ನಿನ್ನೆ  ಫೇಸ್‌ಬುಕ್ ಪುಟದಲ್ಲಿ ಮುಸ್ಲಿಂ ಬಾಂಧವರೊಬ್ಬರು (ಬಹುಶಃ ಮೊಹಮ್ಮದ್ ಎಂಬ ಹೆಸರಿನ ವ್ಯಕ್ತಿ) ಗಣೇಶ ಮೂರ್ತಿಯನ್ನು ಮನೆಗೆ ತರುವುದು ಏಕೆ ಮತ್ತು ನಂತರ ನೀರಿಗೆ ಬಿಸಾಡುವುದು ಏಕೆ..??

ಎಂದು ಒಂದಷ್ಟು ಗೊಂದಲ ಹಾಗೂ ಜಿಜ್ಞಾಸೆಯಿಂದ ಕೂಡಿದ ಪ್ರಶ್ನೆಯನ್ನು ಕೇಳಿದ್ದರು. ಅವರ ಆ ಸವಾಲಿಗೆ ನಮ್ಮ ಸನಾತನ ಸಂಪ್ರದಾಯದ ಹಿಂದಿರುವ ಸತ್ಯ, ಧರ್ಮಶಾಸ್ತ್ರ ಹಾಗೂ ಆಳವಾದ ಆಧ್ಯಾತ್ಮಿಕ ತತ್ತ್ವವನ್ನು ವಿವರಿಸಿ ಸತ್ಯವನ್ನು ತಿಳಿಸಬೇಕು ಎನ್ನುವ ಸದುದ್ದೇಶದಿಂದ ನನ್ನಗೆ ತಿಳಿದಿರುವ ಈ ಸುದೀರ್ಘ ಲೇಖನವನ್ನು ಬರೆದೆ.

ಒಂದು ವಿನಂತಿ:
ಈಗ ನೋಡಿದರೆ ಅವರ ಆ ಪೋಸ್ಟ್ ನನಗೆ ಕಾಣಿಸುತ್ತಿಲ್ಲ. ಒಂದು ವೇಳೆ ನಿಮ್ಮ ಫೇಸ್‌ಬುಕ್ ಗೋಡೆಯ ಮೇಲಾಗಲಿ ಅಥವಾ ಜಾಲತಾಣದಲ್ಲಾಗಲಿ ಆ ಪೋಸ್ಟ್ ಅಥವಾ ಆ ವ್ಯಕ್ತಿ ನಿಮಗೆ ಕಂಡುಬಂದರೆ, ದಯವಿಟ್ಟು ಈ ಲೇಖನವನ್ನು ಅವರಿಗೆ ಶೇರ್ ಮಾಡಿ ಅಥವಾ ಕಾಪಿ ಮಾಡಿ ತಲುಪಿಸಲು ಸಹಾಯ ಮಾಡಿ. ಪ್ರೀತಿ ಭಕ್ತಿ ಸತ್ಯ ಎಲ್ಲರಿಗೂ ತಲುಪಲಿ.

ಮಾನವ ಸಂಸ್ಕೃತಿಯಲ್ಲಿ ಸಂಕೇತಗಳು ಮತ್ತು ಪ್ರಕೃತಿಯ ನಡುವೆ ಅತ್ಯಂತ ಆಳವಾದ ಬಾಂಧವ್ಯವಿದೆ. ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಇಲ್ಲದ ರಾಕ್ಷಸ ಮನಸ್ಥಿತಿಗಳಿಗೆ ಈ ಸಂಕೇತಗಳ ಆಳ ಅರ್ಥವಾಗದಿರಬಹುದು.
ಹಿಂದು ಧರ್ಮದಲ್ಲಿ ಗಣೇಶ ಚತುರ್ಥಿಯಂದು ಮಣ್ಣಿನ ಮೂರ್ತಿಯನ್ನು ತಂದು, ಅತ್ಯಂತ ಭಯ-ಭಕ್ತಿ, ಕರುಣೆ ಹಾಗೂ ಭಾವನಾತ್ಮಕ ಶ್ರದ್ಧೆಯಿಂದ ಪೂಜಿಸಿ, ನಂತರ ಶಾಸ್ತ್ರೋಕ್ತವಾಗಿ ಜಲದಲ್ಲಿ ವಿಸರ್ಜಿಸುವ ಸುಂದರ ಸಂಪ್ರದಾಯವಿದೆ.

ಇಂದಿನ ಕಾಲಘಟ್ಟದಲ್ಲಿ ಕೆಲವು ಕಡೆ ಈ ಶ್ರದ್ಧೆಯು ನಶಿಸಿ, ಮೇಲ್ಸೇತುವೆಯಿಂದ ಮೂರ್ತಿಯನ್ನು ನೀರಿಗೆ ಬಿಸಾಡುವ ಯಾಂತ್ರಿಕ ನಡವಳಿಕೆಗಳೂ ಕಂಡುಬರುತ್ತಿವೆ. ಇಂತಹ ಅಸಂಸ್ಕೃತ ನಡವಳಿಕೆಯನ್ನು ಕಂಡಾಗ ಹೊರಗಿನವರಿಗೆ "ತಾವೇ ತಯಾರಿಸಿ ಅಥವಾ ಖರೀದಿಸಿ ಕೊನೆಗೆ ನೀರಿಗೆ ಬಿಸಾಡುವುದೇಕೆ?" ಎಂಬ ಅನುಮಾನ ಮೂಡುವುದು ತೀರ ಸಹಜ. ಆದರೆ, ನಿಜವಾದ ಸಾಂಪ್ರದಾಯಿಕ ಆಚರಣೆಯು ಕೇವಲ ಮೂರ್ತಿಯನ್ನು ಎಸೆಯುವ ಕ್ರಿಯೆಯಲ್ಲ; ಇದರ ಹಿಂದೆ ಸ್ಪಷ್ಟವಾದ ಧರ್ಮಶಾಸ್ತ್ರೀಯ ಪ್ರಮಾಣಗಳು ಹಾಗೂ ಸೃಷ್ಟಿಯ ನಿಯಮವನ್ನು ಸಾರುವ ಮಹೋನ್ನತ ಆಧ್ಯಾತ್ಮಿಕ ತತ್ತ್ವಗಳಿವೆ.

ಗಣೇಶ ಚತುರ್ಥಿ ವ್ರತ ಹಾಗೂ ಮೂರ್ತಿ ವಿಸರ್ಜನೆಯು ಕೇವಲ ಒಂದು ಜನಪದ ಆಚರಣೆಯಲ್ಲ, ಬದಲಿಗೆ ಧರ್ಮಶಾಸ್ತ್ರೋಕ್ತ ವಿಧಾನವಾಗಿದೆ:
ಧರ್ಮಶಾಸ್ತ್ರ ಗ್ರಂಥಗಳಲ್ಲಿ ಗಣೇಶ ಚತುರ್ಥಿಯ ವ್ರತ ವಿಧಾನವನ್ನು ಅತ್ಯಂತ ಸ್ಪಷ್ಟವಾಗಿ ನಿಯಮಿಸಲಾಗಿದೆ. ಇದರಲ್ಲಿ "ಮೃನ್ಮಯಿ ಮೂರ್ತಿ" ಮಣ್ಣಿನಿಂದ ಮಾಡಿದ ಮೂರ್ತಿಯನ್ನೇ ಸ್ಥಾಪಿಸಿ, ಪೂಜಿಸಿ, ವ್ರತಾಂಗವಾಗಿ ವಿಸರ್ಜಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮುದ್ಗಲ ಪುರಾಣ ಮತ್ತು ಗಣೇಶ ಪುರಾಣಗಳಲ್ಲಿ ಗಣೇಶನ ನಾನಾ ಲೀಲೆಗಳು ಹಾಗೂ ಚತುರ್ಥಿ ವ್ರತದ ಪೂಜಾ ಮಹತ್ವ, ಸೃಷ್ಟಿಯ ಮೂಲಶಕ್ತಿಯನ್ನು ಪೂಜಿಸುವ ಕ್ರಮಗಳ ವಿವರಣೆಯಿದೆ.

ಸನಾತನ ಹಿಂದು ಧರ್ಮದಲ್ಲಿ ಮೂರ್ತಿಯನ್ನೇ ಅಂತಿಮ ದೇವರು ಎಂದು ಭಾವಿಸುವುದಿಲ್ಲ. ಮೂರ್ತಿಯು ಭಗವಂತನನ್ನು ತಲುಪಲು ಒಂದು ಮಾಧ್ಯಮವಷ್ಟೇ.
"ಮಣ್ಣಿನಿಂದ ಬಂದದ್ದು ಮಣ್ಣಿಗೇ ಸೇರಬೇಕು" ಎಂಬುದು ಪ್ರಕೃತಿಯ ಶಾಶ್ವತ ನಿಯಮ. ನಮ್ಮ ಶರೀರವೂ ಸೇರಿದಂತೆ ಈ ಪ್ರಪಂಚದ ಸಮಸ್ತ ವಸ್ತುಗಳು ಪಂಚಭೂತಗಳಿಂದ (ಪೃಥ್ವಿ, ನೀರು, ಬೆಂಕಿ, ವಾಯು, ಆಕಾಶ) ನಿರ್ಮಿತವಾಗಿವೆ. ಮಣ್ಣಿನಿಂದ ಮಾಡಿದ ಮೂರ್ತಿಯು ಸೃಷ್ಟಿ (ಜನನ), ಸ್ಥಿತಿ (ಜೀವನ) ಮತ್ತು ಲಯದ (ಮರಣ/ವಿಸರ್ಜನೆ) ಸಂಕೇತವಾಗಿದೆ.
ಮೂರ್ತಿಯು ಪೂಜೆಗೆ ಒಂದು ಸಾಧನ. ಪೂಜೆಯ ಸಮಯದಲ್ಲಿ 'ಪ್ರಾಣಪ್ರತಿಷ್ಠೆ'ಯ ಮಂತ್ರಗಳ ಮೂಲಕ ಆ ಭಗವಂತನ ದಿವ್ಯ ಶಕ್ತಿಯನ್ನು ಮಣ್ಣಿನ ಮೂರ್ತಿಯಲ್ಲಿ ಆವಾಹಿಸಿ, ಸನ್ನಿಹಿತಗೊಳಿಸಿ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸಲಾಗುತ್ತದೆ. ಪೂಜೆ ಮುಗಿದ ನಂತರ 'ಉತ್ತರ ಪೂಜೆ' ಮಾಡಿ, ಆ ಶಕ್ತಿಯನ್ನು ಪುನಃ ನಿರಾಕಾರ ಭಗವಂತನಲ್ಲಿ ಪ್ರಾರ್ಥಿಸಿ ಕಳುಹಿಸಲಾಗುತ್ತದೆ (ವಿಸರ್ಜನೆ). ತದನಂತರ ಭೌತಿಕ ರೂಪವಾದ ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ಕರಗಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ