ಮತ್ತೆ ಕಂಬ್ಯಾಕ್ ಆದ ಐಶು
ಬಾಲನಟಿಯಾಗಿ ಕಿರುತೆರೆಗೆ ಅಡಿಯಿಟ್ಟ ಅಮೂಲ್ಯಾ, `ಪವರ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದರು. `ಲಾಲಿಹಾಡು, ಮಂಡ್ಯ, ಸಜಿನಿ, ಸುಂಟರಗಾಳಿ, ಮಹಾರಾಜ, ನಮ್ಮ ಬಸವ, ಚಂದು, ಮಳೆಯಲಿ ಜೊತೆಯಲಿ, ಗಜಕೇಸರಿ, ಮುಗುಳು ನಗೆ, ನಾನು ನನ್ನ ಕನಸು' ಇನ್ನೂ ಮೊದಲಾದ ಚಿತ್ರಗಳ ಮೂಲಕ ಮನೆಮಾತಾದವರು. `ಚೆಲುವಿನ ಚಿತ್ತಾರ' ಸೂಪರ್ ಹಿಟ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯಾಗಿ ಐಶು ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಎಂಟು ವರ್ಷಗಳ ಕಾಲ ತೆರೆಯಿಂದ ಹಿಂದೆ ಸರಿದಿದ್ದ ಅಮೂಲ್ಯಾ ಇದೀಗ `ಪೀಕಬೂ' ಮೂಲಕ ಕಂಬ್ಯಾಕ್ ಆಗಿದ್ದಾರೆ.

ಬಿಂದಾಸ್ ಬೆಡಗಿ ಕಾರುಣ್ಯಾ ರಾವ್
ಸ್ಯಾಂಡಲ್ ವುಡ್ ನಟಿ ಕಾರುಣ್ಯಾ ರಾವ್ ಬಿಂದಾಸ್ ಲೈಫ್ ಸ್ಟೈಲ್ ನಿಂದಲೇ ಹೆಸರುವಾಸಿ ಆದರು. ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಾರುಣ್ಯಾ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. `ವಜ್ರಕಾಯ, ಕಿರುಗೂರಿನ ಗಯ್ಯಾಳಿಗಳು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ, ರಣಭೂಮಿ, ರೆಮೋ, ಪೆಟ್ರೋಮ್ಯಾಕ್ಸ್' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಕನ್ನಡ 4ರ ಸ್ಪರ್ಧಿಯೂ ಆಗಿದ್ದ ಕಾರುಣ್ಯಾ, ಸ್ವಂತ ಬಿಸ್ ನೆಸ್‌ನೋಡಿಕೊಳ್ಳುತ್ತಾರೆ.

ಕಾಂತಾರ ಚೆಲುವೆ ಪ್ಯಾನ್ ಇಂಡಿಯಾ
ಸ್ಟಾರ್ ಸ್ಯಾಂಡಲ್ ವುಡ್ ನಟಿ ಸಪ್ತಮಿ ಗೌಡ ಕನ್ನಡದ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿರುವ ಸಪ್ತಮಿಗೌಡ, ಡಾಲಿ ಧನಂಜಯ್ ಅಭಿನಯದ `ಪಾಪ್ ಕಾರ್ನ್‌ಮಂಕಿ ಟೈಗರ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. `ಕಾಂತಾರ' ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಈ ಚೆಲುವೆಗೆ ಇದೀಗ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. `ಯುವ' ಬಾಲಿವುಡ್‌ನ `ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ನಟಿಸಿರುವ ಸಪ್ತಮಿ, ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದು, ಟಾಲಿವುಡ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ತೋತಾಪುರಿಯ ಚೆಲುವೆ ಅದಿತಿ
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅದಿತಿ ಪ್ರಭುದೇವ್. `ಗುಂಡ್ಯಾನ ಹೆಂಡತಿ' ಎಂಬ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇರುವ, `ನಾಗಕನ್ನಿಕೆ' ಸೀರಿಯಲ್ ಮೂಲಕ ಮನೆ ಮಾತಾದರು. ಅಜಯ್ ರಾವ್ ರವರ `ಧೈರ್ಯಂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. `ಸಿಂಗ, ಬ್ರಹ್ಮಾಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ, ಮ್ಯಾಟ್ನಿ, ಅಂದೊಂದಿತ್ತು ಕಾಲ, ಛೂಮಂತರ್, ಮಾಫಿಯಾ,' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಲವ್ಲಿ ಸ್ಟಾರ್ ಪುತ್ರಿ ಉದಯೋನ್ಮುಖ ನಟಿ
ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ಹಾಗೂ ಲವ್ಲಿ ಸ್ಟಾರ್ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್. ಡಾಲಿ ಧನಂಜಯ್ ನಿರ್ಮಾಣದ `ಟಗರು ಪಲ್ಯ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟರು. ಓದಿನಲ್ಲೂ ಮುಂದಿರುವ ಅಮೃತಾ ಮುಂದೆ ಸಿನಿಮೋದ್ಯಮದಲ್ಲಿ ಹಲವಾರು ಆಫರ್ ಗಳಿವೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ಅಮೃತಾ, ತಮ್ಮ ಇನ್ ಸ್ಟಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಿನಿರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.





