– ರಾಘವೇಂದ್ರ ಅಡಿಗ ಎಚ್ಚೆನ್.

ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್.

ಬೂದೂರು ಅವರ ನಿರ್ಮಾಣದಲ್ಲಿ K.S Krishna Kumar   ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಕನ್ನಡ ಚಿತ್ರದ ಶೀರ್ಷಿಕೆ “ಬೆಟಾಲಿಯನ್” ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

1001619282

ಮೊದಲನೇ ನಿರ್ಮಾಣದ “ಮಹಾನ್” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯಿಸಿದ್ದು ಎರಡನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ಕೈಜೋಡಿಸಿದ್ದು , ಮೂರನೇ ಚಿತ್ರವನ್ನು ಇಂದಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಬೆಟಾಲಿಯನ್ ಎಂಬ ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು,

1001619448

ಪ್ರತಿಭಾವಂತ ಹೊಸ ತಂತ್ರಜ್ಞರು ಚಿತ್ರತಂಡ ಸೇರಿಕೊಂಡಿದ್ದು ಈಗಾಗಲೇ ಚಿತ್ರಕ್ಕೆ ಒಂದಿಷ್ಟು ಕಲಾವಿದರ ಆಯ್ಕೆಯಾಗಿದ್ದು ಶೆಟ್ರು ಬೆಟಾಲಿಯನ್ ಇಂದ ಒಬ್ಬರು ಡಾಲಿ ಬೆಟಾಲಿಯನ್ ಇಂದ ಒಬ್ಬರು ಚಿತ್ರತಂಡ ಸೇರಿಕೊಂಡಿದ್ದು , ಇನ್ನುಳಿದ ಕಲಾವಿದರ ಆಯ್ಕೆಗಾಗಿ ಶೀಘ್ರದಲ್ಲಿ ಚಿತ್ರತಂಡ ಆಡಿಷನ್ ಕರೆ ನೀಡಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

1001619294

Alliance University School of Film making and performing arts ಸಹಕಾರದೊಂದಿಗೆ ಕರ್ನಾಟಕದ ವಿವಿಧ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರ ತಂಡಕ್ಕಿದ್ದು ತಾಂತ್ರಿಕ ಗುಣಮಟ್ಟ ಹಾಗೂ ಮನರಂಜನೆಗೆ ಸಮಾನ ಆದ್ಯತೆ  ನೀಡಿ ಚಿತ್ರವನ್ನು  ನಿರ್ಮಿಸಲಾಗುತ್ತಿದ್ದು ಶೀಘ್ರದಲ್ಲೇ ಚಿತ್ರದ ಮಹೂರ್ತ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ