ಹೊಸ ಸಾಂಕ್ರಾಮಿಕ ರೋಗದ ಕುರಿತು ತಪ್ಪು ಮಾಹಿತಿ ನೀಡಿ, ಸರ್ಕಾರದ ಉಚಿತ ಯೋಜನೆಯ ನೆಪದಲ್ಲಿ ಮಹಿಳೆಯರಿಗೆ ತಲೆ ಬೋಳಿಸಿಕೊಳ್ಳುವಂತೆ ಮಾಡಿ ವಂಚಿಸಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಉಚಿತ ಹಣ ಮತ್ತು ಲ್ಯಾಪ್‌ಟಾಪ್ ಆಮಿಷ ಒಡ್ಡಿ ಈ ವಂಚನೆ ಎಸಗಿದ್ದಾನೆ.

ಗ್ರಾಮದ ಮಹಿಳೆಯೊಬ್ಬರಿಗೆ ಫೋನ್ ಮಾಡಿದ ವಂಚಕ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಕುಟುಂಬದ ವಿವರಗಳನ್ನು ಸರಿಯಾಗಿ ಹೇಳುವ ಮೂಲಕ ಅವರ ನಂಬಿಕೆ ಗಳಿಸಿದ್ದಾನೆ. ಕೋವಿಡ್-19 ರಂತೆಯೇ ಮಾನವನ ಕೂದಲಿನ ಮೂಲಕ ಹೊಸ ಅಪಾಯಕಾರಿ ರೋಗ ಹರಡುತ್ತಿದೆ. ಇದನ್ನು ತಡೆಯಲು ವಿದೇಶಗಳಲ್ಲಿಯೂ ಜನರು ತಲೆ ಬೋಳಿಸಿಕೊಳ್ಳುತ್ತಿದ್ದಾರೆ ಎಂದು ಸುಳ್ಳು ಕಥೆ ಹೇಳಿದ್ದಾನೆ.

ಮಾತ್ರವಲ್ಲ, ತಲೆ ಬೋಳಿಸಿಕೊಂಡ ಮಹಿಳೆಯರಿಗೆ 15 ಸಾವಿರ ರೂ., ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್​ಟಾಪ್ ಜತೆಗೆ 45 ಸಾವಿರ ರೂ. ಪುರುಷರಿಗೆ 6 ಸಾವಿರ ರೂ. ನೀಡಲಾಗುವುದು ಎಂದು ನಂಬಿಸಿದ್ದಾನೆ.ಮರುದಿನ ಮಧ್ಯಾಹ್ನದೊಳಗೆ ಉಚಿತ ಹಣ ವಿತರಿಸಲು ಅಧಿಕಾರಿಗಳು ಬರಲಿದ್ದಾರೆ, ಅದಕ್ಕೂ ಮುನ್ನವೇ ತಲೆ ಬೋಳಿಸಿಕೊಂಡವರಿಗೆ ಮಾತ್ರ ಹಣ ಸಿಗಲಿದೆ ಎಂದು ಹೇಳಿದ್ದಾನೆ.

ವಂಚಕನ ಮಾತನ್ನು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಮೂವರು ಮಹಿಳೆಯರು ತಕ್ಷಣವೇ ಮುಂದೆ ಬಂದು ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಬಳಿಕ ಹಣ ಪಾವತಿಗಾಗಿ ಕರೆ ಮಾಡಿದಾಗ ವಂಚಕನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಅರಿವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಲೆ ಬೋಳಿಸಿಕೊಳ್ಳಲು ಕಾಯುತ್ತಿದ್ದ ಇತರ ಗ್ರಾಮಸ್ಥರು ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಸದ್ಯ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸರ್ಕಾರಿ ಯೋಜನೆಗಳು ಅಥವಾ ಆರೋಗ್ಯ ಇಲಾಖೆಯ ಯಾವುದೇ ತುರ್ತು ಆದೇಶಗಳು ಯಾವಾಗಲೂ ಅಧಿಕೃತ ಪತ್ರಿಕಾ ಪ್ರಕಟಣೆ, ಆಶಾ ಕಾರ್ಯಕರ್ತೆಯರು ಅಥವಾ ಸ್ಥಳೀಯ ಪಂಚಾಯಿತಿಗಳ ಮೂಲಕ ಜಾರಿಗೆ ಬರುತ್ತವೆ. ಅಜ್ಞಾತ ಫೋನ್ ಕರೆಗಳ ಆಧಾರದ ಮೇಲೆ ಯಾವುದೇ ನಿರ್ಧಾರ ತಳೆಯದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ