ಒಬ್ಬ ತಾಯಿ ಮಾಮಾ ಅರ್ಥ್ ನ ಕೋಫೌಂಡರ್ ಆದ ಬಗೆ
ತಾಯಿ ಆದ ನಂತರ ಗಜಲ್ ರಿಗೆ ಮೂಡಿದ ಒಂದು ಅದ್ಭುತ ಐಡಿಯಾದಿಂದ, ಆಕೆ ಮುಂದೆ ಇಡೀ ದೇಶದ ಅತಿ ಪ್ರಸಿದ್ಧ ವಾಣಿಜ್ಯೋದ್ಯಮಿ ಆದದ್ದು ಹೇಗೆ....!
ಇಂದಿನ ಹೆಣ್ಣು ಪ್ರತಿ ಕ್ಷೇತ್ರದಲ್ಲೂ ತನ್ನ ಯಶಸ್ಸಿನ ಧ್ವಜ ಹಾರಿಸುತ್ತಿದ್ದಾಳೆ. ಆಕೆ ಕೇವಲ ತನ್ನ ಮದರ್ ಹುಡ್ ಎಂಜಾಯ್ ಮಾಡುತ್ತಾ ತನ್ನ ಕುಟುಂಬ ನೋಡಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ಹೊರಗೆ ಹೋಗಿ ಪ್ರಗತಿಯ ಹೊಸ ಹೊಸ ಸೋಪಾನಗಳಿಗೆ ವ್ಯಾಖ್ಯಾನ ಬರೆಯುತ್ತಾಳೆ!
ವರ್ಕ್ ಲೈಫ್ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ, ತನ್ನ ಹೊಸ ಜೀವನದ ಹೊಸ ಹೆಜ್ಜೆಗಳತ್ತ ಗಮನ ಹರಿಸುತ್ತಾಳೆ.
ತನ್ನದೇ ಐಡೆಂಟಿಟಿಯಿಂದ ಹೆಸರು, ಖ್ಯಾತಿ, ಹಣ, ಯಶಸ್ಸು ಎಲ್ಲಾ ಗಳಿಸುತ್ತಾಳೆ. ಈ ರೀತಿ ತನ್ನ ಮಗುವಿನ ಮುಂದೆ ರೋಲ್ ಮಾಡೆಲ್ ಆಗುತ್ತಾಳೆ. ಆಕೆ ಕೇವಲ ನೌಕರಿಗಳಲ್ಲಿ ಕಾಲ ಕಳೆಯದೆ ರಾಜಕೀಯ, ಕ್ರೀಡೆ, ಉದ್ಯಮ ಎಲ್ಲದರಲ್ಲೂ ಯಶಸ್ಸು ಕಾಣುತ್ತಿದ್ದಾಳೆ. ಇದೇ ಯಶಸ್ಸು, ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯಲ್ಲಿ ಒಂದು ಸುಪ್ರಸಿದ್ಧ ಹೆಸರು ಎಂದರೆ ಗಜಲ್ ಅಲಘ್!
ಈಕೆ ತಾಯಿ ಆದ ನಂತರ ಒಂದು ಸ್ಟಾರ್ಟ್ ಅಪ್ ಆರಂಭಿಸಿದರು. ಅದು ಮುಂದೆ ಕೋಟ್ಯಂತರ ಗಳಿಸುವ ಕಂಪನಿ ಎಂದು ಸಾಬೀತಾಯಿತು. ತನ್ನ ಮಗುವಿಗೆ ಬೇಬಿ ಕೇರ್ ಪ್ರಾಡಕ್ಟ್ಸ್ ಖರೀದಿಸಿ, ಅದು ಸೆಟ್ ಆಗದಿದ್ದಾಗ, ಈ ಸ್ಟಾರ್ಟ್ ಅಪ್ ನ ವಿಚಾರ ಹೊಳೆಯಿತು. ಪತಿ ವರುಣ್ ಅಲಘ್ ಜೊತೆ ಬೆರೆತು, ಆಕೆ ಬೇಬಿ ಕೇರ್ ಬ್ರಾಂಡ್ `ಮಾಮಾ ಅರ್ಥ್' ಕಂಪನಿಗೆ ನಾಂದಿ ಹಾಡಿದರು. ಇಂದು ಅದೇ ಬ್ರಾಂಡ್ ಇಡೀ ಭಾರತ ಮಾತ್ರವಲ್ಲದೆ, ವಿಶ್ವವಿಡೀ ಖ್ಯಾತಿ ಗಳಿಸಿದೆ! ಇದು ಏಷ್ಯಾದ ಮೊದಲ ಮೇಡ್ ಸೆಲ್ಫ್ ಪ್ರಮಾಣಿತ ಬ್ರಾಂಡ್ ಎನಿಸಿದೆ.
ಗಜಲ್ ಹೇಳುತ್ತಾರೆ, ಇವರ ದೊಡ್ಡ ಮಗ ಅಗಸ್ತ್ಯ ಸ್ಕಿನ್ ಎಗ್ಝಿಮಾದ ವಿಷಯ ಬಲು ಸೆನ್ಸಿಟಿವ್ ಆಗಿತ್ತು. ಫಾರಿನ್ ಬೇಬಿ ಪ್ರಾಡಕ್ಟ್ಸ್ ಬಳಸುತ್ತಿದ್ದಂತೆ ಅವನಿಗೆ ರಾಶೆಸ್ ಹೆಚ್ಚಾಗುತ್ತಿತ್ತು. ಯಾವುದಾದರೂ ಸೇಫ್ ಪ್ರಾಡಕ್ಟ್ಸ್ ಸಿಕ್ಕಿ ಮಗುವಿನ ಈ ಕಷ್ಟ ದೂರ ಆಗಬಾರದೇ ಎಂದು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ಅಂಥ ಟಾಕ್ಸಿನ್ ಫ್ರೀ ಪ್ರಾಡಕ್ಟ್ಸ್ ಆಕೆಗೆ ಸಿಗಲೇ ಇಲ್ಲ. ಆಕೆ ಬೇರೆ ಬೇರೆ ವಿಭಿನ್ನ ವಿದೇಶೀ ಪ್ರಾಡಕ್ಟ್ಸ್ ಟ್ರೈ ಮಾಡಿದರೂ ಲಾಭ ಆಗಲಿಲ್ಲ. ತನಗೇ ಇಷ್ಟು ಕಷ್ಟ ಆಗುತ್ತಿರುವಾಗ ಸಾಧಾರಣ ಬಡ ತಾಯಂದಿರು ಇನ್ನೆಷ್ಟು ಕಷ್ಟಪಡುತ್ತಿರಬಹುದು ಎಂದು ಯೋಚಿಸಿದರು.
ಆಗ ಈ ದಂಪತಿಗಳಿಬ್ಬರೂ ಕೂಡಿ ರಿಸರ್ಚ್ ಶುರು ಮಾಡಿ, ಮಾರ್ಕೆಟ್ ರೇಟ್ಸ್ ಅರ್ಥ ಮಾಡಿಕೊಂಡು, ಎಲ್ಲಾ ಪೇರೆಂಟ್ಸ್ ಜೊತೆ ಮಾತುಕಥೆ ನಡೆಸಿದರು. ವೈದ್ಯರ ಸಲಹೆ ಪಡೆದರು. ಆಗ ಅವರು ನಮ್ಮ ದೇಶದಲ್ಲೇ ಸೇಫ್‌ಟಾಕ್ಸಿನ್ ಫ್ರೀ ಬೇಬಿ ಪ್ರಾಡಕ್ಟ್ಸ್ ಗೆ ಭಾರಿ ಡಿಮ್ಯಾಂಡ್ ಇದೆ ಎಂದು ಕಂಡುಕೊಂಡರು. ಆಗ ಅವರಿಗೆ ಹೊಳೆದದ್ದೇ ಈ ಸ್ಟಾರ್ಟ್ ಅಪ್ ಐಡಿಯಾ. ಎಲ್ಲಾ ಪೇರೆಂಟ್ಸ್ ಒಪ್ಪುವಂಥ, ಯಾವುದೇ ಟೆನ್ಶನ್ ಇಲ್ಲದೆ, ತಮ್ಮ ಮಕ್ಕಳ ಆರೈಕೆಗೆ ತೊಡಗಬಹುದಾಗಿದೆ. ಇದೇ ಯೋಚನೆ ಆಧರಿಸಿ 2016ರಲ್ಲಿ `ಮಾಮಾ ಅರ್ಥ್' ಕಂಪನಿ ಶುರುವಾಯಿತು.





