ಕಿಟ್ಟಿಯ ಮದುವೆಯಾಗಿ 1 ತಿಂಗಳು ಕಳೆದಿತ್ತು. ಅವನ ಪತ್ನಿ ಒಮ್ಮೆ ಗೊಣಗಿದಳು, “ಇತ್ತೀಚೆಗೆ ನೀವು ನನ್ನ ಸೌಂದರ್ಯದ ಬಗ್ಗೆ ಹೊಗಳುವುದೇ ಇಲ್ಲ. ಮದುವೆಯಾದ ಹೊಸತರಲ್ಲಿ ಎಷ್ಟೊಂದು ವರ್ಣೀಸುತ್ತಿದ್ದಿರಿ….”
ಕಿಟ್ಟಿ ಹೇಳಿದ, “ಡಾರ್ಲಿಂಗ್, ಯಾವುದು ಹೇಗಾದರೂ ಇರಲಿ, ನಿನ್ನ ಕೇಶ ಸೌಂದರ್ಯ ಮಾತ್ರ ಹೊಗಳದೇ ಇರಲಾಗದು. ಹಾಗಾಗಿಯೇ ನಿನ್ನ ದಟ್ಟ, ಮೇಘರಾಶಿಯಂಥ ಮುಂಗುರುಳು ಒಮ್ಮೆ ಪಲ್ಯ, ಒಮ್ಮೆ ರೊಟ್ಟಿ, ಒಮ್ಮೊಮ್ಮೆ ಅನ್ನದಲ್ಲೂ ಮಿಂಚುತ್ತಿರುತ್ತದೆ…..” ಎನ್ನುವುದೇ?
ಪತ್ನಿ : ಇಂದಿನ ಸಂಜೆ ಎಂಥ ರೊಮ್ಯಾಂಟಿಕ್ ಆಗಿದೆ. ಒಂದು ಒಳ್ಳೆ ಹಾಡು ಹೇಳಬಾರದೇ?
ಪತಿ : ನೀಲ ಮೇಘ ಗಾಳಿ ಬೀಸಿ ತೂರಾಡೋ ಹಾಗೆ….
ಪತ್ನಿ : ಆಹಾ…. ಹಾಗೇ ಮುಂದುವರಿಸಿ…..
ಪತಿ : ತೂರಾಡೋ ಹಾಗೇ….. ತೂರಾಡೋ ಹಾಗೆ….
ಪತ್ನಿ : ಏನು ಕರ್ಮ ಇದು? ತೂರಾಡೋದೇ ಆಗೋಯ್ತು. ಮುಂದೆ ಏನಾಯ್ತು ಅಂತ ಹೇಳಬಾರದೇ?
ಪತಿ : ತೂರಾಡಿ ತೂರಾಡಿ ರಸ್ತೆ ಬದಿ, ಚರಂಡಿಯಲ್ಲಿ ಬಿದ್ದ ಅಂತ!
ಗುರೂಜಿ : ಬಹು ದಿನಗಳಿಂದ ನಾವು ಮಾತನಾಡದೇ ಇದ್ದರೆ ಅದಕ್ಕೆ `ವೌನವ್ರತ’ ಎಂದು ಅರ್ಥ.
ಭಕ್ತಗಣ : ಹೌದೇ? ನಮ್ಮಲ್ಲಿ ಅದಕ್ಕೆ `ವಿವಾಹಿತ’ ಅಂತ ಅರ್ಥ! ಒಮ್ಮೆ ಒಬ್ಬ ರಾಜ ತನ್ನ ಸಭೆಯಲ್ಲಿದ್ದ ಎಲ್ಲಾ ಪತಿಯರ ಕುರಿತಾಗಿ ವಿಚಾರಿಸುತ್ತಿದ್ದವು.
“ಈ ಸಭೆಯಲ್ಲಿ ಇರುವ ಎಲ್ಲಾ ಪತಿಯರೂ ಪತ್ನಿಗೆ ಹೆದರುವವರಾದರೆ ಎಡಗಡೆ ಸಾಲಿನಲ್ಲಿ ನಿಂತುಕೊಳ್ಳಿ. ಯಾರು ತನ್ನ ಪತ್ನಿಗೆ ಹೆದರುವುದಿಲ್ಲವೋ ಅವರು ಬಲಗಡೆ ಸಾಲಿನಲ್ಲಿ ನಿಂತುಕೊಳ್ಳಿ!”
ಆಗ ಅಲ್ಲಿದ್ದ ಎಲ್ಲಾ ಗಂಡಸರೂ ಎಡಗಡೆಯ ಸಾಲಿನಲ್ಲಿ ಹೋಗಿ ನಿಂತರು. ಒಬ್ಬ ಮಾತ್ರ ತನ್ನ ಜಾಗದಲ್ಲಿ ಭದ್ರವಾಗಿ ಹಾಗೆ ಕುಳಿತಿದ್ದ.
ರಾಜ : ಶಭಾಷ್! ನೀನು ಒಬ್ಬನಾದರೂ ನಮ್ಮ ರಾಜ್ಯದಲ್ಲಿ ಪತ್ನಿಗೆ ಹೆದರದ ಪತಿ ಇದ್ದೀಯಲ್ಲ….! ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು. ಈ ಕುರಿತಾಗಿ ಇಲ್ಲಿ ಎಡಗಡೆ ನಿಂತಿರುವ ಎಲ್ಲರಿಗೂ ಒಂದಿಷ್ಟು ಕಿವಿಮಾತು ವಿವರಿಸು.
ಪ್ರಜೆ : ಸ್ವಾಮಿ, ಅದು ಹಾಗಲ್ಲ. ನಾನು ನನ್ನ ಪತ್ನಿಗೆ ಹೆದರಿ ಇಲ್ಲೇ ಕುಳಿತಿದ್ದೇನೆ. ಅವಳನ್ನು ಕೇಳದೆ ಏನೂ ಮಾಡಲಾರೆ. ಈಗ ಇಲ್ಲಿಂದ ಎದ್ದು ಎಡ ಸಾಲಿನಲ್ಲಿ ನಿಲ್ಲಬೇಕೋ ಬೇಡವೋ ಎಂದು ಅವಳನ್ನೇ ಕೇಳಬೇಕು. ಇಷ್ಟು ಹೊತ್ತಿನಲ್ಲಿ ಅವಳು ಗಾಢ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುತ್ತಾಳೆ. ಎಬ್ಬಿಸಿದರೆ ನನ್ನ ಕಥೆ ಮುಗಿಯಿತು! ಏನು ಮಾಡಲಿ ಅಂತ ಯೋಚಿಸುತ್ತಿದ್ದೇನೆ….
ಇದನ್ನು ಕೇಳುತ್ತಿದ್ದ ರಾಜ ದಿಢೀರ್ ಎಂದು ಮೂರ್ಛೆ ಹೋದನಂತೆ!
ವಿವಾಹಿತ : ನಮ್ಮಂಥ ಮದುವೆಯಾದ ಪತಿಯರ ಗೋಳು ಯಾರಿಗೂ ಬೇಡಪ್ಪ….
ಅವಿವಾಹಿತ : ಯಾಕಪ್ಪ? ನಿನಗೆ ಅಂಥ ಕಷ್ಟ ಬಂದಿರುವುದಾದರೂ ಏನು?
ವಿವಾಹಿತ : ಮದುವೆಗೆ ಮೊದಲು ಮನೆಯವರೆಲ್ಲ ಒಂದೇ ಸಮ ಬೈತಿದ್ದರು, `ಅಯ್ಯೋ ಹಾಳಾದವನೆ…. ನಮ್ಮ ಮಾತಂತೂ ಕೇಳೋಲ್ಲ ನೀನು…. ನಿನ್ನ ಮದುವೆ ಆಗಲಿ ಇರು, ಆಗ ನಿನ್ನ ಹೆಂಡತಿ ಬಂದು ನಿನ್ನ ಕಿವಿ ಹಿಂಡಿ ಹೇಳುತ್ತಾಳೆ, ಆಗ ನಿನಗೆ ಸರಿಯಾಗಿ ಬುದ್ಧಿ ಬರುತ್ತೆ ಬಿಡು.’
ಅವಿವಾಹಿತ : ಇನ್ನೇನು? ಆಕೆ ಬಂದು ನಿನಗೆ ಬುದ್ಧಿ ಕಲಿಸಿದ್ದಾಯಿತಲ್ಲ….? ಇನ್ನೇನು ಸಮಸ್ಯೆ?
ವಿವಾಹಿತ : ಅಯ್ಯೋ…. ಹಾಗಲ್ಲ! ನನ್ನ ಹೆಂಡತಿ ಈಗ ಹೇಳೋದು, `ಇಷ್ಟು ವರ್ಷ ಆದರೂ ನಿಮ್ಮ ಮನೆಯವರು ನಿಮಗೆ ಯಾಕೆ ಬುದ್ಧಿ ಕಲಿಸಲಿಲ್ಲ?’ ಅಂತ! ಯಾರಿಗ್ ಹೇಳೋಣಾ…. ನಮ್ಮ ಪ್ರಾಬ್ಲಮ್ಮು?
ಸದಾ ಹಗಲೂ ರಾತ್ರಿ ಕ್ಯಾಶ್ ಎಣಿಸುತ್ತಾ ಲೆಕ್ಕಾಚಾರ ಹಾಕುತ್ತಿದ್ದ ಜುಗ್ಗ ಗಂಡನಿಗೆ ಬುದ್ಧಿ ಕಲಿಸಲು ಹೆಂಡತಿ ನಿರ್ಧರಿಸಿದಳು. ಬ್ಯಾಂಕ್ ನೌಕರಿಯಲ್ಲಿದ್ದ ಕ್ಯಾಶಿಯರ್ ಗಂಡನಿಗೆ ಈ ಭಾಷೆಯೇ ಸರಿ ಎಂದು ನಿರ್ಧರಿಸಿದಳು.
ಆ ರಾತ್ರಿ ಪ್ರೀತಿಯಿಂದ ಟಚ್ ಮಾಡಲು ಬಂದ ಗಂಡನಿಗೆ ಈಕೆ ಸಿಡಾರನೆ ರೇಗಿದಳು, `ನೋಡ್ರಿ, ಈ ತಿಂಗಳ ನಿಮ್ಮ 4 ಟ್ರಾನ್ಸಾಕ್ಷನ್ಸ್ ಪೂರ್ತಿ ಆಗಿದೆ. ಇದೇನಾದರೂ ಮುಂದುವರಿದರೆ ಪ್ರತಿ ಟ್ರಾನ್ಸಾಕ್ಷನ್ ಗೂ 1000/ ರೂ. ದಂಡ ಕಟ್ಟಬೇಕು.
ಕೂಡಲೇ ಗಂಡ ತೆಪ್ಪಗೆ ಗೊರಕೆಗೆ ಶರಣಾದ!
ಸತೀಶ : ನಿನಗೆ ಗೊತ್ತೇ, ಈ ವಿಶ್ವದಲ್ಲಿ ಕೇವಲ 2 ಬಗೆಯ ನೆಟ್ ವರ್ಕ್ ಮಾತ್ರವೇ ಬಲು ಬೇಗ ಡೇಟಾ ಟ್ರಾನ್ಸ್ ಫರ್ ಮಾಡಬಲ್ಲದು.
ಸುರೇಶ : ಹೌದಾ? ಅವು ಯಾವುವು ಅಂತೀಯಾ?
ಸತೀಶ : ಇಮೇಲ್‌ಫೀಮೇಲ್!
ಟೀಚರ್ : ಕನ್ನಡವನ್ನು ನಮ್ಮ ಮಾತೃಭಾಷೆ ಅಂತೀವಿ. ಅದನ್ನೇಕೆ ನಾವು ನಮ್ಮ ಪಿತೃಭಾಷೆ ಅನ್ನಬಾರದು?
ಗುಂಡ : ಯಾವ ಮನೆಯಲ್ಲಿ ತಾನೇ ಅಮ್ಮಂದಿರು ಅಪ್ಪಂದಿರನ್ನು ಮಾತನಾಡಲಿಕ್ಕೆ ಬಿಟ್ಟಿದ್ದಾರೆ…. ಹೇಳಿ ಟೀಚರ್!
ಆಗ ಬಿಕ್ಕಳಿಸಲು ಆರಂಭಿಸಿದ ಟೀಚರ್, ಕ್ಲಾಸ್ ಮುಗಿದರೂ ಇನ್ನೂ ಅವಳು ನಿಲ್ಲಿಸಲಿಲ್ಲವಂತೆ!
ಗುಂಡ ಶಾಲೆಯಿಂದ ಮನೆಗೆ ಬಂದವನೇ ರೊಂಯನೇ ತನ್ನ ಬ್ಯಾಗನ್ನು ಬದಿಗೆಸೆದು, ಶೂ ಸಾಕ್ಸ್ ಕಳಚಿ ಮಂಚದಡಿ ದೂಡಿದ. ಕೋಪದಲ್ಲಿ ಅವನು ಊಟ ಸಹ ಬೇಡ ಎಂದ.
ಗುಂಡ : ಅಮ್ಮ ಸರಿಯಾಗಿ ಹೇಳು. ನನ್ನ ಹೆಸರು ಜಿ. ಗುಂಡ ತಾನೇ?
ಅಮ್ಮ : ಹೌದು ಕಣೋ….. ಅದರಲ್ಲಿ ನಿನಗೇನು ಡೌಟು?
ಗುಂಡ : ಮತ್ತೆ ನಮ್ಮ ಟೀಚರ್ ಯಾವಾಗಲೂ ನನ್ನನ್ನು ಪೆದ್ದಗುಂಡ ಅಂತಾನೇ ಕರೀತಾರಲ್ಲ…..???
ಪತ್ನಿ : ರೀ…. ಬೇಗ ಏಳ್ರಿ! ಆಗಿನಿಂದ ಎಬ್ಬಿಸ್ತಾ ಇದ್ದೀನಿ…. ಚಾ ಮಾಡಬೇಕಿದೆ ನಂಗೆ.
ಪತಿ : ಅಯ್ಯೋ ಮಾರಾಯ್ತಿ! ಚಾ ಮಾಡಬೇಕಿದ್ದರೆ ನೀ ಧಾರಾಳ ಮಾಡು. ಅದಕ್ಕೆ ನನ್ನನ್ನು ಯಾಕೆ ಎಬ್ಬಿಸಬೇಕು? ನಾನೇನು ನಿನ್ನ ಚಾ ಪಾತ್ರೆಯಲ್ಲಿ ಮಲಗಿದ್ದೀನೇನು?
ಪತ್ನಿ : ಪಕ್ಕದ ಮನೆಯವರು ಆಗಿನಿಂದ ಸದಾ ಜಗಳ ಆಡ್ತಿದ್ದಾರೆ. ತುಸು ಏನು ಎತ್ತ ಅಂತ ಹೋಗಿ ವಿಚಾರಿಸಬಾರದೇ?
ಪತಿ : ಅಯ್ಯೋ…. ನಾನು ಬೆಳಗ್ಗೆಯಿಂದ 2-2 ಸಲ ಹೋಗಿ ವಿಚಾರಿಸಿದೆ…. ನಾನು ಅಲ್ಲಿಗೆ ಹೋಗಿದ್ದನ್ನೇ ದೊಡ್ಡದು ಮಾಡಿ ಜಗಳ ಆಡ್ತಿದ್ದಾರೆ… ಇದೆಂಥ ಕಥೆ?
ಜ್ಯೋತಿಷಿ : ಆಹಾ…. ಸ್ವಾಮಿ, ನಿಮ್ಮ ಹಸ್ತರೇಖೆ ಬಹಳ ಚೆನ್ನಾಗಿದೆ. ನನಗಂತೂ ಇದರಲ್ಲಿ ಎಲ್ಲೆಲ್ಲೂ ಹಣದ ಹೊಳೆ ಹರಿಯುತ್ತಿರುವಂತೆ ಕಂಡುಬರುತ್ತಿದೆ. ಬಲು ಬೇಗ ನೀವು ಅತಿ ಶ್ರೀಮಂತರಾಗುತ್ತೀರಿ!
ಭಕ್ತ : ಸ್ವಾಮಿ, ದಯವಿಟ್ಟು ನನ್ನ ಜಾತಕ, ಹಸ್ತರೇಖೆಗಳಿಂದ ಬ್ಯಾಂಕಿಗೆ 1-2 ಲಕ್ಷ ಟಾನ್ಸ್ ಫರ್ ಮಾಡಿಸಿಬಿಡಿ, ನಿಮಗೂ ಧಾರಾಳ ದಕ್ಷಿಣೆ ಕೊಡ್ತೀನಿ!
ಆರ್ಮಿ ಟ್ರೇನಿಂಗ್ ಜೋರಾಗಿ ನಡೆಯುತ್ತಿತ್ತು.
ಅಧಿಕಾರಿ : ನಿನ್ನ ಕೈಯಲ್ಲಿ ಇದೇನಿದು?
ಸುರೇಶ : ಸಾರ್…. ಇದು ಬಂದೂಕು!
ಅಧಿಕಾರಿ : ಇದು ಕೇವಲ ಬಂದೂಕವಲ್ಲ… ನಮ್ಮ ದೇಶದ ಮರ್ಯಾದೆ ಪ್ರಶ್ನೆ, ನಿನ್ನ ಪ್ರತಿಷ್ಠೆ, ನಿನ್ನ ತಾಯಿ ಸಮಾನ!
ನಂತರ ಆ ಅಧಿಕಾರಿ ನಿಧಾನವಾಗಿ ಮತ್ತೊಬ್ಬ ಸೈನಿಕನತ್ತ ನಡೆದು ಬಂದ.
ಅಧಿಕಾರಿ : ಸತೀಶ, ಈಗ ನೀನು ಹೇಳು. ನಿನ್ನ ಕೈಯಲ್ಲಿ ಇರುವುದೇನು? ತಾನು ಅಧಿಕಾರಿಯಿಂದ ತಕ್ಷಣ ಶಭಾಷ್ ಗಿರಿ ಗಿಟ್ಟಿಸಲೇಬೇಕೆಂದು ತಪ್ಪು ಮಾಡದೆ ಸತೀಶ ಪಟಪಟನೆ ಉತ್ತರಿಸಿದ.
ಸತೀಶ : ಸಾರ್…… ಇದು ನಮ್ಮ ಸುರೇಶನ ತಾಯಿಯ ಸಮಾನ, ನಮ್ಮ ದೇಶದ ಮರ್ಯಾದೆಯ ಪ್ರಶ್ನೆ, ಸುರೇಶನ ತಾಯಿಯ ಪ್ರತಿಷ್ಠೆಯಂತೆಯೇ ಭಾವಿಸಬೇಕು!





