ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಗೃಹಶೋಭಾ ಎಂಪವರ್ ಹರ್ ಇವೆಂಟ್'ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ, ಕಳೆದ ತಿಂಗಳು ಜುಲೈ 25 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ಲಲಿತ್ ಅಶೋಕ್‌ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ಆಗಮಿಸಿದ್ದ 200ಕ್ಕೂ ಹೆಚ್ಚಿನ ಮಹಿಳಾ ಪ್ರೇಕ್ಷಕರು ಬಹು ಉತ್ಸಾಹದಿಂದ ಇವೆಂಟ್ ನಲ್ಲಿ ಭಾಗವಹಿಸಿದರು.
ಗೃಹಶೋಭಾದ ಮುಖ್ಯ ಗುರಿ ಮಹಿಳಾ ಸಶಕ್ತೀಕರಣ. ಇದನ್ನೇ ಪ್ರಧಾನವಾಗಿ ನೆರವೇರಿಸಲು ದೇಶವಿಡೀ ಈ `ಎಂಪವರ್ ಮೆಂಟ್ ಹರ್' ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಆ್ಯಂಕರ್ ಸಮೀರಾ ಖಾನ್ ಕಾರ್ಯಕ್ರಮದ ರೂಪುರೇಷೆ ವಿವರಿಸುತ್ತಾ, ಎಲ್ಲಾ ಅತಿಥಿಗಳನ್ನೂ ಅಭಿನಂದಿಸುತ್ತಾ, ಎಲ್ಲಾ ಪಾರ್ಟ್ ನರ್ಸ್ ಹಾಗೂ ಸ್ಪಾನ್ಸರ್ಸ್ ರನ್ನು ಪರಿಚಯಿಸಿದರು.

ಏಷ್ಯನ್ ಪೇಂಟ್ಸ್ : ಹೋಮ್ ಡೆಕೋರ್ ಪಾರ್ಟ್ ನರ್
ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ : ಜ್ಯೂವೆಲರಿ ಪಾರ್ಟ್‌ನರ್
ಸಿಲ್ಕ್ ಪ್ಯೂರಿಟಿ ಪಾರ್ಟ್ ನರ್ : ಸಿಲ್ಕ್ ಮಾರ್ಕ್
ಹೆಲ್ತ್ ಕೇರ್ ಪಾರ್ಟ್ ನರ್ : ಮಿರರ್
ಅಫಿಶಿಯಲ್ EV ಪಾರ್ಟ್ ನರ್ : ಆ್ಯಂಪೇರ್
ಚಿಟ್ ಫಂಡ್ ಪಾರ್ಟ್ ನರ್ : MSIL ಚಿಟ್ಸ್
ಅಸೋಸಿಯೇಟ್ ಸ್ಪಾನ್ಸರ್ : ಮೈಸೂರು ಸ್ಯಾಂಡಲ್ ಸೋಪ್ಸ್
ಇವೆಂಟ್ ನ ಆರಂಭದಲ್ಲಿ ಡೆಲ್ಲಿ ಪ್ರೆಸ್ ಗ್ರೂಪ್ ನ ಚೀಫ್ ಆಪರೇಟಿಂಗ್ ಆಫೀಸರ್ ಶೈಲೇಶ್ ಶ್ರೀವಾಸ್ತವ್, ವುಮನ್ ಎಂಪವರ್ ಮೆಂಟ್ ಕಮ್ಯುನಿಟಿ ಬಿಲ್ಡಿಂಗ್ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಡೆಲ್ಲಿ ಪ್ರೆಸ್ ಪರವಾಗಿ ಸಭಿಕರಿಗೆ ಮಹಿಳಾ ಸಶಕ್ತೀಕರಣದ ಸಂದೇಶವನ್ನು ನೀಡಿದರು. ಈ ಇವೆಂಟ್ ಗೆ ಆಧುನಿಕ ನಟಿ ಸಾತ್ವಿಕಾ ಆಗಮಿಸಿದ್ದು, ಸಭಾಸದರಲ್ಲಿ ಹೊಸ ರೋಮಾಂಚನ ಉಂಟು ಮಾಡಿತ್ತು. ಎಲ್ಲರಿಗೂ ಕೈ ಬೀಸುತ್ತಾ, ಸಭಿಕರನ್ನು ಅಭಿನಂದಿಸಿದ ಆಕೆ, ಕಾರ್ಯಕ್ರಮದ ಶುಭಾರಂಭಕ್ಕೆ ನಾಂದಿ ಹಾಡಿದರು.
ಹೋಮ್ ಡೆಕೋರ್ ಇಂಟಿರೀಯರ್ಸ್ ಸೆಶನ್ : ಈ ಸೆಶನ್ ನಲ್ಲಿ ಸಭಿಕರಿಗೆ ಗೃಹಾಲಂಕಾರದ ಕುರಿತಾಗಿ ಸಾದ್ಯಂತರವಾಗಿ ವಿವರಿಸಿದ ಅಂಬಿಕಾ ಮೂಡಪಲ್ಲಿ, ಗೃಹಿಣಿ/ಉದ್ಯೋಗಸ್ಥ ವನಿತೆ ತನ್ನ ಮನೆಯ ಗೃಹಾಲಂಕಾರದ ಕುರಿತಾಗಿ ಎಷ್ಟೆಲ್ಲ ಆತಂಕ ಪಟ್ಟುಕೊಳ್ಳುತ್ತಾಳೆ, ಅದನ್ನು ಹೇಗೆ ಸರಳವಾಗಿ ನಿವಾರಿಸಿಕೊಳ್ಳಬಹುದು ಎಂದು ತಮ್ಮ ಹಲವು ದಶಕಗಳ ಅನುಭವವನ್ನು ವಿವರಿಸಿದರು. ಡಿಸೈನರ್ ಸ್ಪಾಟ್ ಇವರ ಅವಾರ್ಡ್ ವಿನ್ನಿಂಗ್ ಇಂಟೀರಿಯರ್ ಆರ್ಕಿಟೆಕ್ಚರ್ ಫರ್ಮ್ ಆಗಿದ್ದು, ಬೆಂಗಳೂರು ಇನ್ನಿತರ ಹಲವು ಮಹಾನಗರಗಳ ಬೃಹತ್ ಕಟ್ಟಡ, ಮನೆಗಳ ಒಳಾಂಗಣ ವಿನ್ಯಾಸಕ್ಕೆ ಖ್ಯಾತರಾಗಿದ್ದಾರೆ. ಇವರು ಸಭಿಕರೊಂದಿಗೆ ಬಹಳಷ್ಟು ಬ್ಯೂಟಿ ಡೆಕೋರ್ ಐಡಿಯಾಗಳನ್ನು ಹಂಚಿಕೊಂಡು, ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಇದನ್ನು ಎಲ್ಲರೂ ಸುಲಭವಾಗಿ ತಮ್ಮ ಬಜೆಟ್ ನಲ್ಲಿ ಮ್ಯಾನೇಜ್ ಮಾಡಬಹುದು. ನಂತರ ಗೃಹಾಲಂಕರಾದ ಕುರಿತಾದ ಸಭಿಕರ ಎಲ್ಲಾ ಸಂದೇಹಗಳನ್ನು ನಿವಾರಿಸಿದರು.

ನಂತರ ಈ ಸೆಶನ್ ಕೊನೆಯಲ್ಲಿ ರಾಯಲ್ ಪ್ಲೇ ಏಷ್ಯನ್ ಪೇಂಟ್ಸ್ ನ ಎಗ್ಸಿಕ್ಯುಟಿವ್ ಸಾಲೋಮನ್ ವೇದಿಕೆಗೆ ಬಂದು, ಏಷ್ಯನ್ ಪೇಂಟ್ಸ್ ರಾಯ್ ನ ನ್ಯೂ ಲಗ್ಶುರಿ ಟೆಫ್ಲಾನ್ ಸರ್ಫೇಸ್ ಟೆಕ್ನಾಲಜಿ ಕುರಿತಾಗಿ ವಿವರಿಸಿ, 8 ವರ್ಷಗಳ ವಾರಂಟಿ ಬಗ್ಗೆಯೂ ತಿಳಿಸಿದರು. ಜೊತೆಗೆ ಪೇಂಟ್ಸ್ ಕುರಿತ ಕುತೂಹಲಕರ ರಸಪ್ರಶ್ನೆಗಳಿಗೆ ಉತ್ತರಿಸಿದ ಹಲವಾರು ಹೆಂಗಸರಿಗೆ ಮನಮೋಹಕ ಉಡುಗೊರೆ ವಿತರಿಸಿದರು.





