ನೀವು ಸಹ ಬ್ರಾಂಡೆಡ್ ಬದಲಿಗೆ ಲೋಕಲ್ ಉಡುಗೆ ಧರಿಸಿ ಹಬ್ಬಗಳಲ್ಲಿ ಮಿಂಚಲು ಬಯಸಿದರೆ, ಇಲ್ಲಿವೆ ಕೆಲವು ಸಲಹೆಗಳು….
ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಸುಮನಾ, ಸದಾ ಬ್ರಾಂಡೆಡ್ ಡ್ರೆಸೆಸ್ ಮಾತ್ರ ಧರಿಸುತ್ತಾಳೆ. ಏಕೆಂದರೆ ಅವುಗಳ ಫ್ಯಾಬ್ರಿಕ್, ಬಣ್ಣ, ಫಿಟಿಂಗ್ಸ್, ಲುಕ್ಸ್ ಅವಳಿಗೆ ಬಹಳ ಇಷ್ಟ. ಅದರ ಎಲಿಗೆನ್ಸ್ ಗೆ ಎಲ್ಲರೂ ಮಾರುಹೋಗುತ್ತಾರೆ. ಹಿಂದೆಲ್ಲ ಅವಳು ಬೀದಿ ಬದಿ ಫುಟ್ ಪಾತ್ ವ್ಯಾಪಾರಿಗಳಿಂದ ಡ್ರೆಸ್ ಖರೀದಿಸುತ್ತಿದ್ದಳು. ಅವುಗಳನ್ನು ಒಗೆದ ನಂತರ, ಒಮ್ಮೊಮ್ಮೆ ಅದರ ಬಣ್ಣ ಹೋಗುತ್ತಿತ್ತು ಅಥವಾ ಶ್ರಿಂಕ್ ಆಗಿಬಿಡುತ್ತಿತ್ತು. ಫಿಟ್ಟಿಂಗ್ಸ್ ಸರಿಹೋಗುತ್ತಿರಲಿಲ್ಲ. ಹೀಗಾಗಿ ಅಂಥ ಡ್ರೆಸ್ ಗಳನ್ನು ಬೇಗ ಬೇಗ ಕೆಲಸದವರಿಗೆ ಕೊಟ್ಟುಬಿಡುತ್ತಿದ್ದಳು. ಹೀಗಾಗಿ ಕಳೆದ 5 ವರ್ಷಗಳಿಂದ ಅವಳು ಕೇವಲ ಬ್ರಾಂಡೆಡ್ ಡ್ರೆಸ್ ಮಾತ್ರ ಧರಿಸುತ್ತಾಳೆ. ಇವು ದುಬಾರಿ ಏನೋ ಸರಿ, ಆದರೆ ಇವು ಹೆಚ್ಚು ಬಾಳಿಕೆ ಬರುತ್ತವೆ, ಕಿರಿಕಿರಿ ಎನಿಸದು.
ಸುಮುನಾಳನ್ನು ಕಂಡು ಅವಳ ಸಹೋದ್ಯೋಗಿಗಳೂ ಅವಳಂತೆಯೇ ಬ್ರಾಂಡೆಡ್ ಡ್ರೆಸೆಸ್ ನ್ನಷ್ಟೇ ಖರೀದಿಸುತ್ತಿದ್ದಾರೆ. ಅವರುಗಳ ದೃಷ್ಟಿಯಲ್ಲೂ ಸಹ ಬ್ರಾಂಡೆಡ್ ಡ್ರೆಸ್ ದುಬಾರಿಯಾದರೂ, ಅವುಗಳ ಲುಕ್ಸ್ ಬಹಳ ದಿನ ಉತ್ತಮ ಗುಣಮಟ್ಟದಲ್ಲಿ ಬಾಳಿಕೆ ಬರುತ್ತದೆ.
ಅಸಲಿಗೆ ಬ್ರಾಂಡೆಡ್ ಡ್ರೆಸೆಸ್ ಖಂಡಿತಾ ದುಬಾರಿ ಆಗುತ್ತವೆ. ಆದರೆ ಅದರ ಸ್ಟೈಲ್, ಫಿಟ್ಟಿಂಗ್, ಬಣ್ಣ, ಫ್ಯಾಬ್ರಿಕ್ ಇತ್ಯಾದಿ ಮಾಮೂಲಿ ಬೀದಿಬದಿ ಸಿಗುವ ಡ್ರೆಸೆಸ್ ಗಿಂತ ಎಷ್ಟೋ ಚೆನ್ನಾಗಿರುತ್ತದೆ. ಇಂದಿನ ಯುವಜನತೆಗೆ ಉತ್ತಮ ಗಳಿಕೆ ಇರುವುದರಿಂದ, ಬ್ರಾಂಡೆಡ್ ದುಬಾರಿಯಾದರೂ ಅವನ್ನು ಖರೀದಿಸಲು ಹಿಂಜರಿಯುವುದಿಲ್ಲ. ಹೀಗಾಗಿ ಆಫೀಸಿನಲ್ಲಿ ಅವರದು ಡಿಫರೆಂಟ್ ಇಮೇಜ್ ಆಗಿ ಮಿಂಚುತ್ತಿರುತ್ತಾರೆ.
ಸ್ಟೇಟಸ್ ಸಿಂಬಲ್ ಇಷ್ಟು ಮಾತ್ರವಲ್ಲ, ಬ್ರಾಂಡ್ಸ್ ತನ್ನ ಗ್ರಾಹಕರ ಕುರಿತಾಗಿ ಸದಾ ಪ್ರಾಮಾಣಿಕ ಆಗಿರುತ್ತದೆ. ಆಗ ಮಾತ್ರವೇ ಆ ಗ್ರಾಹಕರು ಮತ್ತೆ ಮತ್ತೆ ಅದೇ ಬ್ರಾಂಡ್ ಗೆ ಅಂಟಿಕೊಳ್ಳುತ್ತಾರೆ, ಅದನ್ನು ಬಿಟ್ಟು ಬೇರೆಡೆ ಹೋಗುವುದಿಲ್ಲ. ಹೀಗಾಗಿ ಈ ಬ್ರಾಂಡ್ಸ್ ಇತ್ತೀಚೆಗೆ ಸ್ಟೇಟಸ್ ಸಿಂಬಲ್ ಆಗಿ, ಪ್ರತಿಷ್ಠೆಯ ಪ್ರತೀಕವೆನಿಸುತ್ತವೆ. ಹೀಗಾಗಿಯೇ ಇಂದಿನ ಯುವಜನತೆ ಇದರತ್ತ ಹೆಚ್ಚು ಹೆಚ್ಚು ಆಕರ್ಷಿತರಾಗಿ ವಾಲುತ್ತಿದ್ದಾರೆ.

ಡಿಸೈನರ್ ಗಳು ಹೇಳುವುದೆಂದರೆ, ಹಿಂದೆಲ್ಲ ಸಾಮಾನ್ಯ ಜನ ಹೈ ಎಂಡ್ ಡ್ರೆಸೆಸ್ ನ್ನು ಖರೀದಿಸಲು ಬಯಸುತ್ತಿರಲಿಲ್ಲ. ಏಕೆಂದರೆ ಇವನ್ನು ಕೇವಲ ಅತಿ ಶ್ರೀಮಂತರು ಮಾತ್ರ ಖರೀದಿಸುತ್ತಾರೆ ಎಂಬ ಒಂದು ಪ್ರತೀತಿ ಇತ್ತು. ಆದರೆ ಈಗಿನ ಕಾಲ ಹಾಗಿಲ್ಲ.
ಹೀಗಾಗಿ ಇಂದಿನ ಯೂಥ್ ಹೈ ಎಂಡ್ ಡ್ರೆಸ್ ಬೇಕೆಂದೇ ಬಯಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ, ಇತ್ತೀಚೆಗೆ ಆನ್ ಲೈನ ನಲ್ಲಿ ಸಾವಿರಾರು ಬ್ರಾಂಡ್ಸ್ ತಮ್ಮ ಡ್ರೆಸೆಸ್, ಆ್ಯಕ್ಸೆಸರೀಸ್ ಮಾರುತ್ತವೆ. ಯಾವುದು ತಮ್ಮ ಬಜೆಟ್ ಗೆ ಹೊಂದುತ್ತದೋ, ಅಂಥವನ್ನೇ ಯಂಗ್ ಗ್ರಾಹಕರು ಖರೀದಿಸುತ್ತಾರೆ.
ಇಷ್ಟು ಮಾತ್ರವಲ್ಲದೆ, ಬ್ರಾಂಡೆಡ್ ಡ್ರೆಸೆಸ್ ಧರಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಗುಂಪಿನಲ್ಲಿ ನಾಲ್ವರ ನಡುವೆ ನೀವು ಎದ್ದು ಕಾಣುವಿರಿ! ಈ ಕಾರಣದಿಂದಲೇ ಮಾರುಕಟ್ಟೆಯಲ್ಲಿನ ಎಲ್ಲಾ ಬ್ರಾಂಡ್ ಗಳೂ ಒಂದಕ್ಕಿಂತ ಒಂದು ಅತ್ಯಾಕರ್ಷಕ ಡ್ರೆಸೆಸ್ ನ್ನು ಮಾರುಕಟ್ಟೆಗೆ ಬಿಡುತ್ತಿರುತ್ತವೆ, ಗ್ರಾಹಕರ ಸಂತೃಪ್ತಿಯೇ ಅವರ ಗುರಿ!
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನೋಡಿದರೂ ಬ್ರಾಂಡೆಡ್ ಡ್ರೆಸೆಸ್ ಮೇಲುಗೈ ಸಾಧಿಸುತ್ತವೆ. ಏಕೆಂದರೆ ಫ್ಯಾಷನ್ ಇಂಡಸ್ಟ್ರಿಯಿಂದ ಹೊರಟ ವೆಸ್ಟರ್ನ್ ಪದಾರ್ಥ, ದೊಡ್ಡ ಪ್ರಮಾಣದಲ್ಲಿ ಮಾಲಿನ್ಯ ಹರಡುತ್ತದೆ. ಸಸ್ಟೇನೆಬಲ್ ಡ್ರೆಸೆಸ್ ಮೇಲೆ ಇತ್ತೀಚೆಗೆ ಅಧಿಕ ಒತ್ತಡ ಹೇರಲಾಗುತ್ತಿದೆ. ಹೀಗಿರುವಾಗ ಬ್ರಾಂಡೆಡ್ ಡ್ರೆಸೆಸ್ ಸ್ಲೋ ಫ್ಯಾಷನ್ ಗೆ ಹೆಚ್ಚು ಒತ್ತು ನೀಡುತ್ತದೆ, ಅದರಿಂದ ಪರಿಸರ ಮಾಲಿನ್ಯ ಎಷ್ಟೋ ಕಡಿಮೆ ಆಗುತ್ತದೆ. ಇದನ್ನು ಧರಿಸುವುದರ ಲಾಭ ಏನೆಂದು ನೋಡೋಣವೇ? :

ಆರಾಮದಾಯಕ ಉಡುಗೆ
ಬ್ರಾಂಡೆಡ್ ಡ್ರೆಸೆಸ್ ಧರಿಸುವುದರಿಂದ ನಿಜಕ್ಕೂ ಆರಾಮ ಎನಿಸುತ್ತದೆ, ಅಷ್ಟು ಕೂಲ್ ಕಂಫರ್ಟೆಬಲ್ ಆಗಿರುತ್ತದೆ. ಹೈ ಕ್ವಾಲಿಟಿ ಮೆಟೀರಿಯಲ್ ನಿಂದ ತಯಾರಾದ ಕಾರಣ, ಕಂಫರ್ಟ್ ಲೆವೆಲ್ ಹೈ ಆಗಿರುತ್ತದೆ. ಈ ಡ್ರೆಸೆಸ್ ನ್ನು ಬಹಳ ಹೊತ್ತು ಧರಿಸಿದ್ದರೂ ಸಹ ಅಸಹಜತೆ ಕಾಡದು. ನೀವು ಫ್ಲೈಟ್ ನಲ್ಲಿ ದೂರ ದೇಶಕ್ಕೆ ಹಾರುತ್ತೀರೋ, ಇಡೀ ದಿನ ರಾತ್ರಿ 9 ಗಂಟೆಯವರೆಗೂ ಆಫೀಸಿನಲ್ಲಿ ದುಡಿಯುತ್ತಿದ್ದರೂ ಕಷ್ಟಕರ ಎನಿಸದು. ಇಂಥ ಡ್ರೆಸೆಸ್ ನಿಮಗೆ ರಿಲ್ಯಾಕ್ಸ್ ನೀಡುತ್ತವೆ. ಬ್ರಾಂಡೆಡ್ ಡ್ರೆಸೆಸ್ ಎಲ್ಲಾ ಅಳತೆಯಲ್ಲೂ ಲಭ್ಯ. ಯಾರಿಗೆ ಯಾವ ಸೈಜ್ ಬೇಕೋ ಕೊಂಡು ಧರಿಸಿ ಮಸ್ತ್ ಮಜಾ ಮಾಡಿ.

ಹೆಚ್ಚು ಬೆಡಗು
ಬ್ರಾಂಡೆಡ್ ಡ್ರೆಸೆಸ್ ಸ್ಟೈಲ್ ಲ್ಲಿ ಎಲಿಗೆನ್ಸ್ ಹೆಚ್ಚಿಸುತ್ತವೆ ಹಾಗೂ ನವೀನ ಶಾಲೀನತೆಯನ್ನು ಟಾಪ್ ಪ್ರಯಾರಿಟಿಯಲ್ಲಿ ಇಡುತ್ತದೆ. ಈ ಡ್ರೆಸೆಸ್ ನಿಂದ ವ್ಯಕ್ತಿಯ ಫ್ಯಾಷನ್ ಸೆನ್ಸ್ ತಿಳಿಯುತ್ತದೆ. ಈ ಉಡುಗೆಯ ಬಣ್ಣ ಹಾಳಾಗುವುದಿಲ್ಲ, ಹೀಗಾಗಿ ಇನ್ನು ಎಷ್ಟು ಸಲ ಒಗೆದು, ಇಸ್ತ್ರೀ ಮಾಡಿಸಿ, ಧರಿಸಿದರೂ ಹೊಸತರಂತೆಯೇ ಕಾಣುತ್ತವೆ! ಇದರ ಜೊತೆ ಆ್ಯಕ್ಸೆಸರೀಸ್ ಧರಿಸುವುದರಿಂದ, ಇದರ ಅಂದ ಮತ್ತಷ್ಟು ಹೆಚ್ಚುತ್ತದೆ.

ಹೆಚ್ಚಿನ ಬಾಳಿಕೆ
ಸಾಮಾನ್ಯವಾಗಿ ಲೋಕಲ್ ಡ್ರೆಸೆಸ್ ಅಗ್ಗದ ಮೆಟೀರಿಯಲ್ ನಿಂದ ರೂಪುಗೊಂಡಿರುತ್ತವೆ. ಇವುಗಳ ಖರೀದಿಯಿಂದ ಆ ಘಳಿಗೆಯಲ್ಲಿ ವ್ಯಕ್ತಿಯ ಹಣವೇನೋ ಉಳಿಯುತ್ತದೆ, ಆದರೆ ಇವು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. 2-3 ಸಲ ಒಗೆದಾದ ಮೇಲೆ ಇದರ ಬಣ್ಣ ಮಾಸುತ್ತದೆ, ಅಳತೆ ಶ್ರಿಂಕ್ ಆಗುತ್ತದೆ, ಫಿಟ್ಟಿಂಗ್ಸ್ ಹಾಳಾಗುತ್ತದೆ. ಅದೇ ಬ್ರಾಂಡೆಡ್ ಡ್ರೆಸೆಸ್ ಆದರೆ, ಅವು ದುಬಾರಿಯೇನೋ ಸರಿ, ಆದರೆ ಹೈ ಕ್ಲಾಸ್ ಮೆಟೀರಿಯಲ್ ನಿಂದ ತಯಾರಾಗಿರುತ್ತವೆ, ಹೀಗಾಗಿ ಹಲವು ವರ್ಷ ಬಾಳಿಕೆ ಬರುತ್ತವೆ. ಇದರ ಮೆಟೀರಿಯಲ್ ಬೇಗ ಹಾಳಾಗುವುದಿಲ್ಲ, ಕಲರ್ ಸಹ ಮಾಸುವುದಿಲ್ಲ. ಹೀಗಾಗಿ ನೀವು ಏನೇ ಖರೀದಿಸಿದರೂ ಕ್ವಾಂಟಿಟಿ ಬದಲು ಕ್ವಾಲಿಟಿಗೆ ಪ್ರಾಮುಖ್ಯತೆ ಕೊಡಿ. ಲೋಕಲ್ ಡ್ರೆಸೆಸ್ ಕೊಂಡಾಗ ಮತ್ತೆ ಮತ್ತೆ ಹಣ ಖರ್ಚು ಮಾಡುತ್ತಲೇ ಇರಬೇಕಾಗುತ್ತದೆ, ಆದರೆ ಬ್ರಾಂಡೆಡ್ ನಲ್ಲಿ ಒಮ್ಮೆ ಅಧಿಕ ಹಣ ಖರ್ಚು ಮಾಡಿದರೆ ಸಾಕು, ಇವು ಹಲವು ವರ್ಷ ಬಾಳಿಕೆ ಬರುತ್ತವೆ.

ಎಲ್ಲಾ ಸಂದರ್ಭಕ್ಕೂ ಸೂಕ್ತ
ಬ್ರಾಂಡೆಡ್ ಡ್ರೆಸೆಸ್ ಎಲ್ಲಾ ಸಂದರ್ಭಗಳಿಗೂ ಅತಿ ಪರ್ಫೆಕ್ಟ್ ಆಗಿ ಹೊಂದುತ್ತವೆ. ಹೀಗಾಗಿ ಈ ಡ್ರೆಸೆಸ್ ಗೆ ಒಂದು ಸಲವು ಹೆವಿ ಖರ್ಚಾದರೂ ಚಿಂತೆ ಇಲ್ಲ, ಅದು ವರ್ಷಗಟ್ಟಲೇ ಚೆನ್ನಾಗಿಯೇ ಇರುತ್ತದೆ.
ನೀವು ಜಿಮ್ ಗೆ ಹೊರಡಿ ಅಥವಾ ಪಾರ್ಟಿಯೇ ಇರಲಿ, ಬ್ರಾಂಡೆಡ್ ಡ್ರೆಸೆಸ್ಸ್ ಮಾತ್ರ ಸದಾ ಕೂಲ, ಕಂಫರ್ಟೆಬಲ್ ಕಾನ್ಛಿಡೆನ್ಸ್ ಹೆಚ್ಚಿಸುತ್ತವೆ. ದೊಡ್ಡ ದೊಡ್ಡ ಬ್ರಾಂಡ್ಸ್ ಜಿಮ್ ಗಾಗಿ ಅತಿ ಸುಂದರ ಡಿಸೈನ್ಸ್ ವಿನ್ಯಾಸಗೊಳಿಸಿರುತ್ತವೆ. ಇವೆಲ್ಲದರ ಜೊತೆ ನೀವು ಆಧುನಿಕ ಆ್ಯಕ್ಸೆಸರೀಸ್ ಅಂದ್ರೆ ಕಿವಿಯ ರಿಂಗ್ಸ್, ಬಳೆ, ಉಂಗುರ, ಬ್ರೇಸ್ಲೆಟ್ ಇತ್ಯಾದಿ ಧರಿಸಿದರೆ ಇನ್ನಷ್ಟು ಚೆನ್ನ! ಈ ರೀತಿ ಉಡುಗೆಯ ಗುಣ, ಮೌಲ್ಯ, ಡಿಸೈನ್ಸ್ ನೀಡುವ ಅನುಭವ ಇತ್ಯಾದಿ ಎಲ್ಲವನ್ನೂ ನಿಮಗೊಪ್ಪುವ ಬ್ರಾಂಡ್ ನೋಡಿ ಖರೀದಿಸಿ, ಈ ಸಲದ ಫೆಸ್ಟಿವ್ಸ್ ಎಂಜಾಯ್ ಮಾಡಿ!
– ಜಿ. ಸುಮತಿ





