ಮಸ್ತಿ ಅಗತ್ಯ ಆದರೆ…. : ಪಾರ್ಟಿ ನಡೆಯುತ್ತಿರುವಾಗ ಅದಕ್ಕೆ ದಿಢೀರ್‌ ಎಂದು ಒಬ್ಬ ನಾಟಿ ಓವರ್‌ ಮೇಕಪ್‌ ನ ಟ್ರಾನ್ಸ್ ಜೆಂಡರ್ ಬಂದಿಳಿದಾಗ, ಅಲ್ಲಿನ ರಂಗು 4 ಪಟ್ಟು ಹೆಚ್ಚುತ್ತದೆ. ಹೀಗಾಗಿಯೇ ಈಗ ಅಮೆರಿಕಾದಲ್ಲಿ ಇಂಥವನ್ನು ಡ್ರಾಗ್‌ ಕ್ವೀನ್‌ಎಂದು ಹೆಸರಿಸಿ, ಮಜಾ ಉಡಾಯಿಸುತ್ತಿದ್ದಾರೆ. ನಮ್ಮಲ್ಲೂ ಉ. ಭಾರತದಲ್ಲಿ ಹೋಳಿ ಹಬ್ಬ, ಮತ್ತಿತರ ಶುಭ ಸಮಾರಂಭಗಳಿಗೆ ಇಂಥವು ಧುತ್ತೆಂದು ಬಂದಿಳಿಯುತ್ತವೆ. ಮುಂದಿನ ಸಲ ನಿಮ್ಮ ಪಾರ್ಟಿಯಲ್ಲಿ ಹೆಚ್ಚಿನ ಮಸ್ತಿ ಬೇಕೆನಿಸಿದರೆ, ಇಂಥವನ್ನು ಮೊದಲೇ ಏರ್ಪಡಿಸಿಕೊಳ್ಳಿ. ಇವರೇನೋ ಅಗ್ಗಕ್ಕೆ ಸಿಗುತ್ತಾರೆ, ಆದರೆ ಭಾರಿ ಜಗಳಗಂಟರು. ಇಂಥವರ ಹಿಂದೆ ಕಡು ಬಡತನ, ದಟ್ಟ ದಾರಿದ್ರ್ಯ ಅಡಗಿರುತ್ತವೆ.

august-cora-mylene-tattoos-ima

ನಾನು ಯಾರು ಅಂದುಕೊಂಡ್ರಿ? : ಇತ್ತೀಚೆಗೆ ಆಧುನಿಕ ತರುಣಿಯರು ತಮ್ಮ ಮೈ ಮೇಲೆ ಎಲ್ಲೆಂದರಲ್ಲಿ ಎಂತೆಂಥದ್ದೋ ಟ್ಯಾಟೂ ಮಾಡಿಸಿಕೊಂಡು, ಅತಿ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಫ್ಯಾಷನ್‌, ಗ್ಲಾಮರ್‌ ಗಿಂತ ವಿದ್ರೋಹವೇ ಹೆಚ್ಚು. ಹಿಂದೆಲ್ಲ ಇಂಥವನ್ನು ಒಂದು ಪ್ರತ್ಯೇಕ ಗುರುತಿಗಾಗಿ ಇರಿಸಿಕೊಳ್ಳಲಾಗುತ್ತಿತ್ತು, ಆದರೆ ಈಗ ಇದು ಸ್ಟೇಟ್‌ ಮೆಂಟ್‌ ಆಗಿ, ನಾನು ಯಾರು ಅಂದುಕೊಂಡಿದ್ದೀರಿ ಎಂದು ದಬಾಯಿಸುವಂತಾಗಿದೆ. ಇದನ್ನು ಮೂವಿ ಸ್ಟಾರ್ಸ್‌ ಸಹ ಜಬರ್ದಸ್ತಾಗಿ ಪ್ರದರ್ಶಿಸುತ್ತಿದ್ದಾರೆ, ಪ್ರತಿ ಸ್ಟಾರೂ ಪ್ರತಿ ಚಿತ್ರದಲ್ಲೂ ಇಂಥವುಗಳಿಂದ ಮಿಂಚುತ್ತಿದ್ದಾರೆ.

coex-k-pop

ಇದಂತೂ ಈಗ ಪಕ್ಕಾ! : ದ. ಕೊರಿಯಾ ಇದೀಗ ಅಮೆರಿಕಾದ ಜಾರ್ಜಿಯಾದಲ್ಲಿ ಹುಂಡೈ ಕಾರು ಫ್ಯಾಕ್ಟರಿ ಕೊಂಡುಕೊಂಡಿದ್ದರಿಂದ, ಅಲ್ಲಿ ಗಲಿಬಿಲಿ ಉಂಟಾಗಿದೆ. ದ. ಕೊರಿಯಾ ಯಾವುದೇ ವಿಧದಲ್ಲೂ ಅಮೆರಿಕಾಗಿಂತ ಕಡಿಮೆ ಏನಲ್ಲ, ಎನ್ನುತ್ತಲೇ ಈ ಡ್ರಾಮಾದಿಂದ ತನ್ನ ಸಾಫ್ಟ್ ಎಕ್ಸ್ ಪೋರ್ಟ್‌ ನ್ನು ಸಹ ಗ್ರಾಂಡಾಗಿ ನಡೆಸುತ್ತಿದೆ. ಇದೀಗ ಇಲ್ಲಿನ ಗಂಗ್‌ ನಾಮ್ ಪ್ರಾವಿನ್ಸ್ ನಲ್ಲಿ ಮೆಡಿಕಲ್ ಟೂರಿಸಂ ಬ್ಯೂಟಿ ಸರ್ವೀಸಸ್‌ ಕುರಿತಾಗಿ ಒಂದು ಇವೆಂಟ್‌ ನಡೆಯಿತು, ವಿಶ್ವದ ಎಲ್ಲಾ ಗ್ರಾಹಕರನ್ನೂ ಇದಕ್ಕಾಗಿ ಕರೆಸಿಕೊಳ್ಳಲಾಯಿತು. ಪ್ರತಿ ದೇಶ ತನ್ನಷ್ಟಕ್ಕೇ ಇಂಡಿಪೆಂಡೆಂಟ್‌ ಆಗಲೇಬೇಕು ಎಂಬುದು ಇದೀಗ ಪಕ್ಕಾ ಆಗಿದೆ. ಅಮೆರಿಕಾದ ಗೆದ್ದೆತ್ತಿನ ಬಾಲ ಹಿಡಿದು ಹೊರಡುತ್ತೇನೆ ಎಂದರೆ ಆಗದ ಮಾತು. ದ. ಕೊರಿಯಾ ತನ್ನ ಅಪೂರ್ವ ಪ್ರಾಡಕ್ಟ್ಸ್ ಜೊತೆ ಇದೀಗ ತನ್ನ ಸಂಸ್ಕೃತಿಯನ್ನೂ ಅಮರಿಕಾದಲ್ಲಿ ಹರಡುತ್ತಿದೆ. ಇದು ಪೂರ್ವ ಏಷ್ಯಾದ ಕೊಡುಗೆ ಎಂಬುದರಲ್ಲಿ ಎರಡು ಮಾತಿಲ್ಲ.

rokit-weston-beach-race

ವಿಚಿತ್ರ ಹೊಂದಾಣಿಕೆ : ಇಂಗ್ಲೆಂಡ್‌ ನ ವೆಸ್ಟರ್ನ್‌ ಬೀಚ್‌ ನಲ್ಲಿ ರಾಕೆಟ್‌ ಟೈರ್‌ ಕಂಪನಿ, ಬೈಕ್‌ ರೇಸ್‌ ನ್ನು ಏರ್ಪಡಿಸುತ್ತದೆ. ಇದರಲ್ಲಿ ಸ್ಕಿಡ್‌ ಆಗುವ ಮರಳಿನ ಮೇಲೆಯೇ ಬೈಕ್‌ ಓಡಿಸಬೇಕಾದುದು ದೊಡ್ಡ ಚಾಲೆಂಜ್‌. ಇಲ್ಲಿ ಗಾಡಿ ಮತ್ತು ಮಾನವರ ವಿಚಿತ್ರ ಹೊಂದಾಣಿಕೆ ಸಹ ಮಜಾ ನೀಡುತ್ತದೆ. ಜಾರುವ ಮರಳಿನ ಮೇಲೆ ಬೈಕ್‌ ಓಡಿಸುವುದು ಸುಲಭದ ಮಾತಲ್ಲ. ಡ್ರೈವರ್‌ ನ ಚಾಕಚಕ್ಯತೆ ಜೊತೆ ಗಾಡಿಯ ಮೆಶೀನ್‌, ಟೈರ್‌ ಗಳೂ ಜಬರ್ದಸ್ತಾಗಿರಬೇಕು. ಈ ರೇಸ್‌ ನಲ್ಲಿ ಸಾವಿರಾರು ಸವಾರರು ಪಾಲ್ಗೊಳ್ಳುತ್ತಾರೆ, ಇದರಲ್ಲಿ ಹೆಣ್ಣುಮಕ್ಕಳಿಗೇನೂ ಕಡಿಮೆ ಇಲ್ಲ.

fs123

ಹಣ ಎರಚಿ ದೆವ್ವ ನೋಡಿ : ಅಮೆರಿಕಾ ಸೈನ್ಸ್ ಟೆಕ್ನಾಲಜಿಗಳಲ್ಲಿ ವಿಶ್ವಮಾನ್ಯ, ಆದರೆ ಅಲ್ಲಿನ ಜನತೆ ಸಹ ದೆವ್ವ ಭೂತಗಳ ಮಾಯಾಜಾಲದಿಂದ ಇನ್ನೂ ಹೊರಬಂದಿಲ್ಲ. ಅವರ ಈ ಮೂಢನಂಬಿಕೆ ಸಿನಿಮಾ, ಟಿವಿ, ಸ್ಟೇಜ್‌ ಶೋಗಳಲ್ಲಿ ಧಾರಾಳ ಕಂಡುಬರುತ್ತದೆ. ಹಳೆಯ ಪಾಳುಬಿದ್ದ ಬಂಗಲೆಗಳನ್ನು ನಮ್ಮಲ್ಲಿ ಇರುವಂತೆಯೇ ಭೂತಬಂಗಲೆ ಎಂದು ಸುದ್ದಿ ಹಬ್ಬಿಸುತ್ತಾರೆ. ಅಲ್ಲಿ ಒಂದು ಕಂಪನಿ ಒಂದು ಬಂಗಲೆಯನ್ನು ಸ್ಪೆಷಲ್ ಆಗಿ ಡಿಸೈನ್‌ ಮಾಡಿತ್ತು, ಅಲ್ಲಿಗೆ ಬರುವ ವಿಸಿಟರ್ಸ್‌ ನ್ನು ನಿಜವಾಗಿಯೂ ಬೆಚ್ಚಿಬೀಳಿಸಲು ಏನೇನೋ ತಂತ್ರ ರೂಪಿಸಿದೆ. ಈ ತರಹದ ಅನುಭವಕ್ಕಾಗಿ ಮಕ್ಕಳು ಮಾತ್ರವಲ್ಲದೆ, ಹಿರಿಯರೂ ಅಲ್ಲಿ ಸಾಲುಗಟ್ಟಿ ಹೋಗುತ್ತಾರೆ, ಘೋಸ್ಟ್ ಸ್ಟೋರೀಸ್‌ ತಮ್ಮೆದುರಿಗೆ ನಡೆಯುತ್ತವೆ ಎಂದರೆ ಎಂಥ ಥ್ರಿಲ್ ‌ಅಲ್ಲವೇ? ಫೀಲ್ಡ್ ಆಫ್ ಸ್ಕ್ರೀಮ್ಸ್ ಎದುರು ಸ್ಥಾಪಿಸಲಾಗಿರುವ ಈ ಸ್ಟಾಚ್ಯೂಗಳು ಎಂಥವರನ್ನೂ ಭಯಪಡಿಸುತ್ತಲ್ಲವೇ?

best-of-the-bay-winning-laser-h

ಬ್ಯೂಟಿಫುಲ್ ಆಗಿರಬೇಕಾದುದು ಅತ್ಯಗತ್ಯ : ಇದೀಗ ನವನಾಗರೀಕ ನಾರೀಮಣಿಗಳು ಗ್ಲಾಮರ್‌ ಗಾಗಿ ತಮ್ಮ ಅಂಗಾಂಗ ಪ್ರದರ್ಶನಕ್ಕೆ ಹೀಗೆ ಮುಂದಾದರೆ, ಅದರ ಮೇಲಿನ ರೋಮವನ್ನಂತೂ ತೊಲಗಿಸಲೇಬೇಕಲ್ಲವೇ……? ಇದಕ್ಕೆ ಸದ್ಯಕ್ಕಂತೂ ಲೇಸರ್‌ ಒಂದೇ ಪರಿಹಾರ. ನವನವೀನ ಯಂತ್ರಗಳು ಬಂದಿವೆ, ಪೇನ್‌ ಲೆಸ್‌ ಪ್ರೊಸೀಜರ್‌ ನಿಂದ ಅಗ್ಗಕ್ಕೆ ಮಾಡಿಕೊಡುತ್ತಿವೆ. ಹೀಗಾಗಿಯೇ ಸಾವಿರಾರು ಹುಡುಗಿಯರು ಹೀಗೆ ಅಂಗಾಂಗ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿಶ್ವದೆಲ್ಲೆಡೆ ಈಗ ಬೆಸ್ಟ್ ಪುಟ್‌ ಇನ್ ಫ್ರಂಟ್‌ ನ ಕುರಿತಾಗಿ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ನೀವೇಕೆ ಹಿಂದುಳಿಯಬೇಕು? ಇಂದೇ ಧಾವಿಸಿ, ಸಮೀಪದ ಬೆಸ್ಟ್ ಹೇರ್‌ ರಿಮೂವಲ್ ಪಾಯಿಂಟ್‌ ಕಂಡುಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ