ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ಕೇವಲ ರಾಗ, ತಾಳ, ಪಲ್ಲವಿ, ಕೃತಿ ಮತ್ತು ಕಲ್ಪನಾಸ್ವರಗಳ ಸಂಗಮವಲ್ಲ. ಅದರ ಹಿಂದೆ ಶತಮಾನಗಳ ಸಂಗೀತ ಪರಂಪರೆ, ಗುರು–ಶಿಷ್ಯ ಸಂಬಂಧ, ನಿರಂತರ ಸಾಧನೆ, ಸಂಸ್ಕಾರ, ಭಕ್ತಿ ಮತ್ತು ಕಲೆಯ ಮೇಲಿನ ಅಚಲವಾದ ನಿಷ್ಠೆ ಅಡಗಿದೆ. ಒಬ್ಬ ಕಲಾವಿದ ವೇದಿಕೆಯ ಮೇಲೆ ಎರಡು ಗಂಟೆಗಳ ಕಾಲ ಹಾಡಿ ಪ್ರೇಕ್ಷಕರನ್ನು ರಂಜಿಸುವುದು ಒಂದು ಸಾಧನೆ. ಆದರೆ ತಾನು ಕಲಿತ ವಿದ್ಯೆಯನ್ನು ನೂರಾರು ವಿದ್ಯಾರ್ಥಿಗಳಿಗೆ ಕಲಿಸಿ, ಅವರಲ್ಲಿ ಕೆಲವರನ್ನು ಮುಂದಿನ ಪೀಳಿಗೆಯ ಕಲಾವಿದರನ್ನಾಗಿ ರೂಪಿಸುವುದು ಇನ್ನೂ ದೊಡ್ಡ ಸಾಧನೆ. ಅಂತಹ ಸಂಗೀತ ಸೇವೆಯನ್ನು ಹಲವು ದಶಕಗಳಿಂದ ಮಾಡುತ್ತಾ ಬಂದಿರುವ ಪ್ರಮುಖ ಕಲಾವಿದ ಮತ್ತು ಗುರು ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್. ಗಾಯಕರಾಗಿ, ಗುರುಗಳಾಗಿ, ಸಂಗೀತ ಸಂಸ್ಥೆಗಳ ಮಾರ್ಗದರ್ಶಕರಾಗಿ ಹಾಗೂ ಪರಂಪರೆಯ ಸಂರಕ್ಷಕರಾಗಿ ಅವರು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ವಿದ್ವಾಂಸರು ವಯಕ್ತಿಕವಾಗಿ ನಮ್ಮ ಇಡೀ ಕುಟುಂಬಕ್ಕೇ ಸಂಗೀತ ಗುರುಗಳಾಗಿದ್ದು ಅವರ ವ್ಯಕ್ತಿ ವ್ಕಕ್ತಿತ್ವ ಮತ್ತು ಸಂಗೀತ ಸಾಧನೆಯನ್ನು ಶಿಕ್ಷಕರ ದಿನಾಚರಣೆಯಂದು ಎಲ್ಲರಿಗೂ ಪರಿಚಯಿಸಲು ಬಹಳ ಸಂತೋಷವಾಗುತ್ತಿದೆ.

1959ರ ಜೂನ್ 5ರಂದು ಜನನ – ಬಾಲ್ಯದಿಂದಲೇ ಸಂಗೀತದತ್ತ ಒಲವು

1959ರ ಜೂನ್ 5ರಂದು ಶ್ರೀಮತಿ ಸುಬ್ಬಮ್ಮ ಮತ್ತು ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯ ಅವರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದ ಶ್ರೀನಿವಾಸ್ ಅವರಿಗೆ ಬಾಲ್ಯದಿಂದಲೇ ಸಂಗೀತದತ್ತ ಸಹಜವಾದ ಆಸಕ್ತಿ ಹೊಂದಿದ್ದ ಅವರು, ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಾಲ ಪಾಠ ಅವರ ತಂದೆಯವರಿಂದಲೇ ಆರಂಭವಾಗುತ್ತದೆ. ಸಹಜವಾಗಿಯೇ ದೊರೆತ ಸಂಗೀತ ಪ್ರತಿಭೆಗೆ ನಿರಂತರ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನ ಸೇರ್ಪಡೆಯಾಗಿ, ಮುಂದೆ ಅವರು ಉತ್ತಮ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ರೂಪುಗೊಂಡರು. ಚಿಂತಲಪಲ್ಲಿ ಪರಂಪರೆಯ ಸಂಗೀತ ವಾತಾವರಣದಲ್ಲಿ ಬೆಳೆದ ಅವರು, ಕೇವಲ ಹಾಡುವುದನ್ನು ಕಲಿಯಲಿಲ್ಲ; ಸಂಗೀತವನ್ನು ಅರ್ಥಮಾಡಿಕೊಳ್ಳುವುದು, ಅದರ ಸೂಕ್ಷ್ಮತೆಗಳನ್ನು ಗ್ರಹಿಸುವುದು ಮತ್ತು ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವುದು ಅವರ ಕಲಿಕೆಯ ಪ್ರಮುಖ ಭಾಗವಾಯಿತು.

ಗುರುಗಳ ಸರಣಿ – ನಾಲ್ಕು ಹಂತಗಳಲ್ಲಿ ಬೆಳೆದ ಸಂಗೀತ ಸಾಧನೆ

ಮೈಸೂರು ಅರಸರಾಗಿದ್ದ ನಾಲ್ವಡಿ ಶ್ರೀ ಕೃಷ್ಣ ರಾಜ ಒಡೆಯರ್ ಅವರ ಅಸ್ಥಾನ ವಿದ್ವಾಂಸರಾಗಿದ್ದಂತಹ ಚಿಂತಲಪಲ್ಲಿ ಶ್ರೀ ವೆಂಕಟರಾಯರು ಮತ್ತು ಅವರ ತಂದೆಯವರ ಅಪರೂಪದ ಚಿತ್ರ

ಮೈಸೂರು ಅರಸರಾಗಿದ್ದ ನಾಲ್ವಡಿ ಶ್ರೀ ಕೃಷ್ಣ ರಾಜ ಒಡೆಯರ್ ಅವರ ಅಸ್ಥಾನ ವಿದ್ವಾಂಸರಾಗಿದ್ದಂತಹ ಚಿಂತಲಪಲ್ಲಿ ಶ್ರೀ ವೆಂಕಟರಾಯರು ಮತ್ತು ಅವರ ತಂದೆಯವರ ಅಪರೂಪದ ಚಿತ್ರವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸ್ ಅವರ ಸಂಗೀತ ಪಯಣದಲ್ಲಿ ಹಲವು ಶ್ರೇಷ್ಠ ಗುರುಗಳ ಮಾರ್ಗದರ್ಶನವಿದೆ.

ಅವರು ಸಂಗೀತ ಶಿಕ್ಷಣ ಪಡೆದ ಪ್ರಮುಖ ಗುರುಗಳು:

  • ವಿದ್ವಾನ್ ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯ — 1972 ರಿಂದ 1975
  • ವಿದ್ವಾನ್ ಚಿಂತಲಪಲ್ಲಿ ಶ್ರೀ ರಮೇಶ್ — 1977 ರಿಂದ 1984
  • ಚಿಂತಲಪಲ್ಲಿ ಶ್ರೀ ಕೃಷ್ಣಮೂರ್ತಿಗಳು — 1984 ರಿಂದ 1995
  • ವಿದ್ವಾನ್ ಶ್ರೀ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಗಳು — 1996ರಿಂದ ಮುಂದುವರಿದ ಮಾರ್ಗದರ್ಶನ

ಈ ಗುರು–ಶಿಷ್ಯ ಪರಂಪರೆಯೇ ಅವರ ಸಂಗೀತ ವ್ಯಕ್ತಿತ್ವದ ಪ್ರಮುಖ ಬುನಾದಿ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಗುರುವಿನ ಬಳಿಯಲ್ಲಿ ವರ್ಷಗಳ ಕಾಲ ಕುಳಿತು ಕಲಿಯುವುದು, ಸ್ವರ–ತಾಳದ ಸೂಕ್ಷ್ಮತೆಗಳನ್ನು ಅರಿಯುವುದು, ಪ್ರತಿದಿನ ಅಭ್ಯಾಸ ಮಾಡುವುದು ಮತ್ತು ವೇದಿಕೆ ಪ್ರದರ್ಶನಕ್ಕೆ ಸಿದ್ಧರಾಗುವುದು ಅತ್ಯಂತ ಮಹತ್ವದ್ದಾಗಿದೆ. ಶ್ರೀನಿವಾಸ್ ಅವರ ಸಂಗೀತ ಪಯಣವೂ ಇದೇ ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ