ರಾಜಕೀಯಕ್ಕಿಂತ ದೊಡ್ಡದು ನಾಗರಿಕ ಜವಾಬ್ದಾರಿಜರ್ಮನಿಯಲ್ಲಿರುವ ಧ್ರುವ್ ರಾಠಿಯ ನದಿ ಸ್ವಚ್ಛತೆಯ ಕ್ರೆಡಿಟ್ ಕುರಿತಾದ ಟೀಕೆಗೆ 20 ಹರೆಯದ ಸುರೇಂದ್ ಸಿಂಗ್ ಚೌಧರಿಯ (ಬಿಟ್ಟು ತಬಾಹಿಸಮಯೋಚಿತ ತಿರುಗೇಟು!

ಮಧ್ಯಪ್ರದೇಶದ ಬಿಯೋರಾ ಪಟ್ಟಣದ ಅಜನಾರ್ ನದಿ ಇಂದು ಕೇವಲ ಒಂದು ನದಿಯ ಕಥೆಯಲ್ಲ. ಅದು ಒಬ್ಬ ಸಾಮಾನ್ಯ ಯುವಕನ ಅಸಾಮಾನ್ ನಾಗರಿಕ ಜವಾಬ್ದಾರಿಯ ಕಥೆ. ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ತಬಾಹಿ ಎಂದು ಪರಿಚಿತರಾಗಿರುವ ಸುರೇಂದ್ರ ಸಿಂಗ್ ಚೌಧರಿ, ಕಲುಷಿತಗೊಂಡಿದ್ದ ಅಜನಾರ್ ನದಿಯ ಸ್ವಚ್ಛತೆಗೆ ಸ್ವತಃ ಕೈಜೋಡಿಸಿ ದೇಶದ ಗಮನ ಸೆಳೆದಿದ್ದಾರೆ.

While many people complained about the polluted Ajnar River ...

ತಾನಿದ್ದ ಪ್ರದೇಶದ ಬಳಿಯೇ ಇದ್ದ ಅಜನಾರ್ ನದಿಗೆ ಜನ ಸಾಮಾನ್ಯರು ಕಸ ಕಡ್ಡಿಗಳನ್ನು ಹಾಕಿ ಕೊಳಕು ಮಾಡಿದ್ದನ್ನು ಕಂಡು ಆತನಿಗೆ ಬಹಳ ಬೇಸರವಾಗಿಯಿತು. ಸಾಮಾನ್ಯವಾಗಿ ಬಹುತೇಕರು ಸರ್ಕಾರ ಎನು ಮಾಡುತ್ತಿದೆ ಎಂದು ಜೋರಾಗಿ ಪ್ರತಿಭಟಿಸುವುದು ಸಹಜ ಪ್ರಕ್ರಿಯೆಯಾದರೆ, ಬಿಟ್ಟು ತನ್ನ ಪಾಡಿಗೆ ತಾನು, ಸದ್ದಿಲ್ಲದೇ,  ಜನವರಿ 26ರಂದು ಕೈಯಲ್ಲಿ ಹಾರೆ, ಪಿಕಾಸಿ, ಗುದ್ದಲಿ ಹಿಡಿದು ಆರಂಭಿಸಿದ ಈ ಪ್ರಯತ್ನ ಮುಂದೆ ಹಲವು ತಿಂಗಳ ಅಭಿಯಾನವಾಗಿ ಬೆಳೆದಿದೆ. ಪ್ಲಾಸ್ಟಿಕ್, ಬಾಟಲಿ, ಕಳೆ ಹಾಗೂ ಇತರ ತ್ಯಾಜ್ಯವನ್ನು ಅವರು ಸ್ವತಃ ತೆರವುಗೊಳಿಸುತ್ತಾ ಬಂದಿದ್ದಾರೆ. ಅವರ before-after ಚಿತ್ರಗಳು ವೈರಲ್ ಆದ ಬಳಿಕ ಈ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು. ಸ್ಥಳೀಯ ಆಡಳಿತವೂ ನಂತರ ಯಂತ್ರೋಪಕರಣಗಳ ಮೂಲಕ ನೆರವು ನೀಡಿತು.

Bittu Tabahi meets Madhya Pradesh CMಇದೀಗ ಈ ಯುವಕನ ಕೆಲಸಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ನೆದರ್‌ಲ್ಯಾಂಡ್ಸ್‌ನ The Ocean Cleanup ಸಂಸ್ಥೆಯ ಸಂಸ್ಥಾಪಕ ಬೊಯಾನ್ ಸ್ಲಾಟ್ ಕೂಡ ಅವರಿಗೆ ಕೆಲಸದ ಆಹ್ವಾನ ನೀಡಿದ್ದಾರೆ. ಆದರೆ ತಾನೂ ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ ಮತ್ತು ಬೇರೆಯವರು ಮಾಡಿದರೂ ಸಹಿಸುವುದಿಲ್ಲ ಎನ್ನುವಂತಹ ದೂರದ ಜರ್ಮನಿಯಲ್ಲಿರುವ ಧ್ರುವ್ ರಾಠಿ ಕೈಯ್ಯಲ್ಲಿ ಆಗದೇ ಇರೋನು ಮೈಯೆಲ್ಲಾ ಪರಚಿಕೊಂಡ ಎನ್ನುವಂತೆ ಅನಗತ್ಯವಾಗಿ ಈ ವಿಚಾರವಾಗಿ ಕ್ರೆಡಿಟ್ ವಿವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಟ್ಟು ತಬಾಹಿ ಯಾರು?

Bittu Tabahi 20-Year-Old Youth Gives Polite Retort to Dhruv Rathee Over BJP Remark

ಸುರೇಂದ್ರ ಸಿಂಗ್ ಚೌಧರಿ ಮಧ್ಯಪ್ರದೇಶದ ಯುವ ವಿದ್ಯಾರ್ಥಿ. ಸಾಮಾಜಿಕ ಜಾಲತಾಣದಲ್ಲಿ ಅವರು Bittu Tabahi ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅಜನಾರ್ ನದಿಯ ದುಸ್ಥಿತಿಯನ್ನು ಕಂಡು ಯಾರಾದರೂ ಬಂದು ಸ್ವಚ್ಛ ಮಾಡುತ್ತಾರೆ” ಎಂದು ಕಾಯದೆ, ತಾವೇ ಕೆಲಸ ಆರಂಭಿಸುವ ನಿರ್ಧಾರ ಕೈಗೊಂಡರು. ವರದಿಗಳ ಪ್ರಕಾರ, ಆರಂಭದಲ್ಲಿ ಕೆಲವು ಸ್ನೇಹಿತರು ಅವರೊಂದಿಗೆ ಇದ್ದರೂ ನಂತರ ಅವರು ಹಿಂದೆ ಸರಿದರು. ಆದರೆ ಸುರೇಂದ್ರ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಸ್ವಂತ ಶ್ರಮ ಮತ್ತು ಸಂಪನ್ಮೂಲ ಬಳಸಿ ನದಿಯ ತ್ಯಾಜ್ಯವನ್ನು ತೆರವುಗೊಳಿಸುತ್ತಾ ಮುಂದುವರಿದರು.  ಈ ಕೆಲಸದ ವೇಳೆ ಅವರಿಗೆ ಆರೋಗ್ಯ ಸಮಸ್ಯೆಯೂ ಎದುರಾಯಿತು. ಸ್ಥಳೀಯ ವರದಿಗಳ ಪ್ರಕಾರ, ನದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾಲಿಗೆ ಸೋಂಕು ಉಂಟಾಗಿತ್ತು. ಆದರೂ ಅವರು ಕೆಲಸ ಮುಂದುವರಿಸಿದರು. ಅವರ ಕೆಲಸದ ವಿಶೇಷತೆ ಏನೆಂದರೆ,  ಯಾವುದೇ ದೊಡ್ಡ ಸಂಸ್ಥೆ, ದೊಡ್ಡ ಬಜೆಟ್ ಅಥವಾ ರಾಜಕೀಯ ವೇದಿಕೆಯ ನಿರೀಕ್ಷೆಯಿಲ್ಲದೆಒಬ್ಬ ಯುವಕ ತನ್ನ ಊರಿನ ಸಮಸ್ಯೆಯನ್ನು ತನ್ನದೇ ಮಸ್ಯೆ ಎಂದುಕೊಂಡದ್ದುಇದೇ ಕಾರಣಕ್ಕೆ ಅವರ ಕಥೆ ದೇಶದಾದ್ಯಂತ ಗಮನ ಸೆಳೆಯಿತು.

ಬಿಟ್ಟು ಭೇಟಿಯಾದ ಮಧ್ಯಪ್ರದೇಶದ ಮುಖ್ಯಮಂತ್ರಿ

ಬಿಟ್ಟು ತಬಾಹಿ ಅವರ ಕೆಲಸ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಮೋಹನ್ ಯಾದವ್ ಬಿಟ್ಟು ತಬಾಹಿಯನ್ನು ಭೋಪಾಲ್‌ನಲ್ಲಿ ಭೇಟಿಯಾಗಿ ಆವನ ಪ್ರಯತ್ನವನ್ನು ಶ್ಲಾಘಿಸಿ, ಒಬ್ಬ ವ್ಯಕ್ತಿಯ ಪ್ರಾಮಾಣಿಕ ಪ್ರಯತ್ನವೂ ಸಾಮಾಜಿಕ ಬದಲಾವಣೆಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ತಬಾಹಿ ಕೆಲಸವೇ ಉದಾರಣೆ ಎಂಬ ಸಂದೇಶವನ್ನು ನೀಡಿದರು. ಇತರರಿಗೂ ಅದರಲ್ಲೂ ಇಂದಿನ ಝೆನ್ ಜೀ ಯುವಜನತೆಗೆ ಪ್ರೇರಣೆಯಾಗಲಿ ಎಂದು ಈ ಭೇಟಿಯ ವಿಡಿಯೋವನ್ನು ಮುಖ್ಯಮಂತ್ರಿಯವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಳ್ಳುತ್ತಿದ್ದಂತೆಯೇ, ಅದರ ಶಾಖ ದೂರದ ಜರ್ಮನಿಯಲ್ಲಿದ ಧ್ರುವ್ ರಾಠಿಯ ಬುಡಕ್ಕೆ ತಗುಲಿ ಅಲ್ಲಿಂದಲೇ ಆತ ಟೀಕೆಯನ್ನು ಪ್ರಾರಂಭಿಸಿದ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ