ಹಾಡು ಎಂದರೆ ಜಾನಕಿ. ಭಾವನೆ ಎಂದರೆ ಜಾನಕಿ. ತಾಯಿಯ ಮಮತೆ ಎಂದರೆ ಜಾನಕಿ. ವಿರಹ ಎಂದರೆ ಜಾನಕಿ. ಭಕ್ತಿ ಎಂದರೆ ಜಾನಕಿ. ಹೀಗೆ ದಕ್ಷಿಣ ಭಾರತದ ಕೋಟ್ಯಂತರ ಸಂಗೀತಾಭಿಮಾನಿಗಳ ಮನಸ್ಸಿನಲ್ಲಿ ಈ ಮಾತುಗಳು ಸಹಜವಾಗಿ ಮೂಡುತ್ತವೆ.

ಏಕೆಂದರೆ ಕೆಲವರ ಧ್ವನಿ ಕೇವಲ ಹಾಡುವುದಿಲ್ಲ. ಅದು ನಮ್ಮ ಜೀವನದ ಭಾಗವಾಗುತ್ತದೆ. ನಮ್ಮ ಬಾಲ್ಯವನ್ನು ಜೋಗುಳವಾಗಿ ಕಾಪಾಡುತ್ತದೆ. ಯೌವನದಲ್ಲಿ ಪ್ರೇಮವಾಗಿ ಕಾಡುತ್ತದೆ. ಸಂಕಷ್ಟದ ಸಮಯದಲ್ಲಿ ಸಾಂತ್ವನ ನೀಡುತ್ತದೆ. ಭಕ್ತಿಯಲ್ಲಿ ದೇವರ ಮುಂದೆ ಕಣ್ಣೀರು ತರಿಸುತ್ತದೆ. ಅಂತಹ ಅಮರ ಕಂಠದ ಮಾಲಕಿ, ಭಾರತೀಯ ಚಿತ್ರಸಂಗೀತದ ಗಾನ ಕೋಗಿಲೆ, ಸ್ವರ ಮಾಂತ್ರಿಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ.

ಎಸ್. ಜಾನಕಿ ಇನ್ನಿಲ್ಲ…

ಈ ಒಂದು ಸಾಲಿನ ಸಂದೇಶವನ್ನು ಸ್ನೇಹಿತರೊಬ್ಬರಿಂದ ಪಡೆದ ಕ್ಷಣ, ಮನಸ್ಸು ಒಪ್ಪಲೇ ಇಲ್ಲ. ಏನು? ನಿಜವೇ? ಮತ್ತೊಮ್ಮೆ ಸುಳ್ಳು ಸುದ್ದಿಯೇ? ಎಂಬ ಅನುಮಾನದಿಂದ ತಕ್ಷಣವೇ ಅವರಿಗೆ ಮರುಸಂದೇಶ ಕಳುಹಿಸಿದ ನಂತರ ಸಾಮಾಜಿಕ ಜಾಲತಾಣಗಳು, ಸುದ್ದಿ ವಾಹಿನಿಗಳು ಮತ್ತು ವಿಶ್ವಾಸಾರ್ಹ ಮೂಲಗಳನ್ನು ಪರಿಶೀಲಿಸಿದಾಗಲೇ ಆ ಕಹಿ ಸತ್ಯವನ್ನು ಕೇಳಿ ಮನಸ್ಸು ಭಾರವಾಯಿತು. ಏಕೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಎಸ್. ಜಾನಕಿ ಅವರ ನಿಧನದ ಕುರಿತು ಅನೇಕ ಬಾರಿ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಪ್ರತಿಬಾರಿಯೂ ಜಾನಕಿಯವರೇ ಸ್ವತಃ ಮಾಧ್ಯಮಗಳ ಮುಂದೆ ಬಂದು, ನಾನು ಬದುಕಿದ್ದೇನೆ, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸುಳ್ಳು ಸುದ್ದಿಗಳಿಂದ ಬೇಸತ್ತ, ಮತ್ತೊಬ್ಬ ಮಹಾನ್ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೂಡ ಒಮ್ಮೆ, ಬದುಕಿರುವವರ ಸಾವಿನ ಸುದ್ದಿಯನ್ನು ಹರಡಿಸುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರ ಮನಸ್ಥಿತಿಯನ್ನೇ ಪ್ರಶ್ನಿಸಿದ್ದ ಘಟನೆ ಇನ್ನೂ ನಮ್ಮೆಲ್ಲರ ನೆನಪಿನಲ್ಲಿ ಹಸಿರಾಗಿಯೇ ಇದೆ.

ಆದರೆ ಈ ಬಾರಿ ಮಾತ್ರ ಆ ಸುದ್ದಿ ಸುಳ್ಳಾಗಿರದೇ, ತಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಾನ ಕೋಗಿಲೆ ಎಸ್. ಜಾನಕಿ ಅವರು 2026ರ ಜುಲೈ 11ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುದ್ದಿ ಅಧಿಕೃತವಾಗಿ ಹೊರ ಬೀಳುತ್ತಿದ್ದಂತೆಯೇ, ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತವೇ ದುಃಖದ ಮೌನದಲ್ಲಿ ಮುಳುಗಿತು. ಏಕೆಂದರೆ, ಅದು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ. ಒಂದು ಯುಗದ ಅಂತ್ಯವಾಗಿದೆ ಎಂದರೂ ತಪ್ಪಾಗದು.

ಆದರೆ ನಿಜವಾಗಿಯೂ ಜಾನಕಿಯಮ್ಮ ನಮ್ಮನ್ನು ಅಗಲಿದ್ದಾರೆಯೇ?

ಪ್ರತಿದಿನ ಬೆಳಿಗ್ಗೆ ದೇವರ ಮುಂದೆ ಕೇಳಿಬರುವ ಅವರ ಭಕ್ತಿಗೀತೆಗಳಲ್ಲಿ, ತಾಯಿಯ ಮಡಿಲಲ್ಲಿ ಮಗುವಿಗೆ ಹಾಡುವ ಜೋಗುಳಗಳಲ್ಲಿ, ಹಳೆಯ ರೇಡಿಯೋದಲ್ಲಿ ಮೊಳಗುವ ಮಧುರ ಗೀತೆಗಳಲ್ಲಿ, ಪ್ರೇಮಿಗಳ ನೆನಪಿನಲ್ಲಿ ಉಳಿದಿರುವ ಪ್ರೇಮಗಾನಗಳ ಮೂಲಕ ಅವರು ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿಯೇ ಇರುತ್ತಾರೆ.

ಪುತ್ರ ಶೋಕಂ ನಿರಂತರಂ, ಒಂದು ದುಃಖ ಇನ್ನೊಂದು ದುಃಖವನ್ನು ಕರೆತಂದಿತೇ?

ಈ ವರ್ಷದ ಆರಂಭದಲ್ಲಿ, ಜನವರಿ 22, 2026ರಂದು ಜಾನಕಿಯಮ್ಮನವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ನಿಧನರಾದರು. ಪುತ್ರ ಶೋಕಂ ನಿರಂತರಂ ಎನ್ನುವಂತೆ ಯಾವುದೇ ತಾಯಿಗೆ ತನ್ನ ಮಗನ ಅಗಲಿಕೆ ಜೀವನದ ಅತಿದೊಡ್ಡ ನೋವು. 88 ವರ್ಷದ ವಯಸ್ಸಿನಲ್ಲಿದ್ದ ಜಾನಕಿಯಮ್ಮನವರಿಗೆ ಈ ಆಘಾತವನ್ನು ಸಹಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಗಾಯನವೇ ಅವರ ಜೀವನವಾಗಿದ್ದರೂ, ಮಗನ ಅಗಲಿಕೆಯ ನಂತರ ಅವರು ನಿಧಾನವಾಗಿ ಸಾರ್ವಜನಿಕ ಜೀವನದಿಂದ ಸಂಪೂರ್ಣ ದೂರವಾದರು. ಆ ದುಃಖದಿಂದ ಅವರು ಹೊರಬರಲೇ ಇಲ್ಲ ಎನ್ನುವುದು ಅವರನ್ನು ಹತ್ತಿರದಿಂದ ಕಂಡವರ ಮಾತು. ಜೀವನದುದ್ದಕ್ಕೂ ಲಕ್ಷಾಂತರ ಜನರಿಗೆ ನೆಮ್ಮದಿ ನೀಡಿದ ಆ ಧ್ವನಿಗೆ, ತನ್ನ ಬದುಕಿನ ಕೊನೆಯ ದಿನಗಳಲ್ಲಿ ನೆಮ್ಮದಿ ಸಿಗಲಿಲ್ಲ. ಕೊನೆಗೆ ಮಗನ ಅಗಲಿಕೆಯ ನೋವಿನಲ್ಲೇ ತಾವೂ ಸಹ ಈ ಲೋಕಕ್ಕೆ ವಿದಾಯ ಹೇಳಿದರು. ಇದಕ್ಕೇ ಹೇಳುವುದು ವಿಧಿಯ ಆಟ ಎಷ್ಟು ವಿಚಿತ್ರ ಎಂದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ