ಕಿಟ್ಟಿಯ ಮದುವೆಯಾಗಿ 1 ತಿಂಗಳು ಕಳೆದಿತ್ತು. ಅವನ ಪತ್ನಿ ಒಮ್ಮೆ ಗೊಣಗಿದಳು, ``ಇತ್ತೀಚೆಗೆ ನೀವು ನನ್ನ ಸೌಂದರ್ಯದ ಬಗ್ಗೆ ಹೊಗಳುವುದೇ ಇಲ್ಲ. ಮದುವೆಯಾದ ಹೊಸತರಲ್ಲಿ ಎಷ್ಟೊಂದು ವರ್ಣೀಸುತ್ತಿದ್ದಿರಿ....''

ಕಿಟ್ಟಿ ಹೇಳಿದ, ``ಡಾರ್ಲಿಂಗ್‌, ಯಾವುದು ಹೇಗಾದರೂ ಇರಲಿ, ನಿನ್ನ ಕೇಶ ಸೌಂದರ್ಯ ಮಾತ್ರ ಹೊಗಳದೇ ಇರಲಾಗದು. ಹಾಗಾಗಿಯೇ ನಿನ್ನ ದಟ್ಟ, ಮೇಘರಾಶಿಯಂಥ ಮುಂಗುರುಳು ಒಮ್ಮೆ ಪಲ್ಯ, ಒಮ್ಮೆ ರೊಟ್ಟಿ, ಒಮ್ಮೊಮ್ಮೆ ಅನ್ನದಲ್ಲೂ ಮಿಂಚುತ್ತಿರುತ್ತದೆ.....'' ಎನ್ನುವುದೇ?

ಪತ್ನಿ : ಇಂದಿನ ಸಂಜೆ ಎಂಥ ರೊಮ್ಯಾಂಟಿಕ್‌ ಆಗಿದೆ. ಒಂದು ಒಳ್ಳೆ ಹಾಡು ಹೇಳಬಾರದೇ?

ಪತಿ : ನೀಲ ಮೇಘ ಗಾಳಿ ಬೀಸಿ ತೂರಾಡೋ ಹಾಗೆ....

ಪತ್ನಿ : ಆಹಾ.... ಹಾಗೇ ಮುಂದುವರಿಸಿ.....

ಪತಿ : ತೂರಾಡೋ ಹಾಗೇ..... ತೂರಾಡೋ ಹಾಗೆ....

ಪತ್ನಿ : ಏನು ಕರ್ಮ ಇದು? ತೂರಾಡೋದೇ ಆಗೋಯ್ತು. ಮುಂದೆ ಏನಾಯ್ತು ಅಂತ ಹೇಳಬಾರದೇ?

ಪತಿ : ತೂರಾಡಿ ತೂರಾಡಿ ರಸ್ತೆ ಬದಿ, ಚರಂಡಿಯಲ್ಲಿ ಬಿದ್ದ ಅಂತ!

ಗುರೂಜಿ : ಬಹು ದಿನಗಳಿಂದ ನಾವು ಮಾತನಾಡದೇ ಇದ್ದರೆ ಅದಕ್ಕೆ `ವೌನವ್ರತ' ಎಂದು ಅರ್ಥ.

ಭಕ್ತಗಣ : ಹೌದೇ? ನಮ್ಮಲ್ಲಿ ಅದಕ್ಕೆ `ವಿವಾಹಿತ' ಅಂತ ಅರ್ಥ! ಒಮ್ಮೆ ಒಬ್ಬ ರಾಜ ತನ್ನ ಸಭೆಯಲ್ಲಿದ್ದ ಎಲ್ಲಾ ಪತಿಯರ ಕುರಿತಾಗಿ ವಿಚಾರಿಸುತ್ತಿದ್ದವು.

``ಈ ಸಭೆಯಲ್ಲಿ ಇರುವ ಎಲ್ಲಾ ಪತಿಯರೂ ಪತ್ನಿಗೆ ಹೆದರುವವರಾದರೆ ಎಡಗಡೆ ಸಾಲಿನಲ್ಲಿ ನಿಂತುಕೊಳ್ಳಿ. ಯಾರು ತನ್ನ ಪತ್ನಿಗೆ ಹೆದರುವುದಿಲ್ಲವೋ ಅವರು ಬಲಗಡೆ ಸಾಲಿನಲ್ಲಿ ನಿಂತುಕೊಳ್ಳಿ!''

ಆಗ ಅಲ್ಲಿದ್ದ ಎಲ್ಲಾ ಗಂಡಸರೂ ಎಡಗಡೆಯ ಸಾಲಿನಲ್ಲಿ ಹೋಗಿ ನಿಂತರು. ಒಬ್ಬ ಮಾತ್ರ ತನ್ನ ಜಾಗದಲ್ಲಿ ಭದ್ರವಾಗಿ ಹಾಗೆ ಕುಳಿತಿದ್ದ.

ರಾಜ : ಶಭಾಷ್‌! ನೀನು ಒಬ್ಬನಾದರೂ ನಮ್ಮ ರಾಜ್ಯದಲ್ಲಿ  ಪತ್ನಿಗೆ ಹೆದರದ ಪತಿ ಇದ್ದೀಯಲ್ಲ....! ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು. ಈ ಕುರಿತಾಗಿ ಇಲ್ಲಿ ಎಡಗಡೆ ನಿಂತಿರುವ ಎಲ್ಲರಿಗೂ ಒಂದಿಷ್ಟು ಕಿವಿಮಾತು ವಿವರಿಸು.

ಪ್ರಜೆ : ಸ್ವಾಮಿ, ಅದು ಹಾಗಲ್ಲ. ನಾನು ನನ್ನ ಪತ್ನಿಗೆ ಹೆದರಿ ಇಲ್ಲೇ ಕುಳಿತಿದ್ದೇನೆ. ಅವಳನ್ನು ಕೇಳದೆ ಏನೂ ಮಾಡಲಾರೆ. ಈಗ ಇಲ್ಲಿಂದ ಎದ್ದು ಎಡ ಸಾಲಿನಲ್ಲಿ ನಿಲ್ಲಬೇಕೋ ಬೇಡವೋ ಎಂದು ಅವಳನ್ನೇ ಕೇಳಬೇಕು. ಇಷ್ಟು ಹೊತ್ತಿನಲ್ಲಿ ಅವಳು ಗಾಢ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುತ್ತಾಳೆ. ಎಬ್ಬಿಸಿದರೆ ನನ್ನ ಕಥೆ ಮುಗಿಯಿತು! ಏನು ಮಾಡಲಿ ಅಂತ ಯೋಚಿಸುತ್ತಿದ್ದೇನೆ....

ಇದನ್ನು ಕೇಳುತ್ತಿದ್ದ ರಾಜ ದಿಢೀರ್‌ ಎಂದು ಮೂರ್ಛೆ ಹೋದನಂತೆ!

ವಿವಾಹಿತ : ನಮ್ಮಂಥ ಮದುವೆಯಾದ ಪತಿಯರ ಗೋಳು ಯಾರಿಗೂ ಬೇಡಪ್ಪ....

ಅವಿವಾಹಿತ : ಯಾಕಪ್ಪ? ನಿನಗೆ ಅಂಥ ಕಷ್ಟ ಬಂದಿರುವುದಾದರೂ ಏನು?

ವಿವಾಹಿತ : ಮದುವೆಗೆ ಮೊದಲು ಮನೆಯವರೆಲ್ಲ ಒಂದೇ ಸಮ ಬೈತಿದ್ದರು, `ಅಯ್ಯೋ ಹಾಳಾದವನೆ.... ನಮ್ಮ ಮಾತಂತೂ ಕೇಳೋಲ್ಲ ನೀನು.... ನಿನ್ನ ಮದುವೆ ಆಗಲಿ ಇರು, ಆಗ ನಿನ್ನ ಹೆಂಡತಿ ಬಂದು ನಿನ್ನ ಕಿವಿ ಹಿಂಡಿ ಹೇಳುತ್ತಾಳೆ, ಆಗ ನಿನಗೆ ಸರಿಯಾಗಿ ಬುದ್ಧಿ ಬರುತ್ತೆ ಬಿಡು.'

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ