ಒಬ್ಬ ತಾಯಿ ಮಾಮಾ ಅರ್ಥ್ ಕೋಫೌಂಡರ್ಆದ ಬಗೆ

ತಾಯಿ ಆದ ನಂತರ ಗಜಲ್ ರಿಗೆ ಮೂಡಿದ ಒಂದು ಅದ್ಭುತ ಐಡಿಯಾದಿಂದ, ಆಕೆ ಮುಂದೆ ಇಡೀ ದೇಶದ ಅತಿ ಪ್ರಸಿದ್ಧ ವಾಣಿಜ್ಯೋದ್ಯಮಿ ಆದದ್ದು ಹೇಗೆ….!

ಇಂದಿನ ಹೆಣ್ಣು ಪ್ರತಿ ಕ್ಷೇತ್ರದಲ್ಲೂ ತನ್ನ ಯಶಸ್ಸಿನ ಧ್ವಜ ಹಾರಿಸುತ್ತಿದ್ದಾಳೆ. ಆಕೆ ಕೇವಲ ತನ್ನ ಮದರ್‌ ಹುಡ್‌ ಎಂಜಾಯ್ ಮಾಡುತ್ತಾ ತನ್ನ ಕುಟುಂಬ ನೋಡಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ಹೊರಗೆ ಹೋಗಿ ಪ್ರಗತಿಯ ಹೊಸ ಹೊಸ ಸೋಪಾನಗಳಿಗೆ ವ್ಯಾಖ್ಯಾನ ಬರೆಯುತ್ತಾಳೆ!

ವರ್ಕ್‌ ಲೈಫ್‌ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ, ತನ್ನ ಹೊಸ ಜೀವನದ ಹೊಸ ಹೆಜ್ಜೆಗಳತ್ತ ಗಮನ ಹರಿಸುತ್ತಾಳೆ.

ತನ್ನದೇ ಐಡೆಂಟಿಟಿಯಿಂದ ಹೆಸರು, ಖ್ಯಾತಿ, ಹಣ, ಯಶಸ್ಸು ಎಲ್ಲಾ ಗಳಿಸುತ್ತಾಳೆ. ಈ ರೀತಿ ತನ್ನ ಮಗುವಿನ ಮುಂದೆ ರೋಲ್ ಮಾಡೆಲ್ ‌ಆಗುತ್ತಾಳೆ. ಆಕೆ ಕೇವಲ ನೌಕರಿಗಳಲ್ಲಿ ಕಾಲ ಕಳೆಯದೆ ರಾಜಕೀಯ, ಕ್ರೀಡೆ, ಉದ್ಯಮ ಎಲ್ಲದರಲ್ಲೂ ಯಶಸ್ಸು ಕಾಣುತ್ತಿದ್ದಾಳೆ. ಇದೇ ಯಶಸ್ಸು, ಸೆಲ್ಫ್ ಮೇಡ್‌ ಮಹಿಳೆಯರ ಪಟ್ಟಿಯಲ್ಲಿ ಒಂದು ಸುಪ್ರಸಿದ್ಧ ಹೆಸರು ಎಂದರೆ ಗಜಲ್ ಅಲಘ್‌!

ಈಕೆ ತಾಯಿ ಆದ ನಂತರ ಒಂದು ಸ್ಟಾರ್ಟ್‌ ಅಪ್‌ ಆರಂಭಿಸಿದರು. ಅದು ಮುಂದೆ ಕೋಟ್ಯಂತರ ಗಳಿಸುವ ಕಂಪನಿ ಎಂದು ಸಾಬೀತಾಯಿತು. ತನ್ನ ಮಗುವಿಗೆ ಬೇಬಿ ಕೇರ್‌ ಪ್ರಾಡಕ್ಟ್ಸ್ ಖರೀದಿಸಿ, ಅದು ಸೆಟ್‌ ಆಗದಿದ್ದಾಗ, ಈ ಸ್ಟಾರ್ಟ್‌ ಅಪ್‌ ನ ವಿಚಾರ ಹೊಳೆಯಿತು. ಪತಿ ವರುಣ್‌ ಅಲಘ್‌ ಜೊತೆ ಬೆರೆತು, ಆಕೆ ಬೇಬಿ ಕೇರ್‌ ಬ್ರಾಂಡ್‌ `ಮಾಮಾ ಅರ್ಥ್‌’ ಕಂಪನಿಗೆ ನಾಂದಿ ಹಾಡಿದರು. ಇಂದು ಅದೇ ಬ್ರಾಂಡ್‌ ಇಡೀ ಭಾರತ ಮಾತ್ರವಲ್ಲದೆ, ವಿಶ್ವವಿಡೀ ಖ್ಯಾತಿ ಗಳಿಸಿದೆ! ಇದು ಏಷ್ಯಾದ ಮೊದಲ ಮೇಡ್ ಸೆಲ್ಫ್ ಪ್ರಮಾಣಿತ ಬ್ರಾಂಡ್‌ ಎನಿಸಿದೆ.

ಗಜಲ್ ಹೇಳುತ್ತಾರೆ, ಇವರ ದೊಡ್ಡ ಮಗ ಅಗಸ್ತ್ಯ ಸ್ಕಿನ್‌ ಎಗ್ಝಿಮಾದ ವಿಷಯ ಬಲು ಸೆನ್ಸಿಟಿವ್ ‌ಆಗಿತ್ತು. ಫಾರಿನ್‌ ಬೇಬಿ ಪ್ರಾಡಕ್ಟ್ಸ್ ಬಳಸುತ್ತಿದ್ದಂತೆ ಅವನಿಗೆ ರಾಶೆಸ್‌ ಹೆಚ್ಚಾಗುತ್ತಿತ್ತು. ಯಾವುದಾದರೂ ಸೇಫ್‌ ಪ್ರಾಡಕ್ಟ್ಸ್ ಸಿಕ್ಕಿ ಮಗುವಿನ ಈ ಕಷ್ಟ ದೂರ ಆಗಬಾರದೇ ಎಂದು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ಅಂಥ ಟಾಕ್ಸಿನ್‌ ಫ್ರೀ ಪ್ರಾಡಕ್ಟ್ಸ್ ಆಕೆಗೆ ಸಿಗಲೇ ಇಲ್ಲ. ಆಕೆ ಬೇರೆ ಬೇರೆ ವಿಭಿನ್ನ ವಿದೇಶೀ ಪ್ರಾಡಕ್ಟ್ಸ್ ಟ್ರೈ ಮಾಡಿದರೂ ಲಾಭ ಆಗಲಿಲ್ಲ. ತನಗೇ ಇಷ್ಟು ಕಷ್ಟ ಆಗುತ್ತಿರುವಾಗ ಸಾಧಾರಣ ಬಡ ತಾಯಂದಿರು ಇನ್ನೆಷ್ಟು ಕಷ್ಟಪಡುತ್ತಿರಬಹುದು ಎಂದು ಯೋಚಿಸಿದರು.

ಆಗ ಈ ದಂಪತಿಗಳಿಬ್ಬರೂ ಕೂಡಿ ರಿಸರ್ಚ್‌ ಶುರು ಮಾಡಿ, ಮಾರ್ಕೆಟ್‌ ರೇಟ್ಸ್ ಅರ್ಥ ಮಾಡಿಕೊಂಡು, ಎಲ್ಲಾ ಪೇರೆಂಟ್ಸ್ ಜೊತೆ ಮಾತುಕಥೆ ನಡೆಸಿದರು. ವೈದ್ಯರ ಸಲಹೆ ಪಡೆದರು. ಆಗ ಅವರು ನಮ್ಮ ದೇಶದಲ್ಲೇ ಸೇಫ್‌ಟಾಕ್ಸಿನ್‌ ಫ್ರೀ ಬೇಬಿ ಪ್ರಾಡಕ್ಟ್ಸ್ ಗೆ ಭಾರಿ ಡಿಮ್ಯಾಂಡ್‌ ಇದೆ ಎಂದು ಕಂಡುಕೊಂಡರು. ಆಗ ಅವರಿಗೆ ಹೊಳೆದದ್ದೇ ಈ ಸ್ಟಾರ್ಟ್‌ ಅಪ್‌ ಐಡಿಯಾ. ಎಲ್ಲಾ ಪೇರೆಂಟ್ಸ್ ಒಪ್ಪುವಂಥ, ಯಾವುದೇ ಟೆನ್ಶನ್‌ ಇಲ್ಲದೆ, ತಮ್ಮ ಮಕ್ಕಳ ಆರೈಕೆಗೆ ತೊಡಗಬಹುದಾಗಿದೆ. ಇದೇ ಯೋಚನೆ ಆಧರಿಸಿ 2016ರಲ್ಲಿ `ಮಾಮಾ ಅರ್ಥ್‌’ ಕಂಪನಿ ಶುರುವಾಯಿತು.

ಪರಿಶ್ರಮ ತಂದ ಪ್ರತಿಫಲ

ಮಾಮಾ ಅರ್ಥ್‌ ಎಂಬ ಈ ಬ್ರಾಂಡ್‌ ಬಿಲ್ ‌ಕುಲ್ ‌ಸೇಫ್‌, ಜೆಂಟ್‌, ಟಾಕ್ಸಿನ್‌ ಫ್ರೀ, ಬೇಬಿ ಕೇರ್‌ ಪ್ರಾಡಕ್ಟ್ಸ್ ಗೆ ಹೆಸರಾಗಿದೆ. ಇವರಿಗೆ `ಬಿಸ್‌ ನೆಸ್‌ ಟುಡೇ’ ಹಾಗೂ `ಫಾರ್ಚ್ಯೂನ್‌ ಇಂಡಿಯಾ ಮೋಸ್ಟ್  ಪವರ್‌ ಫುಲ್ ವುಮನ್‌-2023,’ `ಅಂಡರ್‌ 40,’ `ವ್ಯೂಮನ್‌ ಫಾಸ್ಟ್ ಫಾರ್ವರ್ಡ್ ವುಮನ್‌ ಅಚೀವರ್‌,’ `ಬಿಸ್‌ ನೆಸ್‌ ಟುಡೇ ಮೊಸ್ಟ್ ಪವರ್‌ ಫುಲ್ ವುಮನ್‌-2024,’ `ಬಿಸ್‌ ನೆಸ್‌ ವರ್ಲ್ಡ್ 40 ಅಂಡರ್‌ 40′ ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ.

ಚಿತ್ರಕಲೆಯಲ್ಲಿ ಅಮೋಘ ಅಭಿರುಚಿಯುಳ್ಳ ಗಜಲ್ ರ ಅನೇಕ ಪೇಂಟಿಂಗ್‌ ಪ್ರದರ್ಶನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಒಬ್ಬ ಕಾರ್ಪೊರೇಟ್‌ ಟ್ರೇನರ್‌, ಒಬ್ಬ ಕಲಾವಿದೆ, ಒಬ್ಬ ಯಶಸ್ವೀ ಗೃಹಿಣಿ/ತಾಯಿಯಾಗಿ ಮಾತ್ರವಲ್ಲದೆ, ಈಕೆ ಅಂತಾರಾಷ್ಟ್ರೀಯ ಐಡೆಂಟಿಟಿ ಗಿಟ್ಟಿಸಿದ ಮಹಿಳಾ ವಾಣಿಜ್ಯೋದ್ಯಮಿ ಎಂಬುದೂ ಮುಖ್ಯ. ಈಕೆ ಸೋನಿ ಚಾನೆಲ್ ನ `ಶಾರ್ಕ್‌ ಟ್ಯಾಂಕ್‌ ಸೀಸನ್‌,’ ಶೋನ ಹಲವು ಜಜ್‌ ಗಳಲ್ಲಿ ಒಬ್ಬರಾಗಿದ್ದರು! ಜೊತೆಗೆ ಈಕೆ `ಸ್ಟಾರ್ಟ್‌ ಅಪ್‌ ಕಮಿಟಿ 2024’ನ ಸಹಾಧ್ಯಕ್ಷರೂ ಆಗಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಈಕೆ ಕಲಿಕೆ, ಪಾಠಗಳಲ್ಲಿ ಸದಾ ನಂ.1. ಮುಖ್ಯವಾಗಿ ಆಟೋಟಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಲು ಚೂಟಿ ಆಗಿದ್ದರು. ಆಕೆ ಪ್ಯಿಫ್‌ ಕಾಂಬಿನೇಶನ್‌ ಆರಿಸಿಕೊಂಡು, ತಾಯಿ ತಂದೆಯರ ಎಂಜಿನಿಯರಿಂಗ್‌ ಆಸೆ ಪೂರೈಸಲು ಯತ್ನಿಸಿದರು. ಆದರೆ ಹೆಚ್ಚಿನ ಆಸಕ್ತಿ ಇರದ ಕಾರಣ ಅದು ಕೈಗೂಡದೆ, ತನ್ನ ಇಚ್ಛೆಯಂತೆ ಕಂಪ್ಯೂಟರ್ಸ್‌ಆರ್ಟ್ಸ್ ನಲ್ಲಿ ಮುಂದೆ ಬಂದರು.

ಗಜಲ್ ಹೇಳುತ್ತಾರೆ, “ನೀವೆಷ್ಟು ಹಾರ್ಡ್‌ ವರ್ಕ್‌ ಮಾಡುತ್ತಿದ್ದೀರಿ ಎಂಬುದು ಮುಖ್ಯವಲ್ಲ. ಯಾವುದರಲ್ಲಿ ನಿಮಗೆ ಆಳವಾದ ಆಸಕ್ತಿ ಇಲ್ಲವೇ ಅದರಲ್ಲಿ ಎಷ್ಟೇ ಕಷ್ಟಪಟ್ಟರೂ ಲಾಭವಿಲ್ಲ. ನಿಮಗೆ ಯಾವುದರಲ್ಲಿ ನಿಜವಾದ ಆಸಕ್ತಿ, ಶ್ರದ್ಧೆಗಳಿವೆಯೋ ಅದರಲ್ಲಿ ತುಸುವೇ ಕಷ್ಟಪಟ್ಟರೂ ಯಶಸ್ಸು ಗ್ಯಾರಂಟಿ! ಹೀಗಾಗಿ ನಾನು ಎಂಜಿನಿಯರಿಂಗ್‌ ಬಿಟ್ಟು ಕೇವಲ ಆರ್ಟ್ಸ್ ಕಂಪ್ಯೂಟರ್ಸ್‌ ನ್ನು ಮುಂದುವರಿಸಿದೆ!”

ಬಿಸ್ನೆಸ್ಗಿಂತ ಮೊದಲು

ಈಕೆ ಪದವಿ ಗಳಿಸುವುದರ ಜೊತೆ ಜೊತೆಯಲ್ಲೇ ಡಿಪ್ಲೊಮಾ ಸಹ ಮಾಡಿದರು. ಅದರೊಂದಿಗೆ ತಮ್ಮ ಮೊದಲ ನೌಕರಿಯಲ್ಲೂ ತೊಡಗಿದ್ದರು. ಅದು ಪಾರ್ಟ್‌ ಟೈಂ ಕೆಲಸ, ವೀಕೆಂಡ್‌ ಗೆ ಸೀಮಿತವಾಗಿತ್ತು. ಬೇಸಿಕಲಿ ಅದು ಕೋಆಪರೇಟಿವ್ ‌ಟ್ರೇನಿಂಗ್‌ ಆಗಿತ್ತು. ಈ ರೀತಿ ಗಜಲ್ ತನ್ನ ಕೆರಿಯರ್‌ ನ್ನು ಶುರು ಮಾಡಿದ್ದರು. ಅಲ್ಲಿ ಆಕೆ ಪ್ರೊಫೆಶನಲ್ ಎನ್‌ ವಾರ್ಯ್ನಮೆಂಟ್‌ ನಲ್ಲಿ ಹೇಗೆ ಕೆಲಸ ಮಾಡಬೇಕೆಂಬದನ್ನು ಕಲಿತರು. ಟೀಂ ಜೊತೆ ಬೆರೆತು ಹೇಗೆ ಟಾರ್ಗೆಟ್ಸ್ ಅಚೀವ್ ‌ಮಾಡಬಹುದು ಇತ್ಯಾದಿಗಳನ್ನು ಕಲಿತರು.

“ಕಾರ್ಪೊರೇಟ್‌ ಜಾಬ್‌ ನನಗೆ ಸ್ಟ್ರಕ್ಚರ್‌ಡಿಸಿಪ್ಲಿನ್‌ ಕಲಿಸಿತು. ಇಂದಿನ ಯಶಸ್ವೀ ಬಿಸಿನೆಸ್‌ಫೀಲ್ಡ್ ಗೆ ಇದು ಅತ್ಯಗತ್ಯ. ಕಾರ್ಪೊರೇಟ್‌ ಎಕ್ಸ್ ಪೀರಿಯೆನ್ಸ್ ನನಗೆ ಪ್ರಾಕ್ಟಿಕಲ್ ಥಿಂಕಿಂಗ್‌ ಕಲಿಸಿತು. ಹಂತ ಹಂತದ ಬಿಸ್‌ ನೆಸ್‌ ಪ್ರೊಸೆಸಿಂಗ್‌ ಎಷ್ಟು ಮುಖ್ಯ ಎಂದು ಕಲಿತೆ. ಅಪಾರ ಶ್ರದ್ಧೆಯಿಂದ ಮಾತ್ರ ಬಿಸ್‌ ನೆಸ್‌ ನಲ್ಲಿ ಗುರಿ ಮುಟ್ಟಲು ಸಾಧ್ಯ!” ಎನ್ನುತ್ತಾರೆ.

IMG_9085

ಗೃಹಿಣಿ ಉದ್ಯೋಗಸ್ಥ ವನಿತೆ ಆದದ್ದು

ಈ ಜರ್ನಿ ಖಂಡಿತಾ ಸುಲಭ ಆಗಿರಲಿಲ್ಲ. ಗಜಲ್ ಹೇಳುತ್ತಾರೆ, ಆಕೆ ಮಾಮಾ ಅರ್ಥ್‌ ಆರಂಭಿಸಿದಾಗ, ಮಗ ಬಹಳ ಚಿಕ್ಕವನಾಗಿದ್ದ. ಆ ವಯಸ್ಸಿನಲ್ಲಿ ಕೂಸಿಗೆ ಅಮ್ಮನ ಅಗತ್ಯ ಅತಿ ಹೆಚ್ಚಾಗಿರುತ್ತದೆ. ದಿನವಿಡೀ 24 ಗಂಟೆ ಸದಾ ಕೆಲಸದ ಕಡೆ ಗಮನ ಹರಿಸುತ್ತಾ, ಜೊತೆ ಜೊತೆಯಲ್ಲೇ ತಾಯಿಯ ಕರ್ತವ್ಯ ನಿರ್ವಹಿಸುವುದು ಬಲು ಚಾಲೆಂಜಿಂಗ್‌ ಆಗಿತ್ತು. ಎಷ್ಟೋ ಸಲ ಮೀಟಿಂಗ್‌ ಮಾಡುವಾಗ, ಜೊತೆಯಲ್ಲೇ ಮಗನನ್ನೂ ಕರೆದೊಯ್ದದ್ದೂ ಉಂಟು. ಎಷ್ಟೋ ಸಲ ತಾನು ಒಬ್ಬ ತಾಯಿಯಾಗಿ ಸರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೋ ಇಲ್ಲವೋ ಎಂಬ ಗಿಲ್ಟ್ ಕಾಡುತ್ತಿತ್ತು. ನಂತರ ಕ್ವಾಲಿಟಿ ಟೈಂ ಕ್ವಾಂಟಿಟಿಗಿಂತ ಬಲು ಮುಖ್ಯ ಎಂದು ಅರಿತರು.

ತಮ್ಮನ್ನು ತಾವು ಬಹಳಷ್ಟು ಸೆಲ್ಫ್ ಡೌಟ್ಸ್ ನಿಂದ ಹೊರಬರುವಂತೆ ಮಾಡಿಕೊಂಡರು. ಒಬ್ಬ ಉತ್ತಮ ತಾಯಿ ಎನಿಸಲು ಪರ್ಫೆಕ್ಷನ್‌ ಮುಖ್ಯವಲ್ಲ, ಬದಲಿಗೆ ಪ್ರೆಸೆಂಟ್‌ ಆಗಿರುವುದು ಮುಖ್ಯ. ಈ ಎಲ್ಲದಕ್ಕೂ ಒಂದು ಸ್ಟ್ರಾಂಗ್‌ ಸಪೋರ್ಟ್‌ ಸಿಸ್ಟಂ ಆಕೆಗೆ ಬಹಳ ನೆರವಾಯಿತು. ಈ ಸಪೋರ್ಟ್‌ ಅಂದ್ರೆ ಆಕೆಯ ಪತಿ, ಫ್ಯಾಮಿಲಿ ಹಾಗೂ ಟೀಂ. ಆಕೆ ಪ್ರಕಾರ, ವರ್ಕ್‌ ಲೈಫ್‌ ಬ್ಯಾಲೆನ್ಸ್ ಅಂದ್ರೆ ಅದು ಫಿಕ್ಸ್ಡ್ ಗೋಲ್ ‌ಅಲ್ಲ. ಇದು ಒಂದು ಎಲಾಲ್ಟಿಂಗ್‌ ಜರ್ನಿ, ಇದರಲ್ಲಿ ನಿಮಗೆ ಯಾವುದು ಸರಿಯೋ ಅದಕ್ಕೆ ತಕ್ಕಂತೆ ಕೆಲಸ ಮಾಡಿ.

ಹೆತ್ತವರ ಮಾರ್ಗದರ್ಶನವೇ ಆಧಾರ

ಗಜಲ್ ಚಂಡೀಗಢದ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಇವರ ತಂದೆ ಬಿಸ್‌ ನೆಸ್‌ ಮ್ಯಾನ್‌, ತಾಯಿ ಗೃಹಿಣಿ. ಇವರ ತಂದೆ ಪ್ರಕಾರ, ಬಿಸ್‌ ನೆಸ್‌ ಪ್ರಾಫಿಟ್‌ ಗಳಿಸುತ್ತಿದೆಯಾದರೆ, ಆಗ ಮಾತ್ರ ಮನೆಗೆ ಹಣ ಬರುತ್ತದೆ. ನನ್ನ ಪೇರೆಂಟ್ಸ್ ನನಗೆ ಸದಾ ಸ್ವತಂತ್ರವಾಗಿರುವ, ಸ್ವಾವಲಂಬಿಯಾಗಿರುವ ಗುಣ ಕಲಿಸಿದರು. ಅವರು ನನಗೆ ನೀಡಿದ ಮಾರ್ಗದರ್ಶನದ ಮೌಲ್ಯಗಳು, ನನ್ನ ಉದ್ಯಮದ ಪ್ರತಿ ನಿರ್ಧಾರದಲ್ಲೂ ಪ್ರತಿಫಲಿಸುತ್ತವೆ.

ನನ್ನ ತಂದೆ ಹೇಳುತ್ತಿದ್ದರು, ನೀನು ನಿನ್ನ ಕನಸು ನನಸಾಗಿಸಲು ಹಗಲುರಾತ್ರಿ ಹೋರಾಡುವ, ಆದರೆ ನಿನ್ನ ಮೌಲ್ಯಗಳನ್ನು ಎಂದೂ ಕಡೆಗಣಿಸಬೇಡ. ಅವರು ನನಗೆ ಪರಿಶ್ರಮ, ಪ್ರಾಮಾಣಿಕತೆ, ಡೆಡಿಕೇಶನ್‌ ಗಳ ಮೌಲ್ಯದ ಬಗ್ಗೆ ತಿಳಿಸಿಕೊಟ್ಟರು. ಇವೆಲ್ಲ ನನ್ನ ಪ್ರತಿ ನಿರ್ಧಾರದ ಹಿಂದೆ ಪ್ರಭಾವ ಬೀರುತ್ತವೆ. ಇಂದು ನಾನು ಏನೇ ಆಗಿದ್ದರೂ, ಅದರಲ್ಲಿ ನನ್ನ ಅಪ್‌ ಬ್ರಿಂಗಿಂಗ್‌, ಪೇರೆಂಟ್ಸ್ ವಿಚಾರಧಾರ ಇದ್ದೇ ಇದೆ. ಗ್ರಾಹಕರಿಗೆ ಸದಾ ಪ್ರಾಮಾಣಿಕರಾಗಿರುವುದು, ಗುಣಮಟ್ಟದ ಬಗ್ಗೆ ಎಂದೂ ಕಾಂಪ್ರಮೈಸ್‌ ಆಗದಿರುವುದು, ಪ್ರತಿದಿನ ಏನಾದರೂ ಹೊಸತನ್ನು ಕಲಿಯುವುದು.

ಆರ್ಟ್‌ ವರ್ಕ್‌ ನ ಕ್ರೇಜ್‌ ಆರ್ಟ್‌ ಎಂಬುದು ಈಕೆಯ ಪ್ಯಾಶನ್‌, ಪೇಂಟಿಂಗ್‌ ಒಂದು ವಿಧದ ಥೆರಪಿ ತರಹ. ಈಕೆ ಕ್ರಿಯೇಟಿವ್ ‌ಆಗಿ ಆ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ತಾನು ಕೆಲಸದಲ್ಲಿ ಎಷ್ಟೇ ಬಿಝಿ ಇರಲಿ, ಬಿಡುವಾದಾಗೆಲ್ಲ ಬೇಕಾದಷ್ಟು ಪೇಂಟಿಂಗ್‌ ಮಾಡುತ್ತಾರೆ. ಇವರಿಗೆ ತಿಳಿಸದೆಯೇ ಪತಿ ಇವರ ದಾಖಲಾತಿಯನ್ನು ನ್ಯೂಯಾರ್ಕ್‌ ನ ಆರ್ಟ್‌ ಅಕಾಡೆಮಿಯಲ್ಲಿ ಮಾಡಿಸಿಬಿಟ್ಟರು. ಅದು ಈಕೆಯ ಬದುಕಿನ ದೊಡ್ಡ ತಿರುವಾಯಿತು. ಇವರ ಹೆಚ್ಚಿನ ಆರ್ಟ್‌ ವರ್ಕ್‌ ಅಬ್‌ ಸ್ಟ್ರಾಕ್ಟ್ ಆಗಿರುತ್ತದೆ. ಇದರಲ್ಲಿ ಆಕೆ ವಿಭಿನ್ನ ಕಲರ್ಸ್‌ಟೆಕ್ಸ್ ಚರ್ಸ್‌ ಜೊತೆ ಪ್ರಯೋಗ ನಡೆಸುತ್ತಾರೆ. ಆಕೆ ಬ್ರಶ್‌ ಬದಲು ನೈಫ್‌ರೋಲರ್‌ ನಿಂದ ಕೆಲಸ ಮುಗಿಸುತ್ತಾರೆ.

ಆಕೆ ಪೇಂಟಿಂಗ್‌ ಶುರು ಮಾಡಿದಾಗೆಲ್ಲ ಇದರ ಫೈನಲ್ ರಿಸಲ್ಟ್ ಏನು ಎಂದು ಗೊತ್ತಿರುವುದಿಲ್ಲ. ಇದೊಂದು ನಿಧಾನವಾಗಿ ಅನ್‌ ಪೇಲ್ಡ್ ‌ಆಗುವ ಜರ್ನಿ. ಮೈಂಡ್‌ ಬಹಳ ಬಿಝಿ ಇರುವಾಗ, ಒಂದು ಖಾಲಿ ಕ್ಯಾನ್‌ ವಾಸ್‌ ಅವರಿಗೆ ಶಾಂತಿ ಒದಗಿಸುತ್ತದೆ, ಅದು ಹೊಸ ಐಡಿಯಾಸ್‌ ಗಾಗಿ ಸ್ಪೇಸ್‌ ಕ್ರಿಯೇಟ್‌ ಮಾಡುತ್ತದೆ.

ಮಕ್ಕಳನ್ನು ಸಾಕುವಿಕೆ

ಈಕೆಗೆ ಇಬ್ಬರು ಮಕ್ಕಳಿದ್ದಾರೆ, ಅಗಸ್ತ್ಯ  ಹಾಗೂ ಅಯಾನ್‌. ಈಕೆ ಪತಿ ಜೊತೆ ಚರ್ಚಿಸಿ ಮಕ್ಕಳ ಪಾಲನೆಪೋಷಣೆ ಕುರಿತಾಗಿ ನಿರ್ಧರಿಸುತ್ತಾರೆ. ರೆಸ್ಪೆಕ್ಟ್, ಆನೆಸ್ಟ್, ಕೈಂಡ್‌ ನೆಸ್‌ ಇತ್ಯಾದಿ. ಮಕ್ಕಳು ಇಂಡಿಪೆಂಡೆಂಟ್‌ ಆಗಿರಬೇಕು, ಪ್ರಶ್ನೆ ಕೇಳಬೇಕು, ಯಾವ ವಿಷಯ ಜಿಜ್ಞಾಸೆ ಹುಟ್ಟಿಸುತ್ತದೆ. ಅದನ್ನು ಚರ್ಚಿಸಬೇಕು. ತಮಗೆ ಯಾವುದು ಇಷ್ಟ ಎಂಬುದನ್ನೆಲ್ಲ ಹಿರಿಯರೆದುರು ಹಂಚಿಕೊಳ್ಳಬೇಕು.

ಇಂದಿನ ಆಧುನಿಕ ಸೋಶಿಯಲ್ ಮೀಡಿಯಾದ ಯುಗದಲ್ಲಿ, ಎಲ್ಲರೂ ತಮ್ಮ ಮಕ್ಕಳನ್ನು ಪರರ ಜೊತೆ ಹೋಲಿಸುವಾಗ, ಇವರು ಮಕ್ಕಳಿಗೆ ಮತ್ತೆ ಮತ್ತೆ ತಿಳಿಹೇಳುವುದು ಅಂದ್ರೆ, ನೀವು ನೀವಾಗಿ ನಿಮ್ಮ ಜರ್ನಿ ಬೆಳೆಸಿಕೊಳ್ಳಿ ಅಂತ.

ಸ್ಟ್ರೆಸ್‌ ಮ್ಯಾನೇಜ್‌ ಮೆಂಟ್‌ ಒಬ್ಬ ವಾಣಿಜ್ಯೋದ್ಯಮಿ ಹಾಗೂ ತಾಯಿ ಆದಕಾರಣ, ಅವರಿಗೂ ಬಹಳ ಸ್ಟ್ರೆಸ್‌ ಆಗುತ್ತದೆ. ಸ್ಟ್ರೆಸ್‌ ಡೀಲ್‌ ಮಾಡುವ ಆಕೆಯ ಉತ್ತಮ ವಿಧಾನ ಅಂದ್ರೆ ಮಕ್ಕಳೊಂದಿಗೆ ಮಕ್ಕಳಾಗಿ ಸಮಯ ಕಳೆಯುವುದು! ಬೆಳಗ್ಗೆ ಎದ್ದ ತಕ್ಷಣ ಮೊದಲ 15 ನಿಮಿಷ ಯಾರೊಂದಿಗೂ ಮಾತನಾಡುವುದಿಲ್ಲ, ಫೋನ್‌ ಸಹ ಚೆಕ್‌ ಮಾಡದೆ, ತಮಗೆ ತಾವೇ ಮಾತನಾಡಿಕೊಳ್ಳುತ್ತಾರೆ. ಪ್ರತಿ ವ್ಯಕ್ತಿ ತನಗೆ ತಾನೇ ಮಾತನಾಡಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ ಅಂತಾರೆ. ಅದರಿಂದ ಎಷ್ಟೋ ಕ್ಲಾರಿಟಿ ಸಿಗುತ್ತದೆ. ನೀವೇನು ಯೋಚಿಸುತ್ತಿದ್ದೀರಿ ಎಂದು ನಿಮಗೆ ಸ್ಪಷ್ಟ ತಿಳಿಯುತ್ತದೆ.

DSC09061

ಆಕೆ ಹೇಳುತ್ತಾರೆ, “ಬಿಸ್‌ ನೆಸ್‌ನನಗೆ ಕಲಿಸಿದ್ದು ಅಂದ್ರೆ, ಪ್ರತಿಯೊಂದೂ ನಮ್ಮ ಕಂಟ್ರೋಲ್ ‌ನಲ್ಲಿ ಇರುವುದಿಲ್ಲ. ಹೀಗಾಗಿ ಯಾವುದು ಕಂಟ್ರೋಲ್ ‌ನಲ್ಲಿದೆಯೋ ಅದರ ಮೇಲೆ ಫೋಕಸ್‌ ಮಾಡಬೇಕು. ದಿನ ಮುಗಿಯುವ ಹಂತದಲ್ಲಿ ನಾನು ಇದರ ಬಗ್ಗೆಯೇ ಯೋಚಿಸುತ್ತೇನೆ. ನಾನು ಇವತ್ತು ಏನು ಮಾಡಿದೆ, ಏನು ಮಾಡಬಾರದಿತ್ತು, ನಾಳೆ ಏನು ಮಾಡಬೇಕು ಇತ್ಯಾದಿ ಎಲ್ಲವನ್ನೂ ತರ್ಕಿಸುತ್ತೇನೆ. ಇಂಥ ವಿಚಾರ ವಿಮರ್ಶೆಯಿಂದ ನನಗೆ ಹಾಯಾಗಿ ನಿದ್ದೆ ಬರುತ್ತದೆ. ಪೌಷ್ಟಿಕ ಆಹಾರ ಸೇವಿಸುವುದರಿಂದ ಸ್ಟ್ರೆಸ್‌ ಮ್ಯಾನೇಜ್‌ ಮೆಂಟ್‌ ಸುಲಭವಾಗುತ್ತದೆ.”

ಮಕ್ಕಳಿಗಾಗಿ ಬೆಸ್ಟ್ ಗಿಫ್ಟ್

ಗಜಲ್ ರ ಪ್ರಕಾರ, ಒಬ್ಬ ಉದ್ಯೋಗಸ್ಥ ತಾಯಿ ತನ್ನ ಮಕ್ಕಳಿಗೆಂದು ಕೊಡಬಹುದಾದ ಅತ್ಯುತ್ತಮ ಬೆಸ್ಟ್ ಗಿಫ್ಟ್ ಎಂದರೆ ಒಬ್ಬ ಆದರ್ಶ ತಾಯಿ, ರೋಲ್ ಮಾಡೆಲ್ ಆಗಿರುವುದು! ಮಕ್ಕಳು ತಮ್ಮ ತಾಯಿ ಅಷ್ಟೊಂದು ಪರಿಶ್ರಮ ಪಡುತ್ತಿರುವುದನ್ನು ಕಂಡಾಗ, ಚಾಲೆಂಜೆ ಎದುರಿಸುವುದನ್ನು ನೋಡಿದಾಗ, ತಮ್ಮ ಕನಸುಗಳನ್ನು ನನಸಾಗಿಸಲು ತಾಯಿ ಹೆಣಗುತ್ತಿರುವುದನ್ನು ಗಮನಿಸಿದಾಗ ಅವರಿಗೆ ಒಂದು ಪವರ್‌ ಫುಲ್ ಮೆಸೇಜ್‌ ಸಿಗುತ್ತದೆ. ಹೆಣ್ಣು ತಾಯಿಯಾಗಿ ಮನಸ್ಸು ಮಾಡಿದರೆ, ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮತ್ತೊಂದು ಬೆಸ್ಟ್ ಗಿಫ್ಟ್ ಅಂದ್ರೆ ಕ್ವಾಲಿಟಿ ಟೈಂ! ಕ್ವಾಂಟಿಟಿ ಟೈಂ ಕೊಡಲಾಗದಿದ್ದರೂ, ಅವಕಾಶ ಸಿಕ್ಕಾಗೆಲ್ಲ ಮಕ್ಕಳೊಂದಿಗೆ ಫುಲ್ ಟೈಂ ಪ್ರೆಸೆಂಟ್‌ ಆಗಿರಬೇಕು ಅಂದ್ರೆ ಫೋನ್‌, ಲ್ಯಾಪ್‌ ಟಾಪ್‌, ಟೆನ್ಶನ್ಸ್ ಇತ್ಯಾದಿ ಬದಿಗಿಟ್ಟುಬಿಡಬೇಕು. ಮೂರನೆಯ ಗಿಫ್ಟ್ ಅಂದ್ರೆ ಸ್ವತಂತ್ರವಾಗಿರುವುದನ್ನು ಕಲಿಸುವಿಕೆ. ವರ್ಕಿಂಗ್‌ ಮದರ್ಸ್‌ ತನ್ನ ಮಕ್ಕಳಿಗೆ ತಮಗಾಗಿ ಸ್ಟಾಂಡ್‌ ತೆಗೆದುಕೊಳ್ಳುವುದು, ಜವಾಬ್ದಾರಿ ಹೊರುವುದು, ತಮ್ಮದೇ ಕನಸನ್ನು ನನಸಾಗಿಸಲು ಭರವಸೆ ಇಡುವುದು ಮುಂತಾದವನ್ನು ಕಲಿಸಬೇಕು.

ಒಬ್ಬ ವರ್ಕಿಂಗ್‌ ಮದರ್‌ ನ ಯಶಸ್ಸಿನ ಗುಟ್ಟು ಗಜಲ್ ರ ಪ್ರಕಾರ ಒಬ್ಬ ವರ್ಕಿಂಗ್‌ ಮದರ್‌ ನ ಯಶಸ್ಸಿನ ಅತಿ ದೊಡ್ಡ ಗುಟ್ಟು ಎಂದರೆ, ಸದಾ ಗಿಲ್ಟ್ ಫ್ರೀ ಆಗಿರುವುದು. ಹೆಂಗಸರು ಸಾಮಾನ್ಯವಾಗಿ ತಾವು ಪರ್ಫೆಕ್ಟ್ ಮದರ್‌ಪರ್ಫೆಕ್ಟ್ ಪ್ರೊಫೆಶನ್‌ ಎರಡೂ ಆಗಲು ಸಾಧ್ಯವಿಲ್ಲವಲ್ಲ ಎಂದು ಕೊರಗುತ್ತಿರುತ್ತಾರೆ. ಆದರೆ ಹೆಂಗಸರಾದ ನಾವು ಒಂದೇ ಸಲ ಎರಡೂ ದೋಣಿಗಳಲ್ಲಿ ಕಾಲಿಡುತ್ತೇವೆ ಎಂಬುದನ್ನು ಗುರುತಿಸಬೇಕು. ಬದಲಿಗೆ ಒಂದು ಅಚ್ಚುಕಟ್ಟಾದ ಸಪೋರ್ಟಿಂಗ್‌ ಸಿಸ್ಟಂ ರೆಡಿ ಮಾಡಿಕೊಳ್ಳಬೇಕು ಪತಿ, ಅತ್ತೆಮಾವ, ಪೇರೆಂಟ್ಸ್, ಫ್ರೆಂಡ್ಸ್ ಯಾವ ಹೆಲ್ಪರ್ಸ್‌. ನಮಗಾಗಿ ನಾವು ಒಂದಿಷ್ಟು ಟೈಂ ಮಾಡಿಕೊಳ್ಳುವುದನ್ನೂ ಮರೆಯಬಾರದು. ನಾವು ಖುಷಿಯಾಗಿ, ಆರೋಗ್ಯಕರವಾಗಿ ಇರದಿದ್ದರೆ, ನಾವು ಇತರರನ್ನು ಖುಷಿಯಾಗಿ ಇಟ್ಟುಕೊಳ್ಳಲಾಗದು. ಹಾಗೆಯೇ ಎಲ್ಲಾ ವಿಷಯಗಳನ್ನೂ ನಿಮ್ಮ ತಲೆಗೆ ಎಳೆದುಕೊಳ್ಳದೆ, ಪ್ರಯಾರಿಟೀಸ್‌ ನೀಡುವುದನ್ನು ನೆನಪಿಡಿ ಪ್ರತಿ ವಿಷಯದಲ್ಲೂ ಪರ್ಫೆಕ್ಷನಿಸ್ಟ್ ಆಗಿರಲೇಬೇಕು ಅಂತೇನಿಲ್ಲ. ಎಲ್ಲಕ್ಕಿಂತ ಯಾವುದು ಅತಿ ಮುಖ್ಯವೋ ಅದರ ಕಡೆ ನಿಗಾ ವಹಿಸಿ. ಸದಾ ಫ್ಲೆಕ್ಸಿಬಲ್ ಆಗಿರಿ ಹಾಗೂ ಅಡಾಪ್ಟ್ ಮಾಡಿಕೊಳ್ಳುವ ಗುಣ ಹೊಂದಿರಿ. ಎಲ್ಲಕ್ಕೂ ಮುಖ್ಯ, ನಿಮ್ಮ ಬಗ್ಗೆ ನಿಮಗೆ ಹಾಗೂ ನಿಮ್ಮ ನಿರ್ಧಾರಗಳ ಬಗ್ಗೆ 100% ಆತ್ಮವಿಶ್ವಾಸ ತುಂಬಿರಲಿ. ಮಕ್ಕಳೊಂದಿಗೆ ಕ್ವಾಲಿಟಿ ಟೈಂ ಕಳೆಯಿರಿ, ಅದರತ್ತ ಫೋಕಸ್‌ ಮಾಡಿ, ಕ್ವಾಂಟಿಟಿ ಟೈಂ ಮುಖ್ಯವಲ್ಲ.

ಬಿಸ್ನೆಸ್ಯಶಸ್ಸಿಗೆ ಅತ್ಯಗತ್ಯವಾದುದು

ಗಜಲ್ ರ ಪ್ರಕಾರ, ಬಿಸ್‌ ನೆಸ್‌ ಯಶಸ್ಸಿಗೆ ಎಲ್ಲಕ್ಕಿಂತ ಅತಿ ಅಗತ್ಯವಾದುದು ಎಂದರೆ ಕ್ಲಿಯರ್‌ ವಿಷನ್‌ ಹಾಗೂ ಪ್ಯಾಶನ್‌! ನೀವೇನು ಬಯಸುತ್ತೀರಿ, ಗ್ರಾಹಕರಿಗೆ ಏನು ಕೊಡಬಲ್ಲಿರಿ ಎಂಬುದು ನಿಮಗೆ ಸ್ಪಷ್ಟ ಗೊತ್ತಿರಬೇಕು. ಅದಕ್ಕಾಗಿ ಅತಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ನಿಮ್ಮ ಗ್ರಾಹಕರ ಅಗತ್ಯಗಳು, ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅವರಿಗಾಗಿ ವ್ಯಾಲ್ಯೂ ಕ್ರಿಯೇಟ್‌ ಮಾಡುವುದು ಸಹ ಅತಿ ಅಗತ್ಯ. ನಿಮ್ಮೊಂದಿಗೆ ಒಂದು ನುರಿತ ತಂಡ ಇರಲೇಬೇಕು. ಸರಿಯಾದ ಸಿಬ್ಬಂದಿ ನೇಮಕ ಬಲು ಮುಖ್ಯ. ಅವರು ಮುಂದುವರಿಯಲು ಅವಕಾಶ ಕೊಡಿ.

ನಿಮ್ಮ ಇನೋವೇಶನ್‌ ಗಳ ಕಡೆ ಸತತ ಫೋಕಸ್‌ ಕೊಡಿ, ಮಾರ್ಕೆಟ್‌ ಟ್ರೆಂಡ್ಸ್ ನ್ನು ಅರ್ಥ ಮಾಡಿಕೊಳ್ಳಿ, ಹೊಸ ಹೊಸ ಐಡಿಯಾಸ್‌ ಫಾಲೋ ಮಾಡುತ್ತಿರಿ. ಬಿಸ್‌ ನೆಸ್‌ ನಲ್ಲಿ ಅಡಾಪ್ಟಿಬಿಲಿಟಿ ಸಹ ಒಂದು ದೊಡ್ಡ ಶಕ್ತಿಯೇ ಸರಿ. ಏಕೆಂದರೆ ಮಾರ್ಕೆಟ್ ಸದಾ ಬದಲಾಗುತ್ತಲೇ ಇರುತ್ತದೆ. ಇದಕ್ಕೆ ತಕ್ಕಂತೆ ನಿಮ್ಮನ್ನು ನೀವು ಆಗಾಗ ಬದಲಾಯಿಸಿಕೊಳ್ಳುತ್ತಾ, ಅಪ್‌ ಡೇಟೆಡ್‌ ಆಗಿರಿ. ನೆಟ್‌ ವರ್ಕಿಂಗ್‌ ನ್ನು ಎಂದೂ ನಿರ್ಲಕ್ಷಿಸಬಾರದು, ಉತ್ತಮ ಕನೆಕ್ಷನ್ಸ್ ಹೊಂದಿರಿ, ಮೆಂಟರ್ಸ್‌ ನಿಂದ ಸದಾ ಕಲಿಯುತ್ತಿರಿ. ಕೊನೆಯಲ್ಲಿ ನೆನಪಿಡತಕ್ಕದ್ದು ಎಂದರೆ, ಪರ್ಸಿಸ್ಟೆನ್ಸಿ ಅಂದ್ರೆ ಸದಾ ಮುಂದುವರಿಯುತ್ತಲೇ ಇರಬೇಕು. ಎಷ್ಟೇ ಕಷ್ಟ ನಷ್ಟ ಎದುರಾಗಲಿ, ನಾವು ಮುಂದಿಟ್ಟ ಹೆಜ್ಜೆ ಹಿಂದಿಡಬಾರದು. ಫೇಲ್ಯೂರ್‌ ನಿಂದ ಪಾಠ ಕಲಿತು, ಮತ್ತೆ ಎದ್ದು ನಿಂತು ಯಶಸ್ವಿಯಾಗಿ ಸತತ ಹೋರಾಡುವುದೇ ನಿಜವಾದ ಯಶಸ್ಸು!

ಜಿ. ಪಂಕಜಾ

ಚಿತ್ರಕಲೆಯಲ್ಲಿ ಅಮೋಘ ಅಭಿರುಚಿಯುಳ್ಳ ಗಜಲ್ ರ ಅನೇಕ ಪೇಂಟಿಂಗ್‌ ಪ್ರದರ್ಶನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಒಬ್ಬ ಕಾರ್ಪೊರೇಟ್‌ ಟ್ರೇನರ್‌, ಒಬ್ಬ ಕಲಾವಿದೆ, ಒಬ್ಬ ಯಶಸ್ವೀ ಗೃಹಿಣಿ/ತಾಯಿಯಾಗಿ ಮಾತ್ರವಲ್ಲದೆ, ಈಕೆ ಅಂತಾರಾಷ್ಟ್ರೀಯ ಐಡೆಂಟಿಟಿ ಗಿಟ್ಟಿಸಿದ ಮಹಿಳಾ ವಾಣಿಜ್ಯೋದ್ಯಮಿ ಎಂಬುದೂ ಮುಖ್ಯ. ಕಾರ್ಪೊರೇಟ್ ಜಾಬ್‌ ನನಗೆ ಸ್ಟ್ರಕ್ಚರ್‌ಡಿಸಿಪ್ಲಿನ್‌ ಕಲಿಸಿತು. ಇಂದಿನ ಯಶಸ್ವೀ ಬಿಸಿನೆಸ್‌ಫೀಲ್ಡ್ ಗೆ ಇದು ಅತ್ಯಗತ್ಯ. ಕಾರ್ಪೊರೇಟ್‌ ಎಕ್ಸ್ ಪೀರಿಯೆನ್ಸ್ ನನಗೆ ಪ್ರಾಕ್ಟಿಕಲ್ ಥಿಂಕಿಂಗ್‌ ಕಲಿಸಿತು. ಹಂತ ಹಂತದ ಬಿಸ್‌ ನೆಸ್‌ ಪ್ರೊಸೆಸಿಂಗ್‌ ಎಷ್ಟು ಮುಖ್ಯ ಎಂದು ಕಲಿತೆ. ಅಪಾರ ಶ್ರದ್ಧೆಯಿಂದ ಮಾತ್ರ ಬಿಸ್‌ ನೆಸ್‌ ನಲ್ಲಿ ಗುರಿ ಮುಟ್ಟಲು ಸಾಧ್ಯ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ