- ರಾಘವೇಂದ್ರ ಅಡಿಗ ಎಚ್ಚೆನ್.

ಓಜೆ ಎಸ್ ಮೂವಿ ಮೇಕರ್ಸ್ ಅರ್ಪಿಸುವ “ಚಂದ್ರಿ” ಕನ್ನಡ  ಚಲನಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ.ತುತ್ತಿನಚೀಲ ತುಂಬಿಸಿಕೊಳ್ಳಲು ಎರಡು ಜೀವಗಳ ಹೋರಾಟವೇ ಇಲ್ಲಿದೆ. ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನ ಹಡಗಲಿ, ಮದಲಘಟ್ಟ ಮತ್ತು ಮರಳವಾಡಿಯ ಸುತ್ತಮುತ್ತ 18ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸೈದಪ್ಪನಾಗಿ ಕೆಜಿಎಫ್,ಪೈಲ್ವಾನ್, ಐರಾವತ, ರುಸ್ತುಂ, ಜಗ್ಗು ದಾದ, ಬಘೀರ, ಭೈರತಿ ರಣಗಲ್ ಮೊದಲಾದ ಚಿತ್ರಗಳಲ್ಲೂ ನಟಿಸಿ ಜನಪ್ರಿಯರಾದ ಹಿರಿಯ ಕಲಾವಿದ ರಾಮರಾವ್. ಜಿ ಅವರು ನಟಿಸಿದ್ದಾರೆ

chandri 1

ಚಂದ್ರಿ ಆಗಿ ವ್ಯೋಮಿ ಸಾಕೆಲ್ ಅಭಿನಯಿಸಿದ್ದಾರೆ. ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ .ಪ್ರವೀಣ್ ಚೌತಿ, ಎಸ್ ಕೆ ಬಾಬು ಬೆಳಗೊಳ, ಸುರೇಶ್ ದೇವರಮನಿ, ಶಾರದಾ ಕಲ್ಲೂರ್, ಮಂಜೇಶ್ ತಾರಾಗಣದಲ್ಲಿದ್ದಾರೆ. ಸಿಂಕ್ ಸೌಂಡ್ ನೊಂದಿಗೆ ಚಿತ್ರೀಕರಣ ನಡೆದಿರುವುದು ಈ ಚಿತ್ರದ ವಿಶೇಷ. ಚಿತ್ರದಲ್ಲಿ 2 ಹಾಡುಗಳಿದ್ದು ವೆಂಕಟೇಶ್ ಕೊಟ್ಟೂರು ಅವರೇ ಬರೆದಿದ್ದಾರೆ.

chandri 2

ಛಾಯಾಗ್ರಹಣ ಸುನಿಲ್ ಕೆ ಆರ್ ಎಸ್, ಸಂಭಾಷಣೆ ಮಹಾಂತೇಶ್ ನವಲಕಾರ್, ಸಂಗೀತ ಎಸ್ ಕೆ ಸಹಿಶ್ಯಾಮ್, ಸಂಕಲನ ಮುತ್ತುರಾಜ್ ಟಿ, ಸಿಂಕ್ ಸೌಂಡ್ ಮೋಹನ್ – ಅಜಿತ್ ಯಳಿವಾಳ , 5.1 ಮಿಕ್ಸಿಂಗ್ ರಾಜ ಭಾಸ್ಕರ್, ಡಿ.ಐ ವರುಣ್ ಗೌಡ, ಕಲೆ ಬಸವರಾಜ್ ಆಚಾರ್, ಪಿ.ಆರ್.ಓ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಕಾರ್ಯಕಾರಿ ನಿರ್ಮಾಪಕರು ಎಚ್. ಶಶಿಧರ್-ಆರ್ಮುಗಂ, ಚಿತ್ರ ಕಥೆ, ನಿರ್ದೇಶನ ಎಸ್.ವೆಂಕಟೇಶ ಕೊಟ್ಟೂರು ಮಾಡಿದ್ದಾರೆ. ಶ್ರೀಮತಿ ಅನುಷಾ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ