ಅದಿತಿ ಸಾಗರ್

ಕನ್ನಡ ಚಿತ್ರರಂಗಕ್ಕೆ ನವ ನಾಯಕಿಯಾಗಿ ಕಾಲಿಟ್ಟಿರುವ ಅದಿತಿ ಸಾಗರ್ತಮ್ಮ ಕುರಿತು ಇಲ್ಲಿ ಏನು ಹೇಳಿದ್ದಾರೆ…..?

ನಟ ಮತ್ತು ಕಲಾ ನಿರ್ದೇಶಕ ಅರುಣ್‌ ಸಾಗರ್‌ ರ ಪುತ್ರಿ ಅದಿತಿ ಸಾಗರ್‌ ಶಿವರಾಜಕುಮಾರ್‌ ರ 125ನೇ ಚಿತ್ರವಾದ `ವೇದ’ದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.`ವೇದ’ ಚಿತ್ರದಲ್ಲಿ ಶಿವಣ್ಣನ ಮಗಳು ಕನಕಾ ಪಾತ್ರವನ್ನು ಅದಿತಿ ನಿರ್ವಹಿಸಿದ್ದು ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈಗ ಡಾಲಿ ಧನಂಜಯ್‌ ನಿರ್ಮಾಣದ `ಹೆಗ್ಗಣ ಮುದ್ದು’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವಿನಾಶ್‌ ಬಳೆಕ್ಕಳ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿದ್ದಾರೆ.

ಮೊದಲ ಚಿತ್ರ

ಅದಿತಿ ಸಾಗರ್‌ ಪಾಲಿಗೆ ಇದು ನಾಯಕಿಯಾಗಿ ಮೊದಲ ಸಿನಿಮಾ ಆಗಿದೆ. ಅವರ ವೃತ್ತಿ ಜೀವನದಲ್ಲಿ ಮಹತ್ವದ ಹೆಜ್ಜೆಯೂ ಸಹ ಆಗಿದೆ. ಅಪ್ಪಟ ಕನ್ನಡದ ಪ್ರತಿಭೆ ಅದಿತಿಯರ ಕಿರು ಪರಿಚಯ ಇಲ್ಲಿದೆ. ಅದಿತಿ ಸಾಗರ್‌ ಅಪ್ಪಟ ಕನ್ನಡದ ಪ್ರತಿಭೆ. ಅಪ್ಪನಂತೆ ತಾನೂ ದೊಡ್ಡ ಕಲಾವಿದೆ ಆಗಬೇಕು ಎಂಬ ಆಸೆ ಅವರಿಗಿದೆ. ಗಾಯಕಿ ಗೀತ ಸಾಹಿತ್ಯ ಇನ್ನು ಗಾಯಕಿಯೂ ಆಗಿರುವ ಅದಿತಿ ಕೆಜಿಎಫ್‌ ಪ್ರಮೋಶನ್‌ ಹಾಡಿಗೆ ಸಾಹಿತ್ಯ ಬರೆದು, ಧ್ವನಿ ನೀಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. 2019ರಲ್ಲಿ `ಕವಲುದಾರಿ’ ಸಿನಿಮಾದ ಸಂಶಯ ಹಾಡನ್ನು ಹಾಡಿದರು.

ಬಳಿಕ `ಫ್ರೆಂಚ್‌ ಬಿರಿಯಾನಿ’ ಸಿನಿಮಾದ `ಬೆಂಗಳೂರು ರಾಂಪ್’ ಸಾಂಗ್‌ ಬಹಳ ಫೇಮಸ್‌ ಆಯಿತು. ತನ್ನ 14ನೇ ವಯಸ್ಸಿನಲ್ಲಿ `ರಾಂಬೋ-2′ ಚಿತ್ರದ ಧಮ್ ಮಾರೋ ಧಮ್ ಮೂಲಕ ಗಾಯನ ಕ್ಷೇತ್ರಕ್ಕೆ ಅದಿತಿ ಪ್ರವೇಶಿಸಿದರು. ಮೊದಲ ಹಾಡಿನಲ್ಲಿಯೇ ಅವರಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಗೆ ಅದಿತಿ, ಆಮೀರ್‌ ಖಾನ್‌ ನಿರ್ಮಾಣದ ಡಾಕ್ಯುಮೆಂಟರಿಯಲ್ಲಿ ಅಡಿಷನ್‌ ಮ್ಯೂಸಿಕ್‌ ನೀಡಿದ್ದಾರೆ.

A2

ನಾಯಕಿ ಪಾತ್ರದ ಹಂಬಲ

ಗಟ್ಟಿಯಾದ ನಾಯಕಿಯ ಪಾತ್ರವನ್ನು ನಿರ್ವಹಿಸುವುದು ನನಗೆ ಮುಖ್ಯವಾಗಿತ್ತು. ನಟಿಯಾದಳು ಸಹ ನಾಯಕ ನಟನ ಪಾತ್ರದಷ್ಟೇ ಪ್ರಮುಖವಾಗಿ ಕಾಣಿಸಿಕೊಳ್ಳಬೇಕು. ಅವರು ತಮ್ಮ ಪಾತ್ರದ ಮೂಲಕ ತಮ್ಮ ಕಥೆಯನ್ನು ಹೇಳಬೇಕು ಎಂದು ಅದಿತಿ ಅಭಿಪ್ರಾಯ ಪಡುತ್ತಾರೆ ಹೆಣ್ಣುಮಕ್ಕಳು ಸಿನಿಮಾದ ಕಥೆ ಬರೆದಾಗ, ಅದರಲ್ಲಿ ವಿಶೇಷತೆ ಇರುತ್ತದೆ. ಏಕೆಂದರೆ ಪುರುಷರಿಗಿಂತ ನಾವು ಜಗತ್ತನ್ನು ನೋಡುವ, ಅನುಭವಿಸುವ ರೀತಿಯೇ ವಿಭಿನ್ನ! ಹಾಗಾಗಿ ಹೆಣ್ಣುಮಕ್ಕಳು ಸಿನಿಮಾಗಾಗಿ ಕಥೆಗಳನ್ನು ನಾವೇ ಬರೆದಾಗ, ನಾವೇ ಅದನ್ನು ಹೇಳಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಲಿದೆ, ಎಂಬುದು ಅದಿತಿ ಅಭಿಪ್ರಾಯ.

Aditi_Sagar_20200724182834_500x500

ಹೆಗ್ಗಣ ಮುದ್ದು

ಅದಿತಿ ಪಾಲಿಗೆ `ಹೆಗ್ಗಣ ಮುದ್ದು’ ಎರಡನೇ ಸಿನಿಮಾ ಆಗಿದ್ದು, ಚೊಚ್ಚಲ ನಿರ್ದೇಶಕರೊಡನೆ ಕೆಲಸ ಮಾಡುವ ಅನುವಭ ಸಹ ಹೊಸತು. ಆದರೆ ಹಿಂದೆ ಗಾಯಕಿಯಾಗಿದ್ದ ಅದಿತಿಗೆ, ಅವಿನಾಶ್‌ ಗೀತರಚನೆಕಾರರಾಗಿ ಪರಿಚಯವಿದ್ದರು. ಹಾಗಾಗಿ ಅವರೇ ಕಥೆ ಹೇಳುತ್ತಾರೆ ಎಂದರೆ ಆ ಕಥೆಯಲ್ಲಿ ಏನೋ ವಿಶೇಷವಿದೆ ಎನ್ನುವುದು ಅದಿತಿಯವರಿಗೆ ಅರಿವಿತ್ತು. `ವೇದ’ ಸಿನಿಮಾಗಿಂತ ಇಲ್ಲಿ ಅವರು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರೇ ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.

`ವೇದ’ ಸಿನಿಮಾದಲ್ಲಿ ಕೇವಲ ಆ್ಯಕ್ಷನ್‌ ಮೂಲಕವೇ ಎಲ್ಲವನ್ನೂ ಹೇಳಬೇಕಾಗಿತ್ತು. ಅಲ್ಲಿ ಮಾತಿರಲಿಲ್ಲ, ಆದರೆ ಸಹಜ ಅಭಿನಯದಲ್ಲಿ ಎಲ್ಲವನ್ನೂ ತೋರ್ಪಡಿಸಬೇಕಿತ್ತು.

Adithandarunsagar

ಅನುದಿನದ ಜೀವನ

`ಹೆಗ್ಗಣ ಮುದ್ದು’ ಸಿನಿಮಾದಲ್ಲಿ, ಅನುದಿನದ ಜೀವನದಲ್ಲಿ ನಾನು ಕಂಡಂಥ ಪ್ರಬಲ ಮನೋಭಾವದ ಮಹಿಳೆಯ ಕಥೆಯನ್ನು ನಿರ್ದೇಶಕರು ಗಟ್ಟಿ ಪಾತ್ರಗಳ ಮೂಲಕ ಚೆನ್ನಾಗಿ ನಿರೂಪಿಸಿದ್ದಾರೆ. ಇದು ಸಂಬಂಧಗಳ ಬಗ್ಗೆ ಪ್ರಾಮಾಣಿಕವಾಗಿ ಹೇಳಲು ಹೊರಟ ಸಿನಿಮಾ ಎಂದು ಅದಿತಿ ಹೇಳುತ್ತಾರೆ.

ರಾಘವೇಂದ್ರ ಅಡಿಗ ಎಚ್ಚೆನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ