– ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಕುತೂಹಲವನ್ನು ಚಿತ್ರತಂಡ ಮತ್ತಷ್ಟು ಹೆಚ್ಚಿಸಿದೆ. ಇದುವರೆಗೆ ಫಸ್ಟ್ ಲುಕ್ ಪೋಸ್ಟರ್‌ಗೆ ಮಾತ್ರ ಸೀಮಿತವಾಗಿದ್ದ ಚಿತ್ರತಂಡ, ಇದೀಗ ‘ಲೇಡಿಸ್ & ಲೇಡಿಸ್’ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಐವರು ಪ್ರಮುಖ ನಾಯಕಿಯರ ಪಾತ್ರಗಳ ಮೊದಲ ನೋಟವನ್ನು ಅನಾವರಣಗೊಳಿಸಿದೆ.
ಟೀಸರ್‌ನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಶಿ ಅವರ ವಿಭಿನ್ನ ಗೆಟಪ್‌ಗಳನ್ನು ಪರಿಚಯಿಸಲಾಗಿದೆ. ಪ್ರತಿಯೊಬ್ಬ ನಟಿಯನ್ನೂ ವಿಭಿನ್ನ ವ್ಯಕ್ತಿತ್ವ, ವಿಭಿನ್ನ ಶೈಲಿ ಮತ್ತು ಪ್ರಬಲ ಸ್ಕ್ರೀನ್ ಪ್ರೆಸೆನ್ಸ್‌ನೊಂದಿಗೆ ತೆರೆ ಮೇಲೆ ತೋರಿಸಲಾಗಿದ್ದು, ಚಿತ್ರದಲ್ಲಿ ಅವರ ಪಾತ್ರಗಳಿಗೆ ವಿಶೇಷ ಮಹತ್ವವಿರುವ ಸುಳಿವು ಸಿಕ್ಕಿದೆ.
‘ಡೇಂಜರ್’ ವಾರ್ನಿಂಗ್‌ನೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ ಗ್ಲಾಮರ್, ಆ್ಯಕ್ಷನ್ ಹಾಗೂ ಸ್ಟೈಲಿಷ್ ವಿಷ್ಯುಯಲ್ಸ್ ಪ್ರೇಕ್ಷಕರ ಗಮನ ಸೆಳೆಯುತ್ತವೆ. ‘ಮಕ್ಕಳು ದೂರವಿರಿ… ಪೋಷಕರೇ ನಿಮ್ಮ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ… ಅಜ್ಜ-ಅಜ್ಜಿಯರೂ ಎಚ್ಚರ… ನಿಮ್ಮ ರಿಸ್ಕ್’ ಎಂಬ ಎಚ್ಚರಿಕೆ ಚಿತ್ರದ ಡಾರ್ಕ್ ಟೋನ್‌ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಟೀಸರ್‌ನಲ್ಲಿ ಯಶ್, ‘ಲೇಡಿಸ್ & ಲೇಡಿಸ್… ಒಬ್ಬೊಬ್ಬರಾಗಿ ಬರ್ತೀರಾ? ಒಟ್ಟೊಟ್ಟಿಗೇ ಬರ್ತೀರಾ?’ ಎಂದು ಹೇಳುವ ಡೈಲಾಗ್ ಹೈಲೈಟ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ. ಉಗ್ರ ಲುಕ್‌ನಲ್ಲಿ ನಯನತಾರಾ, ಗ್ಲಾಮರಸ್ ಅವತಾರದಲ್ಲಿ ಕಿಯಾರಾ ಅಡ್ವಾಣಿ, ಅಗ್ರೆಸಿವ್ ಶೇಡ್‌ನಲ್ಲಿ ತಾರಾ ಸುತಾರಿಯಾ, ಗಟ್ಟಿತನದ ವ್ಯಕ್ತಿತ್ವದಲ್ಲಿ ರುಕ್ಮಿಣಿ ವಸಂತ್ ಹಾಗೂ ಕಣ್ಣಲ್ಲೇ ತೀವ್ರತೆ ತೋರಿಸುವ ಹುಮಾ ಖುರೇಶಿ ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.
ಮೊದಲಿಗೆ ಯಶ್ ಅವರ ಪಾತ್ರದ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದ ‘ಟಾಕ್ಸಿಕ್’ ಪ್ರಚಾರ, ಇದೀಗ ಐವರು ನಾಯಕಿಯರ ಪಾತ್ರ ಅನಾವರಣದೊಂದಿಗೆ ಹೊಸ ಹಂತ ತಲುಪಿದೆ. ಈ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ





