ಈ ದೀಪಾವಳಿಗೆ ನೀವು ಯಾವ ರೀತಿ ಸ್ಟೈಲಿಶ್ ಹಾಗೂ ಬ್ಯೂಟಿಫುಲ್ ಆಗಿ ಕಾಣಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು….
ಇಂದಿನ ಯುವ ಪೀಳಿಗೆಯ ಜೀವನಶೈಲಿ ಮತ್ತು ಅವರ ಹೆಚ್ಚುತ್ತಿರುವ ಗಾತ್ರದ ಕಾರಣದಿಂದಾಗಿ ಅವರು ಫ್ಯಾಷನ್ ಪ್ರಪಂಚದಿಂದ ಪ್ರತ್ಯೇಕವಾಗಿರಲು ಪ್ರಾರಂಭಿಸಿದ್ದಾರೆ. ಆದರೆ ಇದೊಂದು ಸಮಸ್ಯೆಯಲ್ಲ. ಇಂದು ಮಾರುಕಟ್ಟೆಯಲ್ಲಿ ನಾನಾ ಬಗೆಯ, ನಾನಾ ಗಾತ್ರದ ಬಟ್ಟೆ ಮತ್ತು ಆಭರಣಗಳು ಲಭ್ಯವಿವೆ. ಈ ದೀಪಾವಳಿಯಲ್ಲಿ ನಿಮ್ಮ ಸ್ಟೈಲ್ ವಿಶೇಷವಾಗಿರಲಿ, ನೀವು ಅವುಗಳನ್ನು ಸರಿಯಾಗಿ ಆರಿಸಿಕೊಳ್ಳಬೇಕು. ಅದು ನಿಮ್ಮನ್ನು ಎಲ್ಲರ ಪ್ರಶಂಸೆಗೆ ಅರ್ಹರನ್ನಾಗಿ ಮಾಡುತ್ತದೆ.
ವಾಸ್ತವವಾಗಿ, ಪ್ಲಸ್ ಸೈಜ್ ಮಹಿಳೆಯರಿಗೆ ಸ್ಟೈಲಿಂಗ್ ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಏಕೆಂದರೆ ಅವರು ಅನೇಕ ಬಾರಿ ತಾವು ಯಾವುದೇ ಹಬ್ಬ ಅಥವಾ ಸಂದರ್ಭದಲ್ಲಿ ಏನನ್ನು ಧರಿಸಬೇಕು ಎಂಬುದನ್ನೇ ಅರ್ಥ ಮಾಡಿಕೊಂಡಿರುವುದಿಲ್ಲ. ತಾವು ಸ್ಟೈಲಿಶ್ ಆಗಿ ಕಾಣಲು ಏನು ಮಾಡಬೇಕು ಎಂಬ ಬಗ್ಗೆ ಅರಿವು ಅವರಿಗಿರುವುದಿಲ್ಲ.
ಯಾವುದು ಇರುತ್ತದೋ ಅದಕ್ಕೆ ಹೊಂದಿಕೊಳ್ಳಲು ಬಯಸುತ್ತಾರೆ. ಅದು ಪಾದರಕ್ಷೆಗಳಿಂದ ಹಿಡಿದು ಬೇರೆ ಬೇರೆ ಪರಿಕರಗಳವರೆಗೆ ಎಲ್ಲದರ ಆಯ್ಕೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ.
ದೀಪಾವಳಿಯಲ್ಲಿ ಪ್ಲಸ್ ಸೈಜ್ ಮಹಿಳೆಯರು ಹೇಗೆ ಸ್ಟೈಲಿಶ್ ಮತ್ತು ಅತ್ಯಂತ ಸುಂದರವಾಗಿ ಕಾಣಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ :
ಬುದ್ಧಿವಂತಿಕೆಯಿಂದ ಆರಿಸಿ
ಪ್ಲಸ್ ಸೈಜ್ ಮಹಿಳೆಯರು ಎತ್ತರವಾಗಿ ಕಾಣುವಂತೆ ಸಹಾಯ ಮಾಡುವ ಉಡುಪುಗಳನ್ನು ಧರಿಸಬೇಕು. ಇದಕ್ಕಾಗಿ, ಅಗಲವಾದ ಲೆಗ್ ಪ್ಯಾಂಟ್, ಮಿಡಿ, ಮ್ಯಾಕ್ಸಿ, ಸ್ಕರ್ಟ್ ಇತ್ಯಾದಿಗಳನ್ನು ನಿಮ್ಮ ವಾರ್ಡ್ ರೋಬ್ ನಲ್ಲಿ ಸೇರಿಸಿಕೊಳ್ಳಬಹುದು.
ಈ ಮಹಿಳೆಯರು ಲೇಯರ್ ಸಹಾಯವನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಅದು ಮ್ಯಾಕ್ಸಿ ಡ್ರೆಸ್ ಆಗಿರಲಿ ಅಥವಾ ಹೈವೆಯ್ಸ್ಟ್ ಪ್ಯಾಂಟ್ ಆಗಿರಲಿ. ಅವುಗಳಲ್ಲಿ ಯಾವುದನ್ನಾದರೂ ಲೇಯರ್ ಗಳ ಮೇಲೆ ಹಾಕಬಹುದು. ಬಿಕಿನಿ ಟಾಪ್ ನ್ನು ಹೈವೆಯ್ಸ್ಟ್ ನೊಂದಿಗೆ ಸಹ ಧರಿಸಬಹುದು.
ನಿಮ್ಮ ಎದೆಯ ಭಾಗ ದಪ್ಪವಾಗಿದ್ದರೆ, ಡೀಪ್ ನೆಕ್ ಟಾಪ್ ಆಯ್ಕೆ ಮಾಡಿಕೊಳ್ಳಿ. ಇದರಿಂದ ನೆಕ್ ಲೆವೆಲ್ ಭಾರವಾಗಿ ಕಾಣಿಸುವುದಿಲ್ಲ. ತೋಳಿಲ್ಲದ ಶ್ರಗ್ ನೊಂದಿಗೆ ಬಿಕಿನಿ ಟಾಪ್ ನ್ನು ಲೇಯರ್ ಮಾಡುವುದು ಒಳ್ಳೆಯದು. ಆದರೆ ನೀವು ಅದರೊಂದಿಗೆ ಫ್ಲಾಟ್ ಇರುವ ಪಾದರಕ್ಷೆಗಳನ್ನು ಧರಿಸಬಹುದು. ಮ್ಯಾಕ್ಸ್ ಡ್ರೆಸ್ ನೊಂದಿಗೆ ಓಪನ್ ಟೋ ಹೀಲ್ ನ್ನು ಹಾಕಿಕೊಳ್ಳಬಹುದು.
ಪ್ಲಸ್ ಸೈಜ್ ಮಹಿಳೆಯರಿಗೆ ಸೀರೆ ಮತ್ತು ಸಮ್ಮಿಶ್ರಿತ ಉಡುಪುಗಳು ಚೆನ್ನಾಗಿ ಕಾಣುತ್ತವೆ. ಅಂತಹ ಉಡುಪಿನೊಂದಿಗೆ ಬೆಲ್ಟ್ ಧರಿಸಿ. ಅದು ನಿಮ್ಮ ಲುಕ್ ನ್ನು ಪರಿಪೂರ್ಣವಾಗಿಸುತ್ತದೆ. ಸಡಿಲವಾದ ಬಟ್ಟೆಗಳು ಪ್ಲಸ್ ಸೈಜ್ ಮಹಿಳೆಯರಿಗೆ ಸೂಕ್ತವಲ್ಲ. ಏಕೆಂದರೆ ಅದರಲ್ಲಿ ಅವರು ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಆದ್ದರಿಂದ ತಮ್ಮ ದೇಹಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.
ನೀವು ಶಾರ್ಟ್ ಡ್ರೆಸ್ ನೊಂದಿಗೆ ಉದ್ಧವಾದ ಪ್ರಿಂಟೆಡ್ ಸಾಲಿಡ್ ಬಣ್ಣದ ಶ್ರಗ್ ನ್ನು ಸಹ ಜೋಡಿಸಿಕೊಳ್ಳಬಹುದು. ಇದರೊಂದಿಗೆ ಹೀಲ್ಸ್ ಅಥವಾ ಸ್ನೀಕರ್ಸ್ ನ್ನು ಪಾದರಕ್ಷೆಗಳಾಗಿ ಧರಿಸಬಹುದು. ಇದರ ಹೊರತಾಗಿ, ತೋಳಿಲ್ಲದ ಉಡುಪಿನೊಂದಿಗಿ ಪೂರ್ಣ ತೋಳಿನ ಶ್ರಗ್ ನ್ನು ಜೋಡಿಸಿಕೊಳ್ಳಬಹುದು.
ನೀವು ಭಾರತೀಯ ಉಡುಪುಗಳನ್ನು ಇಷ್ಟಪಡುತ್ತಿದ್ದರೆ, ಹೈವೆಯ್ಸ್ಟ್ ಲೆಹಂಗಾ ಅಥವಾ ಡೀಪ್ ನೆಕ್ ಬ್ಲೌಸ್ ಧರಿಸುವುದು ಒಳ್ಳೆಯದು. ಇದು ನೀವು ದಪ್ಪವಾಗಿ ಕಾಣುವುದನ್ನು ಮರೆ ಮಾಚುತ್ತದೆ. ಇದಲ್ಲದೆ ನೀವು ಸೀರೆ ಧರಿಸಲು ಬಯಸಿದರೆ, ಬೆಲ್ಟ್ ಇರುವ ನೆಕ್ ಟಾಪ್ ಧರಿಸಿ. ಟ್ರಾಪಿಂಗ್ ನ್ನು ಸಡಿಲವಾಗಿಡಿ. ಕಪ್ಪು ಹೀಲ್ಸ್ ಅಥವಾ ಸ್ನೀಕರ್ಸ್ ಧರಿಸಬಹುದು. ಲೈಕ್ರಾ ಅಥವಾ ಸಿಂಥೆಟಿಕ್ ಫ್ಯಾಬ್ರಿಕ್ ಬಟ್ಟೆಯನ್ನು ಎಂದಿಗೂ ಧರಿಸಬೇಡಿ.
ಆಭರಣಗಳು ಹೇಗಿರಬೇಕು?
ಪ್ಲಸ್ ಸೈಜ್ ಮಹಿಳೆಯರು ಯಾವುದೇ ಉಡುಪಿನೊಂದಿಗೆ ಸರಿಯಾದ ಆಭರಣಗಳನ್ನು ಧರಿಸಿದಾಗ ಬಹಳ ಆಕರ್ಷಕವಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ತಮ್ಮ ಎಲ್ಲಾ ಆಭರಣಗಳನ್ನು ತೆಗೆದು ಕೆಲವು ಸಂದರ್ಭಗಳಲ್ಲಿ ಮಾತ್ರ ಧರಿಸುತ್ತಾರೆ. ಆಭರಣಗಳನ್ನು ಧರಿಸದಿರುವುದು ಸಹ ಅವರಿಗೆ ಹೆವಿ ಲುಕ್ ನೀಡುತ್ತದೆ. ಇದೀಗ ಚೋಕರ್ ಧರಿಸುವುದು ಟ್ರೆಂಡ್ ಆಗಿದೆ. ಅದು ಮಹಿಳೆಯರನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಪ್ಲಸ್ ಸೈಜ್ ಮಹಿಳೆಯರು ಸರಿಯಾದ ಸಂಯೋಜವೆಯೊಂದಿಗೆ ಸಹ ಅದನ್ನು ಧರಿಸಬಹುದು. ಈ ಮಹಿಳೆಯರು ತಮ್ಮ ದೇಹದ ಕಡಿಮೆ ಕೊಬ್ಬು ಇರುವ ಭಾಗಗಳನ್ನು ಹೈಲೈಟ್ ಮಾಡುವುದು ಮತ್ತು ಕೊಬ್ಬು ಹೆಚ್ಚಿರುವ ಭಾಗಗಳನ್ನು ಮರೆಮಾಡುವುದು ಉತ್ತಮ. ಇದು ಕಷ್ಟವಾದ ಕೆಲಸವೇನಲ್ಲ.
ಈ ನಿಟ್ಟಿನಲ್ಲಿ ತಜ್ಞರು ಹೇಳುವಂತೆ, ಪ್ರತಿಯೊಬ್ಬ ಮಹಿಳೆಗೂ ತನ್ನದೇ ಆದ ಸ್ಟೈಲ್ ಸ್ಟೇಟ್ ಮೆಂಟ್ ಇರುತ್ತದೆ. ಅದರಲ್ಲಿ ಅವಳು ಏನು ಧರಿಸುತ್ತಾಳೆ/ಧರಿಸಬಾರದು ಎಂಬುದು ಅವಳ ಸ್ವಂತ ಇಚ್ಛೆಯನ್ನು ಅವಲಂಬಿಸಿರುತ್ತದೆ. ಆದರೆ ಉಡುಪಿನೊಂದಿಗೆ ಆಭರಣಗಳ ಸರಿಯಾದ ಜೋಡಣೆಯನ್ನು ಮಾಡಿದರೆ, ನೋಡಲು ಬಹಳ ಆಕರ್ಷಕವಾಗಿರುತ್ತದೆ. ವಿಶೇಷವಾಗಿ ಪ್ಲಸ್ ಸೈಜ್ ಹೆಚ್ಚಿನ ಪ್ರಮಾಣದಲ್ಲಿ ಸ್ಲಿಮ್ ಲುಕ್ ನೀಡುತ್ತದೆ. ಅದು ನಿಮ್ಮ ಸೌಂದರ್ಯವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ನೀವು ಆಭರಣಗಳಿಗೆ ನೀಡುವಷ್ಟೇ ಸಮಯವನ್ನು ಬಟ್ಟೆಗಳಿಗೂ ನೀಡುವುದು ಅವಶ್ಯಕ.
ಇವನ್ನು ನೆನಪಿನಲ್ಲಿಡಿ
ನಿಮ್ಮ ಕೆಳಭಾಗದ ದೇಹ ದಪ್ಪವಾಗಿದ್ದರೆ, ಬೋಲ್ಡ್ ಬಣ್ಣದ ಆಭರಣಗಳನ್ನು ಆರಿಸಿಕೊಳ್ಳಿ. ಬ್ರೆಸ್ಟ್ ಹೆವಿ ಇರುವ ಮಹಿಳೆಯರು ಶಾರ್ಟ್ ನೆಕ್ ಪೀಸ್ ಗಳನ್ನು ಧರಿಸಬೇಕು. ನೆಕ್ ಪೀಸ್ ಉದ್ದ ಡ್ರೆಸ್ ನ ನೆಕ್ ಲೈನ್ ನೊಳಗೆ ಇರಬೇಕು ಎಂಬುದನ್ನು ನೆನಪಿನಲ್ಲಿ ಇಡಬೇಕು. ತುಂಬಾ ಚಿಕ್ಕದಾದ ನೆಕ್ಲೇಸ್ ಧರಿಸಬೇಡಿ.
ಬ್ರೆಸ್ಟ್ ಹೆವಿಯಾಗಿ ಇಲ್ಲದಿದ್ದರೆ, ಉದ್ದವಾದ ನೆಕ್ ಪೀಸ್ ಗಳನ್ನು ಧರಿಸಿದರೆ, ಬಹಳ ಚೆನ್ನಾಗಿ ಕಾಣುತ್ತವೆ. ಕುತ್ತಿಗೆ ಉದ್ದವಾಗಿ ಕಾಣುವಂತೆ ಮಾಡುವ ಉದ್ದ ಮತ್ತು ತೆಳುವಾದ ನೆಕ್ ವೇರ್ ನ್ನು ಆರಿಸಿಕೊಳ್ಳಿ.
ದಪ್ಪ ಕುತ್ತಿಗೆ ಹೊಂದಿರುವ ಮಹಿಳೆಯರು ಭಾರವಾದ, ಆಕರ್ಷಕ ಆಭರಣ ಧರಿಸುವುದನ್ನು ತಪ್ಪಿಸಬೇಕು. ಕಿವಿಗೆ ಭಾರವಾದ ಆಭರಣಗಳನ್ನು ಧರಿಸಿದ್ದರೆ, ತೆಳುವಾದ ಹಾರವನ್ನು ಧರಿಸಿ. ಕುತ್ತಿಗೆಗೆ ದೊಡ್ಡದಾದ ಆಭರಣಗಳನ್ನು ಧರಿಸಿದ್ದರೆ, ಸಣ್ಣ ಅಥವಾ ತೂಗಾಡುವ ಕಿವಿಯೋಲೆಗಳನ್ನು ಧರಿಸಿ.
ಎತ್ತರವಿರುವ ಪ್ಲಸ್ ಸೈಜ್ ಮಹಿಳೆಯರು ತಮ್ಮ ಉದ್ದ ಮತ್ತು ದಪ್ಪ ತೋಳುಗಳಿಂದ ಗಮನ ಬೇರೆಡೆ ಸೆಳೆಯಲು ಫಂಕಿ ಬ್ರೇಸ್
ಲೆಟ್ ಹಾಕಿಕೊಳ್ಳಿ.
ನಿಮ್ಮ ಬಳಿ ಅನೇಕ ಆಭರಣಗಳಿದ್ದರೂ, ಎಲ್ಲವನ್ನೂ ಒಂದೇ ಬಾರಿಗೆ ಹಾಕಿಕೊಳ್ಳಬೇಡಿ. ಬೆಳಗ್ಗೆ ಅಥವಾ ಸಂಜೆ ಆಚರಣೆಗಳಿಗೆ ಅನುಗುಣವಾಗಿ ಅವುಗಳನ್ನು ಪ್ರತ್ಯೇಕವಾಗಿ ಧರಿಸುವುದು ಉತ್ತಮ.
ತುಂಬ ಹೆವಿ ಸೀರೆ ಅಥವಾ ಲೆಹಂಗಾ ಜೊತೆಗೆ ಹಗುರವಾದ ಆಭರಣಗಳನ್ನು ಧರಿಸಿ. ಇದು ನಿಮ್ಮ ದೇಹ ಅಗಲವಾಗಿ ಕಾಣದಂತೆ ಮಾಡುತ್ತದೆ. ಬಹಳ ಚಿಕ್ಕದಾದ ಪರ್ಸ್ ಖರೀದಿಸಬೇಡಿ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀವು ಪರ್ಸ್ ಖರೀದಿಸಬೇಕು. ನಿಮ್ಮ ಸೊಂಟದ ಅಗಲವನ್ನು ಮರೆಮಾಡಲು ಟೋಟ್ ಬ್ಯಾಗ್ ಖರೀದಿಸಿ. ನಿಮ್ಮ ಲುಕ್ ಸುಂದರವಾಗಿಸಿಕೊಳ್ಳಲು ಯಾವಾಗಲೂ ಆ್ಯಕ್ಸೆಸರೀಸ್ ಗಳನ್ನು ಹಗುರಾಗಿಸಿಕೊಳ್ಳಿ.
– ಸುಮಾ ಜಿ.





