ಕೇವಲ 15ರ ಹರೆಯದ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸ್ಟಾರ್ ಸಿಂಡ್ರೆಲಾ ದಾಸ್ ರ ಮುಂದಿನ ಗುರಿ ಒಲಿಂಪಿಕ್ ನಲ್ಲಿ ಸ್ವರ್ಣಪದಕ ಗೆಲ್ಲುವುದಾಗಿದೆ! ಆಕೆ ತನ್ನ ಯಶಸ್ಸು, ಸಾಧನೆ, ಕನಸುಗಳ ಕುರಿತು ಏನು ಹೇಳಿದ್ದಾರೆ ಎಂದು ವಿವರವಾಗಿ ಗಮನಿಸೋಣವೇ…..?
ಕೋಲ್ಕತಾ, ದ.ಬಂಗಾಳ ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಹೆಸರನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆಯ ಸಾಧನೆ ಈಕೆಯದು. ಈ ಸಲ ಆಕೆಯ ಗುರಿ ಮುಂದಿನ ಒಲಿಂಪಿಕ್ ನಲ್ಲಿ ಸ್ವರ್ಣಪದಕ ಗೆಲ್ಲುವುದಾಗಿದೆ. ಒಂದೊಂದೇ ಹೆಜ್ಜೆ ಇಡುತ್ತಾ ಈಕೆ ಅದರತ್ತ ಹೊರಟಿದ್ದಾರೆ. ಹೀಗಾಗಿ ಈಗಿನಿಂದಲೇ ಇದರ ತಯಾರಿ ಆರಂಭಿಸಿದ್ದಾರೆ. ತನ್ನ ಬಿಡುವಿರದ ದಿನಚರಿ ಮಧ್ಯೆ, ಕೇವಲ 15ರ ಹರೆಯದ, ಕೋಲ್ಕತಾ ಮೂಲದ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸ್ಟಾರ್ ಸಿಂಡ್ರೆಲಾ ದಾಸ್ ತಮ್ಮ ಸಾಧನೆ, ಕನಸು, ಯಶಸ್ಸಿನ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.
ನೀವು ನಿಮ್ಮ ಟೇಬಲ್ ಟೆನಿಸ್ (ಟಿಟಿ) ಕೆರಿಯರ್ ನ್ನು ಶುರು ಮಾಡಿದ್ದು ಹೇಗೆ?
ನಾನು 4 ವರ್ಷದವಳಿದ್ದಾಗಲೇ ಟಿಟಿ ರಾಕೆಟ್ ಹಿಡಿಯುವುದನ್ನು ಕಲಿತೆ. ನನ್ನ ತಂದೆ ಬಳಿ ಅಂಥ ಒಂದು ರಾಕೆಟ್ ಇತ್ತು, ಅದರಿಂದ ಆಡುವುದು ನನಗೆ ಬಲು ಇಷ್ಟವಾಗುತ್ತಿತ್ತು. ಗಂಟೆಗಟ್ಟಲೆ ಗೋಡೆಗೆ ನಾನು ಬಾಲ್ ಹೊಡೆಯುತ್ತಿದ್ದೆ. ಈ ರೀತಿ ನಾನು ಅಭ್ಯಾಸ ಶುರು ಮಾಡಿದೆ. ನಂತರ ನನ್ನ ಹೆತ್ತವರಾದ ಸುಶ್ಮಿತಾ ಸುಪ್ರಿಯ್ ನನ್ನನ್ನು ಇಲ್ಲಿನ ಒಂದು ಲೋಕಲ್ ಟಿಟಿ ಕ್ಲಬ್ ಗೆ ಸೇರಿಸಿದರು. ಜೊತೆಗೆ ನಾನು ಈಜು, ಚಿತ್ರಕಲೆ, ಗಾಯನ, ನೃತ್ಯಾಭ್ಯಾಸ ನಡೆಸುತ್ತಾ ಟಿಟಿ ಕಲಿಯತೊಡಗಿದೆ. ನಾನು 8ರ ಹರೆಯದಲ್ಲಿ ಇಲ್ಲಿನ ಒಂದು ಲೋಕಲ್ ಟಿಟಿ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡೆ, ಚಾಂಪಿಯನ್ ಎನಿಸಿದೆ! ಇದು ಜೂನಿಯರ್ ಮಟ್ಟದ ಟೂರ್ನಮೆಂಟ್ ಆಗಿತ್ತು, ಹೀಗಾಗಿ ಇದರಲ್ಲಿ ಯಾವುದೇ ಲಿಂಗಭೇದ ತಾರತಮ್ಯ ಇರಲಿಲ್ಲ. ನಾನು ಹುಡುಗ/ಹುಡುಗಿ ಇಬ್ಬರ ಜೊತೆಯೂ ಪೈಪೋಟಿ ನಡೆಸಿದೆ. ಆ ಸ್ಪರ್ಧೆ ನಿಜಕ್ಕೂ ನನ್ನ ಜೀವನ ಬದಲಾಯಿಸಿತು. ಆ ದಿನ ನಾನು ಮನೆಗೆ ಬಂದು `ಈ ಆಟ ನನಗೆ ಬಲು ಇಷ್ಟ!’ ಎಂದು ಹೇಳಿದೆ.

ನಿಮ್ಮ ಕೆರಿಯರ್ ಆರಂಭಿಸಲು ಪ್ರೇರಣೆ ನೀಡಿದವರು ಯಾರು?
ನಾನು 9ರ ಹರೆಯದಲ್ಲಿ ನನ್ನ ಕೋಚ್ ಸೌಮ್ಯ ದೀಪ್ ರಾಯ್ ಹಾಗೂ ಪಾಲಮೀ ಘಟಕ್ ಇಬ್ಬರಿಂದಲೂ ತರಬೇತಿ ಪಡೆದೆ. ಅವರ ಮಾರ್ಗದರ್ಶನದಲ್ಲಿ ಈ ಆಟ ನನ್ನ ಬದುಕಿನಲ್ಲಿ ಮಹತ್ವಪೂರ್ಣ ತಿರುವು ಪಡೆಯಿತು. ಅವರುಗಳ ಪ್ರೋತ್ಸಾಹ, ಮಾರ್ಗದರ್ಶನ, ಸಕಾರಾತ್ಮಕ ದೃಷ್ಟಿಕೋನಗಳಿಂದ ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಮೂಡಿತು. ಆಗ ನಾನು, ಈ ಆಟವನ್ನು ಕೇವಲ ಮನರಂಜನೆಗೆ ಮಾತ್ರವಲ್ಲದೆ, ಒಬ್ಬ ಪ್ರೊಫೆಶನಲ್ ಕ್ರೀಡಾಪಟುವಾಗಲು ದಾರಿ ತೋರಿತು. ಇದರಿಂದ ದೊಡ್ಡ ಕನಸುಗಳನ್ನು ಕಂಡೆ. ನನ್ನನ್ನು ನಾನು ಇಡಿಯಾಗಿ ಈ ಆಟಕ್ಕೆ ಅರ್ಪಿಸಿಕೊಂಡೆ. ಅಂತಾರಾಷ್ಟ್ರೀಯ ಕೋಚ್ ವಾಂಗ್ ಮನ್ಯು ಈಗ ನನ್ನ ಆದರ್ಶ ಗುರುಗಳಲ್ಲಿ ಒಬ್ಬರು.
ಈ ಕ್ರೀಡಾಲೋಕದಲ್ಲಿ ನೀವು ಯಶಸ್ಸು ಪಡೆದದ್ದು ಹೇಗೆ?
ನಾನು ಹಲವಾರು ಅಂತಾರಾಷ್ಟ್ರೀಯ ಟಿಟಿ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ವಿಶ್ವಮಟ್ಟದಲ್ಲಿ ನಾನು 7 ಸ್ವರ್ಣ, 8 ರಜತ, 7 ಕಂಚಿನ ಪದಕ ಪಡೆದಿದ್ದೇನೆ. ಇತ್ತೀಚೆಗೆ ನಾನು ಕಾಠ್ಮಂಡುವಿನಲ್ಲಿ ದ. ಏಷ್ಯಾ ಕ್ಷೇತ್ರದ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ಟೀಂ ಸ್ಪರ್ಧೆಯಲ್ಲಿ, ಟೀಂ ಇಂಡಿಯಾಗಾಗಿ ಸ್ವರ್ಣ ಪದಕ ಸಹ ಗೆದ್ದೆ! ಹೋಂ ಸರ್ಕ್ಯೂಟ್ ನಲ್ಲಿ ನಾನು ರಾಷ್ಟ್ರೀಯ ರಾಂಕಿಂಗ್ ಸ್ಪರ್ಧೆಗಳಲ್ಲಿ ಹಲವು ಪೋಡಿಯಂ ಫಿನಿಶ್ ಜೊತೆ ಸತತ ಉತ್ತಮ ಪ್ರದರ್ಶನ ನೀಡಿದ್ದೇನೆ. ನಾನು `ಅಂಡರ್-17 ಗರ್ಲ್ಸ್ ಸಿಂಗಲ್ಸ್’ (2023)ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಆದೆ. ನಾನು ಸೀನಿಯರ್ ನ್ಯಾಶನಲ್ಸ್ (2024)ನಲ್ಲಿ ಕಂಚಿನ ಪದಕ ಗೆದ್ದು ನನ್ನ ಐಡೆಂಟಿಟಿ ಸ್ಥಾಪಿಸಿದೆ! ನಾನು ಆ ವರ್ಷದ ಎಲ್ಲಕ್ಕಿಂತ ಉತ್ತಮ ಆಟಗಾರ್ತಿ ಎಂದು `ಮಾಸ್ಟರ್ ವರ್ಲ್ಡ್ ಟ್ರೋಫಿ’ಯಿಂದಲೂ ಸನ್ಮಾನಿತಳಾದೆ. ಇತ್ತೀಚೆಗಷ್ಟೆ `ಕೋಲ್ಕತಾ ಜರ್ನಲಿಸ್ಟ್ ಕ್ಲಬ್’ ನನಗೆ ರಜತ ಪದಕವಿತ್ತು ಸನ್ಮಾನಿಸಿತು.

ವರ್ತಮಾನದಲ್ಲಿ, ನಾನು ಭಾರತದಲ್ಲಿ `ಅಂಡರ್-17′ ಹಾಗೂ `ಅಂಡರ್-19′ ಹುಡುಗಿಯರ ಶ್ರೇಣಿಯಲ್ಲಿ ನಂ.1 ಹಾಗೂ ಮಹಿಳಾ ವರ್ಗದಲ್ಲಿ ನಂ.9 ಎನಿಸಿದ್ದೇನೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ, ನನ್ನ ವಿಶ್ವ ರಾಂಕಿಂಗ್-15 (ಅಂಡರ್-17 ಮಹಿಳಾ), 25 (ಅಂಡರ್-19 ಮಹಿಳಾ) ಹಾಗೂ 182 (ಮಹಿಳಾ) ಎನಿಸಿದ್ದೇನೆ.
ನೀವು ನಿಮ್ಮ ಕೆರಿಯರ್ ನಲ್ಲಿ ಎಂತೆಂಥ ಸವಾಲು ಎದುರಿಸಬೇಕಾಯಿತು?
ಯಾವ ಆಟಗಾರರೇ ಇರಲಿ, ಎಲ್ಲಕ್ಕಿಂತಲೂ ಕಠಿಣ ಸಂಘರ್ಷ ಮೈದಾನದಲ್ಲಿ ಅಲ್ಲ, ಆದ ಪೆಟ್ಟುಗಳನ್ನು ಸುಧಾರಿಸಿಕೊಂಡು ಮೇಲೇಳುವುದರಲ್ಲಿದೆ. ಸಣ್ಣವಳಿದ್ದಾಗಲೇ ನನಗೆ ಈ ಕುರಿತು ಸಾಕಷ್ಟು ಅನುಭವಗಳಾಗಿವೆ. ನನ್ನ 11ರ ಹರೆಯದಲ್ಲಿ ಒಂದು ಫಿಟ್ನೆಸ್ ಸೆಶೆನ್ ಮೂಲಕ ನನ್ನ ಬಲಗೈ ಮಣಿಕಟ್ಟು ಮುರಿಯಿತು. ಅಂದ್ರೆ ಟಿಟಿ ಬಿಟ್ಟು ದೂರ ಇರಬೇಕು, ಬಹಳ ಕಷ್ಟ ಎನಿಸಿತು. ಕೇವಲ ದೈಹಿಕ ರೂಪದಲ್ಲಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಕುಗ್ಗಿಹೋಗಿದ್ದೆ. ಇದರಿಂದ ಬಹಳ ಟೆನ್ಶನ್ಸ್, ಮಾನಸಿಕ ಒತ್ತಡಗಳಿಗೆ ಗುರಿಯಾದೆ. ಆ ಮೂಲಕ ನಾನು ಹೆಚ್ಚಿನ ಧೈರ್ಯ, ದೃಢತೆ ಮತ್ತು ಸಶಕ್ತಿಗಳ ಮಹತ್ವದ ಕುರಿತು ತಿಳಿದುಕೊಂಡೆ.
ಇವತ್ತಿಗೂ ಸಹ ಸಣ್ಣಪುಟ್ಟ ಪೆಟ್ಟು ಆಗುತ್ತಲೇ ಇರುತ್ತವೆ, ಒಮ್ಮೊಮ್ಮೆ ಉತ್ತಮ ಪ್ರದರ್ಶನ ನೀಡಲಿಕ್ಕಾಗಿ ನಾನು ಬಹಳ ಟೆನ್ಶನ್ಸ್ ಗೆ ಒಳಗಾಗುತ್ತೇನೆ. ಅಂಥ ಕ್ಷಣಗಳಲ್ಲಿ ನನಗೆ ನಾನೇ, `ಏನೇ ಅಡ್ಡಿ ಬರಲಿ, ಅದನ್ನು ಗೆಲ್ಲಲೇಬೇಕು’ ಎಂದು ಹೇಳಿಕೊಳ್ಳುತ್ತೇನೆ. ಹೀಗೆ ಪ್ರತಿಯೊಂದು ಸಾಲೂ ಸಹ ನನ್ನನ್ನು ಮತ್ತಷ್ಟು ಶಕ್ತಿಯುತ, ಆಶಾವಾದಿ, ಕನಸುಗಳನ್ನು ನನಸಾಗಿಸಿಕೊಳ್ಳಲು ಹೋರಾಡುವ ಶಕ್ತಿ ತುಂಬುತ್ತಿದೆ.

ನನ್ನ ಕೆರಿಯರ್ ನಲ್ಲಿ ನನಗೆ ಅತಿ ಹೆಚ್ಚಿನ ಒತ್ತಡದ ಪ್ರಸಂಗ ಎಂದರೆ, ನಿಯಮಿತ ಅಂತಾರಾಷ್ಟ್ರೀಯ ಪ್ರದರ್ಶನದ ಅಗತ್ಯಗಳು, ಇವು ಆ ಮಟ್ಟದ ಪ್ರದರ್ಶನಕ್ಕೆ ಬಲು ಅತ್ಯಗತ್ಯ. ಆರ್ಥಿಕ ರೂಪದಲ್ಲಿ ಇದಂತೂ ತುಂಬಾ ಚಾಲೆಂಜಿಂಗ್! ಆ ಕಷ್ಟದ ಸಂದರ್ಭದಲ್ಲಿ, ಧಾನುಕಾ ಮಧುನ್ ಸೇರಿ ಗ್ರೂಪಿನ ಸಿಪಿ ಧಾನುಕಾ ಮುಂದೆ ಬಂದು, ನನಗೆ ಎಲ್ಲಾ ಬಗೆಯ ಸಹಾಯ ಮಾಡಿದರು. ನಾನು ಉನ್ನತ ತರಬೇತಿಗಾಗಿ ಆಸ್ಟ್ರಿಯಾಗೆ ಹೋಗಬೇಕಿತ್ತು, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಹಿಸುವುದಿತ್ತು, ನವೀನ ತರಬೇತಿಯ ಉಪಕರಣ ಖರೀದಿಸಬೇಕಿತ್ತು….. ಇವೆಲ್ಲದಕ್ಕೂ ಅವರೇ ಮುಂದೆ ನಿಂತು ಸಹಾಯ ಮಾಡುತ್ತಿದ್ದರು. ಆಗ ನಾನು (ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್)ಗಾಗಿ ಮತ್ತಷ್ಟು ಹೆಚ್ಚು ಜಿಜ್ಞಾಸುವಾಗುತ್ತೇನೆ. ಇವರ ಸಹಾಯದಿಂದ ನಾನು ನನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದೇನೆ.
ಭವಿಷ್ಯದಲ್ಲಿ ನೀವು ಏನನ್ನು ಸಾಧಿಸ ಬಯಸುತ್ತೀರಿ?
ನನ್ನ ಎಲ್ಲಕ್ಕೂ ದೊಡ್ಡ ಕನಸು ಎಂದರೆ ಒಲಿಂಪಿಕ್ ನಲ್ಲಿ ಸ್ವರ್ಣ ಪದಕ ಗೆಲ್ಲುವುದು! ನಾನು ಒಂದೊಂದೇ ಹೆಜ್ಜೆ ಇರಿಸುತ್ತಾ ಆ ಗುರಿ ತಲುಪ ಬಯಸುತ್ತೇನೆ. ನನ್ನ ಮೊದಲ ಗುರಿ ಯೂಥ್ ಏಷ್ಯನ್ ಗೇಮ್ಸ್, ಯೂಥ್ ವರ್ಲ್ಡ್ ಚಾಂಪಿಯನ್ ಶಿಪ್‌ಯೂಥ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕೆಂಬುದು ನನ್ನ ಮಹದಾಸೆ! ಇದಾದ ನಂತರ ನನ್ನ ಮುಂದಿನ ಗುರಿ ಅಂದ್ರೆ ಏಷ್ಯನ್ ಗೇಮ್ಸ್ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಪೋಡಿಯಂ ಫಿನಿಶ್ ಪಡೆಯುವುದು. ಹೀಗೆ ಕೊನೆಯಲ್ಲಿ ವಿಶ್ವದ ನಂ.1 ಆಗಲು ಬಯಸುತ್ತೇನೆ. ಇದರ ಜೊತೆಗೇ ಎಷ್ಟು ಸಲ ಸಾಧ್ಯವೇ, ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಸಹ ಆಗಬೇಕಿದೆ.

ನಿಮ್ಮ ಮುಂದಿನ ಟೂರ್ನಮೆಂಟ್ ಯಾವುದು?
ಲೋಕಲ್ ಮೈದಾನದಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಜೊತೆ ಜೊತೆಗೆ, ನಾನು 4 ರಾಷ್ಟ್ರೀಯ ರಾಕಿಂಗ್ ಟೂರ್ನಮೆಂಟ್ ಗಳಲ್ಲಿಯೂ ಭಾಗವಹಿಸಲಿದ್ದೇನೆ. ನಾನು ಮೂರೂ ಶ್ರೇಣಿಗಳಲ್ಲಿ ಅಂದ್ರೆ ಅಂಡರ್, ಅಂಡರ್ ಹಾಗೂ ಮಹಿಳಾ ತಂಡಗಳಲ್ಲೂ ಭಾಗವಹಿಸುವೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಅನುಸಾರ, ನಾನು ಸೆಪ್ಟೆಂಬರ್ ನಲ್ಲಿ 2 ಟೂರ್ನಮೆಂಟ್ ಗಳಲ್ಲಿ ಭಾಗವಹಿಸುವೆ. ಅದಾದ ಮೇಲೆ ಅಕ್ಟೋಬರ್ ನ ಕೊನೆಯ ವಾರದಲ್ಲಿ ಬಹರೀನ್ ನಲ್ಲಿ 3ನೇ ಯೂಥ್ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವೆ. ವರ್ಷಾಂತ್ಯ ಅಂದ್ರೆ ನವೆಂಬರ್ ಕೊನೆಯಲ್ಲಿ ನಾನು ರುಮೇನಿಯಾದಲ್ಲಿರುತ್ತೇನೆ, ವಿಶ್ವ ಯೂಥ್ ಚಾಂಪಿಯನ್ ಶಿಪ್ ಜೊತೆಗೇ ನಡೆಯಲಿದೆ. ಲೋಕಲ್ ಕ್ಯಾಲೆಂಡರ್ ಆಧಾರದಲ್ಲಿ, ನಾನು ಅಕ್ಟೋಬರ್ ನ ಮಧ್ಯದಲ್ಲಿ ಮಾಂಟೆನೋಗ್ರೋದಲ್ಲಿ 2 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದೇನೆ.
ನೀವು ನಿಮ್ಮದೇ ಹೊಸ ಪೀಳಿಗೆಯರಿಗೆ, ಕ್ರೀಡಾ ಕ್ಷೇತ್ರಕ್ಕೆ ಇದೀಗ ಬರುತ್ತಿರುವವರಿಗೆ ಯಾವ ಸಂದೇಶ ನೀಡಲಿದ್ದೀರಿ?
ಯಶಸ್ಸು ಎಂಬುದು ರಾತ್ರೋರಾತ್ರಿ ಸಿಕ್ಕಿಬಿಡುವುದಿಲ್ಲ. ನಿಮ್ಮ ಆಟವನ್ನು ಯಾರೂ ನೋಡದಿದ್ದರೂ ಸರಿ, ಇತರರ ವಿಶ್ರಾಂತಿ ಪಡೆಯುತ್ತಿದ್ದಾಗ, ನೀವು ಗಂಟೆಗಟ್ಟಲೇ ತರಬೇತಿಯಲ್ಲಿ ತೊಡಗಿಕೊಳ್ಳಲೇಬೇಕು. ಸತತ ಅಭ್ಯಾಸ ಬೋರ್ ಹೊಡೆಸಿದರೂ, ಮುಂದೆ ನಿಮ್ಮ ತ್ಯಾಗ, ವಿಶ್ವಾಸ ಹಾಗೂ ನಿಮ್ಮ ಪ್ರತಿಯೊಂದು ಸಣ್ಣ ಹೆಜ್ಜೆಯೂ ನಿಮ್ಮ ಕನಸನ್ನು ನನಸಾಗಿಸಲು ನೆರವಾಗುತ್ತವೆ. ಇದಂತೂ ನಿಜ, ಕೇವಲ ಪದಕ ಮಾತ್ರವಲ್ಲ, ನೀವು ಪಕ್ಕಾ ಕ್ರೀಡಾಪ್ರೇಮಿಯೂ ಆಗಬೇಕು. ಮತ್ತೊಂದು ಮುಖ್ಯ ವಿಷಯ ಅಂದ್ರೆ, ಫೇಲ್ಯೂರ್ ಆದ ಮಾತ್ರಕ್ಕೆ ಎಲ್ಲವೂ ಮುಗಿದುಹೋಯಿತು ಎಂದು ನಿರಾಶರಾಗಬೇಡಿ. ಸೋಲೇ ಗೆಲುವಿನ ಸೋಪಾನ! ಸೋಲಿನಿಂದ ನೀವು ಮಾನಸಿಕವಾಗಿ ಮತ್ತಷ್ಟು ಸದೃಢರಾಗುತ್ತೀರಿ. ಎಲ್ಲಕ್ಕೂ ಮಹತ್ವಪೂರ್ಣ ವಿಷಯ ಅಂದ್ರೆ, ನೀವು ನಿಮ್ಮ ಮಾತೃಭೂಮಿಯನ್ನು ಪ್ರತಿನಿಧಿಸುತ್ತಿದ್ದೀರಿ ಎಂದರೆ ಅದು ದೇವರ ಪವಿತ್ರ ಸೇವೆಯೇ ಸರಿ! ಹೀಗಾಗಿ ನಿಮ್ಮ ಒಂದೊಂದು ಆಟ ಆ ಗುರಿಯತ್ತಲೇ ಇರಲಿ.
ನನ್ನ ಪ್ರಕಾರ, ಈ ಆಟೋಟ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಸೋಲುಗೆಲುವು ಎರಡನ್ನೂ ನಾವು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಹೀಗಾಗಿ ದೃಢಮನಸ್ಕರಾಗಿ ಮುಂದುವರಿಯಿರಿ, ಶಿಸ್ತು ಫಾಲೋ ಮಾಡಿ, ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಜೊತೆಗೆ ಇತರರನ್ನೂ ಪ್ರೇರೇಪಿಸುತ್ತಾ ಇರಿ.

ನಿಮ್ಮ ತಾಯಿತಂದೆಯರಿಂದ ಎಂಥ ನೆರವು ಸಿಕ್ಕಿತು?
ನನ್ನ ಇಡೀ ಕ್ರೀಡಾ ಪ್ರಯಾಣದಲ್ಲಿ ಅಮ್ಮ ಅಪ್ಪ ನನಗೆ ಬೆಂಗಾಲಾಗಿ ನಿಂತು, ಬೆನ್ನು ತಟ್ಟುತ್ತಿದ್ದಾರೆ. ಆರಂಭದಿಂದಲೇ ಅವರು ನನ್ನ ಕನಸುಗಳ ಬಗ್ಗೆ ನಂಬಿಕೆ ವ್ಯಕ್ತಪಡಿಸಿದರು. ಎಲ್ಲಾ ವಿಧದಲ್ಲೂ ನನಗೆ ಸಹಾಯ ಮಾಡುತ್ತಿದ್ದಾರೆ. ಎಷ್ಟೋ ಸಲ ಬಲು ಕಷ್ಟದ ಘಳಿಗೆ ಬಂದಾಗ ಅದು ನನ್ನ ಪೆಟ್ಟಾಗಿರಲಿ, ದೊಡ್ಡ ಆಟದಲ್ಲಿ ಸೋಲು, ಆಟಪಾಠಗಳಲ್ಲಿ ಸಮತೋಲನ ತಪ್ಪಿದಾಗ, ಹೀಗೆ ಎಲ್ಲಾ ಸಂದರ್ಭಗಳಲ್ಲೂ ನನಗೆ ಆಧಾರಸ್ತಂಭವಾಗಿದ್ದಾರೆ. ನನಗೆ ಅತ್ಯಧಿಕ ಪ್ರೇರಣೆ ನೀಡುತ್ತಾ, ನಾನು ಒಬ್ಬಂಟಿ ಎಂದು ಫೀಲಾಗದಂತೆ ನೋಡಿಕೊಳ್ಳುತ್ತಾರೆ. ಇಲ್ಲಿಯವರೆಗೂ ನಾನೇನೇ ಸಾಧಿಸಿದ್ದರೂ ಅದು ನನ್ಮ ಅಮ್ಮ ಅಪ್ಪನ ನಿರಂತರ ತ್ಯಾಗ, ಪ್ರೋತ್ಸಾಹ, ಆಶೀರ್ವಾದ, ಅನ್ ಕಂಡೀಶನ್ ಲವ್ ನಿಂದ ಮಾತ್ರ ಸಾಧ್ಯವಾಗಿದೆ.
ನೀವು ಆಟಪಾಠಗಳನ್ನು ಒಟ್ಟೊಟ್ಟಿಗೆ ಹೇಗೆ ಬ್ಯಾಲೆನ್ಸ್ ಮಾಡ್ತೀರಾ?
8ನೇ ತರಗತಿಯವರೆಗೂ ನಾನು ಟಿಟಿಯ ತರಬೇತಿ ಜೊತೆ ಜೊತೆಗೆ ನಿಯಮಿತ ರೂಪದಲ್ಲಿ ಸ್ಕೂಲಿಗೂ ಹೋಗುತ್ತಿದ್ದೆ. ಮುಂದೆ ನನ್ನ ಓದಿನ ಮಟ್ಟ ಹೆಚ್ಚಿದಂತೆ, ಎರಡರ ನಡುವೆ ಬ್ಯಾಲೆನ್ಸ್ ಮಾಡುವುದು ನಿಜಕ್ಕೂ ಕಷ್ಟಕರ ಆಯ್ತು. ಆದರೂ ನಾನು ಟೈಂ ಮ್ಯಾನೇಜ್ ಮೆಂಟ್ ಆಧಾರದಿಂದ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದೇನೆ. ಏಕೆಂದರೆ, ಆಟೋಟ ಎಷ್ಟು ಮುಖ್ಯವೇ ಅಕ್ಯಾಡೆಮಿಕ್ ಪಾಠಗಳೂ ಅಷ್ಟೇ ಮುಖ್ಯ. ಇದು ನನ್ನ ಬುದ್ಧಿವಂತಿಕೆಯನ್ನು ತೀಕ್ಷ್ಣ ಆಗಿಸುತ್ತದೆ. ಅದರಿಂದ ನನ್ನ ಎದುರಾಳಿಯ ಚಾಕಚಕ್ಯತೆ ಗುರುತಿಸಿ ಹೇಗೆ ವಿರೋಧಿಸಬೇಕೆಂಬುದು ಗೊತ್ತಾಗುತ್ತದೆ. ಟೇಬಲ್ ಎದುರು ತತ್ ಕ್ಷಣ ರಣನೀತಿ ರೂಪಿಸಿಕೊಳ್ಳಲು ನೆರವಾಗುತ್ತದೆ. ಟಿಟಿನಲ್ಲಿ ಸತತ ಸ್ಪರ್ಧೆ, ಪೈಪೋಟಿ ಎದುರಿಸುವ ಜೊತೆಗೆ, ನಾನೀಗ 11ನೇ ತರಗತಿಯಲ್ಲಿ ಕಠಿಣ ಪರಿಶ್ರಮದಿಂದ ಕಲಿಯುತ್ತಿದ್ದೇನೆ.
ನಿಮ್ಮ ಊಟತಿಂಡಿಯ ಅಭಿರುಚಿ ಏನು? ಫ್ರೆಂಡ್ಸ್ ಜೊತೆ ಸಮಯ ಕಳೆಯಲು ಅವಕಾಶ ಸಿಗುತ್ತದೆಯೇ?
ನನಗೆ ಪಚ್ಕಾ (ಪಾನೀಪೂರಿ) ಅಂದ್ರೆ ಪಂಚಪ್ರಾಣ! ಹಾಗೆಯೇ ಚಪಾತಿ ವಿತ್ ಚಿಕನ್ ಗ್ರೇವಿ ಸಹ ಇಷ್ಟ. ಬಿಸಿ ಬಿಸಿ ಅನ್ನಕ್ಕೆ ಚಿಕನ್ ಸ್ಟ್ಯೂ ಇಷ್ಟ. ಆದರೆ ಸಾಮಾನ್ಯವಾಗಿ ಡಯೆಟ್ ದೃಷ್ಟಿಯಿಂದ ಬೆಂದ ತರಕಾರಿ ಹೋಳು, ತಾಜಾ ತರಕಾರಿ ಸಲಾಡ್ ನ್ನೇ ಪ್ರಿಫರ್ ಮಾಡ್ತೀನಿ. ಬೆಂದ ಮೊಟ್ಟೆ, ಬಾಳೆಹಣ್ಣು, ಡ್ರೈ ಫ್ರೂಟ್ಸ್ ತಿಂತಾ ಇರ್ತೀನಿ. ಬಹಳ ಇಷ್ಟಪಟ್ಟರೂ ಫ್ರೆಂಡ್ಸ್ ಜೊತೆ ಸಮಯ ಕಳೆಯಲು ಬಿಡುವೇ ಸಿಗುವುದಿಲ್ಲ!
– ಪ್ರತಿನಿಧಿ

ಸಾಧನೆ ಪ್ರಶಸ್ತಿ ಪಾರಿತೋಷಕಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು
2025 ರಾಷ್ಟ್ರೀಯ ರಾಂಕಿಂಗ್ ಟೂರ್ನ್‌ಮೆಂಟ್, ವಡೋದರಾ, ಅಂಡರ್, ಬಾಲಕಿಯರ ಸಿಂಗಲ್ಸ್, ಸ್ವರ್ಣಪದಕ ಹಾಗೂ ಅಂಡರ್ ಬಾಲಕಿಯರ ಸಿಂಗಲ್ಸ್, ಸ್ವರ್ಣ ಪದಕ 2024-2025 ಜೂನಿಯರ್‌ಯೂಥ್ ನ್ಯಾಶನಲ್ ಅಂಡರ್ ಬಾಲಕಿಯರ ತಂಡ ಸ್ಪರ್ಧೆ ಸ್ವರ್ಣ ಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ಬೆಂಗಳೂರು ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣಪದಕ ಹಾಗೂ ಅಂಡರ್ ಬಾಲಕಿಯರ ಸಿಂಗಲ್ಸ್ ಕಂಚಿನ ಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್‌ಮೆಂಟ್, ಗೋವಾ, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ತಿರುವನಂತಪುರ, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣಪದಕ ಹಾಗೂ ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣ ಪದಕ ಸೀನಿಯರ್ ನ್ಯಾಶನಲ್ ಮಹಿಳಾ ಸಿಂಗಲ್ಸ್ ಕಂಚಿನ ಪದಕ 2023-2024 ಜೂನಿಯರ್‌ಯೂಥ್ ನ್ಯಾಶನಲ್ ಅಂಡರ್ ಬಾಲಕಿಯರ ಸಿಂಗಲ್ಸ್, ಸ್ವರ್ಣ ಪದಕ ಹಾಗೂ ಅಂಡರ್ ಬಾಲಕಿಯರ ಡಬಲ್ಸ್ ರಜತ ಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ಹೈದರಾಬಾದ್, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ಪಂಚಕುಲಾ, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣ ಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ವಡೋದರಾ, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣಪದಕ, ಅಂಡರ್, ಬಾಲಕಿಯರ ಸಿಂಗಲ್ಸ್ ಸ್ವರ್ಣ ಪದಕ, ಅಂಡರ್ ಬಾಲಕಿಯರ ಸಿಂಗಲ್ಸ್ ಸ್ವರ್ಣ ಪದಕ ನ್ಯಾಶನಲ್ ರಾಂಕಿಂಗ್ ಟೂರ್ನ್ ಮೆಂಟ್, ವಿಜಯವಾಡಾ, ಅಂಡರ್, ಬಾಲಕಿಯರ ಸಿಂಗಲ್ಸ್ ಸ್ವರ್ಣ ಪದಕ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು.
2025 ದಕ್ಷಿಣ ಏಷ್ಯಾದ ರೀಜನಲ್ ಚಾಂಪಿಯನ್ ಶಿಪ್, ಕಾಠ್ಮಂಡು, ಸೀನಿಯರ್ ತಂಡ, ಸ್ವರ್ಣ ಪದಕ ಯೂಥ್ ಚಾಲೆಂಜಿಂಗ್, ಆಲಮಟ್ಟಿ, ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ ಯೂಥ್ ಚಾಲೆಂಜಿಂಗ್, ಮೇಟ್‌ಝ, ಅಂಡರ್, ಬಾಲಕಿಯರ ಸಿಂಗಲ್ಸ್, ರಜತ ಪದಕ ಯೂಥ್ ಚಾಲೆಂಜಿಂಗ್, ಪ್ರೆಸ್ಟೀನಾ, ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ ಹಾಗೂ ಅಂಡರ್, ಬಾಲಕಿಯರ ಡಬಲ್ಸ್, ರಜತ ಪದಕ 2024 ಯೂಥ್ ಕಂಟೆಂಡರ್ಸ್, ಡಾಮನ್, ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ ಹಾಗೂ ಅಂಡರ್, ಬಾಲಕಿಯರ ಸಿಂಗಲ್ಸ್, ರಜತ ಪದಕ ಯೂಥ್ ಕಂಟೆಂಡರ್ಸ್, ಲಿಗ್ರಾನೋ, ಇಟಲಿ, ಅಂಡರ್, ಬಾಲಕಿಯರ ಸಿಂಗಲ್ಸ್, ಸ್ವರ್ಣ ಪದಕ ಹಾಗೂ ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ ಯೂಥ್ ಕಂಟೆಂಡರ್ಸ್, ಸ್ಜೋಂಬ್ ಥೆಲಿ, ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ ಯೂಥ್ ಕಂಟೆಂಡರ್ಸ್, ದೋಹಾ, ಅಂಡರ್, ಬಾಲಕಿಯರ ಸಿಂಗಲ್ಸ್, ಕಂಚಿನ ಪದಕ, ಅಂಡರ್, ಬಾಲಕಿಯರ ಡಬಲ್ಸ್, ರಜತ ಪದಕ ಹಾಗೂ ಅಂಡರ್ ಮಿಕ್ಸ್ ಡಬಲ್ಸ್, ರಜತ ಪದಕದಕ್ಷಿಣ ಏಷ್ಯಾದ ಯೂಥ್ ಚಾಂಪಿಯನ್ ಶಿಪ್, ಶ್ರೀಲಂಕಾ, ಅಂಡರ್, ಬಾಲಕಿಯರ ಸಿಂಗಲ್ಸ್, ಸ್ವರ್ಣ ಪದಕ, ಅಂಡರ್, ಬಾಲಕಿಯರ ತಂಡ, ಸ್ವರ್ಣ ಪದಕ, ಅಂಡರ್, ಮಿಕ್ಸ್ಡ್ ಡಬಲ್ಸ್, ಸ್ವರ್ಣ ಪದಕ ಯೂಥ್ ಕಂಟೆಂಡರ್ಸ್, ಅಲ್ಜೀರಿಯಾ, ಅಂಡರ್, ಬಾಲಕಿಯರ ಸಿಂಗಲ್ಸ್, ಸ್ವರ್ಣ ಪದಕ, ಅಂಡರ್, ಮಿಕ್ಸ್ಡ್ ಡಬಲ್ಸ್, ಕಂಚಿನ ಪದಕ ಯೂಥ್ ಕಂಟೆಂಡರ್ಸ್, ಲೀಮಾ, ಅಂಡರ್, ಬಾಲಕಿಯರ ಸಿಂಗಲ್ಸ್, ರಜತ ಪದಕ, ಅಂಡರ್, ಬಾಲಕಿಯರ ಡಬಲ್ಸ್, ರಜತ ಪದಕ, ಅಂಡರ್, ಮಿಕ್ಸ್ಡ್ ಡಬಲ್ಸ್, ಸ್ವರ್ಣ ಪದಕ ಯೂಥ್ ಕಂಟೆಂಡರ್ಸ್, ಟ್ಯೂನೀಶಿಯಾ, ಅಂಡರ್, ಬಾಲಕಿಯರ ಸಿಂಗಲ್ಸ್, ರಜತ ಪದಕ





