗಿಂಗ್, ಜಿಮ್ ಪ್ರಾಕ್ಟೀಸ್, ಈಜು ಇತ್ಯಾದಿಗಳಲ್ಲಿ ತೊಡಗಬೇಕು. ಇದು ನಿಮಗೆ ಬೋರ್ ಆಗದೆ, ನಿಯಮಿತವಾಗಿ ತೊಡಗಿಕೊಳ್ಳಲು ಆಸಕ್ತಿ ಹುಟ್ಟಿಸುವಂತಿರಬೇಕು. ಸತತ 6-7 ತಿಂಗಳು ಹೀಗೆ ಮಾಡಿ ಬೋರ್ ಆದರೆ, ನೀವು ಜುಂಬಾ, ಏರೋಬಿಕ್ಸ್, ಡ್ಯಾನ್ಸ್ ಗಳಲ್ಲಿ ತೊಡಗಿಕೊಳ್ಳಿ.
ನಿಯಮಿತ ವ್ಯಾಯಾಮದ ಲಾಭಗಳು
ನಿಯಮಿತ ವ್ಯಾಯಾಮದಿಂದ ಮೆಟಬಾಲಿಸಂ ಹೆಚ್ಚುತ್ತದೆ. ನಮ್ಮ ಕ್ಯಾಲೋರಿ ಬೇಗ ಬೇಗ ಬರ್ನ್ ಆಗುತ್ತದೆ. ಅದರಿಂದಾಗಿ ದೇಹ ತೂಕ ತಗ್ಗುತ್ತದೆ.
ನಿಯಮಿತ ವ್ಯಾಯಾಮ ನಮ್ಮ ಮಾಂಸಖಂಡಗಳನ್ನು ಸದಾ ಆರೋಗ್ಯಕರವಾಗಿ ಇಡುತ್ತದೆ. ಇದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ಇದರಿಂದ ಮೆದುಳಿಗೆ ಧಾರಾಳ ರಕ್ತ ಸಂಚಾರ ಆಗುವುದರಿಂದ, ಅದು ಸದಾ ಸಕ್ರಿಯವಾಗಿದ್ದು, ಹೊಸ ಹೊಸ ಬ್ರೇನ್ ಸೆಲ್ಸ್ ರೂಪಿಸುವಲ್ಲಿ ಚುರುಕಾಗುತ್ತದೆ.
ನಿಯಮಿತ ವ್ಯಾಯಾಮ ನಮ್ಮ ಹೆಚ್ಚುತ್ತಿರುವ ಮಾನಸಿಕ ಒತ್ತಡವನ್ನು ಎಷ್ಟೋ ತಗ್ಗಿಸುತ್ತದೆ. ಇದರಿಂದ ಬಿಪಿ ತಂತಾನೇ ನಿಯಂತ್ರಣಕ್ಕೆ ಬರುತ್ತದೆ.
ನಿಯಮಿತ ವ್ಯಾಯಾಮದಿಂದ ದೇಹದಲ್ಲಿನ ಅನಗತ್ಯ ಕೊಲೆಸ್ಟ್ರಾಲ್ ಎಷ್ಟೋ ತಗ್ಗುತ್ತದೆ, ಉತ್ತಮ ಕೊಲೆಸ್ಟ್ರಾಲ್ ನ ಪ್ರಮಾಣ ಹೆಚ್ಚುತ್ತದೆ. ಇದರಿಂದ ಹೃದ್ರೋಗ ಮಾರು ದೂರ ಓಡುತ್ತದೆ, ಅಧಿಕ ಪ್ರಮಾಣದಲ್ಲಿ ನಮಗೆ ಆಕ್ಸಿಜನ್ ಸಿಗುತ್ತದೆ. ಇದರಿಂದ ಯಾವುದೇ ಹೃದ್ರೋಗ ಬರುವ ಹಿಂಸೆಯೇ ಇಲ್ಲ.
ಸಮತೋಲನ ಆಹಾರ ಇರಲಿ
ಕೇವಲ ಬದುಕಿರಲು ಮಾತ್ರವಲ್ಲದೆ, ಸದಾ ಆರೋಗ್ಯಕರ, ಸಕ್ರಿಯ ಜೀವನ ನಡೆಸಲು ಸಮತೋಲನ ಆಹಾರ ಖಂಡಿತಾ ಬೇಕು. ಅದರಲ್ಲಿನ ಪೌಷ್ಟಿಕ ಅಂಶಗಳು ನಿಮ್ಮನ್ನು ಸದಾ ಯಂಗ್ ಆಗಿರಿಸುತ್ತದೆ.
ಇದಕ್ಕಾಗಿ ಬೆಳಗಿನ ತಿಂಡಿ ಸೇವನೆ ಮರೆಯಬೇಡಿ.
ರಾತ್ರಿ ಮಲಗುವ 1-2 ಗಂಟೆಗಳಿಗೆ ಮೊದಲೇ ಊಟ ಆಗಿರಬೇಕು.
ರಾತ್ರಿ ಹೊತ್ತು ಕಡಿಮೆ ಪ್ರಮಾಣದ, ಲೋ ಕ್ಯಾಲೋರಿಯ ಆಹಾರ ಮಾತ್ರ ಸೇವಿಸಿ.
ಇದರಿಂದ ನಿಮ್ಮ ಇಮ್ಯುನಿಟಿ ಹೆಚ್ಚಿ ರೋಗಗಳು, ದೂರಾಗುತ್ತವೆ.
ಇದರಿಂದ ಪಚನಕ್ರಿಯೆ ಸಲೀಸಾಗಿ, ಆರೋಗ್ಯ ಸುಧಾರಿಸುತ್ತದೆ.
ನಮ್ಮ ಮಾಂಸಖಂಡ, ಮೂಳೆಗಳು, ಹಲ್ಲು ಎಲ್ಲವೂ ಮಜಬೂತಾಗುತ್ತವೆ.
ವ್ಯಕ್ತಿ ಕ್ರಿಯಾಶೀಲನಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು, ಮೂಡ್ ಸದಾ ಗುಡ್ ಆಗಿರಲು, ಇದನ್ನು ಪಾಲಿಸಬೇಕು.
ಇದು ದೇಹ ತೂಕ ಹೆಚ್ಚಾಗದಂತೆ, ಬಿಪಿ ಏರದಂತೆ ರಕ್ಷಿಸುತ್ತದೆ.
ಸೀಸನ್, ಲೋಕಲ್ ಫುಡ್ ಸೇವಿಸಿ
ಪ್ರತಿ ಊರಿನ ಹವಾಮಾನ, ಪರಿಸರಕ್ಕೆ ತಕ್ಕಂತೆ ಆಯಾ ಪ್ರದೇಶಗಳಲ್ಲಿ ದೊರಕುವ ಸೀಸನ್, ಲೋಕಲ್ ಫುಡ್ ಸೇವಿಸಿ. ಇದರಲ್ಲಿ ಕೀಟನಾಶಕ, ರಾಸಾಯನಿಕಗಳನ್ನು ಚೆನ್ನಾಗಿ ತೊಳೆದು ತರಕಾರಿ, ಹಣ್ಣುಗಳನ್ನು ಸೇವಿಸಿ. ಇವು ನಮ್ಮ ಆರೋಗ್ಯಕ್ಕೆ ಲಾಭಕರ. ಜೊತೆಗೆ ಇವು ಅಗ್ಗವೂ ಸಹ. ಹೀಗಾಗಿ ಸ್ಥಳೀಯ ಆಹಾರ ಧಾನ್ಯ, ತರಕಾರಿ, ಹಣ್ಣುಗಳಿಗೇ ಹೆಚ್ಚಿನ ಆದ್ಯತೆ ಕೊಡಿ. ಜೊತೆಗೆ ನಿಮ್ಮ ಇಮ್ಯುನಿಟಿ ಹೆಚ್ಚಿಸಲು ಅರಿಶಿನ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ನಿಂಬೆ, ಪುದೀನಾ, ತುಳಸಿ, ನೆಲ್ಲಿ, ವಿಟಮಿನ್ ಸಿ ತುಂಬಿದ ಹಣ್ಣು, ಹಸಿ ತರಕಾರಿ, ಸೊಪ್ಪು, ವೈಟ್ ವೀಟ್ ಇತ್ಯಾದಿ ಸೇವಿಸಿ.
ನಿಮ್ಮ ಗುರಿ ಬಿಟ್ಟು ಕೊಡದಿರಿ
ಸಾಮಾನ್ಯವಾಗಿ ಜನ ದೇಹ ತೂಕ ತಗ್ಗಿಸಲು ಆರಂಭದಲ್ಲಿ ಬಲು ಉತ್ಸಾಹದಿಂದ ಡಯೆಟ್ ಗೆ ತೊಡಗುತ್ತಾರೆ. ಆದರೆ 2-3 ವಾರ ಕಳೆಯುವಷ್ಟರಲ್ಲಿ ರೋಸಿಹೋಗಿ, ತಮ್ಮ ಹಳೆಯ ಅಭ್ಯಾಸದಂತೆ ತಿಂದುಂಡು ನೆಮ್ಮದಿಯಾಗಿರುತ್ತಾರೆ. ಹೀಗೆ ಮಾಡಿ ನಿಮ್ಮ ಗುರಿಯಿಂದ ದೂರವಾಗದಿರಿ.
ಇದನ್ನು ತಪ್ಪಿಸಲು ಆದಷ್ಟೂ ಸಹನೆ ಬೆಳೆಸಿಕೊಳ್ಳಿ. ನಾವು ಯಾವುದೇ ಕೆಲಸದಲ್ಲಿ ಮತ್ತೆ ಮತ್ತೆ ಸೋಲನ್ನು ಎದುರಿಸಿದರೆ, ಆ ಕೆಲಸದ ಗೊಡವೆಯೇ ಬೇಡ ಎಂದುಕೊಳ್ಳುತ್ತೇವೆ. ಆದರೆ ಇಲ್ಲಿ ಸಹನೆ, ತಾಳ್ಮೆ ನಮಗೆ ಬಲು ಮುಖ್ಯ.
ಸಹನೆ ತಾಳ್ಮೆಯಿಂದ ನಿಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು. ಗುರಿ ಮರೆಯದಂತೆ ಸದಾ ಎಚ್ಚರವಾಗಿರಬೇಕು.
ಹೆಚ್ಚಿನ ನಿರಾಸೆ ನಮ್ಮನ್ನು ಆರಿಸದಂತೆ ಇರಬೇಕು.
ನಮ್ಮಲ್ಲಿ ಸದಾ ಸಕಾರಾತ್ಮಕ ವಿಚಾರ ತುಂಬಿಕೊಳ್ಳಬೇಕು.
ಸಹನೆ ತಾಳ್ಮೆ ಮಾತ್ರ ನಮ್ಮ ಗುರಿ ತಲುಪಲು, ಹಿಡಿದ ಕೆಲಸ ನೆರವೇರಿಸಲು ನಮ್ಮನ್ನು ಪ್ರೇರೇಪಿಸಬಲ್ಲವು.
`ಮನಸ್ಸಿದ್ದರೆ ಮಾರ್ಗ’ ಎಂಬ ಮಹಾಮಂತ್ರವನ್ನು ಎಂದೂ ಮರೆಯಬಾರದು. ನಾವು ದೃಢ ಮನಸ್ಸಿನಿಂದ ಹಿಡಿದ ಕೆಲಸ ಸಾಧಿಸುವವರೆಗೂ ಬಿಟ್ಟು ಕೊಡಬಾರದು. ನಾವು ಸದಾ ಯಂಗ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನು ಕೆಲವೇ ದಿನಗಳಲ್ಲಿ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸತತ ಪರಿಶ್ರಮ ಬೇಕು. ಇದರ ಪರಿಣಾಮವನ್ನು ನೀವು ಕೆಲವು ತಿಂಗಳುಗಳ ನಂತರ ಖಂಡಿತಾ ಕಾಣುವಿರಿ.
ಡೀಟಾಕ್ಸಿಫಿಕೇಶನ್
ನಮ್ಮ ಚರ್ಮ ಬಲು ನಾಜೂಕು, ಸಂವೇದನಾಶೀಲ ಆಗಿರುತ್ತದೆ. ಸುತ್ತಲಿನ ವಾತಾವರಣ ಇದರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಹೀಗಾಗಿ ಇದನ್ನು ಸದಾ ಸ್ವಸ್ಥ, ಶುಭ್ರ, ಹೊಳೆಯುವಂತೆ ಮಾಡಲು ಹೆಚ್ಚಿನ ಆರೈಕೆಯ ಅಗತ್ಯವಿದೆ. ಇದಕ್ಕಾಗಿ ಜನ ನಾನಾ ಬಗೆಯ ಕ್ರೀಂ, ಲೋಶನ್ ಇತ್ಯಾದಿ ಬಳಸುತ್ತಾರೆ. ಆದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತರುವುದಿಲ್ಲ. ಹೀಗಾಗಿ ಚರ್ಮವನ್ನು ಸ್ವಸ್ಥ, ಯಂಗ್ ಆಗಿರಿಸಿಕೊಳ್ಳಲು ಅಸಮರ್ಥರಾಗುತ್ತಾರೆ. ಆಗ ಸಹಜವಾಗಿ ಚರ್ಮದಲ್ಲಿ ಸುಕ್ಕು, ಕಲೆ, ನಿರಿಗೆ ಇತ್ಯಾದಿ ಹೆಚ್ಚುತ್ತವೆ.
ಈ ಎಲ್ಲಾ ತೊಂದರೆಗಳಿಂದ ಪಾರಾಗಲು ಚರ್ಮವನ್ನು ಆಗಾಗ ಡೀಟಾಕ್ಸಿಫಿಕೇಶನ್ ಗೆ ಒಳಪಡಿಸಬೇಕು. ಹೊರಗಿನಿಂದ ಅಂದವಾಗಿ ಕಾಣಿಸಲು, ಒಳಭಾಗದಿಂದಲೂ ಚರ್ಮವನ್ನು ಶುಭ್ರಗೊಳಿಸಬೇಕು. ದೇಹವನ್ನು ವಿಷ ಪದಾರ್ಥಗಳಿಂದ ದೂರ ಇಡಬೇಕು, ಅತ್ಯಗತ್ಯ ಪೋಷಣೆ ಒದಗಿಸಬೇಕು, ಆರಾಮ ನೀಡುವುದು ಇತ್ಯಾದಿ ಎಲ್ಲಾ ಆಗಬೇಕು.
ನಿಮಗೆ ಸದಾ ಸುಸ್ತು ಎನಿಸುತ್ತಿದ್ದರೆ, ಮೊಡವೆ ಆ್ಯಕ್ನೆಗಳ ಕಾಟವಿದ್ದರೆ. ಪಚನ ಕ್ರಿಯೆಯಲ್ಲಿ ದೋಷ ಕಂಡುಬಂದರೆ, ನಿಮ್ಮ ದೇಹ ವಿಷಕಾರಿ ಅಂಶಗಳನ್ನು ತುಂಬಿಕೊಂಡಿದೆ ಎಂದೇ ಅರ್ಥ. (ಸಿಸ್ಟಂಗೆ ವೈರಸ್ ಆಕ್ರಮಿಸುವಂತೆ) ಇದೀಗ ನಿಮ್ಮ ದೇಹಕ್ಕೆ ಡೀಟಾಕ್ಸಿಫಿಕೇಶನ್ ಅತ್ಯಗತ್ಯ. ಆಗ ದೇಹ ಸ್ವಸ್ಥ ಯಂಗ್ ಆಗುತ್ತದೆ. ಹೀಗಾಗಿ ದೇಹದ ಹೊರಭಾಗ ಮಾತ್ರವಲ್ಲದೆ ಒಳಭಾಗವನ್ನೂ ಶುಚಿ ಮಾಡಬೇಕು. ಯಂಗ್ ಆಗಿರಲು, ಕಂಡುಬರಲು, ನಿಮ್ಮ ಮುಖದಲ್ಲಿ ಸದಾ ಒಂದು ಕಾಂತಿ ತುಂಬಿರಬೇಕು. ಇದನ್ನು ಸಾಧಿಸಲು ನೀವು ಚರ್ಮದ ಆರೈಕೆಯತ್ತ ವಿಶೇಷ ಗಮನ ಕೊಡಲೇಬೇಕು.
– ಕೆ. ಶೋಭಾ
ಮುಖದ ಆರೈಕೆ
ದಿನವಿಡೀ ಧಾರಾಳ ನೀರು ಕುಡಿಯುತ್ತಿರಿ. ಇದರಿಂದ ದೇಹವನ್ನು ಡೀಟಾಕ್ಸ್ ಗೊಳಿಸುವುದು ಸುಲಭ. ಇದಕ್ಕಾಗಿ ನೀವು ನಿಮ್ಮ ನೀರಿನ ಬಾಟಲಿಗೆ ಹುಳಿ ಹಣ್ಣಿನ ಹೋಳು, ಸೌತೆಕಾಯಿ ಹೋಳು, ನಿಂಬೆ ಹೋಳು ಸೇರಿಸಿಕೊಂಡು, ಇಡೀ ದಿನ ನೀರು ಕುಡಿಯುತ್ತಿರಿ.
ಸಕಾಲಕ್ಕೆ ನೀವು ಫೇಶಿಯಲ್, ಹಾಲಿಗೆ ಅರಿಶಿನ ಬೆರೆಸಿ ಸೇವನೆ, ಆ್ಯಲೋವೇರಾ ಬಳಕೆ ಮಾಡುತ್ತಿರಬೇಕು. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದಲ್ಲಿ ಬಿಗಿತ ಇರುತ್ತದೆ, ಚರ್ಮ ಜೋತು ಬೀಳುವುದಿಲ್ಲ, ಸುಕ್ಕು ತಗುತ್ತದೆ.
ರಾತ್ರಿ ಮಲಗುವ ಮುನ್ನ ಮರೆಯದೆ ನೈಟ್ ಕ್ರೀಂ ಹಚ್ಚಿಕೊಳ್ಳಿ. ಮುಖಕ್ಕೆ ಧೂಳು, ಕಸ ತಗುಲದಂತೆ ಎಚ್ಚರವಹಿಸಿ. ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದ ತಕ್ಷಣ ಗುಲಾಬಿ ಜಲ ಬಳಸಿ ಮುಖ ತೊಳೆಯಿರಿ.
ಆದಷ್ಟೂ ಸಿಹಿ ಸೇವನೆ ಕಡಿಮೆ ಮಾಡಿ. ಆಗಾಗ ಹಣ್ಣುಗಳನ್ನು ಸೇವಿಸಿ. ಸಕ್ಕರೆ ಕಡಿಮೆ ಮಾಡಿದಷ್ಟೂ ನಿಮ್ಮ ಚರ್ಮ ಬೇಗ ಡೀಟಾಕ್ಸಿಫೈ ಆದೀತು.
ವ್ಯಾಯಾಮ ಎಂದೂ ತಪ್ಪಿಸಬೇಡಿ. ವ್ಯಾಯಾಮದಿಂದ ಬೆವರು ಹೊರಹೋದಂತೆ, ಟಾಕ್ಸಿನ್ ಪದಾರ್ಥ ತಂತಾನೇ ತಗ್ಗುತ್ತದೆ. ಬೆವರಿನ ತರಹ ಚರ್ಮವನ್ನು ಶುದ್ಧ ಮಾಡುವ ಪದಾರ್ಥ ಬೇರೊಂದಿಲ್ಲ!





