ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ “ಅವಳ ಹೆಜ್ಜೆ ಕಿರುಚಿತ್ರೋತ್ಸವ” ಕ್ಕೆ ಈ ವರ್ಷವೂ ಅಗಾಧ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಸಿಕ್ಕಿದ್ದು, ಆಸಕ್ತರಿಗಾಗಿ ಮರುಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ರ ಸ್ಪರ್ಧೆಯಲ್ಲಿ ಆಯ್ಧ 10 ಕನ್ನಡ ಕಿರುಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ಬಿಂಬಿಸುತ್ತವೆ.

*ದಿನಾಂಕ :* ಶನಿವಾರ,‌ ಆಗಸ್ಟ್ 1, 2026

*ಸಮಯ:* ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ

*ಸ್ಥಳ :* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು

IMG-20260728-WA0117

*ಪ್ರವೇಶ ಉಚಿತ* ಈ ಲಿಂಕ್ ಮೂಲಕ ನೋಂದಾಯಿಸಿ:  https://forms.gle/zDnK2k9Z8sf7J4gz5

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88677 47236 ಅಥವಾ avalahejjefilms@gmail.com

 

*ವೇಳಾಪಟ್ಟಿ*

* 10:00 AM – ಶಾಂತಲಾ ದಾಮ್ಲೆ ಅವರಿಂದ ಪ್ರಾಸ್ತಾವಿಕ ನುಡಿ

* 10:05 AM – ಅಶ್ವಿನಿ ಅನೀಶ್ ನಿರ್ದೇಶನದ *’ಸೋರುತಿಹುದು ಮನೆಯ ಮಾಳಿಗಿ’*

* 10:30 AM – ವನು ಪಾಟೀಲ್ ನಿರ್ದೇಶನದ *’ನಿತ್ಯ’*

* 10:45 AM – ಅನು ಕುಲಕರ್ಣಿ ನಿರ್ದೇಶನದ *’ಕಾಶಿ ಕೈಲಾಸ’*

* 11:00 AM – ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ *’ಗೆಜ್ಜೆ’*

* 11:10 AM – ಸುಷ್ಮಾ ಭಾರದ್ವಾಜ್ ನಿರ್ದೇಶನದ *’ದಾರಿ’*

* 11:20 AM – ಸೀಮಾ ಶಶಿಧರ್ ನಿರ್ದೇಶನದ *’ಎ ಲಿಟ್ಲ್ ಕೇರ್’*

* 11:30 AM – ಲಘು ವಿರಾಮ

* 11:40 AM – ಸುನಯನಾ ಸುರೇಶ್ ನಿರ್ದೇಶನದ *’ಮೌನ ರಾಗ’*

* 12:00 PM – ಸೌರಭಾ ರಾವ್ ನಿರ್ದೇಶನದ *’ಹುಲಿಯಪ್ಪ’*

* 12:15 PM – ಶ್ರೇಯ ಸುನಿಲ್ ನಿರ್ದೇಶನದ *’ಆ ಮಾಡಿ’*

* 12:20 PM -ಸುಪ್ರಿಯಾ ನಿಪ್ಪಾಣಿ ನಿರ್ದೇಶನದ *’ರೊಟ್ಟಿ’*

* 12:45 PM – ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ

 

_____________________________________________

ಧನ್ಯವಾದಗಳೊಂದಿಗೆ,

ಶಾಂತಲಾ ದಾಮ್ಲೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ