ಗಾನಸರಸ್ವತಿ ಎಸ್. ಜಾನಕಿ ಅವರನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಖ್ಯಾತ ಗಾಯಕಿ ಎಂದೇ ಗುರುತಿಸಲಾಗುತ್ತದೆ. ಆದರೆ ಕನ್ನಡಿಗರ ಪಾಲಿಗೆ ಅವರು ಕೇವಲ ಗಾಯಕಿಯಲ್ಲ.  ನಮ್ಮ ಮನೆಯ ಸದಸ್ಯೆಯಂತಿದ್ದರು. ಅದಕ್ಕಿಂತಲೂ ವಿಶೇಷವೆಂದರೆ, ಅವರ ಜೀವನದ ಆರಂಭದ ಸಂಗೀತಯಾನಕ್ಕೂ, ಅಂತಿಮ ದಿನಗಳಿಗೂ ಸಾಕ್ಷಿಯಾದ ನಗರ ಮೈಸೂರು ಎಂಬುದು ಬಹುಶಃ ಅನೇಕರಿಗೆ ತಿಳಿದಿಲ್ಲ. ಕನ್ನಡದಲ್ಲಿ ತಮ್ಮ ಮೊದಲ ಹಾಡನ್ನೂ ಮೈಸೂರಿನಲ್ಲೇ ಹಾಡಿದ ಜಾನಕಮ್ಮ, ತಮ್ಮ ಜೀವನದ ಕೊನೆಯ ದಿನಗಳನ್ನೂ ಇದೇ ಸಾಂಸ್ಕೃತಿಕ ನಗರಿಯಲ್ಲಿ ಕಳೆಯುವುದರ ಮೂಲಕ ಮೈಸೂರಿನೊಂದಿಗೆ ಒಂದು ಅಳಿಸಲಾಗದ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡ ಗಾನಸರಸ್ವತಿಯ ಭಾವುಕ ಬದುಕಿನ ಮಧುರ ಸಂಬಂಧವನ್ನು ಮೆಲುಕು ಹಾಕೋಣ ಬನ್ನಿ

ಒಬ್ಬ ಅಭಿಮಾನಿಯ ನಿರೀಕ್ಷೆಯನ್ನು ಗುರುತಿಸಿದ ನಿರ್ಮಾಪಕ ಎಂ.ಪಿಶಂಕರ್

ಜೀವನದಲ್ಲಿ ಕೆಲವೊಂದು ಸಂಬಂಧಗಳಿಗೆ ರಕ್ತಸಂಬಂಧದ ಅಗತ್ಯವೇ ಇರುವುದಿಲ್ಲ. ಅವು ಹುಟ್ಟುವುದು ಪ್ರೀತಿ, ಗೌರವ, ನಿಷ್ಕಲ್ಮಷ ಅಭಿಮಾನ ಮತ್ತು ಮಾನವೀಯತೆಯಿಂದ. ಅಂತಹ ಅಪರೂಪದ ಸಂಬಂಧವೊಂದು ಮೂಡಿದ್ದು ಗಾನಸರಸ್ವತಿ ಎಸ್ಜಾನಕಿ ಮತ್ತು ಮೈಸೂರಿನ ನವೀನ್ ಎಂಬ ಯುವಕನ ನಡುವೆ. ಸುಮಾರು ಮೂರು ದಶಕಗಳ ಹಿಂದೆ ಕೇವಲ 13 ವರ್ಷದ ಬಾಲಕನಾಗಿದ್ದ ನವೀನ್, ತನ್ನ ಆರಾಧ್ಯ ಗಾಯಕಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂಬ ಕನಸನ್ನು ಹೊತ್ತಿದ್ದ. ಆ ದಿನಗಳಲ್ಲಿ ಜಾನಕಿ ಅವರು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗೆ ಆಗಾಗ್ಗೆ ಹಾಡಲು ಬರುತ್ತಿದ್ದರು.ಈ ವಿಷಯ ತಿಳಿದಿದ್ದ ಪುಟ್ಟ ನವೀನ್, ಗಂಟೆಗಟ್ಟಲೆ ಸ್ಟುಡಿಯೋ ಎದುರು ಕಾಯುತ್ತಿದ್ದ.ಅವನ ನಿರಂತರ ಕಾಯುವಿಕೆಯನ್ನು ಗಮನಿಸಿದ ಹಿರಿಯ ನಿರ್ಮಾಪಕ ಎಂ.ಪಿಶಂಕರ್, ಒಂದು ದಿನ ಅವನನ್ನು ಕರೆದು ವಿಚಾರಿಸಿದರು. ಆತನ ಅಭಿಮಾನವನ್ನು ನೋಡಿ ಮನಸೋತ ಶಂಕರ್ ಅವರು ಜಾನಕಿ ಅವರ ಚೆನ್ನೈ ಮನೆಯ ದೂರವಾಣಿ ಸಂಖ್ಯೆಯನ್ನು ಕೊಟ್ಟರು. ದೂರವಾಣಿಯಲ್ಲಿ ಮಾತನಾಡಿದ ಜಾನಕಿ ಅವರು, ಎದುರಿನವನು ಕೇವಲ 13 ವರ್ಷದ ಬಾಲಕ ಎನ್ನುವುದನ್ನೇ ಅರಿಯದೆ, “ಬನ್ನಿ” ಎಂದು ಪ್ರೀತಿಯಿಂದ ಆಹ್ವಾನಿಸಿದರು. ಆದರೆ ಆ ಕನಸನ್ನು ನನಸಾಗಿಸಲು ಅವನ ಬಳಿ ಹಣವಿರಲಿಲ್ಲ.

ತಾಯಿಯ ಚಿನ್ನ ಅಡವಿಟ್ಟು ಚೆನ್ನೈಗೆ ಹೊರಟ ಇಬ್ಬರು ಮಕ್ಕಳು

ಭೇಟಿಗೆ ಅವಕಾಶ ಸಿಕ್ಕಿತೇ ಹೊರತು…ಹೋಗಲು ಹಣವಿರಲಿಲ್ಲ. ಕೊನೆಗೆ ನವೀನ್, ಯಾರಿಗೂ ಹೇಳದೆ ತಾಯಿಯ ಚಿನ್ನಾಭರಣವನ್ನು ಅಡವಿಟ್ಟು ಹಣ ಹೊಂದಿಸಿಕೊಂಡು ತನ್ನ  ಸಹೋದರ ಪ್ರವೀಣ್ ಜೊತೆ ರೈಲು ಹತ್ತಿ ಚೆನ್ನೈಗೆ ಹೊರಟ. ಅಪರಿಚಿತ ನಗರದಲ್ಲಿ ದಿನವಿಡೀ ಹುಡುಕಾಡಿ ಕೊನೆಗೆ ಜಾನಕಿ ಅವರ ಮನೆ ತಲುಪಿದಾಗ, ಚಿತ್ರೀಕರಣ ಮುಗಿಸಿ ಮನೆಗೆ ಬಂದಿದ್ದ ಜಾನಕಮ್ಮ ಎದುರು ನಿಂತಿದ್ದದ್ದು ಕೇವಲ ಇಬ್ಬರು ಪುಟ್ಟ ಹುಡುಗರು. “ನಿಮ್ಮನ್ನು ನೋಡಲೆಂದೇ ಮೈಸೂರಿನಿಂದ ಬಂದಿದ್ದೇವೆ...” ಎಂಬ ಮಾತು ಕೇಳುತ್ತಿದ್ದಂತೆಯೇ ಜಾನಕಿ ಅವರ ಕಣ್ಣು ತುಂಬಿಕೊಂಡಿತು. ಆ ದಿನದಿಂದ ಆರಂಭವಾದ ಸಂಬಂಧವೇ… ಮುಂದೆ ತಾಯಿ-ಮಗನ ಸಂಬಂಧವಾಗಿ ಬೆಳೆದಿತು.

ಮೈಸೂರಿಗೆ ಬಂದಾಗಲೆಲ್ಲಾ ನವೀನ್ ಮನೆಗೇ

ಜಾನಕಿ ಅವರು ಮೈಸೂರಿಗೆ ಬಂದಾಗಲೆಲ್ಲಾ ನವೀನ್ ಅವರನ್ನು ಭೇಟಿಯಾಗುವುದು ತಪ್ಪುತ್ತಿರಲಿಲ್ಲ. ವರ್ಷಗಳು ಕಳೆಯುತ್ತಿದ್ದಂತೆ ಅವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ದೂರದ ಚೆನ್ನೈ ನಿಂದ ತಮ್ಮ ಸ್ವಂತ ಮಗನ ಮನೆಗೇ ಬರುವಂತೆಯೇ ಜಾನಕಿಯವರು ಕಳೆದ ಎರಡೂ ದಶಕಗಳಿಂದ ನವೀನ್ ಆವರ ಮನೆಗೆ ಬರುತ್ತಿದ್ದದ್ದಲ್ಲದೇ ತಿಂಗಳಾನುಗಟ್ಟಲೆ ಅವರ ಮನೆಯಲ್ಲೇ ಕುಟುಂಬದ ಸದಸ್ಯರಂತೆಯೇ ಇರುತ್ತಿದ್ದರು.  ಜಾನಕಿಯವರ  ಅಪ್ಪಟ್ಟ ಅಭಿಮಾನಿಯಾಗಿದ್ದ ನವೀನ್ ಸಹಾ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಜಾನಕಿಯವರ ಹೆಸರಿನಲ್ಲಿಯೇ ಫರ್ನಿಚರ್ ಅಂಗಡಿ ತೆರೆದು ಜೀವನವನ್ನು ನಡೆಸುತ್ತಿದ್ದರು..

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ