ಆನ್ಲೈನ್ಪೇಮೆಂಟ್ಮೂಲಕ ನೀವು ಫ್ರಾಡ್ಗೆ ತುತ್ತಾಗದಂತೆ ಪಾರಾಗುವುದು ಹೇಗೆ ಎಂದು ಅರಿಯಲು ಸೂಚನೆಗಳನ್ನು ಅನುಸರಿಸಿ….

ಪರ್ಸಿನಿಂದ ಹಣ ತೆಗೆದು ಅಂಗಡಿಯವರಿಗೆ ಕೊಟ್ಟು, ಚಿಲ್ಲರೆ ವಾಪಸ್ಸು ಪಡೆಯುವುದರಲ್ಲಿದ್ದ ಚೌಕಾಸಿಯ ಮಜಾವನ್ನು ಡಿಜಿಟಲ್ ಪೇಮೆಂಟ್‌ ತಪ್ಪಿಸಿತು. ಜೊತೆಗೆ ಮನೆಯಲ್ಲೇ ಕುಳಿತು ಆನ್‌ ಲೈನ್‌ ಪೇಮೆಂಟ್‌ ಮಾಡುವುದು ಎಲ್ಲರಿಗೂ ಮಾಮೂಲಿ ಆಗಿಹೋಗಿದೆ. ಇದರಿಂದಲೂ ಗೆಳತಿಯರೆಲ್ಲ ಕೂಡಿ ಶಾಪಿಂಗ್‌ ಗೆ ಹೊರಡುತ್ತಿದ್ದ ಮಜಾ ತಪ್ಪಿಹೋಗಿದೆ. ಇದೆಲ್ಲ ಸರಿ, ಉತ್ತಮ ಪ್ರಾಡಕ್ಟ್ಸ್ ಸಿಕ್ಕಿದರೆ ಸಾಕು ಎಂದುಕೊಂಡರೆ, ಆನ್‌ ಲೈನ್‌ ಪೇಮೆಂಟ್‌ ನಲ್ಲಿ ಫ್ರಾಡ್‌ ಬೆಚ್ಚಿ ಬೀಳಿಸುವಂಥದ್ದು. ಈ ಆನ್‌ ಲೈನ್ ಶಾಪಿಂಗ್‌ಡಿಜಿಟಲ್ ಪೇಮೆಂಟ್‌ ಸತತ ಮುಂದುವರಿದಿದ್ದು, ಇದರ ಜೊತೆಯಲ್ಲೇ ಇಂಟರ್‌ ನೆಟ್‌ ಫ್ರಾಡ್‌ಲೂಟಿಗಳೂ ಹೆಚ್ಚುತ್ತಿವೆ. ಹೀಗಾಗಿ ಜನರು ವಿಶೇಷ ರೂಪದಲ್ಲಿ ಆನ್‌ ಲೈನ್‌ ನಲ್ಲಿ ಖರೀದಿ ನಡೆಸುವಾಗ, ಕೆಲವು ಮಹತ್ವಪೂರ್ಣ ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಆಗ ಮಾತ್ರ ಅವರು ಅಪಾಯಕಾರಿ ವಂಚನೆ, ಲೂಟಿಗಳಿಂದ ಪಾರಾಗಬಹುದು.

ಸೂಕ್ತ ವೆಬ್ಸೈಟ್ಆ್ಯಪ್ಸ್ ಆಯ್ಕೆ : ಆನ್‌ ಲೈನ್‌ಖರೀದಿ ಯಾ ಪೇಮೆಂಟ್‌ ಮಾಡುವಾಗ, ಸದಾ ನೆನಪಿನಲಿ ಇಡಬೇಕಾದುದು ಎಂದರೆ, ನೀವು ಯಾವುದೇ ಪ್ರಮಾಣಿತ ಹಾಗೂ ವಿಶ್ವಸನೀಯ ಆ್ಯಪ್ಸ್ ವೆಬ್‌ ಸೈಟ್‌ ಗಳನ್ನು ಮಾತ್ರ ಆರಿಸಬೇಕು. ಸಾಮಾನ್ಯವಾಗಿ ಮೋಸ ಮಾಡುವ ವಂಚಕರು ಅಗ್ಗದ ಆಫರ್ಸ್‌ ಹಾಗೂ ಅತ್ಯಾಕರ್ಷಕ ಡಿಸ್ಕೌಂಟ್ಸ್ ಮೂಲಕ ನಕಲಿ ಸೈಟ್ಸ್ ರೂಪಿಸುತ್ತಾರೆ. ಹೀಗಾಗಿ ವೆಬ್‌ ಸೈಟ್‌ ಪರೀಕ್ಷಿಸಿ ಹಾಗೂ ಸುರಕ್ಷಿತ ಕನೆವೆಕ್ಷನ್‌ಇದೇ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ.

ಪರ್ಸನಲ್ ಇನ್ಫಾರ್ಮೇಶನ್ಎಷ್ಟು ಕೊಡಬೇಕು ? : ಆನ್‌ ಲೈನ್‌ ಪೇಮೆಂಟ್‌ ಮಾಡುವಾಗ ಎಂದೂ ನಿಮ್ಮ ಪರ್ಸನಲ್ ಮಾಹಿತಿ ಕೊಡಲೇಬೇಡಿ. ಅಂದ್ರೆ ಪಾಸ್‌ ವರ್ಡ್‌, ಪಿನ್, ಕ್ರೆಡಿಟ್‌ ಕಾರ್ಡ್‌ ನ ಪಿನ್ ನಂಬರ್  ಇತ್ಯಾದಿ ಬ್ಯಾಂಕ್‌ ಅಥವಾ ಇನ್ನಿತರ ನ್ಯಾಯಬದ್ಧ ಸಂಸ್ಥೆ ಯಾವುದು ಎಂದೆಂದಿಗೂ ಈ ವಿವರಗಳನ್ನು ಕೇಳುವುದೇ ಇಲ್ಲ.

ಪಬ್ಲಿಕ್ವೈಫೈ ಬಳಸದಿರಿ : ಆನ್‌ ಲೈನ್‌ ವ್ಯವಹಾರ ನಡೆಸುವಾಗ, ಎಂದೂ ಪಬ್ಲಿಕ್‌ ವೈಫೈನ ನೆಟ್‌ ವರ್ಕ್‌ ನ್ನು ಬಳಸಲೇ ಬೇಡಿ! ಏಕೆಂದರೆ ಇಂಥವುಗಳಲ್ಲಿ ಸುರಕ್ಷತೆಯ ಯಾವ ಗ್ಯಾರಂಟಿಯೂ ಇಲ್ಲ. ಇದರಿಂದ ಪಾಪಿ ಹ್ಯಾಕರ್ಸ್‌ ನಿಮ್ಮ ಡೇಟಾವನ್ನು ಸುಲಭವಾಗಿ ಕದಿಯುತ್ತಾರೆ. ಹೀಗಾಗಿ ನಿಮ್ಮ ಮೊಬೈಲ್ ‌ಅಥವಾ ಮನೆಯಿಂದ ಮಾತ್ರ ಇಂಥ ವ್ಯವಹಾರ ನಡೆಸಿ. ಸುರಕ್ಷಿತ ವರ್ಚುಯೆಲ್ ‌ಪ್ರೈವೇಟ್‌ ನೆಟ್‌ ವರ್ಕ್‌ ನ್ನು ತೀರಾ ಎಮರ್ಜೆನ್ಸಿ ಸಂದರ್ಭದಲ್ಲಿ ಮಾತ್ರ ಬಳಸಿರಿ.

ಓಟಿಪಿಯಿಂದ ಸದಾ ಸಾವಧಾನಾಗಿರಿ : ಆನ್‌ ಲೈನ್‌ ಪೇಮೆಂಟ್‌ ಮಾಡುವಾಗೆಲ್ಲ ನಿಮಗೆ ಓಟಿಪಿ ದೊರೆತಾಗ, ಅದನ್ನು ತಕ್ಷಣ ಬಳಸಿಕೊಳ್ಳಿ, ಇದನ್ನು ಎಂದಿಗೂ ಬೇರೆಯವರ ಜೊತೆ ಹಂಚಿಕೊಳ್ಳಬೇಡಿ. ನಿಮಗೆ ಈ ಕುರಿತಾಗಿ ಯಾವುದೇ ಅನಗತ್ಯ ಕರೆ ಬಂದರೆ, ಅವರು ನಿಮ್ಮ ಓಟಿಪಿ ವಿವರ ಕೇಳಿದರೆ, ತಕ್ಷಣ ಆ ಕರೆ ಕಟ್‌ ಮಾಡಿ ಬ್ಲಾಕ್‌ ಮಾಡಿಬಿಡಿ. ಆ ಡೀಲ್ ‌ಗೆ ಸಂಬಂಧಿಸಿದ ಬ್ಯಾಂಕ್‌ ನ್ನು ಸಂಪರ್ಕಿಸಿ, ನಿಮ್ಮ ಹಣ ಸುರಕ್ಷಿತ ತಾನೇ ಎಂದು ಖಾತ್ರಿ ಪಡಿಸಿಕೊಳ್ಳಿ.

ನಿಮ್ಮ ಪಾಸ್ವರ್ಡ್ಸದಾ ಸ್ಟ್ರಾಂಗ್ಆಗಿರಲಿ : ಆನ್‌ ಲೈನ್‌ ಪೇಮೆಂಟ್‌ ಗಾಗಿ ನೀವು ಯಾವುದೇ ಅಕೌಂಟ್‌ ಬಳಸಿದರೂ, ಅದಕ್ಕೆ ಮರೆಯದೆ ಸ್ಟ್ರಾಂಗ್‌ ಪಾಸ್‌ ವರ್ಡ್‌ ಬಳಸಿಕೊಳ್ಳಿ. ಅದರಲ್ಲಿ ಅಗತ್ಯ ಆಲ್ಫಾ ನ್ಯೂಮೆರಿಕಲ್ ವಿಶೇಷ ಸಿಂಬಲ್ಸ್ ಬಳಸಿರಿ. ಇಂಥ ಮಿಶ್ರಣದಿಂದ ಯಾರಿಗೂ ಅದನ್ನು ಭೇದಿಸಿ, ನಿಮ್ಮ ಹಣ ಹೊಡೆಯಲಾಗದು.

ಟ್ರಾನ್ಸಾಕ್ಷನ್ಹಿಸ್ಟರಿಯನ್ನು ಮರೆಯದೆ ಪರೀಕ್ಷಿಸುತ್ತಿರಿ : ಆನ್‌ ಲೈನ್‌ ಪೇಮೆಂಟ್‌ ನ ನಂತರ ನಿಮ್ಮ ಬ್ಯಾಂಕ್‌ ಸ್ಟೇಟ್‌ ಮೆಂಟ್ ಹಾಗೂ ಟ್ರಾನ್ಸಾಕ್ಷನ್‌ ಹಿಸ್ಟರಿಯನ್ನು ನಿಯಮಿತವಾಗಿ ಆಗಾಗ ಪರೀಕ್ಷಿಸುತ್ತಿರಿ. ಅದರಲ್ಲೇನಾದರೂ ಚಿತ್ರವಿಚಿತ್ರ ಎನಿಸುವಂಥ ವ್ಯವಹಾರ ನಡೆದಿದ್ದರೆ ಕೂಡಲೇ ನಿಮ್ಮ ಬ್ಯಾಂಕ್‌ ನ್ನು ಸಂಪರ್ಕಿಸಿ, ನಿಮ್ಮ ಅಕೌಂಟ್‌ ನ ಹಣ ಸುರಕ್ಷಿತ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಹಾಗೊಂದು ವೇಳೆ ವ್ಯತ್ಯಾಸ ಆಗಿದ್ದರೆ, ಅದರ ಮೂಲ ಪತ್ತೆಹಚ್ಚಿ, ಸೈಬರ್‌ ಕ್ರೈಮ್ ಗೆ ಕಾಲ್ ‌ಮಾಡಿ, ದೂರು ದಾಖಲಿಸಿ.

ಎಂಎಫ್ಎ ಬಲು ಸಹಕಾರಿ : ನಿಮ್ಮ ಸುರಕ್ಷತೆ ಮತ್ತಷ್ಟು ಮಜಬೂತಾಗಿರಲಿ ಎಂದೇ ಎಲ್ಲೆಲ್ಲಿ ಸಾಧ್ಯವೋ, ಮಲ್ಟಿ ಫ್ಯಾಕ್ಟರ್‌ಅಥೆಂಟಿಫಿಕೇಶನ್‌ ನ್ನು ಅಗತ್ಯ ಬಳಸಿಕೊಳ್ಳಿ. ಈ ಪ್ರಣಾಲಿಯಲ್ಲಿ 2 ಅಥವಾ ಅಧಿಕ ವಿಧಾನಗಳಿಂದ, ನಿಮ್ಮ ಐಡೆಂಟಿಟಿಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಇದರಿಂದ ನಿಮ್ಮ ಅಕೌಂಟ್‌ ನ ಹಣ ಮತ್ತಷ್ಟು ಸೇಫ್‌ ಆಗುತ್ತದೆ.

ನಕಲಿ ಇಮೇಲ್ ಹಾಗೂ ಲಿಂಕ್ಗಳಿಂದ ದೂರವಿರಿ : ಮೋಸ ಮಾಡುವ ಪಾಪಿಗಳು ಸದಾ ನಕಲಿ ಇಮೇಲ್ ‌ಹಾಗೂ ಲಿಂಕ್ಸ್ ಕಳುಹಿಸುತ್ತಾರೆ. ಇಂಥ ಕಿಡಿಗೇಡಿಗಳಿಂದ ಸದಾ ಎಚ್ಚರವಾಗಿರಿ, ಎಂದೂ ಅಪರಿಚಿತ ಲಿಂಕ್‌ ಗಳನ್ನು ಕ್ಲಿಕ್‌ ಮಾಡಲೇಬೇಡಿ. ನಿಮ್ಮ ಬ್ಯಾಂಕ್‌ ಅಥವಾ ಇತರ ಸಂಸ್ಥೆಗಳಿಂದ ಈ ಕುರಿತು ಸಂದೇಶ ಬಂದಾಗ, ನೇರ ಅವರ ಆಡಳಿತಾತ್ಮಕ ವೆಬ್‌ ಸೈಟ್‌ ತಲುಪಿ, ಅಲ್ಲಿಂದ ನಿಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಿ.

ಡೇಟಾ ಎನ್ಕ್ರಿಪ್ಶನ್ನ್ನು ಅಗತ್ಯ ಪರೀಕ್ಷಿಸಿ : ಆನ್‌ ಲೈನ್‌ ಪೇಮೆಂಟ್‌ ಮಾಡುವಾಗೆಲ್ಲ, ಆಯಾ ವೆಬ್‌ ಸೈಟ್‌ ಯಾ ಆ್ಯಪ್‌ ನ ಡೇಟಾ ಎನ್‌ ಕ್ರಿಪ್ಶನ್‌ (ಸುರಕ್ಷತಾ ಕ್ರಮ) ನಡೆಯುತ್ತಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇದು ನಿಮ್ಮ ಪರ್ಸನಲ್ ಮಾಹಿತಿಯನ್ನು ಸುರಕ್ಷಿತ ಗೊಳಿಸುವಲ್ಲಿ ಹೆಚ್ಚು ಸಹಕಾರಿ.

ಆ್ಯಂಟಿವೈರಸ್ಸಾಫ್ಟ್ ವೇರ್ಬಳಸಲು ಮರೆಯದಿರಿ : ನಿಮ್ಮ ಮೊಬೈಲ್ ಫೋನ್‌ ಯಾ ಆ್ಯಂಟಿವೈರಸ್‌ ಸಾಫ್ಟ್ ವೇರ್‌ ಅಳವಡಿಕೆ ಆಗಿದೆ ತಾನೇ ಎಂದು ಡಬ್ಬಲ್ ಖಾತ್ರಿ ಪಡೆದುಕೊಳ್ಳಿ. ಆಗ ಮಾತ್ರ ಯಾವ ವೈರಸ್‌, ಸ್ಪೈವೇರ್‌, ಮಾಲ್ ವೇರ್‌ ಗಳೂ ನಿಮ್ಮ ಸಾಧನಗಳಿಗೆ ಹಾನಿ ಮಾಡಲಾರ. ಇದು ನಿಮ್ಮ ಆನ್‌ ಲೈನ್‌ ಸುರಕ್ಷತೆಯನ್ನು ಮತ್ತಷ್ಟು ಸಶಕ್ತ ಗೊಳಿಸಬಲ್ಲದು.

ನೀವು ಫ್ರಾಡ್‌ ಗೆ ತುತ್ತಾದರೆ ಸರ್ಕಾರದ ನೆರವಿನಿಂದ ಹಣ ಬರುತ್ತದೆ ಬಿಡು, ಎಂದು ನಿರ್ಲಕ್ಷ್ಯ ವಹಿಸದಿರಿ. ನಿಮ್ಮ ಹಣಕ್ಕೆ ನೀವೇ ಹೊಣೆ!

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ