ದೋಸೆ ಎಂದ ತಕ್ಶಣ ನಮ್ಮೆಲ್ಲರ ಮನದಲ್ಲಿ ಥಟ್ ಅಂತಾ ಮೂಡೋದೇ, ಮಸಾಲೇ ದೋಸೆ. ಈಗ ಇರೋ ಬೇಲೆ ನೋಡಿದರೆ ಹೋಟೆಲ್ಗಳಿಗೆ ಹೋಗಿ ಹೊಟ್ಟೇ ತುಂಬಾ ದೋಸೆ ತಿನ್ನೋದು ಸಾಧ್ಯವೇ ಇಲ್ಲದ ಮಾತು. ಇನ್ನು ಮಸಾಲೇ ದೋಸೆಗೆ ರುಚಿ ಕೊಡೋದೇ ಒಳಗೆ ಹಾಕೋ ಕೆಂಪು ಚೆಟ್ನಿ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೆಂಪು ಚೆಟ್ನಿ ಮಾಡೋದೇ ಇಲ್ಲ. ಅದರ ಬದಲಾಗಿ ಚೆಟ್ನೀ ಪುಡಿಯನ್ನು ಉದುರಿಸಿಕೊಡುತ್ತಾರಾದರೂ, ಮಸಾಲೇ ದೋಸೆ ರುಚಿ ಬರೋದಿಲ್ಲ. ಅದಕ್ಕಾಗಿಯೇ ದೋಸೆಗಳ ರಾಜ ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿ ಮತ್ತು ಧಿಡೀರ್ ಆಗಿ ಮನೆಯಲ್ಲಿಯೇ ತಯಾರಿಸಿಕೊಳ್ಳುವುದನ್ನು ಸವಿವರವಾಗಿ ವಿವರಿಸಿದ್ದೇನೆ.
ಸಾಂಪ್ರದಾಯಿಕವಾದ ಸುಮಾರು 12-15 ಮಸಾಲೇ ದೋಸೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
- ದೋಸೆ /ಪೊನ್ನಿ ಅಕ್ಕಿ – 3 ಲೋಟ
- ಉದ್ದಿನ ಬೇಳೆ – 1ಲೋಟ
- ಗಟ್ಟಿ ಅವಲಕ್ಕಿ – 1/2 ಲೋಟ
- ಕಡಲೇಬೇಳೆ – 1/4 ಲೋಟ
- ಮೆಂತ್ಯ – 1 ಚಮಚ
- ಎಣ್ಣೆ ಎರಡು ದೊಡ್ಡ ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ದೋಸೆ ಹಿಟ್ಟನ್ನು ತಯಾರಿಸಿಕೊಳ್ಳುವ ವಿಧಾನ
- ಅಕ್ಕಿ, ಉದ್ದಿನ ಬೇಳೆ , ಕಡಲೇ ಬೇಳೆ ಮತ್ತು ಮೆಂತೆಯನ್ನು ಚೆನ್ನಾಗಿ ತೊಳೆದು ಬೆಳ್ಳಿಗ್ಗೆ ನೀರಿನಲ್ಲಿ ಬೇರೆ ಬೇರೆಯಾಗಿ ನೆನೆಸಬೇಕು.
- ನೆನೆಸಿಟ್ಟ ಪದಾರ್ಥಗಳನ್ನು ರುಬ್ಬಿಕೊಳ್ಳುವ ೧೦ ನಿಮಿಷಗಳಿಗಿಂತ ಮುಂಚೆ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಬೇಕು.
- ಸಂಜೆಯ ವೇಳೆಗೆ ಉದ್ದಿನ ಬೇಳೆಯನ್ನು ಮೊದಲು ಚೆನ್ನಾಗಿ ರುಬ್ಬಿಕೊಂಡು ಆದದ ನಂತರ ಅದಕ್ಕೆ ಮೆಂತ್ಯ, ಕಡಲೇಬೇಳೆ (ದೋಸೆ ಹೊಂಬಣ್ಣ ಬರಲು) ಮತ್ತು ಅಕ್ಕಿಯನ್ನು ಸೇರಿಸಿ ರುಬ್ಬಿ, ಸ್ವಲ್ಪ ನುಣ್ಣಗಾಗುವ ಸಮಯದಲ್ಲಿಯೇ ಅದಕ್ಕೆ ನೆನಸಿದ ಅವಲಕ್ಕಿಯನ್ನೂ ಸೇರಿಸಿ ರುಬ್ಬಿಕೊಳ್ಳಬೇಕು.
- ರುಬ್ಬಿಟ್ಟು ಕೊಂಡ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ತಟ್ಟೆ ಮುಚ್ಚಿಟ್ಟಲ್ಲಿ ಬೆಳಗಾಗುವಷ್ಟರಲ್ಲಿ ಹಿಟ್ಟಿನಲ್ಲಿ ಈಸ್ಟ್ ಫಾರ್ಮಾಗಿ ಚೆನ್ನಾಗಿ ಹುದುಗು ಬಂದಿರುತ್ತದೆ
- ದೋಸೆ ಹುಯ್ಯುವ ಮೊದಲು ದೊಸೆ ಸರಾಗವಾಗಿ ಹುಯ್ಯಲು ಆಗುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಹೊತ್ತು ಗೊಟಾಯಿಸಿದಲ್ಲಿ ದೋಸೆ ಹುಯ್ಯಲು ಹಿಟ್ಟು ಸಿದ್ಧವಾಗಿರುತ್ತದೆ.
ಆಲೂಗೆಡ್ಡೆ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು

- ದೂಡ್ಡ ಗಾತ್ರದ ಆಲೂಗೆಡ್ಡೆ 4-5
- ದೊಡ್ಡ ಗಾತ್ರದ ಈರುಳ್ಳಿ 1-2
- ಹಸೀಮೆಣಸಿಕಕಾಯಿ 4-5
- ತೆಂಗಿನ ಕಾಯಿ ತುರಿ 1/4 ಕಪ್
- ಶುಂಠಿ 1 ಚಮಚ
- ಕತ್ತರಿಸಿದ ಕೊತ್ತಂಬರಿ 1/2ಕಪ್
- ಬೆಳ್ಳುಳ್ಲಿ ಎಸಳು 3-4 ( ಐಚ್ಚಿಕ)
- ಕರಿಬೇವು
- ಕಡಲೇ ಬೇಳೆ 1 ಚಮಚ
- ಊದ್ದಿನ ಬೇಳೆ 1 ಚಮಚ
- ಸಾಸಿವೆ 1/2 ಚಮಚ
- ಚಿಟಿಕೆ ಇಂಗು
- ಚಿಟಿಕೆ ಅರಿಶಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ಆಲೂಗೆಡ್ಡೆ ಪಲ್ಯ ಮಾಡುವ ವಿಧಾನ
- ಆಲೂಡೆಡ್ಡೆಯನ್ನು ಚೆನ್ನಾಗಿ ತೊಳೆದು ಕೊಂಡು ಸಿಪ್ಪೆಯನ್ನು ಸುಲಿದು, ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸ್ವಲ್ಪ ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಮೂರ್ನಾಲ್ಕು ವಿಶಿಲ್ ಬರುವಷ್ತು ಹೊತ್ತು ಬೇಯಿಸಿಕೊಂಡು, ಆರಿದ ನಂತರ ನೀರನ್ನು ಬಗ್ಗಿಸಿಕೊಂಡು ಆಲೂಗೆಡ್ಡೆ ಸಣ್ಣ ಸಣ್ನ ಹೋಳುಗಳಾಗುವಷ್ಟರ ಮಟ್ಟಿಗೆ ಪುಡಿ ಮಾಡಿಕೊಳ್ಳಬೇಕು.
- ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಸಿಪ್ಪೆ ಸುಲಿದು ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಬೇಕು,
- ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಟ ಪಟ ಎಂದು ಸಿಡಿದ ನಂತರ, ಕರಿಬೇಬು ಸೊಪ್ಪನ್ನು ಹಾಕಿದ ನಂತರ, ಕಡಲೇಬೇಳೆ ಮತ್ತು ಉದ್ದಿನಬೇಳಿ ಹಾಕಿ ಚೆನ್ನಾಗಿ ಕೆಂಪಗೆ ಬರುವವರೆಗೂ ಹುದಿಯಬೇಕು
- ಸಣ್ಣಗೆ ಕತ್ತರಿಟ್ಟ ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ, ಈರುಳ್ಳಿ ಕಂದು ಬರುವ ವರೆಗೂ ಹುರಿದುಕೊಳ್ಳಬೇಕು
- ಆರೋಗ್ಯದ ದೃಷ್ಟಿಯಿಂದಲೂ ಮತ್ತು ರುಚಿಯನ್ನು ಹೆಚ್ಚಿಸಲು ತುರಿದಿಟ್ಟ ಶುಂಠಿ ಮತ್ತು ಸಣ್ಣಗೆ ಹೆಚ್ಚಿದ ಇಲ್ಲವೇ ಜೆಜ್ಜಿದ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಳ್ಳಬೇಕು
- ಚಿಟುಕಿ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಗ್ಗರಣೆಗೆ ಸೇರಿಸಿ, ಬೇಯಿಸಿ, ಸಣ್ಣ ಸಣ್ಣ ಹೋಳುಗಳಾಗಿ ಮಾಡಿಕೊಂಡಿದ್ದ ಆಲೂಗೆಡ್ಡೆಯನ್ನು ಒಗ್ಗರಣೆಗೆ ಸೇರಿಸಿ ಚೆನ್ನಾಗಿ ೮-೧೦ ನಿಮಿಷಗಳ ಕಾಲ ಬಾಡಿಸಿದಲ್ಲಿ ರುಚಿ ರುಚಿಯಾದ ಆಲೂಗೆಡ್ಡೆ ಪಲ್ಯ ಸಿದ್ದ
- ತುರಿದಿಟ್ಟು ಕೊಂಡಿದ್ದ ತೆಂಗಿನ ತುರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಪಲ್ಯಕ್ಕೆ ಬೇರಿಸದಲ್ಲಿ ಪಲ್ಯದ ರುಚಿಯೂ ಇಮ್ಮಡಿಯಾಗುತ್ತದೆ.
ಕೆಂಪು ಖಾರ ಚೆಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





