ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ "ಅವಳ ಹೆಜ್ಜೆ ಕಿರುಚಿತ್ರೋತ್ಸವ" ಕ್ಕೆ ಈ ವರ್ಷವೂ ಅಗಾಧ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಸಿಕ್ಕಿದ್ದು, ಆಸಕ್ತರಿಗಾಗಿ ಮರುಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಸಹಯೋಗದಲ್ಲಿ ಏರ್ಪಡಿಸಲಾಗಿದೆ.
ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ರ ಸ್ಪರ್ಧೆಯಲ್ಲಿ ಆಯ್ಧ 10 ಕನ್ನಡ ಕಿರುಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ಬಿಂಬಿಸುತ್ತವೆ.
*ದಿನಾಂಕ :* ಶನಿವಾರ, ಆಗಸ್ಟ್ 1, 2026
*ಸಮಯ:* ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ
*ಸ್ಥಳ :* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು

*ಪ್ರವೇಶ ಉಚಿತ* ಈ ಲಿಂಕ್ ಮೂಲಕ ನೋಂದಾಯಿಸಿ: https://forms.gle/zDnK2k9Z8sf7J4gz5
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88677 47236 ಅಥವಾ avalahejjefilms@gmail.com
*ವೇಳಾಪಟ್ಟಿ*
* 10:00 AM - ಶಾಂತಲಾ ದಾಮ್ಲೆ ಅವರಿಂದ ಪ್ರಾಸ್ತಾವಿಕ ನುಡಿ
* 10:05 AM - ಅಶ್ವಿನಿ ಅನೀಶ್ ನಿರ್ದೇಶನದ *'ಸೋರುತಿಹುದು ಮನೆಯ ಮಾಳಿಗಿ'*
* 10:30 AM - ವನು ಪಾಟೀಲ್ ನಿರ್ದೇಶನದ *'ನಿತ್ಯ'*
* 10:45 AM - ಅನು ಕುಲಕರ್ಣಿ ನಿರ್ದೇಶನದ *'ಕಾಶಿ ಕೈಲಾಸ'*
* 11:00 AM - ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ *'ಗೆಜ್ಜೆ'*
* 11:10 AM - ಸುಷ್ಮಾ ಭಾರದ್ವಾಜ್ ನಿರ್ದೇಶನದ *'ದಾರಿ'*
* 11:20 AM - ಸೀಮಾ ಶಶಿಧರ್ ನಿರ್ದೇಶನದ *'ಎ ಲಿಟ್ಲ್ ಕೇರ್'*
* 11:30 AM - ಲಘು ವಿರಾಮ
* 11:40 AM - ಸುನಯನಾ ಸುರೇಶ್ ನಿರ್ದೇಶನದ *'ಮೌನ ರಾಗ'*
* 12:00 PM - ಸೌರಭಾ ರಾವ್ ನಿರ್ದೇಶನದ *'ಹುಲಿಯಪ್ಪ'*
* 12:15 PM - ಶ್ರೇಯ ಸುನಿಲ್ ನಿರ್ದೇಶನದ *'ಆ ಮಾಡಿ'*
* 12:20 PM -ಸುಪ್ರಿಯಾ ನಿಪ್ಪಾಣಿ ನಿರ್ದೇಶನದ *'ರೊಟ್ಟಿ'*
* 12:45 PM - ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ
_____________________________________________
ಧನ್ಯವಾದಗಳೊಂದಿಗೆ,
ಶಾಂತಲಾ ದಾಮ್ಲೆ





