ಅಂತೂ ಇಂತೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟ ಭರ್ತಿಯಾಗಿದೆ. 33 ಸಚಿವ ಸ್ಥಾನಗಳಿಗೂ ಸಚಿವರ ನೇಮಕವಾಗಿದ್ದು ಉಳಿದ 4 ಸ್ಥಾನಗಳೂ ಕೂಡ ಫುಲ್ ಆಗಿದೆ. ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಸೇರಿದಂತೆ ಎಲ್ಲಾ 37 ಸ್ಥಾನಗಳ ಪೈಕಿ ಅಹಿಂದಗೆ ಸಿಂಹಪಾಲು ನೀಡಲಾಗಿದೆ. ಪಕ್ಷದ ನಾಯಕರೇ ಹೇಳುವಂತೆ ಇಡೀ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಾಗೂ ಶಾಸಕಾಂಗದ ಪುಟಗಳಲ್ಲಿ ಇದೇ ಮೊದಲ ಬಾರಿಗೆ ಅಹಿಂದಗೆ ಆದ್ಯತೆ ನೀಡಲಾಗಿದೆ.
37 ಸಚಿವ ಸ್ಥಾನಗಳ ಪೈಕಿ 23 SC, ST, OBC ಹಾಗೂ ಅಲ್ಪಸಂಖ್ಯಾತರಿಗೆ ಸ್ಥಾನ ಕೊಡಲಾಗಿದೆ. ಕ್ಯಾಬಿನೆಟ್ ಸಚಿವ ಸ್ಥಾನಗಳಲ್ಲಿ ಶೇ.62ರಷ್ಟು ಪಾಲು ಅಹಿಂದಗೆ ಮೀಸಲಿಡಲಾಗಿದೆ. ಡಿಕೆ ಸಂಪುಟದಲ್ಲಿ SCಗೆ 5 (SC ಬಲಗೈಗೆ 3, SC ಎಡಗೈಗೆ 2) ಸಚಿವ ಸ್ಥಾನ, STಗೆ 3 ಮಂತ್ರಿ ಸ್ಥಾನ, 3 ಜನ ಮುಸ್ಲಿಂರಿಗೆ ಸಚಿವ ಸ್ಥಾನ, ಒಬ್ಬರಿಗೆ ಸಭಾಪತಿ ಸ್ಥಾನ ಕೊಟ್ಟಿರೋದು ಖುಷಿಯ ವಿಚಾರ. ಇನ್ನು ಸರ್ಕಾರದಲ್ಲಿ OBCಯ 7 ಶಾಸಕರಿಗೆ ಈ ಬಾರಿ ಮಂತ್ರಿ ಭಾಗ್ಯ ಒಲಿದಿದ್ರೆ, ಹಿಂದುಳಿದ ಶಾಸಕರಿಗೆ ಉಪಸಭಾಧ್ಯಕ್ಷ ಮತ್ತು ಉಪಸಭಾಪತಿ ಸ್ಥಾನ ಕೊಟ್ಟು ಸರ್ವ ವರ್ಗಗಳಿಗೂ ಆದ್ಯತೆ ನೀಡಿದಂತಾಗಿದೆ.
ಡಿ.ಕೆ. ಶಿವಕುಮಾರ್ ಸಂಪುಟದ ಜಾತಿವಾರು ಪ್ರಾತಿನಿಧ್ಯ ಹೀಗಿದೆ:
- ಡಿ.ಕೆ. ಶಿವಕುಮಾರ್ – ಒಕ್ಕಲಿಗ ( ಗಂಗಡ್ಕರ್)
- ಕೃಷ್ಣ ಬೈರೇಗೌಡ – ಒಕ್ಕಲಿಗ ( ಮೊರಸು)
- ಎನ್. ಚೆಲುವರಾಯಸ್ವಾಮಿ – ಒಕ್ಕಲಿಗ ( ಗಂಗಡ್ಕರ್)
- ಎಚ್. ಸಿ .ಬಾಲಕೃಷ್ಣ – ಒಕ್ಕಲಿಗ ( ಗಂಗಡ್ಕರ್)
- ಕೆ .ಎಂ. ಶಿವಲಿಂಗೇಗೌಡ – ಒಕ್ಕಲಿಗ ( ಗಂಗಡ್ಕರ್)
- ರಾಮಲಿಂಗಾ ರೆಡ್ಡಿ – ಒಕ್ಕಲಿಗ ( ರೆಡ್ಡಿ)
- ಡಾ. ಜಿ. ಪರಮೇಶ್ವರ – ದಲಿತ ( ಬಲಗೈ)
- ಪಿ. ಎಂ. ನರೇಂದ್ರಸ್ವಾಮಿ – ದಲಿತ ( ಬಲಗೈ)
- ಪ್ರಿಯಾಂಕ್ ಖರ್ಗೆ – ದಲಿತ ( ಬಲಗೈ)
- ಕೆ. ಎಚ್. ಮುನಿಯಪ್ಪ – ದಲಿತ ( ಎಡಗೈ)
- ಕೆ .ಎಸ್ .ಬಸವಂತಪ್ಪ – ದಲಿತ ( ಎಡಗೈ)
- ರುದ್ರಪ್ಪ ಲಮಾಣಿ – ದಲಿತ ( ಲಂಬಾಣಿ)
- ಶಿವರಾಜ್ ಎಸ್. ತಂಗಡಗಿ – ದಲಿತ ( ಬೋವಿ)
- ಸತೀಶ್ ಜಾರಕಿಹೊಳಿ – ದಲಿತ ( ವಾಲ್ಮೀಕಿ)
- ಟಿ. ರಘುಮೂರ್ತಿ – ದಲಿತ ( ವಾಲ್ಮೀಕಿ)
- ಬಿ. ನಾಗೇಂದ್ರ – ದಲಿತ ( ವಾಲ್ಮೀಕಿ)
- ಯು ಟಿ .ಖಾದರ್ ಖಾದರ್ – ಅಲ್ಪಸಂಖ್ಯಾತ (ಮುಸ್ಲಿಂ )
- ಬಿ.ಝಡ್. ಜಮೀರ್ ಅಹಮದ್ ಖಾನ್ – ಅಲ್ಪಸಂಖ್ಯಾತ (ಮುಸ್ಲಿಂ)
- ರಿಜ್ವಾನ್ ಅರ್ಷದ್ – ಅಲ್ಪಸಂಖ್ಯಾತ ( ಮುಸ್ಲಿಂ)
- ಕೆ .ಜೆ .ಜಾರ್ಜ್ – ಅಲ್ಪಸಂಖ್ಯಾತ ( ಕ್ರಿಶ್ಚಿಯನ್)
- ಡಾ. ಯತೀಂದ್ರ ಸಿದ್ದರಾಮಯ್ಯ- ಹಿಂದುಳಿದ ವರ್ಗ ( ಕುರುಬ)
- ಬಿ.ಸುರೇಶ್ ಭೈರತಿ – ಹಿಂದುಳಿದ ವರ್ಗ (ಕುರುಬ )
- ಪುಟ್ಟರಂಗ ಶೆಟ್ಟಿ – ಹಿಂದುಳಿದ ವರ್ಗ ( ಉಪ್ಪಾರ)
- ಎಸ್. ಮಧು ಬಂಗಾರಪ್ಪ – ಹಿಂದುಳಿದ ವರ್ಗ ( ಈಡಿಗ)
- ಸಂತೋಷ ಲಾಡ್ – ಹಿಂದುಳಿದ ವರ್ಗ ( ಮರಾಠ)
- ಡಾ. ಅಜಯ್ ಸಿಂಗ್ – ಹಿಂದುಳಿದ ವರ್ಗ ( ರಜಪೂತ್)
- ಎಂ. ಬಿ .ಪಾಟೀಲ್ – ಲಿಂಗಾಯತ ( ಕುಡು ಒಕ್ಕಲಿಗ )
- ಈಶ್ವರ್ ಖಂಡ್ರೆ – ಲಿಂಗಾಯತ ( ಬಣಜಿಗ )
- ಬಸವರಾಜ್ ರಾಯರೆಡ್ಡಿ – ಲಿಂಗಾಯತ ( ರೆಡ್ಡಿ)
- ವಿಜಯಾನಂದ ಕಾಶಪ್ಪನವರ – ಲಿಂಗಾಯತ ( ಪಂಚಮಸಾಲಿ)
- ಲಕ್ಷ್ಮಣ ಸವದಿ – ಲಿಂಗಾಯತ ( ಗಾಣಿಗ )
- ಡಾ. ಶರಣ ಪ್ರಕಾಶ್ ಪಾಟೀಲ್ – ಲಿಂಗಾಯತ ( ಬಣಜಿಗ)
- ಎಸ್ .ಎಸ್. ಮಲ್ಲಿಕಾರ್ಜುನ – ಲಿಂಗಾಯತ ( ಸಾದರು)
ಯಾವ ಜಾತಿಗೆಷ್ಟು ಸ್ಥಾನ..?
ಲಿಂಗಾಯತ – 07, ಒಕ್ಕಲಿಗ – 06, ಹಿಂದುಳಿದ ವರ್ಗ – 06, ದಲಿತರು – 10, ಅಲ್ಪಸಂಖ್ಯಾತರು – 04 = ಒಟ್ಟು – 33





