ಹಬ್ಬದ ಸಂದರ್ಭದಲ್ಲಿ ಯಾವುದೇ ತರಹದ ಡ್ರೆಸ್ ಇರಲಿ, ಅದಕ್ಕೆ ಸೂಟ್ ಆಗುವಂತೆ ನಿಮ್ಮ ಹೇರ್ ಸ್ಟೈಲ್ ಹೇಗಿರಬೇಕು ಎಂಬುದನ್ನು ತುಸು ಗಮನಿಸೋಣವೇ…..?
ಮಾಯಾ ಅಂದು ತನ್ನ ಬಾಯ್ ಫ್ರೆಂಡ್ ಜೊತೆ ಕಾಫಿ ಡೇಟ್ ಗಾಗಿ ಹೋಗಬೇಕಿತ್ತು. ಅದಕ್ಕಾಗಿ ಬೇಕಾದ ಡ್ರೆಸ್ಆ್ಯಕ್ಸೆಸರೀಸ್ ಎಲ್ಲವನ್ನೂ ರೆಡಿ ಮಾಡಿಕೊಂಡಳು. ಆದರೆ ಸೂಕ್ತ ಹೇರ್ ಸ್ಟೈಲ್ ಯಾವುದೂ ಹೊಂದುತ್ತಿಲ್ಲ ಎಂದು ಪೇಚಾಡತೊಡಗಿದಳು. ಪ್ರತಿಸಲ ಹೊಸ ಹೇರ್ ಸ್ಟೈಲ್ ಬದಲಾಯಿಸುವುದು ಎಂದರೆ ಅವಳಿಗೆ ಬಲು ಬೇಜಾರು. ಅದಕ್ಕೆ ಅವಳ ಬಳಿ ಧಾರಾಳ ಸಮಯ ಇರಲಿಲ್ಲ. ಯಾವ ಡ್ರೆಸ್ ಗೆ ಎಂಥ ಸ್ಟೈಲಿಶ್ ಹೇರ್ ಸ್ಟೈಲ್ ಎಂಬುದೂ ಅವಳಿಗೆ ತಿಳಿಯುತ್ತಿರಲಿಲ್ಲ.
ಈ ರೀತಿ ನೀವು ಡೇಟ್ ಯಾ ಪಾರ್ಟಿಗೆ ಹೊರಟಿದ್ದೀರಿ ಅಂದಾಗ, ನಿಮ್ಮ ಡ್ರೆಸ್ ಗೆ ಬಹುತೇಕ ಹೊಂದುವಂಥ ಹೇರ್ ಸ್ಟೈಲ್ ನ್ನೇ ಅನುಸರಿಸಿ. ಈ ಸಮಸ್ಯೆ ಮಾಯಾ ಒಬ್ಬಳದೇ ಅಲ್ಲ, ಬಹುತೇಕ ಅನೇಕ ತರುಣಿಯರದಾಗಿದೆ. ಸಾಮಾನ್ಯವಾಗಿ ನಾವು ಇತರರ ಹೇರ್ ಸ್ಟೈಲ್ ನೋಡಿ ಹಾಗೇ ಫಾಲೋ ಮಾಡಿಬಿಡುತ್ತೇವೆ. ಇಲ್ಲದಿದ್ದರೆ ಹೊಸತನ ಇರಲಿ ಅಂತ, ಸಟ್ಕೇಟ್ ಯಾ ಕರ್ಲಿ ಮಾಡಿಸಿಬಿಡುತ್ತೇವೆ. ಇದರ ಬದಲು ತುಸು ಶ್ರಮವಹಿಸಿ ಪ್ಲಾನಿಂಗ್ ಮಾಡಿದರೆ, ನೀವು ಸಹ ಹಲವು ವಿಧಗಳ ಹೇರ್ ಸ್ಟೈಲ್ ನಿಂದ ಮಿಂಚಬಹುದು. ಇದು ನಿಮ್ಮ ಪ್ರತಿ ಡ್ರೆಸ್ ಗೂ ಚೆನ್ನಾಗಿ ಸೂಟ್ ಆಗುತ್ತದೆ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗು, ಬ್ಯೂಟಿಫುಲ್ ಲುಕ್ಸ್ ಸಿಗುತ್ತದೆ.
ಮೆಸ್ಸಿ ಫಿಶ್ ಟೇಲ್ : ನಿಮ್ಮ ಕೂದಲನ್ನು ಈ ರೀತಿ ಮೆಸ್ಸಿ ಫಿಶ್ ಟೇಲ್ ಆಗಿ ಸ್ಟೈಲ್ ಮಾಡಿ. ನಿಮ್ಮ ಕೂದಲಿನಲ್ಲಿ ವಾಲ್ಯೂಂ ಹೆಚ್ಚಿದ್ದರೆ, ಈ ಹೇರ್ ಸ್ಟೈಲ್ ಇನ್ನೂ ಸೊಗಸಾಗಿ ಒಪ್ಪುತ್ತದೆ. ಇದನ್ನು ರೆಡಿ ಮಾಡಿಕೊಳ್ಳುವುದು ಸಹ ಸುಲಭ, ಸಮಯ ಹೆಚ್ಚು ಹಿಡಿಸದು. ನೆಟ್ ನಲ್ಲಿ ವಿಡಿಯೋ ಗಮನಿಸಿ ಇದನ್ನು ಫಾಲೋ ಮಾಡಿ.
ಫ್ರಂಟ್ ಫ್ರೆಂಚ್ ಬ್ರೆಡ್: ನೀವು ವಿಭಿನ್ನ ಹೇರ್ ಸ್ಟೈಲ್ ಬಯಸುವಿರಾದರೆ, ನಿಮಗೆ ಈ ಶೈಲಿ ಬಹಳ ಇಷ್ಟವಾಗುತ್ತದೆ. ಈ ಸ್ಟೈಲ್ ನಿಮಗೆ ಇಂಡಿಯನ್ ಯಾ ವೆಸ್ಟರ್ನ್ ಎರಡೂ ಡ್ರೆಸೆಸ್ ಗೆ ಒಪ್ಪುತ್ತದೆ. ನೀವು ಮೊದಲು ಫ್ರಂಟ್ ಬ್ರೆಡ್ ಸಿದ್ಧಪಡಿಸಿಕೊಂಡು, ಉಳಿದ ಕೂದಲಿನಿಂದ ಓಪನ್ ಹೇರ್, ಪೋನಿ ಟೇಲ್, ಬನ್ (ಕೊಂಡೆ) ಇತ್ಯಾದಿ ಯಾವುದನ್ನು ಜೋಡಿಸಿಕೊಂಡರೂ ಅದು ಲಕ್ಷಣವಾಗಿ ಕಾಣುತ್ತದೆ.
ಡಚ್ ಬ್ರೆಡ್ಸ್ ವಿತ್ ಪ್ಲೇರ್ ಟ್ವಿಸ್ಟ್ : ಏನಾದರೂ ಹೊಸತನ್ನು ಟ್ರೈ ಮಾಡೋಣ ಎಂದು ಬಯಸುವವರಿಗೆ ಈ ಸ್ಟೈಲ್ ಇಷ್ಟವಾಗುತ್ತದೆ. ಇದು ಇಂಡಿಯನ್ ಡ್ರೆಸ್ ಗೂ ಚೆನ್ನಾಗಿ ಹೊಂದುತ್ತದೆ, ಜೊತೆಗೆ ಎಲ್ಲಾ ಮಾಡ್ ಡ್ರೆಸ್ ಗೂ ಸೂಟ್ ಆಗುತ್ತದ. ಇದಕ್ಕಾಗಿ ಮೊದಲು ಕೂದಲನ್ನು ಸೈಡ್ ಪಾರ್ಟಿಂಗ್ ಮಾಡಿ. ನಂತರ ಒಂದು ಬದಿಯಿಂದ ಕೂದಲನ್ನು ತೆಗೆದುಕೊಂಡು, ಫ್ರಂಟ್ ನಿಂದಲೇ ಡಚ್ ಬ್ರೆಡ್ ಮಾಡುತ್ತಾ ಹೋಗಿ. ನಂತರ ನೀವು ಹಿಂಭಾಗಕ್ಕೆ ನಿಮ್ಮ ಬ್ರೆಡ್ ಕೊಂಡೊಯ್ದು, ಉಳಿದ ಕೂದಲಿನೊಂದಿಗೆ ಅದನ್ನು ಬೆಸೆಯಿರಿ. ಕೊನೆಯಲ್ಲಿ ರಬ್ಬರ್ ಬ್ಯಾಂಡ್ ನಿಂದ ಗಂಟು ಹಾಕಿಡಿ. ನಂತರ ಈ ಬ್ರೆಡ್ ನ್ನು ಟ್ವಿಸ್ಟ್ ಮಾಡುತ್ತಾ ಬನ್ ಮಾಡಿ. ಪಿನ್ಗಳ ನೆರವಿನಿಂದ ಇದನ್ನು ಫಿಕ್ಸ್ ಮಾಡಿ. ಇದೀಗ ನಿಮಗೆ ಬೇಕಾದ ಹೇರ್ ಸ್ಟೈಲ್ ರೆಡಿ.
ಕರ್ಲ್ ವಿತ್ ಆ್ಯಕ್ಸೆಸರೀಸ್ : ಇದಕ್ಕಾಗಿ ನೀವು ಮನೆಯಲ್ಲೇ ಕರ್ಲರ್ ಬಳಸುತ್ತಾ, ಈ ಹೇರ್ ಸ್ಟೈಲ್ ಟ್ರೈ ಮಾಡಬಹುದು. ಇದರಲ್ಲಿ ಹೇರ್ ಆ್ಯಕ್ಸೆಸರೀಸ್ ಯಾ ಹೂವು ಜೋಡಿಸ ಬಯಸಿದರೆ, ಇದು ನಿಮ್ಮ ಲುಕ್ ಗೆ ಪರ್ಫೆಕ್ಟ್ ಟಚ್ ನೀಡುತ್ತದೆ.
ಹಾಫ್ ಅಪ್ಹಾಫ್ ಡೌನ್ : ಈ ಹೇರ್ ಸ್ಟೈಲ್ ನೋಡಲಿಕ್ಕೆ ಬಹಳ ಸರಳ ಎನಿಸುತ್ತದೆ. ಇದನ್ನು ರೆಡಿ ಮಾಡಲು, ಫ್ರಂಟ್ ನಿಂದ ಕೂದಲನ್ನು ತೆಗೆದು ಹಿಂಭಾಗಕ್ಕೆ ಪಿನ್ ಅಪ್ ಮಾಡಿ ಹಾಗೂ ಹಿಂಭಾಗದಿಂದ ಕೂದಲನ್ನು ಓಪನ್ ಆಗಿ ಬಿಡಿ ಯಾ ಲೋ ಪೋನಿಟೇಲ್ ಸಹ ಮಾಡಿಕೊಳ್ಳಬಹುದು. ಲುಕ್ಸ್ ಗ್ರೇಸ್ ಫುಲ್ ಆಗಲು, ಕೂದಲಿಗೆ ಫ್ರಂಟ್ ನಿಂದ ಲೈಟ್ ಆಗಿ ಪಫ್ ಲುಕ್ ಎನಿಸುತ್ತದೆ.
– ದೀಪಿಕಾ ಭಟ್





