- ರಾಘವೇಂದ್ರ ಅಡಿಗ ಎಚ್ಚೆನ್.
ವಿಶ್ವ ಹೃದಯ ದಿನ 2026ರ ಅಭಿಯಾನವು ಬೆಂಗಳೂರಿನ ವಾಹನ ಸವಾರರಿಗೆ ಅನಗತ್ಯ ಶಬ್ದ ಮಾಡುವುದನ್ನು ಕಡಿಮೆ ಮಾಡಿ ಪ್ರತಿನಿತ್ಯದ ಸಂಚಾರದಲ್ಲಿ ಹಾರ್ನ್ ಶಬ್ದ ಕಡಿಮೆ ಮಾಡುವಂತೆ ಕೋರುತ್ತದೆ
ಬೆಂಗಳೂರು, ಸೆಪ್ಟೆಂಬರ್ 21, 2026: ಬೆಂಗಳೂರಿನ ಸಂಚಾರ ವ್ಯವಸ್ಥೆ ನಿಧಾನಗತಿಯಲ್ಲಿರಬಹುದು, ಆದರೆ ಹಾರ್ನ್ ಶಬ್ದ ನಿಲ್ಲುವುದು ಮಾತ್ರ ಅಪರೂಪ. ಬಂಪರ್-ಟು-ಬಂಪರ್ ರಸ್ತೆಗಳವರೆಗೆ ಟ್ರಾಫಿಕ್ ಜಾಮ್ ಇರುವಾಗ, ಅನಗತ್ಯವಾಗಿ ಹಾರ್ನ್ ಮಾಡುವುದು ನಗರದ ದೈನಂದಿನ ಪ್ರಯಾಣದ ಭಾಗವಾಗಿಬಿಟ್ಟಿದೆ. ಈ 'ವಿಶ್ವ ಹೃದಯ ದಿನ'ದಂದು, ಸ್ಪರ್ಶ್ ಆಸ್ಪತ್ರೆಯು 'ಹಾರ್ನ್ ಡೋಂಟ್ ಮಾಡಿ' ಎಂಬ ಬೆಂಗಳೂರು-ಕೇಂದ್ರಿತ ಅಭಿಯಾನವನ್ನು ಪ್ರಾರಂಭಿಸಿದೆ. ಇದು ವಾಹನ ಸವಾರರು ಅಭ್ಯಾಸಬಲದಿಂದ ಹಾರ್ನ್ ಮಾಡುವುದನ್ನು ಮರುಪರಿಶೀಲಿಸಲು ಮತ್ತು ದೈನಂದಿನ ಸಂಚಾರದ ಒತ್ತಡ ಹಾಗೂ ಆರೋಗ್ಯದ ಮೇಲಾಗುವ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರೇಪಿಸುತ್ತದೆ.
ಈ ಅಭಿಯಾನವನ್ನು ಒಂದು ಸರಳ ಚಿಂತನೆಯ ಸುತ್ತ ರೂಪಿಸಲಾಗಿದೆ: "ಹಾರ್ನ್ ಮಾಡುವುದರಿಂದ ಟ್ರಾಫಿಕ್ ಮುನ್ನಡೆಯುತ್ತದೆಯೇ? ಇಲ್ಲ ಎಂದಾದರೆ, ಈ ಎಲ್ಲಾ ಗದ್ದಲ ನಮಗೆ ಏನು ಮಾಡುತ್ತಿದೆ?" ಹಾರ್ನ್ ಬಳಕೆಯು ಸುರಕ್ಷತೆಗೆ ಅಗತ್ಯವಾದ ಒಂದು ಮುಖ್ಯ ಉಪಕರಣವಾಗಿದ್ದರೂ ಸಹ, ನಿರಾಶೆ, ಅಸಹನೆ ಅಥವಾ ಅಭ್ಯಾಸಬಲದಿಂದ ಮಾಡುವ ಅನಗತ್ಯ ಹಾರ್ನ್ ಶಬ್ದವನ್ನು ತಡೆಯುವುದು 'ಹಾರ್ನ್ ಡೋಂಟ್ ಮಾಡಿ' ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ದೈನಂದಿನ ಟ್ರಾಫಿಕ್ ಒತ್ತಡ, ಶಬ್ದ ಮಾಲಿನ್ಯ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಚರ್ಚಿಸಲು ಸ್ಪರ್ಶ್ ಆಸ್ಪತ್ರೆಯ ನಾಯಕತ್ವ ಹಾಗೂ ಹೃದಯರೋಗ ತಜ್ಞರನ್ನು ತಂಡ ಈ ಅಭಿಯಾನವನ್ನು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನಾವರಣಗೊಳಿಸಿದರು.
“ಹಾರ್ನ್ ಡೋಂಟ್ ಮಾಡಿ- ಅಭಿಯಾನದ ಮೂಲಕ, ನಾವು ಬೆಂಗಳೂರಿನ ಪರಿಚಿತ ಅನುಭವವನ್ನು ಜಾಗೃತಿಯ ಸರಳ ಕ್ಷಣವಾಗಿ ಬದಲಾಯಿಸಲು ಬಯಸುತ್ತೇವೆ. ಈ ಅಭಿಯಾನವು ಅಗತ್ಯವಿರುವಾಗ ಹಾರ್ನ್ ಮಾಡುವುದನ್ನು ತಡೆಯುವುದರ ಬಗ್ಗೆಯಲ್ಲ, ಬದಲಿಗೆ ಪ್ರತಿಯೊಂದು ಹಾರ್ನ್ ನಿಜವಾಗಿಯೂ ಅಗತ್ಯವಿದೆಯೇ ಎಂದು ಜನರು ಒಮ್ಮೆ ಆಲೋಚಿಸುವಂತೆ ಪ್ರೇರೇಪಿಸುವ ಕುರಿತಾಗಿದೆ.
ದೈನಂದಿನ ನಡವಳಿಕೆಯಲ್ಲಿನ ಸಣ್ಣ ಬದಲಾವಣೆಗಳು ಪ್ರಶಾಂತ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತವೆ" ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಸಂಸ್ಥಾಪಕ, ಅಧ್ಯಕ್ಷ ಹಾಗೂ ಚೀಫ್ ಆರ್ಥೊಪೆಡಿಕ್ ಸರ್ಜನ್ ಡಾ. ಶರಣ್ ಶಿವರಾಜ್ ಪಾಟೀಲ್ ಹೇಳಿದರು .
ವೈದ್ಯಕೀಯ ದೃಷ್ಟಿಕೋನದಿಂದ, ದೊಡ್ಡ ಮತ್ತು ಅನಿರೀಕ್ಷಿತ ಶಬ್ದವು ದೇಹದಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಹಾಗೆಯೇ ಒತ್ತಡದ ವಾತಾವರಣಕ್ಕೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಕಾಲಕ್ರಮೇಣ ಶಾರೀರಿಕ ಒತ್ತಡ ಹೆಚ್ಚಾಗಬಹುದು. ನಿರಂತರವಾದ ಈ ಶಾರೀರಿಕ ಒತ್ತಡವು ಹೃದಯರೋಗದ ಆರೋಗ್ಯದ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಲ್ಲಿ ಒಂದಾಗಿದೆ.
"ಯಾವಾಗಲೋ ಒಮ್ಮೆ ಮಾಡುವ ಹಾರ್ನ್ ಶಬ್ದ ಕಳವಳಕಾರಿ ವಿಷಯವಲ್ಲ. ಆದರೆ, ಅನಗತ್ಯ ಹಾಗೂ ಒತ್ತಡದ ಶಬ್ದಕ್ಕೆ ಪದೇ ಪದೇ ಒಡ್ಡಿಕೊಳ್ಳುವುದು ದೇಹದ ಒತ್ತಡದ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ಇಂತಹ ಒತ್ತಡದ ವಾತಾವರಣವು ನಿರಂತರವಾಗಿ ಎದುರಾದಾಗ, ಅದು ದೀರ್ಘಕಾಲದ ಒತ್ತಡಕ್ಕೆ ಕಾರಣವಾಗಬಹುದು. ಇದು ಹೃದಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಲ್ಲಿ ಒಂದಾಗಿದೆ," ಎಂದು ಸ್ಪರ್ಶ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್, ಹೃದಯರೋಗ ತಜ್ಞ ಹಾಗೂ ಸಮೂಹದ ವೈದ್ಯಕೀಯ ನಿರ್ದೇಶಕರಾದ ಡಾ. (ಪ್ರೊ.) ರಂಜನ್ ಶೆಟ್ಟಿ ಅಭಿಪ್ರಾಯ ಪಟ್ಟರು .





